Search
  • Follow NativePlanet
Share
» »ಈ 5 ಜಲಪಾತಗಳ ಸೌಂದರ್ಯವನ್ನು ಕಣ್ತುಂಬಿಕೊಳ್ಳಲು ಮಳೆಗಾಲದಲ್ಲಿ ಭೇಟಿ ನೀಡಲೇಬೇಕು…

ಈ 5 ಜಲಪಾತಗಳ ಸೌಂದರ್ಯವನ್ನು ಕಣ್ತುಂಬಿಕೊಳ್ಳಲು ಮಳೆಗಾಲದಲ್ಲಿ ಭೇಟಿ ನೀಡಲೇಬೇಕು…

ಜಲಪಾತಗಳನ್ನು ಹತ್ತಿರದಿಂದ ನೋಡಿದರೆನೇ ಒಂದು ರೀತಿ ಮಜಾ. ಎಲ್ಲೋ ವಿಡಿಯೋ, ಫೋಟೋಗಳಲ್ಲಿ, ಸಿನಿಮಾಗಳಲ್ಲಿ ನೋಡಿದಾಗಲೇ ಥ್ರಿಲ್‌ ಕೊಡುವ ಈ ಜಲಪಾತಗಳು ಇನ್ನು ಸಮೀಪದಿಂದ ನೋಡಿದಾಗ ಅದೆಷ್ಟು ಖುಷಿ ಕೊಡಬಲ್ಲದು ನೀವೇ ಊಹಿಸಿ. ನೀವು ಕೂಡ ಈ ಮಳೆಗಾಲದಲ್ಲಿ ಧುಮ್ಮಿಕ್ಕಿ ಹರಿಯುವ ಜಲಪಾತಗಳನ್ನು ಕಣ್ತುಂಬಿಕೊಳ್ಳಲು ಪ್ಲಾನ್‌ ಮಾಡುತ್ತಿದ್ದರೆ ಇಲ್ಲಿ 5 ಜಲಪಾತಗಳ ಬಗ್ಗೆ ಮಾಹಿತಿ ಕೊಡುತ್ತಿದ್ದೇವೆ. ಮತ್ತೇಕೆ ತಡ, ಅವುಗಳ ಸೌಂದರ್ಯವನ್ನು ಹತ್ತಿರದಿಂದಲೇ ನೋಡಲು ಈ ಮಳೆಗಾಲದಲ್ಲಿ ಭೇಟಿ ಕೊಡಿ...

ಜೋಗ ಜಲಪಾತ, ಕರ್ನಾಟಕ

ಕರ್ನಾಟಕ ರಾಜ್ಯದ ಸಾಗರ ತಾಲ್ಲೂಕಿನಲ್ಲಿ ದಟ್ಟವಾದ ಕಾಡುಗಳ ನಡುವೆ ಜೋಗ ಜಲಪಾತ ನೆಲೆಗೊಂಡಿದೆ. ಜಲಪಾತವು 4 ಭಾಗಗಳನ್ನು ಹೊಂದಿದ್ದು ಅವುಗಳೆಂದರೆ ರಾಜ, ರಾಣಿ, ರೋರರ್ ರಾಕೆಟ್...ಇದು ದೇಶದ ಎರಡನೇ ಅತಿ ಎತ್ತರದ ಜಲಪಾತವಾಗಿದೆ. 829 ಅಡಿ ಎತ್ತರದಿಂದ ಪ್ರತಿ ಸೆಕೆಂಡಿಗೆ ನೀರು ಬೀಳುತ್ತದೆ. ಈ ಸ್ಥಳವು ಬೆಂಗಳೂರಿನಿಂದ 340 ಕಿಲೋಮೀಟರ್ ದೂರದಲ್ಲಿದೆ. ಇಲ್ಲಿಂದ ನೀವು ನೈಸರ್ಗಿಕ ಸೌಂದರ್ಯವನ್ನು ಆನಂದಿಸುತ್ತಾ ರಸ್ತೆಯ ಮೂಲಕ ಇಲ್ಲಿಗೆ ತಲುಪಬಹುದು. ಈ ಜಲಪಾತವು ಎಷ್ಟು ದೊಡ್ಡದಾಗಿದೆ ಮತ್ತು ಅದ್ಭುತವಾಗಿದೆ ಎಂದರೆ ನೀವು ಅನೇಕ ಕಿಲೋಮೀಟರ್ ದೂರದಿಂದಲೇ ಈ ಜಲಪಾತದ ಶಬ್ದವನ್ನು ಸ್ಪಷ್ಟವಾಗಿ ಕೇಳಬಹುದು. ಇಲ್ಲಿ ಈಜುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ಆದರೆ ಜಪಲಾತದ ಬದಿಯಲ್ಲಿ ಕುಳಿತು ಜಲಪಾತದ ವಿಹಂಗಮ ನೋಟವನ್ನು ನೀವು ಆನಂದಿಸಬಹುದು.

ದೂಧ್‌ಸಾಗರ್ ಜಲಪಾತ, ಗೋವಾ

ಮಳೆಗಾಲದಲ್ಲಿ ಹೆಚ್ಚಿನ ಸಂಖ್ಯೆಯ ಪ್ರವಾಸಿಗರು ಗೋವಾಕ್ಕೆ ಹೋಗುವುದನ್ನು ತಪ್ಪಿಸುತ್ತಾರೆ. ಆದರೆ ಸ್ಥಳೀಯ ಜನರ ಪ್ರಕಾರ, ಗೋವಾ ಮಳೆಗಾಲದಲ್ಲಿ ಅತ್ಯಂತ ಸುಂದರವಾಗಿ ಕಾಣುತ್ತದೆ. ಪ್ರಸಿದ್ಧ ಕಡಲತೀರಗಳು ಮತ್ತು ಪ್ರವಾಸಿ ಸ್ಥಳಗಳನ್ನು ಹೊರತುಪಡಿಸಿ ಮಾನ್ಸೂನ್ ಸಮಯದಲ್ಲಿ ಗೋವಾದ ಕಾಡುಗಳು ಮತ್ತು ನೀರಿನ ಪ್ರದೇಶಗಳು ತುಂಬಾ ಸುಂದರವಾಗಿ ಕಾಣಿಸುತ್ತವೆ. ಈ ಸಮಯದಲ್ಲಿ ನೋಡಲೇಬೇಕಾದ ಅತ್ಯಂತ ಸುಂದರವಾದ ಮತ್ತು ಪ್ರಸಿದ್ಧವಾದ ಜಲಪಾತವೆಂದರೆ ದೂಧ್‌ಸಾಗರ್. ದೂಧ್‌ಸಾಗರ್ ಜಲಪಾತವು ಪಣಜಿಯಿಂದ 60 ಕಿಲೋಮೀಟರ್ ದೂರದಲ್ಲಿದೆ. ನೀರು ಎತ್ತರದಿಂದ ಬೀಳುವಾಗ ಬಿಳಿ ಹಾಲಿನಂತೆ ಕಾಣುವ ಕಾರಣ ದೂಧ್‌ಸಾಗರ್ ಎಂದು ಹೆಸರಿಸಲಾಗಿದೆ. ಮಳೆಗಾಲದಲ್ಲಿ, ಈ ಜಲಪಾತವು ನೀರಿನಿಂದ ತುಂಬಿರುವಾಗ, 1 ಸಾವಿರದ 17 ಅಡಿ ಎತ್ತರದಿಂದ ಬೀಳುವಾಗ ಪ್ರಚಂಡ ಶಬ್ದದೊಂದಿಗೆ ಕೆಳಗೆ ಬೀಳುತ್ತದೆ. ಆದ್ದರಿಂದ ಇದನ್ನು ನೋಡುವುದು ಮತ್ತು ಕೇಳುವುದು ವಿಭಿನ್ನ ಅನುಭವವಾಗಿದೆ. ಟ್ರೆಕ್ಕಿಂಗ್‌ಗಾಗಿಯೂ ಹೆಚ್ಚಿನ ಸಂಖ್ಯೆಯಲ್ಲಿ ಜನರು ಇಲ್ಲಿಗೆ ಬರುತ್ತಾರೆ.

ಅತಿರಪಳ್ಳಿ ಫಾಲ್ಸ್, ಕೇರಳ

ಕೇರಳದ ತ್ರಿಶೂರ್ ಜಿಲ್ಲೆಯಲ್ಲಿರುವ ಅತಿರಪಳ್ಳಿ ಜಲಪಾತವನ್ನು ಭಾರತದ ನಯಾಗರ ಫಾಲ್ಸ್‌ ಎಂದೂ ಕರೆಯುತ್ತಾರೆ. ಏಕೆಂದರೆ ಇದು ಕೆನಡಾದ ವಿಶ್ವದ ಅತ್ಯಂತ ಪ್ರಸಿದ್ಧ ನಯಾಗರಾ ಜಲಪಾತವನ್ನು ಹೋಲುತ್ತದೆ. ಈ ಜಲಪಾತದ ಎತ್ತರವು ಕೇವಲ 80 ಅಡಿ. ಆದರೆ ಇದು 330 ಅಡಿ ಅಗಲವಿದೆ. ಈ ಜಲಪಾತವು ಚಲಕುಡಿ ನದಿಯಿಂದ ರೂಪುಗೊಂಡಿದೆ, ಇದು ಮಳೆಗಾಲದಲ್ಲಿ ನೀರಿನಿಂದ ತುಂಬಿ ಆಕರ್ಷವಾಗಿ ಕಾಣುವ ಕಾರಣ ಅದ್ಭುತವಾಗಿ ಗೋಚರಿಸುತ್ತದೆ. ಸಮೀಪದಲ್ಲಿರುವ ದಟ್ಟವಾದ ಕಾಡುಗಳು ಮತ್ತು ಪ್ರಾಣಿಗಳು ಪ್ರಕೃತಿ ಪ್ರಿಯರನ್ನು ಮತ್ತು ವನ್ಯಜೀವಿ ಪ್ರಿಯರನ್ನು ಆಕರ್ಷಿಸುತ್ತವೆ. ಟ್ರೆಕ್ಕಿಂಗ್‌ನಲ್ಲಿ ಆಸಕ್ತಿ ಹೊಂದಿರುವವರ ಜೊತೆಗೆ ಪಕ್ಷಿ ವೀಕ್ಷಣೆಯನ್ನು ಇಷ್ಟಪಡುವವರೂ ಇಲ್ಲಿಗೆ ಬರುತ್ತಾರೆ.

ಚಿತ್ರಕೂಟ ಜಲಪಾತ, ಛತ್ತೀಸ್‌ಗಢ

ಛತ್ತೀಸ್‌ಗಢದಲ್ಲಿರುವ ಚಿತ್ರಕೂಟ ಜಲಪಾತವು ದೇಶದ ಅತ್ಯಂತ ಭವ್ಯವಾದ ಮತ್ತು ಅದ್ಭುತವಾದ ಜಲಪಾತವೆಂದು ಹೆಸರುವಾಸಿಯಾಗಿದೆ. ಈ ಜಲಪಾತವು 520 ಅಡಿ ವಿಸ್ತೀರ್ಣದಲ್ಲಿ ಹರಡಿದೆ ಮತ್ತು ಇದರ ಎತ್ತರ 100 ಅಡಿ. ಕುದುರೆಮುಖದ ಆಕಾರದ ಬೆಟ್ಟದಿಂದ ಕೆಸರುಮಯವಾದ ನೀರು ಜಲಪಾತದ ಮೂಲಕ ಕೆಳಗೆ ಬಿದ್ದಾಗ, ಬೀಳುವ ನೀರಿನ ಶಬ್ದವು ಮೈಲುಗಳಷ್ಟು ದೂರದಿಂದ ಕೇಳುತ್ತದೆ. ಮಳೆಗಾಲದಲ್ಲಿ ಇಂದ್ರಾವತಿ ನದಿಯು ತನ್ನೊಂದಿಗೆ ಸಾಕಷ್ಟು ಕೆಸರನ್ನು ತರುತ್ತದೆ, ಇದರಿಂದಾಗಿ ಇಲ್ಲಿ ಈಜುವ ಪ್ರಶ್ನೆಯೇ ಇಲ್ಲ. ಈ ಜಲಪಾತದ ಸುತ್ತಲೂ ಅನೇಕ ರೆಸಾರ್ಟ್‌ಗಳು, ಕ್ಯಾಂಪಿಂಗ್ ತಾಣಗಳು, ಪಿಕ್ನಿಕ್ ತಾಣಗಳು ಮತ್ತು ಧ್ಯಾನ ಕೇಂದ್ರಗಳಿವೆ. ಆದ್ದರಿಂದ, ನೀವು ಬಯಸಿದರೆ, ನೀವು ಈ ಸ್ಥಳಗಳಲ್ಲಿ ತಂಗುವ ಮೂಲಕ ಚಿತ್ರಕೋಟೆ ಜಲಪಾತದ ಸೌಂದರ್ಯವನ್ನು ಆನಂದಿಸಬಹುದು.

ಹೊಗೇನಕಲ್, ತಮಿಳುನಾಡು

ಹೊಗೇನಕಲ್ ಜಲಪಾತವು ಬೆಂಗಳೂರಿನಿಂದ ಕೇವಲ 150 ಕಿಲೋಮೀಟರ್ ದೂರದಲ್ಲಿರುವ ತಮಿಳುನಾಡು ಮತ್ತು ಕರ್ನಾಟಕದ ಗಡಿಯಲ್ಲಿದೆ. ಈ ಜಲಪಾತದ ವಿಶೇಷತೆ ಏನೆಂದರೆ, ಸ್ಥಳೀಯ ಜನರು ಇಲ್ಲಿ ಸಣ್ಣ ದೋಣಿಗಳನ್ನು ಬಳಸುತ್ತಾರೆ. ಈ ಜಲಪಾತದ ನೀರು ಔಷಧೀಯ ಗುಣಗಳನ್ನು ಹೊಂದಿದೆ ಎಂದು ನಂಬಲಾಗಿದೆ. ಇದಕ್ಕೆ ಕಾರಣ ಹೊಗೇನಕಲ್ ಜಲಪಾತವನ್ನು ತಲುಪುವ ಮೊದಲು ಕಾವೇರಿ ನದಿಯು ದಟ್ಟವಾದ ಕಾಡಿನ ಮೂಲಕ ಹಾದುಹೋಗುತ್ತದೆ ಮತ್ತು ಅಲ್ಲಿ ನೈಸರ್ಗಿಕವಾಗಿ ಹಲವಾರು ಗಿಡಮೂಲಿಕೆಗಳು ಬೆಳೆಯುತ್ತವೆ ಮತ್ತು ಈ ನೀರಿನಲ್ಲಿ ಈ ಗಿಡಮೂಲಿಕೆಗಳು ಮಿಶ್ರಣಗೊಳ್ಳುತ್ತವೆ, ಆಗ ನೀರು ಔಷಧೀಯ ಗುಣಗಳನ್ನು ನೀಡುತ್ತದೆ. ಈ ಜಲಪಾತದ ಸೌಂದರ್ಯವನ್ನು ಮಾನ್ಸೂನ್ ಸಮಯದಲ್ಲಿ ನೋಡಲು ಯೋಗ್ಯವಾಗಿದೆ.

More News

Read more about: waterfalls india monsoons
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+