ನೀವು ಮಳೆಗಾಲದಲ್ಲಿ ಪ್ರವಾಸಕ್ಕೆ ತೆರಳಲು ಪ್ಲಾನ್ ಮಾಡಿಕೊಂಡರೆ ಖಂಡಿತವಾಗಿಯೂ ಭಾರತದ ಈ ಸುಂದರ ಸ್ಥಳಗಳಿಗೊಮ್ಮೆ ಭೇಟಿ ನೀಡಲೇಬೇಕು. ಏಕೆಂದರೆ ಮಳೆಗಾಲದಲ್ಲಿ ಈ ಸ್ಥಳಗಳ ಸೌಂದರ್ಯವು ಹಲವು ಪಟ್ಟು ಹೆಚ್ಚಾಗುತ್ತದೆ. ಮಳೆಗಾಲದಲ್ಲಿ ಹೆಚ್ಚಿನ ಶಾಖವಾಗಲಿ ಅಥವಾ ಅತಿಯಾದ ಶೀತವಾಗಲಿ ನಿಮ್ಮನ್ನು ಕಾಡುವುದಿಲ್ಲ. ಈ ಕಾರಣಕ್ಕಾಗಿಯೇ ಅನೇಕ ಜನರು ಮಳೆಗಾಲವನ್ನು ಪ್ರಯಾಣಕ್ಕೆ ಪರ್ ಫೆಕ್ಟ್ ಎಂದು ಕಂಡುಕೊಳ್ಳುತ್ತಾರೆ. ಮಳೆಗಾಲದಲ್ಲಿ ಪ್ರಯಾಣ ಮಾಡುವುದು ಬೇರೆಯದ್ದೇ ರೀತಿ ಖುಷಿ ಕೊಡುತ್ತದೆ. ಮತ್ತೇಕೆ ತಡ, ನೀವು ಸಹ ಮಳೆಗಾಲದಲ್ಲಿ ಹೊಸ ಹೊಸ ಸ್ಥಳಗಳನ್ನು ಅನ್ವೇಷಿಸಲು ಬಯಸಿದರೆ ಖಂಡಿತವಾಗಿಯೂ ಭಾರತದ ಈ ಸುಂದರ ಸ್ಥಳಗಳನ್ನು ನೋಡಲು ಹೋಗಲೇಬೇಕು.

ಮುನ್ನಾರ್
ಮಳೆಗಾಲದಲ್ಲಿ ಕೇರಳದಲ್ಲಿರುವ ಮುನ್ನಾರ್ ನೋಡುವುದು ನಿಜವಾಗಿಯೂ ಖುಷಿ ಕೊಡುತ್ತದೆ. ಪ್ರವಾಸಿಗರು ಸಾಮಾನ್ಯವಾಗಿ ಈ ಸ್ಥಳದ ಸೌಂದರ್ಯವನ್ನು ಸ್ವರ್ಗದ ಸೌಂದರ್ಯದೊಂದಿಗೆ ಹೋಲಿಸುತ್ತಾರೆ. ಚಹಾ ತೋಟಗಳಿಂದ ಪರ್ವತಗಳವರೆಗೆ, ಹಸಿರಿನಿಂದ, ಶಾಂತಿಯಿಂದ ಕೂಡಿರುವ ಈ ಸ್ಥಳದಲ್ಲಿ ವಿಭಿನ್ನ ಅನುಭವವನ್ನು ಅನುಭವಿಸುವ ಅವಕಾಶವನ್ನು ಪಡೆಯುತ್ತೀರಿ. ನಗರದ ಗದ್ದಲದಿಂದ ಹೊರಬರಲು ಬಯಸಿದರೆ, ನೀವು ಖಂಡಿತವಾಗಿಯೂ ಮುನ್ನಾರ್‌ಗೆ ಹೋಗಲು ಯೋಜಿಸಬೇಕು.
ಮುನ್ನಾರ್ ಕೇರಳದ ಇಡುಕ್ಕಿ ಜಿಲ್ಲೆಯಲ್ಲಿದೆ. ಇದು ಕೂನೂರು, ಮೈಸೂರು ಮತ್ತು ವಯನಾಡಿನಂತೆಯೇ ಸುಂದರವಾದ ಗಿರಿಧಾಮವಾಗಿದೆ. ಮಧುರಪುಳ, ನಲ್ಲತನ್ನಿ ಮತ್ತು ಕುಂಡಲಿ ಎಂಬ ಮೂರು ನದಿಗಳ ಸಂಗಮವಿರುವುದರಿಂದ ಇದನ್ನು ಮುನ್ನಾರ್ ಎಂದು ಕರೆಯಲಾಗುತ್ತದೆ. ಈ ಸ್ಥಳವು ಪಕ್ಷಿ ವೀಕ್ಷಣೆ, ಬೋಟಿಂಗ್, ಗಾಲ್ಫ್ ಮತ್ತು ಚಾರಣಕ್ಕೆ ಬಹಳ ಜನಪ್ರಿಯವಾಗಿದೆ. ನೀವು ಬೆಂಗಳೂರು ಅಥವಾ ಹತ್ತಿರದ ಸ್ಥಳಗಳಿಂದ ಇಲ್ಲಿಗೆ ಭೇಟಿ ನೀಡಲು ಬರುತ್ತಿದ್ದರೆ ಮತ್ತು ನಿಮಗೆ ಕಡಿಮೆ ಸಮಯವಿದ್ದರೆ, ನೀವು ಇನ್ನೂ ಈ ಸ್ಥಳದ ಅನೇಕ ಆಸಕ್ತಿದಾಯಕ ಸ್ಥಳಗಳಿಗೆ ಭೇಟಿ ನೀಡಬಹುದು.

ಉದಯಪುರ
ನೀವು ದೆಹಲಿಯ ಸುತ್ತಮುತ್ತಲಿನ ಕೆಲವು ಸ್ಥಳಕ್ಕೆ ಭೇಟಿ ನೀಡಲು ಯೋಚಿಸುತ್ತಿದ್ದರೆ, ರಾಜಸ್ಥಾನದಲ್ಲಿರುವ ಉದಯಪುರವು ಉತ್ತಮ ಆಯ್ಕೆಯಾಗಿದೆ. ವಿಶೇಷವಾಗಿ ನಿಮ್ಮ ಪಾರ್ಟ್‌ನರ್ ಜೊತೆ ಉದಯಪುರವನ್ನು ಅನ್ವೇಷಿಸಲು ನೀವು ಯೋಜಿಸಬೇಕು. ಸರೋವರಗಳು ಮತ್ತು ಐತಿಹಾಸಿಕ ಸ್ಥಳಗಳಿಂದ ಆವೃತವಾಗಿರುವ ಈ ನಗರವನ್ನು ನೀವು ತುಂಬಾ ಇಷ್ಟಪಡುತ್ತೀರಿ. ಮಳೆಗಾಲದಲ್ಲಿ ಈ ನಗರದ ಸೌಂದರ್ಯವೂ ಮತ್ತಷ್ಟು ಹೆಚ್ಚುತ್ತದೆ.
ಉದಯಪುರ ರಾಜಸ್ಥಾನದ ಒಂದು ದೊಡ್ಡ ಪ್ರವಾಸಿ ನಗರವಾಗಿದೆ. ಇದನ್ನು ಸರೋವರಗಳ ನಗರ ಎಂದೇ ಕರೆಯಲಾಗುತ್ತದೆ. ಎಲ್ಲಾ ಕಡೆಗಳಲ್ಲಿ ಸುಂದರವಾದ ಅರಾವಳಿ ಬೆಟ್ಟಗಳಿಂದ ಸುತ್ತುವರೆದಿರುವ ಈ ನಗರವು ರಾಜಸ್ಥಾನದ ರತ್ನ ಕಿರೀಟವಾಗಿದೆ. ನೈಸರ್ಗಿಕ ಸೌಂದರ್ಯ, ದೇವಾಲಯಗಳು ಮತ್ತು ವಾಸ್ತುಶಿಲ್ಪದಿಂದಾಗಿ ಈ ನಗರವು ಯಾವಾಗಲೂ ಪ್ರವಾಸಿಗರಿಂದ ತುಂಬಿರುತ್ತದೆ. ಉದಯಪುರ ನಗರವನ್ನು 'ಜ್ಯುವೆಲ್ ಆಫ್ ಮೇವಾರ್' ನಿಂದ 'ವೆನಿಸ್ ಆಫ್ ದಿ ಈಸ್ಟ್' ವರೆಗಿನ ಹೆಸರುಗಳಿಂದ ಕರೆಯಲಾಗುತ್ತದೆ. ದೋಣಿ ವಿಹಾರ, ಆಹಾರ ಮತ್ತು ಪಾನೀಯಗಳ ಜೊತೆಗೆ, ಉದಯಪುರವು ಅನೇಕ ಇತರ ಆಕರ್ಷಣೆಗಳಿಗೆ ಹೆಸರುವಾಸಿಯಾಗಿದೆ. ಈ ಅವಧಿಯಲ್ಲಿ ನೀವು ಒಂದರಿಂದ ಎರಡು ದಿನಗಳ ಕಾಲ ಇಲ್ಲಿಗೆ ಪ್ರವಾಸವನ್ನು ಯೋಜಿಸಬಹುದು.

ಲೋನಾವಾಲಾ
ನೀವು ಬಯಸಿದರೆ ಮಳೆಗಾಲದಲ್ಲಿ ಲೋನಾವಾಲಾವನ್ನು ಅನ್ವೇಷಿಸಲು ಸಹ ಯೋಜಿಸಬಹುದು. ಲೋನಾವಾಲಾದಲ್ಲಿ ನೀವು ಗುಹೆಗಳಿಂದ ಸರೋವರಗಳು, ಜಲಪಾತಗಳು, ಹಸಿರಿನ ಪರ್ವತಗಳವರೆಗೆ ಬಹಳಷ್ಟು ನೋಡಬಹುದು. ಮಳೆಗಾಲದ ಸಮಯದಲ್ಲಿ ಲೋನಾವಲಾವನ್ನು ಅನ್ವೇಷಿಸುವ ಮೂಲಕ ಪ್ರಕೃತಿ ಪ್ರಿಯರು ಸಾಕಷ್ಟು ಸಾಂತ್ವನವನ್ನು ಪಡೆಯಬಹುದು. ಜನಸಂದಣಿಯಿಂದ ದೂರವಿರುವ ಈ ಸ್ಥಳವು ಪ್ರವಾಸಿಗರಿಗೆ ಉತ್ತಮ ಅನುಭವವನ್ನು ನೀಡುತ್ತದೆ.
ಲೋನಾವಾಲಾದ ಸೌಂದರ್ಯವು ವರ್ಷವಿಡೀ ಗೋಚರಿಸುತ್ತದೆಯಾದರೂ, ಮಾನ್ಸೂನ್ ಸಮಯದಲ್ಲಿ ಲೋನಾವಲಾಗೆ ಭೇಟಿ ನೀಡುವುದು ತನ್ನದೇ ಆದ ವಿಶಿಷ್ಟ ಆನಂದವನ್ನು ನೀಡುತ್ತದೆ. ಮಾನ್ಸೂನ್‌ನಲ್ಲಿ ಲೋನಾವಾಲಾದ ನೋಟವು ವಿಭಿನ್ನವಾಗಿರುತ್ತದೆ ಮತ್ತು ಮಾನ್ಸೂನ್ ಸಮಯದಲ್ಲಿ ಲೋನಾವಾಲವು ಭೇಟಿ ನೀಡುವ ಪ್ರಮುಖ ಆಕರ್ಷಣೆಯ ಕೇಂದ್ರವಾಗಿದೆ ಎಂಬುದರಲ್ಲಿ ಸಂದೇಹವಿಲ್ಲ. ಮುಂಬೈ-ಪುಣೆ ಮಾತ್ರವಲ್ಲದೆ ಮಹಾರಾಷ್ಟ್ರದ ಎಲ್ಲೆಡೆಯಿಂದ ಜನರು ಇಲ್ಲಿಗೆ ಬಂದು ಆನಂದಿಸುತ್ತಾರೆ. ಮಾನ್ಸೂನ್ ಮಳೆಯಲ್ಲಿ ಮುಳುಗಲು ನೀವು ಎಲ್ಲೋ ಪ್ರಯಾಣಿಸಲು ಯೋಜಿಸುತ್ತಿದ್ದರೆ, ಇದಕ್ಕಿಂತ ಉತ್ತಮವಾದ ಸ್ಥಳ ಬೇರೊಂದಿಲ್ಲ ನೋಡಿ.


Click it and Unblock the Notifications


















