Search
  • Follow NativePlanet
Share
» »ನೋಡೊಮ್ಮೆ ಮಲಪ್ಪುರಂನ ವೈಭವ

ನೋಡೊಮ್ಮೆ ಮಲಪ್ಪುರಂನ ವೈಭವ

By Vijay

ಕೇರಳದ ಶ್ರೀಮಂತ ಜಿಲ್ಲೆಗಳ ಪೈಕಿ ಮಲಪ್ಪುರಂ ಕೂಡ ಒಂದು. ಮಲಯಾಳಂ ಭಾಷೆಯಲ್ಲಿ ಮಲಪ್ಪುರಂ ಎಂದರೆ ಬೆಟ್ಟಗಳ ಮೇಲೆ ನೆಲೆಸಿರುವ ಊರು ಎಂಬರ್ಥ ಬರುತ್ತದೆ. ಹಲವು ಗಮ್ಯ ಪ್ರವಾಸಿ ಸ್ಥಳಗಳಾದ ಕೋಳಿಕೋಡ್, ಪಾಲಕ್ಕಾಡ್ ಹಾಗೂ ತಮಿಳುನಾಡಿನ ಕೋಯಮತ್ತೂರು ಪಟ್ಟಣಗಳಿಂದ ಕ್ರಮವಾಗಿ ಈ ಊರು 50 ಕಿ.ಮೀ, 90 ಕಿ.ಮೀ ಹಾಗೂ 140 ಕಿ.ಮೀ ಗಳಷ್ಟು ದೂರದಲ್ಲಿದೆ.

ಭೌತಿಕವಾಗಿ ಕೇರಳ ರಾಜ್ಯದ ಕೇಂದ್ರ ಭಾಗದಲ್ಲಿ ನೆಲೆಸಿರುವ ಮಲಪ್ಪುರಂ ಹೆಸರಿಗೆ ತಕ್ಕ ಹಾಗೆ ತನ್ನ ಸುತ್ತಮುತ್ತಲೂ ಸುಂದರ ಹಾಗೂ ಆಕರ್ಷಕವಾದ ಚಿಕ್ಕ ಪುಟ್ಟ ಹಸಿರು ಹಸಿರಾದ ಬೆಟ್ಟ ಗುಡ್ಡಗಳಿಂದ ಆವರಿಸಿದೆ. ಕಡಲುಂಡಿ ಈ ಪ್ರದೇಶದಲ್ಲಿ ಹರಿದಿರುವ ಪ್ರಮುಖ ನದಿಯಾಗಿದೆ. ಅಲ್ಲದೆ ಭೌಗೋಳಿಕವಾಗಿ ಕೇಂದ್ರದಲ್ಲಿರುವುದರಿಂದ ಈ ಪಟ್ಟಣವನ್ನು ರಾಜ್ಯದ ಯಾವುದೆ ಸ್ಥಳಗಳಿಂದ ಸುಲಭವಾಗಿ ತಲುಪಬಹುದಾಗಿದೆ.

ಬನ್ನಿ, ಈ ಲೇಖನದ ಮೂಲಕ ಈ ಪಟ್ಟಣವನ್ನು ಒಮ್ಮೆ ಸುತ್ತೇ ಬಿಡೋಣ...

ಮಲಪ್ಪುರಂ:

ಮಲಪ್ಪುರಂ:

ಹಿಂದೆ ಮಲಪ್ಪುರಂ ಮದ್ರಾಸ್ (ಇಂದಿನ ತಮಿಳುನಾಡು) ರಾಜ್ಯದ ಭಾಗವಾಗಿತ್ತು ಹಾಗೂ ಮಲಬಾರ್ ಎಂಬ ಹೆಸರಿನಿಂದ ಗುರುತಿಸಲ್ಪಡುತ್ತಿತ್ತು.

ಚಿತ್ರಕೃಪೆ: Dhruvaraj S

ಮಲಪ್ಪುರಂ:

ಮಲಪ್ಪುರಂ:

ಝುಳು ಝುಳು ಹರಿಯುವ ನದಿ, ಅದರೆ ಮೇಲಿನ ರೈಲು ಸೇತುವೆ. ಪಯಣಿಸುವಾಗ ಆಗುವ ಆನಂದ, ರೋಮಾಂಚನ ಹೇಳತೀರದು.

ಚಿತ್ರಕೃಪೆ: Dhruvaraj S

ಮಲಪ್ಪುರಂ:

ಮಲಪ್ಪುರಂ:

ತುಂಬಿ ತುಳುಕುತಿರುವ ನೀರ ಭೂಮಿಯಲಿ ಅಲ್ಲಲ್ಲಿ ಚಿಗುರಿದ ಹಚ್ಚ ಹಸಿರನು ಕಂಡಾಗ...

ಚಿತ್ರಕೃಪೆ: Dhruvaraj S

ಮಲಪ್ಪುರಂ:

ಮಲಪ್ಪುರಂ:

ಅಯ್ಯೊ...ಇದು ಆಟದ ಮೈದಾನವಲ್ಲ..ಸಮತಟ್ಟವಾದ ನೀರಿನ ಮೈದಾನ

ಚಿತ್ರಕೃಪೆ: Dhruvaraj S

ಮಲಪ್ಪುರಂ:

ಮಲಪ್ಪುರಂ:

ಹಚ್ಚ ಹಸಿರು ಪ್ರಕೃತಿಯುಳ್ಳ ಮಲಪ್ಪುರಂ ಪಟ್ಟಣದ ಒಂದು ಸುಂದರ ನೋಟ.

ಚಿತ್ರಕೃಪೆ: Dhruvaraj S

ಮಲಪ್ಪುರಂ:

ಮಲಪ್ಪುರಂ:

ದೈನಂದಿನ ಚಟುವಟಿಕೆಯಲ್ಲಿ ನಿರತರಾದ ಬೆಸ್ತರು.

ಚಿತ್ರಕೃಪೆ: Dhruvaraj S

More News

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+