Search
  • Follow NativePlanet
Share
» »ಕರ್ನಾಟಕದ ಈ ಧಾರ್ಮಿಕ ತಾಣಗಳು ಗೊತ್ತೆ?

ಕರ್ನಾಟಕದ ಈ ಧಾರ್ಮಿಕ ತಾಣಗಳು ಗೊತ್ತೆ?

By Vijay

ದಕ್ಷಿಣ ಭಾರತದ ಪ್ರಮುಖ ರಾಜ್ಯಗಳಲ್ಲಿ ಒಂದಾದ ಕರ್ನಾಟಕದಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಧಾರ್ಮಿಕ ಕ್ಷೇತ್ರಗಳಿವೆ. ಹಾಗಾಗಿ ಧಾರ್ಮಿಕ ಪ್ರವಾಸೋದ್ಯಮದ ದೃಷ್ಟಿಯಿಂದಲೂ ಸಹ ಕರ್ನಾಟಕ ಒಂದು ಪ್ರಮುಖ ರಾಜ್ಯವೆಂದೆ ಹೇಳಬಹುದು. ರಾಜ್ಯದಲ್ಲಿರುವ ಬಹುತೇಕ ಜನರಿಗೂ ಕರ್ನಾಟಕದಲ್ಲಿರುವ ಪ್ರಸಿದ್ಧ ಧಾರ್ಮಿಕ ತಾಣಗಳ ಕುರಿತು ತಿಳಿದೆ ಇದೆ.

ಆದರೆ, ಈ ಲೇಖನದಲ್ಲಿ ತಿಳಿಸಲಾದ ಕೆಲವು ವಿಶಿಷ್ಟವಾದ ಕ್ಷೇತ್ರ ಅಥವಾ ದೇವಾಲಯಗಳ ಕುರಿತು ಬಹುತೇಕರಿಗೆ ಗೊತ್ತಿರಲಿಕ್ಕಿಲ್ಲ. ಬಹುಶಃ ಎಷ್ಟೊ ಜನರಿಗೆ ಹೆಸರೂ ಸಹ ತಿಳಿದಿರಿಲಿಕ್ಕಿಲ್ಲ. ಹಾಗಾಗಿ ಕರ್ನಾಟಕದಲ್ಲಿ ಭೇಟಿ ಮಾಡಬಹುದಾದ ಕೆಲವು ವಿಶಿಷ್ಟವಾದ ಧಾರ್ಮಿಕ ತಾಣಗಲ ಕುರಿತು ಇಲ್ಲಿ ತಿಳಿಯಿರಿ.

ನಿಮಗಿಷ್ಟವಾಗಬಹುದಾದ : ನೀವು ಕೇಳಿರದ ಶಿವನ ಪುರಾತನ ದೇವಾಲಯಗಳು

ಕರ್ನಾಟಕದ ಈ ಧಾರ್ಮಿಕ ತಾಣಗಳು ಅಷ್ಟೊಂದು ಜನಜನಿತವಾಗಿಲ್ಲ. ಈ ತಾಣಗಳ ಸುತ್ತಮುತ್ತಲಿನ ಪ್ರದೇಶಗಳ ಜನರಿಗೆ ಮಾತ್ರ ಇವುಗಳ ಕುರಿತು ತಿಳಿದಿರಬಹುದು. ನಿಮಗೆ ಸಮಯಾವಕಾಶ ಸಿಕ್ಕರೆ ಹಾಗೂ ನೀವು ಇವುಗಳ ಕುರಿತು ಕೇಳಿಲ್ಲವೆಂದರೆ ಒಂದೊಮ್ಮೆ ಪ್ರವಾಸ ಮಾಡಿಬಿಡಿ.

ವಿಶಿಷ್ಟಮಯ ಧಾರ್ಮಿಕ ಕ್ಷೇತ್ರಗಳು:

ವಿಶಿಷ್ಟಮಯ ಧಾರ್ಮಿಕ ಕ್ಷೇತ್ರಗಳು:

ಬೆಳಗುತ್ತಿ ತೀರ್ಥರಾಮೇಶ್ವರ : ದಾವಣಗೆರೆಯ ಹೊನ್ನಾಳಿ ತಾಲೂಕಿನಲ್ಲಿ ಬೆಳಗುತ್ತಿ ಎಂಬ ಗ್ರಾಮವಿದೆ. ಈ ಗ್ರಾಮದಿಂದ ಎರಡು ಕಿ.ಮೀ ದೂರದಲ್ಲಿರುವ ಬೆಟ್ಟವೊಂದರ ಮೇಲೆ ತೀರ್ಥರಾಮೇಶ್ವರ ದೇವಸ್ಥಾನವಿದೆ. ಬಯಲುಸೀಮೆ ಪ್ರದೇಶದ ಮಧ್ಯದಲ್ಲಿರುವ ಪ್ರಾಕೃತಿಕ ಸೌಂದರ್ಯದ ಮಧ್ಯೆ ನೆಲೆಸಿರುವ ಈ ಕ್ಷೇತ್ರವನ್ನು "ದಕ್ಷಿಣ ಕಾಶಿ" ಎಂತಲೂ ಸಹ ಸ್ಥಳೀಯವಾಗಿ ಕರೆಯಲಾಗುತ್ತದೆ.

ಚಿತ್ರಕೃಪೆ: HShivaRam

ವಿಶಿಷ್ಟಮಯ ಧಾರ್ಮಿಕ ಕ್ಷೇತ್ರಗಳು:

ವಿಶಿಷ್ಟಮಯ ಧಾರ್ಮಿಕ ಕ್ಷೇತ್ರಗಳು:

ಬೆಟ್ಟದ ಮಧ್ಯದಿಂದ ಹರಿಯುವ ನೀರಿನ ಮೂಲವೊಂದಿಲ್ಲಿದ್ದು ಅದನ್ನೆ ತೀರ್ಥರಾಮೇಶ್ವರ ಎಂದು ಕರೆಯಲಾಗಿದೆ. ವಿಶೇಷವೆಂದರೆ ಇದರ ನೀರು ಎಂದಿಗೂ ಬತ್ತುವುದಿಲ್ಲ. ಈ ನೀರಿನಲ್ಲಿ ಮಿಂದರೆ ಸಕಲ ದೋಷಗಳು/ಪಾಪಗಳು ನಿವಾರಣೆಯಾಗುತ್ತವೆ ಎಂಬ ನಂಬಿಕೆಯಿದ್ದು, ಇದರ ನೈರ್ಮಲ್ಯವನ್ನು ಕಾಪಾಡುವ ದೃಷ್ಟಿಯಿಂದ ಕಲ್ಯಾಣಿಯ ನೀರನ್ನು ಬಿಂದಿಗೆಗಳಲ್ಲಿ ತೆಗೆದುಕೊಂಡು ಬೇರೆಡೆ ಹೋಗಿ ಭಕ್ತಾದಿಗಳು ಸ್ನಾನ ಮಾಡುತ್ತಾರೆ.

ಚಿತ್ರಕೃಪೆ: HShivaRam

ವಿಶಿಷ್ಟಮಯ ಧಾರ್ಮಿಕ ಕ್ಷೇತ್ರಗಳು:

ವಿಶಿಷ್ಟಮಯ ಧಾರ್ಮಿಕ ಕ್ಷೇತ್ರಗಳು:

ಗುಣವಂತೆ ಶಂಭುಲಿಂಗೇಶ್ವರ : ಕರ್ನಾಟಕದಲ್ಲಿರುವ ಶಿವದೇಗುಲಗಳಲ್ಲಿ ಅತಿ ವಿಶಿಷ್ಠ ಹಾಗೂ ಪುರಾಣ ಪ್ರಸಿದ್ಧಿಯಿಂದ ಕೂಡಿದ್ದು ನಿತ್ಯವೂ ಭಕ್ತರನ್ನು ಸೆಳೆಯುವ ಕ್ಷೇತ್ರಗಳು ಕೆಲವೇ ಕೆಲವು. ಅಂತಹ ಸ್ಥಳಗಳ ಪೈಕಿ ಒಂದಾಗಿದೆ ಗುಣವಂತೆಯ ಶಂಭುಲಿಂಗೇಶ್ವರ ದೇವಸ್ಥಾನ. ಉತ್ತರಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನಿಂದ ಹತ್ತು ಕಿ.ಮೀ ದೂರದಲ್ಲಿರುವ ಗುಣವಂತೆ ಎಂಬ ಗ್ರಾಮದಲ್ಲಿ ಶಂಭುಲಿಂಗೇಶ್ವರನ ಈ ದೇವಸ್ಥಾನವಿದ್ದು ಆಸ್ಥಿಕರನ್ನು ಸೆಳೆಯುತ್ತದೆ. ಗುಣವಂತೇಶ್ವರ ಎಂದೂ ಸಹ ಕರೆಯಲ್ಪಡುವ ಶಂಭುಲಿಂಗೇಶ್ವರ ಪಂಚಕ್ಷೇತ್ರಗಳ ಪೈಕಿ ಒಬ್ಬನಾಗಿದ್ದಾನೆ.

ಚಿತ್ರಕೃಪೆ: Chinmayamrao

ವಿಶಿಷ್ಟಮಯ ಧಾರ್ಮಿಕ ಕ್ಷೇತ್ರಗಳು:

ವಿಶಿಷ್ಟಮಯ ಧಾರ್ಮಿಕ ಕ್ಷೇತ್ರಗಳು:

ನಾಡಕಲಸಿ : ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನಲ್ಲಿರುವ ನಾಡಕಲಸಿಯು ಕಲ್ಲಿನ ದೇವಸ್ಥಾನಕ್ಕೆ ಪ್ರಸಿದ್ಧವಾಗಿದೆ. ಸಾಗರದಿಂದ ಸುಮಾರು ಎಂಟು ಕಿ.ಮೀ ದೂರದಲ್ಲಿ ಕಲಸಿ ಗ್ರಾಮವಿದ್ದು ಸುಲಭವಾಗಿ ತಲುಪಬಹುದಾಗಿದೆ. ಶಿವಮೊಗ್ಗದಿಂದ ಸೊರಬಕ್ಕೆ ಹೋಗುವ ಮಾರ್ಗದಲ್ಲಿ ಕಲಸಿ ಗ್ರಾಮವಿದ್ದು ಅಲ್ಲಿಂದ ನಾಡಕಲಸಿಯ ರಾಮೇಶ್ವರ ದೇಗುಲಕ್ಕೆ ಮೂರು ಕಿ.ಮೀ ನಡಿಗೆಯ ಮೂಲಕ ಸಾಗಿ ಭೇಟಿ ನೀಡಬಹುದು.

ಚಿತ್ರಕೃಪೆ: Bschandrasgr

ವಿಶಿಷ್ಟಮಯ ಧಾರ್ಮಿಕ ಕ್ಷೇತ್ರಗಳು:

ವಿಶಿಷ್ಟಮಯ ಧಾರ್ಮಿಕ ಕ್ಷೇತ್ರಗಳು:

ಈ ದೇವಾಲಯದ ಶಿಲ್ಪಕಲೆಯು ಮನೋಹರವಾಗಿದ್ದು ನೋಡುಗರ ಮನ ಸೆಳೆಯುತ್ತದೆ. ನಂದಿ ವಿಗ್ರಹವಂತೂ ಸಾಕಷ್ಟು ನುಣುಪಾಗಿದ್ದು ನಂದಿಯ ಮುಖವು ಸುಂದರವಾಗಿ ಕಂಡುಬರುತ್ತದೆ.

ಚಿತ್ರಕೃಪೆ: Bschandrasgr

ವಿಶಿಷ್ಟಮಯ ಧಾರ್ಮಿಕ ಕ್ಷೇತ್ರಗಳು:

ವಿಶಿಷ್ಟಮಯ ಧಾರ್ಮಿಕ ಕ್ಷೇತ್ರಗಳು:

ಈ ದೇವಾಲಯದ ವಿಶೇಷವೆಂದರೆ ಇಲ್ಲಿರುವ ಜಿರಲೆ ಖಂಬ. ಇಲ್ಲಿನ ಅರ್ಚಕರು ಈ ಖಂಬಕ್ಕೆ ಮಣ್ಣನ್ನು ತೇಯ್ದು ಮಂತ್ರಿಸಿ ನೀಡುತ್ತಾರೆ. ಇದರಿಂದ ಸಂತಾನವಿಲ್ಲದವರಿಗೆ, ಬುದ್ಧಿಭ್ರಮಣೆಯಾದವರಿಗೆಲ್ಲ ಸೂಕ್ತ ಫಲ ಸಿಕ್ಕಿದೆಯಂತೆ.

ಚಿತ್ರಕೃಪೆ: Bschandrasgr

ವಿಶಿಷ್ಟಮಯ ಧಾರ್ಮಿಕ ಕ್ಷೇತ್ರಗಳು:

ವಿಶಿಷ್ಟಮಯ ಧಾರ್ಮಿಕ ಕ್ಷೇತ್ರಗಳು:

ಇನ್ನೊಂದು ಸ್ಥಳಪುರಾಣದ ಪ್ರಕಾರ, ಹಿಂದೆ ಇಲ್ಲಿ ಪಾಂಡವರು ಅಜ್ಞಾತವಾಸ ಅನುಭವಿಸುತ್ತಿದ್ದಾಗ ಬಂದಿದ್ದರಂತೆ. ಅವರಿಗೆ ನೀರಡಿಕೆಯುಂಟಾದಾಗ ಭೀಮನು ಗುದ್ದಲಿಯಿಂದ ಭೂಮಿಗೆ ಒಂದು ಪೆಟ್ಟು ಹಾಕಿ ನೀರನ್ನು ಹೊರತೆಗೆದಿದ್ದನಂತೆ. ಹೀಗಾಗಿ ಇಲ್ಲಿರುವ ಅತಿ ಚಿಕ್ಕ ನೀರಿನ ಮೂಲವನ್ನು "ಒಂದು ಗುದ್ದಲಿ ಕೆರೆ" ಅಥವಾ ಭೀಮನ ಕೆರೆ ಎಂದೆ ಕರೆಯಲಾಗುತ್ತದೆ.

ಚಿತ್ರಕೃಪೆ: Bschandrasgr

ವಿಶಿಷ್ಟಮಯ ಧಾರ್ಮಿಕ ಕ್ಷೇತ್ರಗಳು:

ವಿಶಿಷ್ಟಮಯ ಧಾರ್ಮಿಕ ಕ್ಷೇತ್ರಗಳು:

ನಾಮದ ಚಿಲುಮೆ : ತುಮಕೂರು ಜಿಲ್ಲೆಯ ದೇವರಾಯನ ದುರ್ಗದ ಸಮೀಪವಿರುವ ಒಂದು ಪ್ರೇಕ್ಷಣೀಯ ಹಾಗೂ ಧಾರ್ಮಿಕ ಸ್ಥಳ ಇದಾಗಿದೆ. ಇದು ತುಮಕೂರು ನಗರದಿಂದ ಹತ್ತು ಕಿ.ಮೀ ಗಳಷ್ಟು ದೂರದಲ್ಲಿದೆ. ವಿಶೇಷವೆಂದರೆ ಹಿಂದೆ ರಾಮ, ಸೀತೆ ಹಾಗೂ ಲಕ್ಷ್ಮಣರು ಈ ಸ್ಥಳಕ್ಕೆ ಬಂದಿದ್ದಾಗ ರಾಮನು ಹಣೆಗೆ ತಿಲಕವಿಟ್ಟುಕೊಳ್ಳಲು ನಿರಿಗಾಗಿ ಹುಡುಕಿದನು. ಆದರೆ ಎಲ್ಲೂ ನೀರು ದೊರೆಯದಾದಾಗ ತನ್ನ ಬಿಲ್ಲಿಗೆ ಬಾಣವನ್ನು ಹೂಡಿ ಬಂಡೆಯೊಂದಕ್ಕೆ ಬಿಟ್ಟನು. ಬಾಣವು ಬಂಡೆಯನ್ನು ಕೊರೆದು ರಂಧ್ರ ಮಾಡಿ ಅದರ ಮೂಲಕ ನೀರಿನ ಚಿಲುಮೆಯೊಂದು ಉಕ್ಕಿತು. ಆ ನೀರನ್ನು ರಾಮನು ತೆಗೆದುಕೊಂಡು ನಾಮವನ್ನು ಧರಿಸಿದನು. ಆ ಕಾರಣ ಇದಕ್ಕೆ ನಾಮದ ಚಿಲುಮೆ ಎಂಬ ಹೆಸರು ಬಂದಿದೆ ಅನ್ನುತ್ತದೆ ಇಲ್ಲಿನ ಸ್ಥಳ ಪುರಾಣ.

ಚಿತ್ರಕೃಪೆ: Siddarth P Raj

ವಿಶಿಷ್ಟಮಯ ಧಾರ್ಮಿಕ ಕ್ಷೇತ್ರಗಳು:

ವಿಶಿಷ್ಟಮಯ ಧಾರ್ಮಿಕ ಕ್ಷೇತ್ರಗಳು:

ತೊಂಬಟ್ಟು ಶ್ರೀ ಮಹಾಗಣಪತಿ ದೇವಸ್ಥಾನ : ತೊಂಬಟ್ಟು ಎಂಬುದು ಒಂದು ಪುಟ್ಟ ಗ್ರಾಮವಾಗಿದ್ದು ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನಲ್ಲಿ ಬರುತ್ತದೆ. ಇಲ್ಲಿರುವ ಮಹಾಗಣಪತಿ ದೇವಸ್ಥಾನವು 2000 ಕ್ಕೂ ಅಧಿಕವಾದ ಇತಿಹಾಸವನ್ನು ಹೊಂದಿದೆ ಎನ್ನಲಾಗಿದೆ. ಈ ಗಣಪತಿಯು ಅಷ್ಟ ದಿಕ್ಕುಗಳಲ್ಲಿ ಒಟ್ಟು 90 ಬೆಟ್ಟಗಳಿಂದ ಸುತ್ತುವರೆದಿದ್ದರಿಂದ ಇದಕ್ಕೆ ತೊಂಬಟ್ಟು ಎಂಬ ಹೆಸರು ಬಂದಿದೆ ಎನ್ನುತ್ತದೆ ಇಲ್ಲಿನ ಸ್ಥಳ ಪುರಾಣ. ಈ ಗಣಪತಿಯು ಮಂಡಿಯವರೆಗೆ ಮಾತ್ರ ಕುಳಿತಿರುವ ಭಂಗಿಯಲ್ಲಿದ್ದು ನಿತ್ಯ ಬಲಿಪೂಜೆಯ ಬಲಿ ಕಲ್ಲನ್ನು ಹೊಂದಿರುವ ಕೆಲವೆ ಕೆಲವು ದೇವಸ್ಥಾನಗಳ ಪೈಕಿ ಒಂದಾಗಿದೆ. ಅಪ್ಪಕಜ್ಜಾಯ ಈ ಗಣಪತಿಯ ಪ್ರೀಯವಾದ ಪ್ರಸಾದ.

ಚಿತ್ರಕೃಪೆ: Avinash shettigar

ವಿಶಿಷ್ಟಮಯ ಧಾರ್ಮಿಕ ಕ್ಷೇತ್ರಗಳು:

ವಿಶಿಷ್ಟಮಯ ಧಾರ್ಮಿಕ ಕ್ಷೇತ್ರಗಳು:

ಆನೆಗುಡ್ಡೆ ವಿನಾಯಕ ದೇವಸ್ಥಾನ : ಉಡುಪಿಯ ಕುಂದಾಪುರ ತಾಲೂಕಿನ ಕುಂಭಾಶಿ ಎಂಬಲ್ಲಿದೆ ಈ ದೇವಸ್ಥಾನ. ಉಡುಪಿಯಿಂದ 32 ಕಿ.ಮೀ ಹಾಗೂ ಕುಂದಾಪುರದಿಂದ 9 ಕಿ.ಮೀ ದೂರವಿದ್ದು ಖಾಸಗಿ ಸಾರಿಗೆ ವ್ಯವಸ್ಥೆಯ ಮೂಲಕ ಸುಲಭವಾಗಿ ತಲುಪಬಹುದು. ಇದೊಂದು ಗಣಪತಿಯ ಪ್ರಭಾವಿ ಕ್ಷೇತ್ರವಾಗಿದ್ದು ದರುಶನ ಕೋರಿ ಬರುವ ಭಕ್ತರ ಸಕಲ ಕಷ್ಟಗಳನ್ನು ಈ ಗಣಪ ನೀಗಿಸುತ್ತಾನೆ ಎಂಬ ನಂಬಿಕೆಯಿದೆ.

ಚಿತ್ರಕೃಪೆ: Pradeep adiga

ವಿಶಿಷ್ಟಮಯ ಧಾರ್ಮಿಕ ಕ್ಷೇತ್ರಗಳು:

ವಿಶಿಷ್ಟಮಯ ಧಾರ್ಮಿಕ ಕ್ಷೇತ್ರಗಳು:

ಕೋಡೂರು ಶ್ರೀಶಂಕರೇಶ್ವರ : ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಕೋಡೂರು ಗ್ರಾಮದಲ್ಲಿದೆ ಶಿವನಿಗೆ ಮುಡಿಪಾದ ಈ ದೇವಾಲಯ. ಶಿವಮೊಗ್ಗದ ಪಂಚ ಶಿವ ಕ್ಷೇತ್ರಗಳ ಪೈಕಿ ಇದೂ ಸಹ ಒಂದು. ಮಿಕ್ಕ ನಾಲ್ಕು ಕ್ಷೇತ್ರಗಳೆಂದರೆ ಮಲೆಶಂಕರ, ಗುಳುಗುಳಿ ಶಂಕರ, ಹೆಬ್ಬಿಗೆ ಶಂಕರ, ಅಲಸೆ ಶಂಕರ. ಈ ದೇಗುಲವು ಶಿಲೆಯಲ್ಲಿ ಕೆತ್ತಲಾದ ರಚನೆಯಾಗಿದ್ದು ನೋಡಲು ಆಕರ್ಷಕವಾಗಿದೆ. ಅಲ್ಲದೆ ಸುತ್ತಲಿನ ಮಲೆನಾಡಿನ ಪ್ರಕೃತಿ ಸೌಂದರ್ಯವು ನಯನಮನೋಹರವಾಗಿದ್ದು ಇದನ್ನು ಧಾರ್ಮಿಕ ಮತ್ತು ಪ್ರವಾಸಿ ತಾಣವನ್ನಾಗಿಸಿದೆ.

ಚಿತ್ರಕೃಪೆ: Chinmayamrao

ವಿಶಿಷ್ಟಮಯ ಧಾರ್ಮಿಕ ಕ್ಷೇತ್ರಗಳು:

ವಿಶಿಷ್ಟಮಯ ಧಾರ್ಮಿಕ ಕ್ಷೇತ್ರಗಳು:

ಹುಂಚ ಶ್ರೀ ಪದ್ಮಾವತಿ ಕ್ಷೇತ್ರ : ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಹುಂಚ ಎಂಬ ಗ್ರಾಮವು ಕರ್ನಾಟಕದಲ್ಲಿರುವ ಜೈನರ ಪವಿತ್ರ ಯಾತ್ರಾ ಸ್ಥಳಗಳ ಪೈಕಿ ಒಂದಾಗಿದೆ. ಕೆವಲ ಜೈನರಲ್ಲದೆ ಹಿಂದು ಧರ್ಮಿಯರೂ ಸಹ ಈ ಕ್ಷೇತ್ರಕ್ಕೆ ಭೇಟಿ ನೀಡುತ್ತಾರೆ. ಇಲ್ಲಿನ ಅಧಿದೇವತೆಯಾದ ಶ್ರೀಪದ್ಮಾವತಿಯನ್ನು ಜೈನರ 23 ನೇಯ ತೀರ್ಥಂಕರರಾದ ಶ್ರೀಪಾರ್ಶ್ವನಾಥ ಸ್ವಾಮಿಯ ಯಕ್ಷಿಯಾಗಿದ್ದು ಜಿನದತ್ತ ರಾಜನಿಗೆ ಆಶ್ರಯನೀಡಿ ಸಾಮ್ರಾಜ್ಯ ಕರುಣಿಸಿದ ಕರುಣಾಮಯಿ ಎಂದು ಕೊಂಡಾಡಲಾಗುತ್ತದೆ. ಉದ್ಯೊಗ ಲಭ್ಯತೆ, ಸಂತಾನ ಪ್ರಾಪ್ತಿ, ಅಭಿವೃದ್ಧಿ ಹೀಗೆ ಹತ್ತು ಹಲವು ಹರಕೆಗಳನ್ನು ಹೊತ್ತು ಭಕ್ತರು ಈ ದೇವಿಯನ್ನು ಆರಾಧಿಸುತ್ತಾರೆ.

ಚಿತ್ರಕೃಪೆ: Chinmayamrao

ವಿಶಿಷ್ಟಮಯ ಧಾರ್ಮಿಕ ಕ್ಷೇತ್ರಗಳು:

ವಿಶಿಷ್ಟಮಯ ಧಾರ್ಮಿಕ ಕ್ಷೇತ್ರಗಳು:

ವಿದುರಾಶ್ವತ್ಥ ಕ್ಷೇತ್ರ : ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲೂಕಿನಲ್ಲಿರುವ ಈ ಕ್ಷೇತ್ರವು ತನ್ನದೆ ಆದ ಧಾರ್ಮಿಕ ಮಹತ್ವ ಹೊಂದಿದೆ. ಗೌರಿಬಿದನೂರಿನಿಂದ ಕೇವಲ ಆರು ಕಿ.ಮೀ ದೂರದಲ್ಲಿರುವ ಈ ಕ್ಷೇತ್ರದಲ್ಲಿ ಅಶ್ವತ್ಥನಾರಾಯಣ ಸ್ವಾಮಿಯ ದೇಗುಲ ಹಾಗೂ ಸುಬ್ರಹ್ಮಣ್ಯ ಸ್ವಾಮಿಯ ಪವಿತ್ರ ಸನ್ನಿಧಿಯಿದೆ. ಸ್ಥಳ ಪುರಾಣದ ಪ್ರಕಾರ, ಹಿಂದೆ ಕೌರವದೊರೆ ಧೃತರಾಷ್ಟ್ರನ ಆಪ್ತಸಲಹೆಗಾರ ಹಾಗೂ ಮಂತ್ರಿಯಾಗಿದ್ದ, ವಿದುರನು ಇಲ್ಲಿ ಒಂದು ಅಶ್ವತ್ಥ ವೃಕ್ಷವನ್ನು ನೆಟ್ಟು ಬೆಳೆಸಿದ್ದನು. ಮಕ್ಕಳಾಗದೆ ಇರುವ ದಂಪತಿಗಳಿಗೆ ಪ್ರಾರ್ಥಿಸಲು ಇದು ಅತ್ಯಂತ ಪ್ರಶಸ್ತವಾದ ಕ್ಷೇತ್ರ ಎಂದು ಹೇಳಲಾಗುತ್ತದೆ. ದೇವಸ್ಥಾನದ ಇಕ್ಕೆಲಗಳಲ್ಲಿ ಸಹಸ್ರಾರು ನಾಗಪ್ಪನ ಶಿಲಾಮೂರ್ತಿಗಳು ತುಂಬಿರುವುದು ಇಲ್ಲಿನ ವಿಶೇಷ. ಸಾಂದರ್ಭಿಕ ಚಿತ್ರ.

ಚಿತ್ರಕೃಪೆ: Nsmohan

ವಿಶಿಷ್ಟಮಯ ಧಾರ್ಮಿಕ ಕ್ಷೇತ್ರಗಳು:

ವಿಶಿಷ್ಟಮಯ ಧಾರ್ಮಿಕ ಕ್ಷೇತ್ರಗಳು:

ಗೊರವನಹಳ್ಳಿ : ಇದು ತುಮಕೂರು ಜಿಲ್ಲೆಯ ಕೊರಟಗೆರೆ ತಾಲೂಕಿನಲ್ಲಿ ಇರುವ ಒಂದು ಸಣ್ಣ ಗ್ರಾಮ. ಗೊರವನಹಳ್ಳಿಯು ಪ್ರಮುಖವಾಗಿ ತನ್ನಲ್ಲಿರುವ ಲಕ್ಷ್ಮಿ ದೇವಿಯ ದೇವಾಲಯದಿಂದಾಗಿ ಪ್ರಸಿದ್ಧವಾಗಿದೆ. ಈ ದೇವಾಲಯದಲ್ಲಿ ಪ್ರತಿ ಮಂಗಳವಾರ, ಶುಕ್ರವಾರ ಹಾಗೂ ಭಾನುವಾರಗಳಂದು ವಿಶೇಷ ಪೂಜೆಯಿರುತ್ತದೆ. ದೇವಸ್ಥಾನದ ಆಡಳಿತ ಮಂಡಳಿಯಿಂದ ಭೇಟಿ ನೀಡುವ ಭಕ್ತಾದಿಗಳಿಗೆ ಪ್ರತಿ ದಿನ ಭೋಜನ ಪ್ರಸಾದದ ವ್ಯವಸ್ಥೆಯಿರುತ್ತದೆ. ಕಂಕಣ ಭಾಗ್ಯ ಬಯಸುವವರು ಈ ಕ್ಷೇತ್ರಕ್ಕೆ ಹೆಚ್ಚಾಗಿ ಭೇಟಿ ನೀಡುತ್ತಾರೆ. ಇಲ್ಲಿ ಲಕ್ಷ್ಮಿ ದೇವಿಯನ್ನು ಪೂಜಿಸಿದರೆ ಶಿಘ್ರದಲ್ಲೆ ಮದುವೆ ಕೂಡಿಬರುತ್ತದೆ ಎಂಬ ನಂಬಿಕೆಯಿದೆ.

ಚಿತ್ರಕೃಪೆ: Hiremath.vibha

ವಿಶಿಷ್ಟಮಯ ಧಾರ್ಮಿಕ ಕ್ಷೇತ್ರಗಳು:

ವಿಶಿಷ್ಟಮಯ ಧಾರ್ಮಿಕ ಕ್ಷೇತ್ರಗಳು:

ಇಟಗಿ ಭೀಮಾಂಬಿಕಾ ದೇವಸ್ಥಾನ : ಭೀಮವ್ವ ಅಥವಾ ಭೀಮಾಂಬಿಕಾ ದೇವಸ್ಥಾನವು ದೇವಿಗೆ ಮುಡಿಪಾದ ದೇವಸ್ಥಾನವಾಗಿದ್ದು ಭೀಮಾಂಬಿಕೆಯು ಸತಃ ಬನಶಂಕರಿಯ ಅವತಾರವೆಂದೆ ಹೇಳಲಾಗುತ್ತದೆ. ಇಟಗಿಯು ಗದಗ್ ಜಿಲ್ಲೆಯ ರೋಣ ತಾಲೂಕಿನಲ್ಲಿದೆ. ರೊಣದಿಂದ 16 ಕಿ.ಮೀ ಹಾಗೂ ಮತ್ತೊಂದು ಪ್ರಸಿದ್ಧ ಕ್ಷೇತ್ರವಾದ ಗಜೇಂದ್ರಗಡ್ ನಿಂದ 17 ಕಿ.ಮೀ ಗಳಷ್ಟು ದೂರದಲ್ಲಿದೆ ಇಟಗಿ. ತೆರಳಲು ಗದಗ್, ಗಜೇಂದ್ರಗಡ್, ರೋಣದಿಂದ ಬಸ್ಸುಗಳು ದೊರೆಯುತ್ತವೆ.

ಚಿತ್ರಕೃಪೆ: Manjunath Doddamani Gajendragad

ವಿಶಿಷ್ಟಮಯ ಧಾರ್ಮಿಕ ಕ್ಷೇತ್ರಗಳು:

ವಿಶಿಷ್ಟಮಯ ಧಾರ್ಮಿಕ ಕ್ಷೇತ್ರಗಳು:

ಬನವಾಸಿ : ಉತ್ತರ ಕನ್ನಡ ಹಿಲ್ಲೆಯ ಶಿರಸಿ ತಾಲೂಕಿನಲ್ಲಿರುವ ಬನವಾಸಿಯು ಮಧುಕೇಶ್ವರ ದೇವಾಲಯದಿಂದಾಗಿ ಚಿರಪರಿಚಿತ ತಾಣವಾಗಿದೆ. ಧಾರ್ಮಿಕ ದೃಷ್ಟಿಯಿಂದ ಮಾತ್ರವಲ್ಲದೆ ಐತಿಹಾಸಿಕ ದೃಷ್ಟಿಯಿಂದಲೂ ಈ ಕ್ಷೇತ್ರ ಪ್ರಸಿದ್ಧವಾಗಿದೆ. ಶಿರಸಿಯಿಂದ ಸೊರಬಕ್ಕೆ ಹೋಗುವ ದಾರಿಯಲ್ಲಿ ಸುಮಾರು ಮೂವತ್ತು ಕಿ.ಮೀ ದೂರದಲ್ಲಿ ಬನವಾಸಿ ಸಿಗುತ್ತದೆ. ಕಡಂಬ ರಾಜಯ ಕರ್ನಾಟಕದ ಪ್ರಥಮ ರಾಜ್ಯವಾಗಿದ್ದು ಇದರ ರಾಜಧಾನಿಯಾಗಿ ಮೆರೆದಿತ್ತು ಬನವಾಸಿ. ಅಂತೆಯೆ ಅದರ ಗೌರವಾರ್ಥವಾಗಿ ಕರ್ನಾಟಕ ಸರ್ಕಾರದಿಂದ ಕದಂಬೋತ್ಸವವನ್ನು ಆಚರಿಸಲಾಗುತ್ತದೆ.

ಚಿತ್ರಕೃಪೆ: Clt13

ವಿಶಿಷ್ಟಮಯ ಧಾರ್ಮಿಕ ಕ್ಷೇತ್ರಗಳು:

ವಿಶಿಷ್ಟಮಯ ಧಾರ್ಮಿಕ ಕ್ಷೇತ್ರಗಳು:

ಬೈಂದೂರು ಶ್ರೀ ಸೇನೇಶ್ವರ ದೇವಸ್ಥಾನ : ಉಡುಪಿ ಜಿಲ್ಲೆಯ ಕುಂದಾಪುರದಿಂದ ಸುಮಾರು 32 ಕಿ.ಮೀ ದೂರದಲ್ಲಿರುವ ಬೈಂದೂರು ಪಟ್ಟಣವು ಶ್ರೀ ಸೇನೇಶ್ವರ ಎಂಬ ಸುಂದರವಾದ ಶಿವ ದೇವಾಲಯವನ್ನು ಹೊಂದಿದೆ. ಊರಿನ ಹೃದಯ ಭಾಗದಲ್ಲಿರುವ ಈ ದೇವಾಲಯ ಪ್ರಮುಖ ಆಕರ್ಷಣೆಯ ಕೇಂದ್ರವಾಗಿದ್ದು ಸುಂದರವಾದ ಕೆತ್ತನೆಗಳಿಂದ ಕೂಡಿದೆ.

ಚಿತ್ರಕೃಪೆ: Vishuachar

ವಿಶಿಷ್ಟಮಯ ಧಾರ್ಮಿಕ ಕ್ಷೇತ್ರಗಳು:

ವಿಶಿಷ್ಟಮಯ ಧಾರ್ಮಿಕ ಕ್ಷೇತ್ರಗಳು:

ಸ್ಥಳ ಪುರಾಣದಂತೆ ಹಿಂದೆ ಸೀತಾನ್ವೇಷಣೆಯಲ್ಲಿದ್ದ ರಾಮನು ಇಲ್ಲಿಗೆ ಬಂದಿದ್ದಾಗ ಇಲ್ಲಿದ್ದ ಬಿಂದು ಋಷಿಗಳ ಕೋರಿಕೆಯಂತೆ ಒಂದೆ ರಾತ್ರಿಯಲ್ಲಿ ಕಪಿ ಸೇನೆಯ ಸಹಾಯದಿಂದ ಈ ದೇವಾಲಯ ನಿರ್ಮಿಸಿದ್ದರಿಂದ ಇದಕ್ಕೆ ಸೇನೇಶ್ವರ ಎಂಬ ಹೆಸರು ಬಂದಿದೆಯಂತೆ. ಇನ್ನೂ ಇತಿಹಾಸ ತಜ್ಞರ ಪ್ರಕಾರ, ೧೧ ನೇ ಶತಮಾನದಲ್ಲಿ ಕಲ್ಯಾಣಿ ಚಾಲುಕ್ಯ ಚಕ್ರವರ್ತಿಗಳ ಸಾಮಂತನಾಗಿದ್ದ ಸೇನಾ ಅರಸರು ಈ ದೇವಾಲಯವನ್ನು ರಚಿಸಿದ್ದು ಅದರಿಂದಾಗಿ ಇದು ಶ್ರೀ ಸೇನೇಶ್ವರ ಎಂದು ಪ್ರಸಿದ್ದವಾಯಿತು.

ಚಿತ್ರಕೃಪೆ: Vishuachar

ವಿಶಿಷ್ಟಮಯ ಧಾರ್ಮಿಕ ಕ್ಷೇತ್ರಗಳು:

ವಿಶಿಷ್ಟಮಯ ಧಾರ್ಮಿಕ ಕ್ಷೇತ್ರಗಳು:

ವಕ್ಕಲೇರಿ ಮಾರ್ಖಂಡೇಶ್ವರ ದೇವಸ್ಥಾನ : ಚಿನ್ನದ ನಾಡು ಕೋಲಾರ ಜಿಲ್ಲೆಯಲ್ಲಿರುವ ಒಂದು ಪುರಾತನ ಕ್ಷೇತ್ರವೆ ವಕ್ಕಲೇರಿ. ಅರಣ್ಯ ಹಾಗೂ ಬೆಟ್ಟಗುಡ್ಡಗಳಿಂದ ಕೂಡಿದ ಈ ಪ್ರದೇಶದಲ್ಲಿ ಪ್ರಕೃತಿ ಸೌಂದರ್ಯದಿಂದ ಶ್ರೀಮಂತವಾದ ರಮಣೀಯ ಮಾರ್ಕಂಡೇಶ್ವರಸ್ವಾಮಿ ಬೆಟ್ಟವಿದ್ದು ಅದರ ಮೇಲೆ ಶ್ರೀ ಮಾರ್ಕಂಡೇಶ್ವರಸ್ವಾಮಿಯ ಬೃಹತ್ ದೇವಾಲಯವಿದೆ. ಈ ಸ್ಥಳದಲ್ಲಿಯೆ ಶಿವನು ಪ್ರತ್ಯಕ್ಷನಾಗಿ ಮಾರ್ಖಂಡೇಯನನ್ನು ಕರೆದೊಯ್ಯುತ್ತಿದ್ದ ಯಮನನ್ನು ತಡೆದು ಅಲ್ಪಾಯುಷಿಯಾಗಿದ್ದ ಮಾರ್ಖಂಡೇಯನನ್ನು ಚಿರಂಜೀವಿಯಾಗುವಂತೆ ವರ ನೀಡುತ್ತಾನೆ. ಹೀಗೆ ಇದು ವರಪುರಿ ಎಂತಲೂ ಕಾಲಕ್ರಮೇಣ ವಕ್ಕಲೇರಿ ಎಂದು ಗುರುತಿಸಿಕೊಂಡಿದೆ.

ವಿಶಿಷ್ಟಮಯ ಧಾರ್ಮಿಕ ಕ್ಷೇತ್ರಗಳು:

ವಿಶಿಷ್ಟಮಯ ಧಾರ್ಮಿಕ ಕ್ಷೇತ್ರಗಳು:

ದೊಡ್ಡಗದ್ದವಳ್ಳಿ ದೇವಸ್ಥಾನ : ಹಾಸನ ಜಿಲ್ಲೆಯಲ್ಲಿರುವ ದೊಡ್ಡಗದ್ದವಳ್ಳಿಯು ಪುರಾತನ ಮಹಾಲಕ್ಷ್ಮಿ ದೇವಸ್ಥಾನಕ್ಕೆ ಪ್ರಸಿದ್ಧಿ ಪಡೆದಿದೆ. ಹಾಸನದಿಂದ ಬೇಲೂರಿಗೆ ಹೋಗುವ ರಸ್ತೆಯಲ್ಲಿ 16 ಕಿ.ಮೀ. ಸಾಗಿದರೆ ದೊಡ್ಡಗದ್ದವಳ್ಳಿ ಸಿಗುತ್ತದೆ. ಈ ಮಹಾಲಕ್ಷ್ಮಿ ದೇವಸ್ಥಾನವು ಚತುಷ್ಕುಟ (ಒಂದೆ ಜಗತಿಯ ಮೇಲೆ ನಾಲ್ಕು ಗರ್ಭ ಶಿಖರಗಳಿರುವುದು) ದೇವಾಲಯವಾಗಿದ್ದು ಮಹಾಲಕ್ಷ್ಮಿ, ಕಾಳಿಮಾತೆ, ಶಿವಲಿಂಗ ಹಾಗೂ ವಿಷ್ಣುವಿನ ವಿಗ್ರಗಳಿವೆ.

ಚಿತ್ರಕೃಪೆ: Shriram Swaminathan

ವಿಶಿಷ್ಟಮಯ ಧಾರ್ಮಿಕ ಕ್ಷೇತ್ರಗಳು:

ವಿಶಿಷ್ಟಮಯ ಧಾರ್ಮಿಕ ಕ್ಷೇತ್ರಗಳು:

ಸವದತ್ತಿ ಎಲ್ಲಮ್ಮ ಕ್ಷೇತ್ರ : ಸವದತ್ತಿಯು ಬೆಳಗಾವಿ ಜಿಲ್ಲೆಯಲ್ಲಿರುವ ತಾಲೂಕು ಸ್ಥಳ. ಇದು ಪ್ರಮುಖವಾಗಿ ತನ್ನಲ್ಲಿರುವ ದೇವಿಯ ಅವತಾರ ಎಲ್ಲಮ್ಮಳ ದೇವಸ್ಥಾನದಿಂದಾಗಿ ಜನಮನ್ನಣೆಗಳಿಸಿದೆ. ಇದನ್ನು ಸ್ಥಳೀಯವಾಗಿ ಎಲ್ಲಮ್ಮನಗುಡ್ಡ ಎಂತಲೂ ಸಹ ಕರೆಯುತ್ತಾರೆ. ಇಲ್ಲಿ ದೇವಿಯು ರೇಣುಕಾ ಎಲ್ಲಮ್ಮನಾಗಿ ನೆಲೆಸಿದ್ದು ಭಕ್ತರನ್ನು ಹರಸುತ್ತಾಳೆ.

ಚಿತ್ರಕೃಪೆ: Manjunath Doddamani Gajendragad

More News

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+