Search
  • Follow NativePlanet
Share
ಮುಖಪುಟ » ಸ್ಥಳಗಳು» ಜೋಗ ಜಲಪಾತ

ಪ್ರಕೃತಿ ಅದ್ಭುತ "ಜೋಗ್ ಜಲಪಾತ"

32

"ಸಾಯೋದ್ರೊಳಗೆ ಒಮ್ಮೆ ಜೋಗದ ಗುಂಡಿ ನೋಡಬೇಕು" ಎಂಬ ನಾಣ್ಣುಡಿಯು "ಜೋಗ ಜಲಪಾತ"ದ ರುದ್ರ ರಮಣೀಯ ಸೌಂದರ್ಯವನ್ನು ಕಣ್ಣಾರೆ ಕಂಡಾಗಲೇ ಅನಿಸುವುದು ಜೀವನ ಸಾರ್ಥಕವೆಂದು. ಪ್ರಕೃತಿಯ ಸುಂದರ ಬೆಟ್ಟಗಳ ಸಾಲಿನಲ್ಲಿ ಶರಾವತಿ ನದಿ ನೀರಿನಿಂದ ನೈಸರ್ಗಿಕವಾಗಿ ಕಣಿವೆಯಲ್ಲಿ ಕಾಣುವ ಜೋಗ ಜಲಪಾತದ ಮಹಾವೈಭವವು ಮಳೆಗಾಲದಲ್ಲಿ  ನೋಡುವುದೇ ಚಂದ. ರಾಜ, ರಾಣಿ, ರೋವರ್  ಮತ್ತು ರಾಕೆಟ್ ಎಂಬ ಅಕ್ಕಪಕ್ಕದ ಜಲಪಾತಗಳು ಸೇರಿ ಜೋಗ ಜಲಪಾತವೆಂದು ಹೆಸರಾಗಿದೆ. ಅಪ್ಪಟ ಸ್ಫಟಿಕದಂತೆ ಕಾಣುವ ಜಲಪಾತದ ನೋಟ ಮನದುಂಬಿಸುತ್ತದೆ.

ಸ್ಫಟಿಕದಂತೆ ಕಾಣುವ  ಜೋಗ ಜಲಪಾತ ಮಾಲೆಗಳು

ಅದ್ಭುತವಾದ ನೀರಿನ ಪದರದಂತೆ ಕಾಣುವ ಜಲಪಾತವು, ನೇರವಾಗಿ ನೆಲಕ್ಕೆ ಜೋಡಿಸುತ್ತಿರುವ ಸ್ಫಟಿಕದ ಮಾಲೆಯಂತೆ ಕಾಣುತ್ತದೆ. 830 ಅಡಿಗಳಷ್ಟು ಎತ್ತರದಿಂದ ಬೀಳುವ ಶರಾವತಿ ನೀರು ಬಂಡೆಗಳ ಸಾಲಿನಲ್ಲಿ ಬರುವ ಆಳವಾದ ಕಲ್ಲು ಮತ್ತು ಇತರೆ ತೊಡಕುಗಳಿಗೆ ಧೃತಿಗೆಡದೆ ಮುನ್ನುಗ್ಗುವುದನ್ನು ನೋಡುವುದೇ ಒಂದು ಹಬ್ಬ. ಈ ಸುಂದರ ದೃಶ್ಯವನ್ನು ನೋಡಲೆಂದೇ ವಿಶ್ವದೆಲ್ಲೆಡೆಯಿಂದ ಸಾವಿರಾರು ಪ್ರವಾಸಿಗರು ಆಕರ್ಷಿತರಾಗಿ ಬರುತ್ತಲೇ ಇದ್ದಾರೆ.

ಜಲಪಾತದ ರಮ್ಯ ಸೌಂದರ್ಯಕ್ಕೆ ಸುತ್ತಲಿರುವ ಹಸಿರಿನಿಂದ ಕಂಗೊಳಿಸುತ್ತಿರುವ ಗುಡ್ಡಗಳು ಮತ್ತಷ್ಟು ಮೆರಗು ನೀಡುತ್ತವೆ. ಜೋಗ ಜಲಪಾತದ ರಮ್ಯದೃಶ್ಯವನ್ನು ನೋಡಲು ಅನೇಕ ಅನುಕೂಲಕರ ವೀಕ್ಷಣಾ ಸ್ಥಳಗಳಿವೆ. ಅವುಗಳಲ್ಲಿ ಬಹಳ ಪ್ರಸಿದ್ಧವಾದುದು ವಾಟ್ಕಿನ್ಸ್ ಪ್ಲ್ಯಾಟ್ ಫಾಮ್. ಜಲಪಾತದ ಕೆಳೆಗಿನವರೆಗೂ ಹೋಗಿ ಅಲ್ಲಿಂದ ಬೆಟ್ಟ ಹತ್ತಿ ಮೇಲೇರಿ ಬರುವುದು ಬಹಳ ಕ್ಲಿಷ್ಟಕರ ಹಾಗೂ ಶ್ರಮದ ಕೆಲಸವಾಗಬಹುದು ಮತ್ತು ಈ ಕೆಲಸ ತಮ್ಮ ಸ್ನಾಯುಗಳನ್ನು ಬಲಿಷ್ಠಪಡಿಸಲು ಇಚ್ಛಿಸುವವ ಯುವಸಮೂಹಕ್ಕೆ ಉತ್ತಮ ಚಾರಣವಾಗುತ್ತದೆ.

ಜಗತ್ಪಸಿದ್ಧ ತಾಣವಾಗಿರುವ ಜೋಗ್ ಜಲಪಾತಕ್ಕೆ ಸಾರಿಗೆ ಸಂಪರ್ಕ ವ್ಯವಸ್ಥೆ ಕೂಡ ಅನುಕೂಲಕರವಾಗಿದೆ. ಕರ್ನಾಟಕದಲ್ಲಿನ ಶಿವಮೊಗ್ಗ ಜಿಲ್ಲೆಯ ಸಾಗರ ಪಟ್ಟಣವು ಜೋಗ ಜಲಪಾತದಿಂದ ಅತ್ಯಂತ ಸಮೀಪದ ನಗರ. ಜೋಗ್ ಜಲಪಾತ ಮತ್ತು ಸಾಗರದ ಮಧ್ಯೆ  ಹಲವಾರು ಬಸ್ ಸಂಚರಿಸುತ್ತಿದ್ದು, ಕಾರವಾರ ಅಥವಾ ಹೊನ್ನಾವರದಿಂದಲೂ ಬಸ್ ವ್ಯವಸ್ಥೆ ಇದೆ. ಮಳೆಗಾಲದ ಸಮಯದಲ್ಲಿ ನೀರಿನ ಮಟ್ಟ ಹೆಚ್ಚಿ ಜಲಪಾತದಲ್ಲಿ ನೀರು ಧುಮ್ಮಿಕ್ಕಿ ಹಾಲಿನಂತೆ ಹರಿಯುವುದನ್ನು ನೋಡುವ ಆನಂದ ಅವರ್ಣನೀಯ. ಆದ್ದರಿಂದ ಈ ಸಮಯದಲ್ಲೆ ಜೋಗ ಜಲಪಾತ ನೋಡಲು ಹೋಗುವುದು ಸೂಕ್ತ. ಇಲ್ಲಿನ ಇತರೆ ಆಕರ್ಷಣೆಗಳೆಂದರೆ ಜೋಗ್ ನ ಸುತ್ತಮುತ್ತಲ್ಲಿನಲ್ಲಿರುವ ಕಾಡುಮೇಡು, ಸ್ವರ್ಣನದಿ ಹಾಗೂ ಶರಾವತಿ ಕಣಿವೆ.

ಜೋಗ ಜಲಪಾತ ಪ್ರಸಿದ್ಧವಾಗಿದೆ

ಜೋಗ ಜಲಪಾತ ಹವಾಮಾನ

ಉತ್ತಮ ಸಮಯ ಜೋಗ ಜಲಪಾತ

  • Jan
  • Feb
  • Mar
  • Apr
  • May
  • Jun
  • July
  • Aug
  • Sep
  • Oct
  • Nov
  • Dec

ತಲುಪುವ ಬಗೆ ಜೋಗ ಜಲಪಾತ

  • ರಸ್ತೆಯ ಮೂಲಕ
    ಜೋಗ ಜಲಪಾತ ಸಮೀಪದ ನಗರಗಳಾದ ಶಿವಮೊಗ್ಗ ಹಾಗೂ ಸಾಗರಕ್ಕೆ ರಸ್ತೆಗಳ ಮೂಲಕ ಸಂಪರ್ಕ ಹೊಂದಿದೆ. ಬೆಂಗಳೂರಿನಿಂದ ಹಲವು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ ಗಳಿಂದ ಜೋಗ ಜಲಪಾತಕ್ಕೆ ತೆರಳಲು ಸೌಕರ್ಯವಿದೆ.
    ಮಾರ್ಗಗಳ ಹುಡುಕಾಟ
  • ರೈಲಿನ ಮೂಲಕ
    ತಾಳಗುಪ್ಪ ರೈಲು ನಿಲ್ದಾಣವು ಜೋಗ ಜಲಪಾತದ ಅತ್ಯಂತ ಸಮೀಪದ ರೈಲು ನಿಲ್ದಾಣವಾಗಿದೆ. ಜೋಗದಿಂದ 6 ಕಿಮೀ ನಷ್ಟು ಹತ್ತಿರದಲ್ಲಿದೆ. ಆದರೆ ಪ್ರಮುಖ ಪಟ್ಟಣಗಳಿಗೆ ಅಲ್ಲಿಂದ ನೇರ ಸಂಪರ್ಕವಿಲ್ಲದಿದ್ದರೂ ಜೋಗನಿಂದ 100 ಕಿ.ಮೀ.ನಷ್ಟು ದೂರದ ಶಿವಮೊಗ್ಗ ರೈಲು ನಿಲ್ದಾಣವು ಭಾರತದ ಪ್ರಧಾನ ನಗರಗಳೊಂದಿಗೆ ಸಂಪರ್ಕ ಹೊಂದಿದೆ. ಇಲ್ಲಿಂದಲೂ ಕೂಡ ಪ್ರವಾಸಿಗರು ಕ್ಯಾಬ್ ಅಥವಾ ಬಸ್ ಗಳನ್ನು ಬಳಸಿ ಜೋಗ ತಲುಪಬಹುದು.
    ಮಾರ್ಗಗಳ ಹುಡುಕಾಟ
  • ಆಕಾಶದ ಮೂಲಕ
    ಜೋಗ ಜಲಪಾತಕ್ಕೆ ಸಮೀಪವಿರುವ ವಿಮಾನ ನಿಲ್ದಾಣವೆಂದರೆ ಹಿಂದೆ ಬಜ್ಪೆ ವಿಮಾನ ನಿಲ್ದಾಣವೆಂದು ಕರೆಯಿಸಿಕೊಳ್ಳುತ್ತಿದ್ದ ಮಂಗಳೂರು ವಿಮಾನ ನಿಲ್ದಾಣ. ಜೋಗದಿಂದ 200 ಕಿಮೀನಷ್ಟು ದೂರದಲ್ಲಿರುವ ಈ ವಿಮಾನ ನಿಲ್ದಾಣ ಭಾರತದ ಪ್ರಮುಖ ಪಟ್ಟಣಗಳಿಗೂ ಸಂಪರ್ಕ ಕಲ್ಪಿಸುತ್ತದೆ.
    ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
18 Apr,Thu
Return On
19 Apr,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
18 Apr,Thu
Check Out
19 Apr,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
18 Apr,Thu
Return On
19 Apr,Fri