Search
  • Follow NativePlanet
Share
» »ಹಲಸಿನ ಮರಕ್ಕೂ ಈ ದೇವಾಲಯಕ್ಕೂ ಏನು ಸಂಬಂಧ?

ಹಲಸಿನ ಮರಕ್ಕೂ ಈ ದೇವಾಲಯಕ್ಕೂ ಏನು ಸಂಬಂಧ?

By Vijay

ವಿಚಿತ್ರವೆನಿಸುತ್ತಿದೆಯಲ್ಲವೆ? ಹೌದು ಈ ದೇವಾಲಯಕ್ಕೆ ಸಂಬಂಧಿಸಿದಂತೆ ಇದರ ಹಿನ್ನಿಲೆಯೆ ಸಾಕಷ್ಟು ರೋಚಕವಾಗಿದೆ. ಇದನ್ನು "ಅಮ್ಮಾಚಿ ಪ್ಲಾವು" ಎಂದು ಪ್ರೀತಿಯಿಂದ ಕರೆಯಲಾಗುತ್ತದೆ. ಇದರ ಅರ್ಥ ಅಮ್ಮನಂತಹ ಹಲಸಿನ ಮರ ಎಂದು. ಹೇಗೆ ತಾಯಿ ತನ್ನ ಮಕ್ಕಳಿಗೆ ಪ್ರಪ್ರಥಮ ರಕ್ಷಕಳಾಗಿರುತ್ತಾಳೊ ಅದೇ ರೀತಿಯಾಗಿ ಇದು ಒಬ್ಬ ರಾಜನನ್ನು ರಕ್ಷಿಸಿದ ಹಲಸಿನ ಗಿಡ.

ವೈಕುಂಠ ಕ್ಷೇತ್ರದಲ್ಲಿ ನೆಲೆಸಿರುವ ಗುರುವಾಯೂರಪ್ಪ

ಬಹು ಸಮಯಗಳ ಹಿಂದೆ ಈ ಪ್ರದೇಶವನ್ನು ಆಳುತ್ತಿದ್ದ ಮಾರ್ತಾಂಡ ವರ್ಮ ಎಂಬ ರಾಜನು ಈ ದೇವಾಲಯದ ನಿರ್ಮಾತೃ. ಸುಮಾರು 1755 ರ ಸಂದರ್ಭದಲ್ಲಿ ಈ ದೇವಾಲಯದ ನಿರ್ಮಾಣವಾಗಿದೆ ಎಂಬುದು ಇತಿಹಾಸದಿಂದ ತಿಳಿದುಬರುತ್ತದೆ. ಪ್ರಮುಖವಾಗಿ ಹೇಳಬೇಕೆಂದರೆ ಇದು ಕೃಷ್ಣನಿಗೆ ಮುಡಿಪಾದ ಸುಂದರ ದೇವಾಲಯ.

ಹಲಸಿನ ಮರಕ್ಕೂ ಈ ದೇವಾಲಯಕ್ಕೂ ಏನು ಸಂಬಂಧ?

ಚಿತ್ರಕೃಪೆ: Vishnudev01

ಅದರಲ್ಲೂ ವಿಶೇಷವಾಗಿ ಬಾಲಾವಸ್ಥೆಯ ಕೃಷ್ಣನಿಗೆ ಮುಡಿಪಾದ ಶ್ರೀ ಕೃಷ್ಣಸ್ವಾಮಿ ದೇವಾಲಯ ಇದಾಗಿದೆ. ಈ ಕೃಷ್ಣನನ್ನು ಸ್ಥಳೀಯವಾಗಿ ನೆಯ್ಯಾಟ್ಟಿಂಕಾರಾ ಉನ್ನಿ ಕಣ್ಣನ್ ಎಂದು ಕರೆಯುತ್ತಾರೆ ಹಾಗೂ ಈ ಕೃಷ್ಣನಿಗೆ ಬೆಣ್ಣೆ ಎಂದರೆ ಬಲು ಇಷ್ಟವಂತೆ! ಹಾಗಾಗಿ ಬೆಣ್ಣೆಯನ್ನು ಇತನಿಗೆ ನೈವೇದ್ಯವಾಗಿ ಅರ್ಪಿಸಲಾಗುತ್ತದೆ. ಅದನ್ನು ತಿರುಕಾಯಿಲ್ ವೆಣ್ಣ ಎಂದು ಕರೆಯುತ್ತಾರೆ.

ಇನ್ನೂ ಇದರ ಕಥೆಗೆ ಬರುವುದಾದರೆ, ಹಿಂದೆ ಪ್ರದೇಶದ ರಾಜಕುಮಾರನಾದ ಮಾರ್ತಾಂಡ ವರ್ಮನು ಎಟ್ಟುವಿಟ್ಟಿಲ್ ಪಿಲ್ಲಮರ್ ಎಂಬ ಕ್ರಾಂತಿಕಾರಿ ಸೈನ್ಯವೊಂದರ ಮೇಲೆ ಬಲವಾದ ಕ್ರಮ ಕೈಗೊಂಡನು. ಇದರಿಂದ ರೊಚ್ಚಿಗೆದ್ದ ಆ ಶತ್ರುಗಳು ಅಧಿಕ ಸಂಖ್ಯೆಯಲ್ಲಿ ಕೂಡಿ ರಾಜಕುಮಾರನನ್ನು ಕೊಲ್ಲಲ್ಲೆಂದು ಬೆನ್ನು ಹತ್ತಿದರು.

ಹಲಸಿನ ಮರಕ್ಕೂ ಈ ದೇವಾಲಯಕ್ಕೂ ಏನು ಸಂಬಂಧ?

ಚಿತ್ರಕೃಪೆ: Neyyattinkara

ಈ ಸಮಯದಲ್ಲಿ ಭಯಭೀತನಾದ ರಾಜಕುಮಾರನನ್ನು ಹುಡುಗನೊಬ್ಬ ಕರೆದುಕೊಂಡು ಒಂದು ಸ್ಥಳಕ್ಕೆ ಹೋದನು. ಅಲ್ಲಿನ ವಿಶೇಷವೆಂದರೆ ಅಲ್ಲೊಂದು ಹಲಸಿನ ಮರವಿತ್ತು. ಆದರೆ ಅಚ್ಚರಿ ಎಂದರೆ ಅದರ ಕಾಂಡವು ಪೊಳ್ಳಾಗಿತ್ತು ಆದರೆ ಹೊರಗಿನಿಂದ ಆ ರೀತಿ ಕಂಡುಬರುತ್ತಿರಲಿಲ್ಲ.

ಆ ಹುಡುಗನು ರಾಜಕುಮಾರನಿಗೆ ಆ ಹಲಸಿನ ಮರದ ಪೊಳ್ಳಾದ ಕಾಂಡದಲ್ಲಿ ಅವಿತುಕೊಳ್ಳಲು ಸೂಚಿಸಿದನು ಹಾಗೂ ರಾಜಕುಮಾರ ಅದರಂತೆ ಮಾಡಿದನು. ಈ ರೀತಿಯಾಗಿ ರಾಜಕುಮಾರ ಶತ್ರುಗಳಿಂದ ಸುಲಭವಾಗಿ ತಪ್ಪಿಸಿಕೊಂಡನು ನಂತರ ಪ್ರದೇಶಕ್ಕೆ ರಾಜನಾದನು.

ಹಲಸಿನ ಮರಕ್ಕೂ ಈ ದೇವಾಲಯಕ್ಕೂ ಏನು ಸಂಬಂಧ?

ಚಿತ್ರಕೃಪೆ: Neyyattinkara

ಹೀಗೆ ರಾಜನಾದ ಮಾರ್ತಾಂಡ ವರ್ಮನಿಗೆ ಆಸ್ಥಾನದ ಪಂಡಿತ ಜ್ಯೋತಿಷಿಯೊಬ್ಬರಿಂದ ತಿಳಿದು ಬಂದ ವಿಚಾರವೆಂದರೆ ಅವನು ಅಪಾಯದ ಪರಿಸ್ಥಿತಿಯಲ್ಲಿದ್ದಾಗ ಹುಡುಗನ ರೂಪದಲ್ಲಿ ಬಂದು ಅವನನ್ನು ರಕ್ಷಿಸಿದವನು ಬೇರಾರೂ ಅಲ್ಲ ಸಾಕ್ಷಾತ ಶ್ರೀಕೃಷ್ಣನೆ ಎಂದು. ಇದರಿಂದ ಸಂತಸಗೊಂಡ ಮಾರ್ತಾಂಡ ವರ್ಮ ಕೃಷ್ಣನಿಗೆ ಗೌರವಾರ್ಪಣೆಯಾಗಿ ದೇವಾಲಯವೊಂದನ್ನು ಕಟ್ಟಿಸಿದನು ಹಾಗೂ ಹಲಸಿನ ಮರವನ್ನು ಸಂರಕ್ಷಿಸಿದನು.

ಸಾಕಷ್ಟು ಜನರು ಪ್ರವಾಸ ಮಾಡುವ ಮಥುರಾದ ವಿಶೇಷತೆ

ಪ್ರಸ್ತುತ ಆ ದೇವಾಲಯವಿರುವುದೆ ನೆಯ್ಯಾಟ್ಟಿಂಕಾರಾದಲ್ಲಿರುವ ಶ್ರೀ ಕೃಷ್ಣ ಸ್ವಾಮಿ ದೇವಾಲಯ. ಈ ದೇವಾಲಯವು ಕೇರಳದ ರಾಜ್ಯದ ರಾಜಧಾನಿ ನಗರವಾದ ತಿರುವನಂತಪುರಂನಿಂದ 20 ಕಿ.ಮೀ ದೂರದಲ್ಲಿರುವ ನೆಯ್ಯಾಟ್ಟಿಂಕಾರಾ ಎಂಬಲ್ಲಿ ಈ ದೇವಾಲಯ ಸ್ಥಿತವಿದೆ ಹಾಗೂ ನಿತ್ಯವು ಸಾಕಷ್ಟು ಭಕ್ತಾದಿಗಳಿಂದ ಭೇಟಿ ನೀಡಲ್ಪಡುತ್ತದೆ. ಇಂದಿಗೂ ಆ ಹಲಸಿನ ಮರದ ಕೆಲ ಭಾಗಗಳನ್ನು ಸಂರಕ್ಷಿಸಿಡಲಾಗಿದೆ.

More News

    Notifications
    Settings
    Clear Notifications
    Notifications
    Use the toggle to switch on notifications
    • Block for 8 hours
    • Block for 12 hours
    • Block for 24 hours
    • Don't block
    Gender
    Select your Gender
    • Male
    • Female
    • Others
    Age
    Select your Age Range
    • Under 18
    • 18 to 25
    • 26 to 35
    • 36 to 45
    • 45 to 55
    • 55+