Search
  • Follow NativePlanet
Share
» »ಮುಂಬೈನಿಂದ ಗೋವಾ : ರಸ್ತೆ ಪ್ರವಾಸ

ಮುಂಬೈನಿಂದ ಗೋವಾ : ರಸ್ತೆ ಪ್ರವಾಸ

By Vijay

ನಿಮ್ಮದೆ ಆದ ಕಾರಿನಲ್ಲಿ ಅಥವಾ ಬಾಡಿಗೆಗೆ ಟ್ಯಾಕ್ಸಿ ಪಡೆದು ಕುಟುಂಬ ಇಲ್ಲವೆ ಸ್ನೇಹಿತರ ಜೊತೆ ಒಂದು ರೋಮಾಂಚಕ ಪ್ರವಾಸ ಮಾಡುವುದೆಂದರೆ ಹೇಗೆ...ಹೌದು ಕೇಳಿದ ತಕ್ಷಣವೆ ಎಲ್ಲಿಲ್ಲದ ಆನಂದ ಉಂಟಾಗುತ್ತದೆ. ಈ ರೀತಿಯಾಗಿ ಆವಾಗಾವಾಗ ಸಮಯ, ಸಂದರ್ಭ, ಅವಕಾಶ ಒಲಿದು ಬಂದಾಗ ಪ್ರವಾಸ ಹೊರಡುವುದು ಮನಸ್ಸಿನ ಒತ್ತಡವನ್ನು ನಿವಾರಿಸಬಲ್ಲದು.

ಬಹುತೇಕರಿಗೆ ಹಳೆಯ ಒಂದು ಹಿಂದಿ ಚಿತ್ರ "ಬಾಂಬೆ ಟು ಗೋವಾ" ದ ಹೆಸರು ಜ್ಞಾಪಕವಿರಬಹುದು. ಅದು ಕೇವಲ ಚಿತ್ರದ ಟೈಟಲ್, ಆದರೆ ನಿಜವಾಗಿಯೂ ಬಾಂಬೆ (ಈಗಿನ ಮುಂಬೈ) ದಿಂದ ಗೋವಾದವರೆಗೆ ಪ್ರಯಾಣ ಮಾಡಿದರೆ ಒಂದು ವಿಶಿಷ್ಟ ರೀತಿಯ ಅನುಭೂತಿ ಸಿಗುವುದರಲ್ಲಿ ಅನುಮಾನವೆ ಇಲ್ಲ.

ಮುಂಬೈದಿಂದ ಗೋವಾ, ಸಂಚಾರ ಯೋಗ್ಯ ರಸ್ತೆಯ ಮೂಲಕ 603 ಕಿ.ಮೀ ಗಳಷ್ಟು ಅಂತರದಲ್ಲಿದೆ. ಹೊರಡಲು ಎರಡು, ಮೂರು ಆಯ್ಕೆಗಳಿವೆ. ಆದರೆ ನಿಮ್ಮ ಪ್ರವಾಸ ರೋಮಾಂಚನ, ಆನಂದಮಯ ಹಾಗೂ ಹಿತಕರವಾಗಿರಬೇಕಿದ್ದರೆ, ಕೋಲ್ಲಾಪುರ, ಸಾವಂತವಾಡಿ ಮಾರ್ಗವಾಗಿ ರಾಷ್ಟ್ರೀಯ ಹೆದ್ದಾರಿ ನಾಲ್ಕರ ಮೂಲಕ ತೆರಳುವುದು ಉತ್ತಮ.

ಪ್ರಸ್ತುತ ಲೇಖನದ ಮೂಲಕ ಯಾವೆಲ್ಲ ಆಕರ್ಷಕ ಸ್ಥಳಗಳಿಗೆ ಭೇಟಿ ನೀಡುತ್ತ ಕನಸಿನ ಲೋಕ ಗೋವಾ ತಲುಪಬಹುದೆಂದು ಇಲ್ಲಿ ತಿಳಿಯೋಣ.

ಮುಂಬೈದಿಂದ ಗೋವಾ:

ಮುಂಬೈದಿಂದ ಗೋವಾ:

ಮೊದಲನೇಯದಾಗಿ ಪ್ರಾರಂಭಿಕ ತಾಣ ಮುಂಬೈನ ದಾದರ್ ಪ್ರದೇಶ. ದಾದರ್ ನಿಂದ ಮಾತುಂಗಾ, ಪ್ರಿಯದರ್ಶಿನಿ ಸೇತುವೆ, ಬಾರ್ಕ್ ಮೇಲ್ಸೇತುವೆ, ವಾಶಿ ಸೇತುವೆಯ ಮೂಲಕ ಪಾಮ್ ಬೀಚ್ ರಸ್ತೆ ತಲುಪಬೇಕು. ಇದು ಒಟ್ಟು 20 ಕಿ.ಮೀ ಗಳಷ್ಟು ದೂರ ಹೊಂದಿದೆ.

ಚಿತ್ರಕೃಪೆ: timeflicks

ಮುಂಬೈದಿಂದ ಗೋವಾ:

ಮುಂಬೈದಿಂದ ಗೋವಾ:

ವೈಭವದ ಪಾಮ್ ಬೀಚ್ ರಸ್ತೆ. ದಾದರ್ ಮೂಲಕ ಮೊದಲು ಇಲ್ಲಿಗೆ ತಲುಪಬೇಕು.

ಚಿತ್ರಕೃಪೆ: Nickelodian

ಮುಂಬೈದಿಂದ ಗೋವಾ:

ಮುಂಬೈದಿಂದ ಗೋವಾ:

ಪಾಮ್ ಬೀಚ್ ರಸ್ತೆಯಿಂದ ಸಿಯಾನ್ - ಪನ್ವೇಲ್ ಹೈವೇ ರಸ್ತೆ ತಲುಪಿ ಬೇಲಾಪುರದೆಡೆ ಚಲಿಸಬೇಕು. ಇದು ಗ್ರೇಟರ್‍ ಮುಂಬೈದ ಭಾಗವಾಗಿದೆ.

ಚಿತ್ರಕೃಪೆ: Abhijitsathe

ಮುಂಬೈದಿಂದ ಗೋವಾ:

ಮುಂಬೈದಿಂದ ಗೋವಾ:

ಬೇಲಾಪುರದಿಂದ ನಿರ್ಗಮಿಸಿದ ನಂತರ ಸಿಗುವುದೆ ಮುಂಬೈ - ಪುಣೆ ಎಕ್ಸ್ ಪ್ರೆಸ್ ದಾರಿ. ನಾಲ್ಕು ಪಥಗಳ ಈ ಅದ್ಭುತ ಕಾಂಕ್ರೀಟ್ ರಸ್ತೆಯು ವಾಹನವನ್ನು ವೇಗವಾಗಿ ಯಾವುದೆ ಅಡೆ ತಡೆಯಿಲ್ಲದೆ ಓಡಿಸಲು ಅನುಕೂಲಕರವಾಗಿದೆ.

ಚಿತ್ರಕೃಪೆ: Nikkul

ಮುಂಬೈದಿಂದ ಗೋವಾ:

ಮುಂಬೈದಿಂದ ಗೋವಾ:

ಮುಂಬೈ - ಪುಣೆ ರಸ್ತೆಯ ಕೆಲವು ಚಿತ್ರಗಳು.

ಚಿತ್ರಕೃಪೆ: Mouleesha

ಮುಂಬೈದಿಂದ ಗೋವಾ:

ಮುಂಬೈದಿಂದ ಗೋವಾ:

ಮುಂಬೈ - ಪುಣೆ ರಸ್ತೆಯ ಕೆಲವು ಚಿತ್ರಗಳು.

ಚಿತ್ರಕೃಪೆ: Rsrikanth05

ಮುಂಬೈದಿಂದ ಗೋವಾ:

ಮುಂಬೈದಿಂದ ಗೋವಾ:

ಮುಂಬೈ - ಪುಣೆ ರಸ್ತೆಯ ಕೆಲವು ಚಿತ್ರಗಳು.

ಚಿತ್ರಕೃಪೆ: Viraj Paripatyadar

ಮುಂಬೈದಿಂದ ಗೋವಾ:

ಮುಂಬೈದಿಂದ ಗೋವಾ:

ಮುಂಬೈ - ಪುಣೆ ರಸ್ತೆಯ ಕೆಲವು ಚಿತ್ರಗಳು.

ಚಿತ್ರಕೃಪೆ: PlaneMad

ಮುಂಬೈದಿಂದ ಗೋವಾ:

ಮುಂಬೈದಿಂದ ಗೋವಾ:

ಮುಂಬೈ - ಪುಣೆ ರಸ್ತೆಯ ಕೆಲವು ಚಿತ್ರಗಳು.

ಚಿತ್ರಕೃಪೆ: Kprateek88

ಮುಂಬೈದಿಂದ ಗೋವಾ:

ಮುಂಬೈದಿಂದ ಗೋವಾ:

ಒಟ್ಟು 95 ಕಿ.ಮೀ ಗಳಷ್ಟು ಅಂತರ ಪಯಣಿಸಿದ ನಂತರ ಪುಣೆ - ಮುಂಬೈ ರಸ್ತೆ ಕೊನೆಗೊಂಡು ರಾಷ್ಟ್ರೀಯ ಹೆದ್ದಾರಿ ನಾಲ್ಕಕ್ಕೆ ಸಂಪರ್ಕ ಪಡೆಯಬೇಕು. ಇಲ್ಲಿಂದ ಆರಂಭವಾಗುವುದು NH 4 ರ ಪಯಣ. ಪುಣೆ ನಗರದ ಬೈಪಾಸ್ ರಸ್ತೆಯ ಮೂಲಕ ಸತಾರಾ ಪಟ್ಟಣದತ್ತ ಚಲಿಸಬೇಕು. ಸತಾರಾ ಒಂದು ಸುಂದರ ಹಾಗೂ ಆಕರ್ಷಕ ಸ್ಥಳವಾಗಿದೆ. ಸಮಯವಿದ್ದರೆ ಒಂದು ದಿನ ಪ್ರವಾಸ ಮಾಡಿ ನಿಮ್ಮ ಪಯಣ ಮುಂದುವರೆಸಬಹುದು. ತಂಗಲು ಹೋಟೆಲುಗಳು ಕೂಡ ಇಲ್ಲಿ ದೊರೆಯುತ್ತವೆ. ಇಲ್ಲಿಗೆ ತಲುಪಲು ಒಟ್ಟು 133 ಕಿ.ಮೀ ಗಳು.

ಚಿತ್ರಕೃಪೆ: Travelling Slacker

ಮುಂಬೈದಿಂದ ಗೋವಾ:

ಮುಂಬೈದಿಂದ ಗೋವಾ:

ಸತಾರಾ ಪ್ರದೇಶವು ಒಂದು ಉತ್ತಮ ಪ್ರವಾಸಿ ಆಕರ್ಷಣೆಯುಳ್ಳ ಸುಂದರ ಸ್ಥಳವಾಗಿದೆ. ಇಲ್ಲಿರುವ ಕಾಸ್ ಭೂಮಿಯು ಹೂವುಗಳ ಮನಮೋಹಕ ಕಣಿವೆಯಾಗಿದೆ. ದೇಶದ ಹಲವು ಭಾಗಗಳಿಂದ ಈ ಹೂವಿನ ಕಣಿವೆಯನ್ನು ವೀಕ್ಷಿಸಲು ಸಾಕಷ್ಟು ಜನರು ಬರುತ್ತಾರೆ. ಇದರ ಕುರಿತು ತಿಳಿಯಿರಿ. ಕಾಸ್ ಹೂವಿನ ಕಣಿವೆ.

ಚಿತ್ರಕೃಪೆ: Travelling Slacker

ಮುಂಬೈದಿಂದ ಗೋವಾ:

ಮುಂಬೈದಿಂದ ಗೋವಾ:

ಸತಾರಾದಲ್ಲಿ ಸಮಯ ಕಳೆದ ನಂತರ ಇಲ್ಲಿಂದ ಇದೆ ಜಿಲ್ಲೆಯ ಕರಾಡ್ ನಗರದೆಡೆ ಪ್ರಯಾಣ ಬೆಳೆಸಬೇಕು. ಇವುಗಳ ಮಧ್ಯದ ದೂರ 57 ಕಿ.ಮೀ ಗಳು. ಚಿತ್ರದಲ್ಲಿರುವುದು ಕರಾಡ್ ನ ಒಂದು ಚಿತ್ರ. ಭೇಟಿ ನೀಡಲು ಇಲ್ಲಿ ಶ್ರೀ ನಾರಾಯಣ ಮಹಾರಾಜರ ಮಠವಿದೆ.

ಚಿತ್ರಕೃಪೆ: Nilrocks

ಮುಂಬೈದಿಂದ ಗೋವಾ:

ಮುಂಬೈದಿಂದ ಗೋವಾ:

ಕರಾಡ್ ನಿಂದ ಪ್ರಯಾಣ ಮುಂದುವರೆಸಿ ಕೊಲ್ಲಾಪುರದೆಡೆ ಸಾಗಬೇಕು. ಕೊಲ್ಲಾಪುರವು ಒಂದು ಸುಪ್ರಸಿದ್ಧ ಧಾರ್ಮಿಕ ಯಾತ್ರಾ ಕೇಂದ್ರವಾಗಿದೆ. ಇಲ್ಲಿ ನೆಲೆಸಿರುವ ದೇವತೆ ಲಕ್ಷ್ಮಿಯು ದೇಶದ ಪ್ರಮುಖ ಶಕ್ತಿ ಪೀಠಗಳ ಪೈಕಿ ಒಂದಾಗಿದ್ದಾಳೆ. ಕೊಲ್ಲಾಪುರ ಒಂದು ದೊಡ್ಡ ನಗರವಾಗಿದ್ದು ಸಾಕಷ್ಟು ಪ್ರವಾಸಿ ಆಯ್ಕೆಗಳನ್ನು ನೀಡುತ್ತದೆ. ಕೊಲ್ಲಾಪುರದ ಕುರಿತು ತಿಳಿಯಿರಿ. ಇವುಗಳ ಮಧ್ಯದ ಒಟ್ಟು ದೂರ 78 ಕಿ.ಮೀ ಗಳು.

ಚಿತ್ರಕೃಪೆ: Ankur P

ಮುಂಬೈದಿಂದ ಗೋವಾ:

ಮುಂಬೈದಿಂದ ಗೋವಾ:

ನಂತರ ಕರ್ನಾಟಕದ ಸಂಕೇಶ್ವರ ಮುಲಕವಾಗಿ ಬಂದು ಮುಂದೆ ಸಾಗುತ್ತ ಬಲ ತಿರುವು ಪಡೆದು ಗಡಿಂಗ್ಲಜ ಹಾಗೂ ಅಜರದ ಮೂಲಕ ಮತ್ತೆ ಮಹಾರಾಷ್ಟ್ರದ ಸಾವಂತವಾಡಿ ಪಟ್ಟಣಕ್ಕೆ ತೆರಳಬೇಕು. ಸಾವಂತವಾಡಿಯಲ್ಲಿ ಅಂಬೋಲಿ ಘಟ್ಟ ಪ್ರದೇಶವನ್ನು ನೋಡಲು ಮರೆಯ ಬೇಡಿ. ಅಂಬೋಲಿ ಪ್ರದೇಶವು ಒಂದು ಗಿರಿಧಾಮ ಪ್ರದೇಶವಾಗಿದ್ದರೂ ಸಹ ವರ್ಷದ ಯಾವುದೆ ಕಾಲದಲ್ಲು ಭೇಟಿ ನೀಡಲು ಪ್ರಶಸ್ತವಾಗಿದೆ. ಅಂಬೋಲಿಯ ಕುರಿತು ಹೆಚ್ಚು ತಿಳಿಯಿರಿ. ಇವುಗಳ ಮಧ್ಯದ ಒಟ್ಟು ದೂರ 150 ಕಿ.ಮೀ ಗಳು.

ಮುಂಬೈದಿಂದ ಗೋವಾ:

ಮುಂಬೈದಿಂದ ಗೋವಾ:

ಸಾವಂತವಾಡಿಯಿಂದ ಮಾರ್ಗಸೂಚಿಗಳನ್ನು ಗಮನಿಸುತ್ತ, ಇಲ್ಲವೆ ಸ್ಥಳೀಯರಿಗೆ ದಾರಿ ಕೇಳುತ್ತ ಮುಂಬೈ - ಗೋವಾ ಹೆದ್ದಾರಿ ಮೂಲಕವಾಗಿ ಗೋವಾದ ರಾಜಧಾನಿ ಪಟ್ಟಣ ಪಣಜಿಯನ್ನು ತಲುಪಿ. ಸಾವಂತವಾಡಿಯಿಂದ ಪಣಜಿಯು 62 ಕಿ.ಮೀ ಗಳಷ್ಟು ದೂರದಲ್ಲಿದೆ.

ಚಿತ್ರಕೃಪೆ: Aaron C

More News

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+