ನಮ್ಮಲ್ಲಿ ಬಹುತೇಕರು ಸಾಕಷ್ಟು ಗಿರಿ ಪ್ರದೇಶ, ಗಿರಿಧಾಮಗಳಿಗೆ ಭೇಟಿ ನೀಡಿದ್ದಾರೆ. ಇಂತಹ ಗಿರಿಧಾಮ ಪ್ರದೇಶಗಳು ತಮ್ಮ ಪ್ರಕೃತಿ ವೈಭವ, ಹಿತಕರವಾದ ವಾತಾವರಣದಿಂದ ಸಾಕಷ್ಟು ಸೆಳೆಯುತ್ತಾವಾದರೂ ಇನ್ನೊಂದು ದೃಷ್ಟಿಯಿಂದ ಇವುಗಳನ್ನು ಗಮನಿಸಿದಾಗ ಕೆಲವು ಹೋಟೆಲು, ರಿಸಾರ್ಟುಗಳನ್ನು ಬಿಟ್ಟು ಸಾಂಪ್ರದಾಯಿಕ ಶೈಲಿಯ, ಸಣ್ಣ ಪುಟ್ಟ ಗುಡಿಸಲು ಮನೆಗಳು, ಅಲ್ಲಲ್ಲಿ ಮೂಲ ಸೌಕರ್ಯದ ಕೊರತೆಗಳಿರುವುದನ್ನು ಇಂತಹ ಗಿರಿಧಾಮ ಪ್ರದೇಶಗಳಲ್ಲಿ ಗಮನಿಸಬಹುದು.
ದೇಶೀಯ ವಿಮಾನ ಹಾರಾಟ ದರಗಳ ಮೇಲೆ 2000 ರೂಪಾಯಿಗಳಷ್ಟು ಕಡಿತ, ತ್ವರೆ ಮಾಡಿ!
ವಿಶೇಷ ಲೇಖನ : ಅಂಬೋಲಿ ಎಂಬ ಮಾಯಾ ಸಂಕೋಲೆ

ವಿದೇಶದಂತೆ ಕಂಗೊಳಿಸುವ ಕಟ್ಟಡಗಳು
ಚಿತ್ರಕೃಪೆ: Cryongen
ಆದರೆ ಒಂದು ಆಧುನಿಕ ನಗರವೆ ಸುಂದರವಾದ ಬೆಟ್ಟದ ಮೇಲೆ ರೂಪಗೊಂಡಿರುವುದನ್ನು ನೋಡಿದ್ದೀರಾ? ಹೌದು ಲಾವಸಾ ಎಂಬ ಆಧುನಿಕ ನಗರವನ್ನು ಮಹಾರಾಷ್ಟ್ರ ರಾಜ್ಯದಲ್ಲಿ ಕಾಣಬಹುದಾಗಿದೆ. ಹಿಂದೆ ಈ ಒಂದು ಯೋಜನೆಯು ಸಾಕಷ್ಟು ವಿವಾದಗಳಿಗೆ ಸುತ್ತಿಕೊಂಡಿದ್ದರೂ ಪ್ರಸ್ತುತ ನಿಧಾನವಾಗಿ ಅಭಿವೃದ್ಧಿಗೊಳ್ಳುತ್ತಿದೆ ಎಂದು ಹೇಳಬಹುದು. ಈ ಪ್ರದೇಶದಲ್ಲಿ ಅತ್ಯಾಧುನಿಕ ವ್ಯವಸ್ಥೆಗಳುಳ್ಳ ವಿಲ್ಲಾಗಳು, ಬಹುಮಹಡಿ ಕಟ್ಟಡಗಳು, ವೈಭವೋಪೇತ ಹೋಟೆಲುಗಳು ಹಾಗೂ ಬಹು ಮಹಡಿ ವಸತಿ ಸಂಕೀರ್ಣಗಳನ್ನು ಕಾಣಬಹುದಾಗಿದೆ.
ವಿಶೇಷ ಲೇಖನ : ಧರೆಗಿಳಿದ ಸ್ವರ್ಗವೆಂದರೆ ಇದೇನಾ?

ಚಿತ್ರಕೃಪೆ: Sarath Kuchi
ನಗರದ ಗೌಜುಗದ್ದಲಗಳಿಂದ ದೂರೋಡಿ, ಆದರೆ ನಗರದಂತಹ ಜೀವನ ಶೈಲಿಯಲ್ಲೆ ಅತ್ಯಾಧುನಿಕವಾಗಿ ಬದುಕಲು ಲಾವಸಾ ಹೇಳಿ ಮಾಡಿಸಿದ ನಗರವೆಂದೇ ಹೇಳಬಹುದಾಗಿದೆ. ಪ್ರಕೃತಿಯ ದಟ್ಟನೆಯ ಹಸಿರಿನ ನಡುವೆ ಸುಂದರವಾಗಿ ಸಿಂಗರಿಸಿಕೊಂಡ ನವ ವಧುವಿನಂತೆ ಕಂಗೊಳಿಸುತ್ತದೆ ಲಾವಸಾ ಬೆಟ್ಟ ನಗರಿ. ಇಂದು ಲಾವಸಾ ಮುಂಬೈ ಮಹಾನಗರ ಹಾಗೂ ಪುಣೆ ನಗರ ನಿವಾಸಿಗಳಿಗೆ ಅತ್ಯಾಕರ್ಷಕವಾದ ಪ್ರವಾಸಿ ಆಕರ್ಷಣೆಯಾಗಿದೆ. ಅಲ್ಲದೆ ಈ ಪ್ರದೇಶವನ್ನು ತಲುಪಲು ಘಾಟ್ ಗಳ ಮಧ್ಯೆ ಸೊಗಸಾದ, ರೋಮಾಂಚನಗೊಳಿಸುವ ತಿರುವುಗಳಿದ್ದು ಮೋಟಾರ್ ಸೈಕಲ್ ಸವಾರರ ಪಾಲಿಗೆ ಇದು ಅದ್ಭುತ ಪ್ರವಾಸವಾಗಿದೆ.

ಚಿತ್ರಕೃಪೆ: Yogendra Joshi
ವಾರಾಂತ್ಯ ರಜೆಗಳಲ್ಲಿ ಮೋಟಾರ್ ಸೈಕಲ್ ಸವಾರರು ಗುಂಪು ಕಟ್ಟಿಕೊಂಡು ಇಲ್ಲಿನ ಘಾಟ್ ಗಳಲ್ಲಿ ನಿರಾಯಸವಾಗಿ ಸಾಗುವುದನ್ನು ಆಗಾಗ ನೋಡಿ ರೋಮಾಂಚನಗೊಳ್ಳಬಹುದು. ಭಾರತದ ಸ್ವಾತಂತ್ರ್ಯದ ನಂತರ ರೂಪಗೊಂಡ ಹೊಚ್ಚ ಹೊಸ ಗಿರಿಧಾಮ ಪ್ರದೇಶ ಎಂಬ ಬಿರುದಿಗೆ ಪಾತ್ರವಾದ ಲಾವಸಾ ಎಂಬ ಖಾಸಗಿ ಗಿರಿಧಾಮವ ನಗರವನ್ನು ಲಾವಸಾ ಕಾರ್ಪೊರೇಷನ್ ಎಂಬ ಸಂಸ್ಥೆಯು ಅಭಿವೃದ್ಧಿಗೊಳಿಸುತ್ತಿದೆ. ಪುಣೆ ಜಿಲ್ಲೆಯ ಪಶ್ಚಿಮ ಘಾಟಗಳ ಶ್ರೇಣಿಯಲ್ಲಿರುವ ಮೋಸ್ ಎಂಬ ಕಣಿವೆ ಪ್ರದೇಶದ ಸುತ್ತಲು ಇದು ನಿಧಾನವಾಗಿ ನಿರ್ಮಾಣಗೊಳ್ಳುತ್ತಿದೆ.
ವಿಶೇಷ ಲೇಖನ : ಲೋನಾವಲಾದ ವೈಭೋಗ

ಚಿತ್ರಕೃಪೆ: Mayur239
ಈ ಗಿರಿಧಾಮದಲ್ಲಿ ಒಟ್ಟು ಐದು ನಗರಗಳ ನೀಲಿ ನಕ್ಷೆಯನ್ನು ತಯಾರಿಸಲಾಗಿದ್ದು ಅದರಲ್ಲಿ ಈಗಾಗಲೇ ಎರಡು ನಗರಗಳ ಕಾಮಗಾರಿಯು ಪ್ರಗತಿಯಲ್ಲಿದೆ. ಅಲ್ಲದೆ ಕೆಲವು ಖಾಸಗಿ ರಿಸಾರ್ಟುಗಳು, ಹೋಟೆಲುಗಳು ಈಗಾಗಲೆ ನಿರ್ಮಾಣಗೊಂಡಿದ್ದು ಈ ಸುಂದರ ನಗರಕ್ಕೆ ಬರುವ ವಾರಾಂತ್ಯಗಳ ಪ್ರವಾಸಿಗರ ಸೇವೆಯಲ್ಲಿ ನಿರತವಾಗಿವೆ. ಮಳೆಗಾಲದ ಸಂದರ್ಭದಲ್ಲಂತೂ ಪ್ರದೇಶದ ಸೌಂದರ್ಯವು ಇಮ್ಮಡಿಗೊಳ್ಳುತ್ತದೆ. ಏಕೆಂದರೆ ಪಶ್ಚಿಮ ಘಟ್ಟಗಳ ಪ್ರದೇಶದಲ್ಲಿ ಸುರಿಯುವ ಮಳೆಯೆ ಚೆಂದ, ಅಂತಹುದರಲ್ಲಿ ಇಲ್ಲಿ ಕಂಡುಬರುವ ಮಂಜು, ತಂಪಾದ ಅನುಭವ, ಸೃಷ್ಟಿಗೊಳ್ಳುವ ಕೃತಕ ಜಲಪಾತಗಳು ಕಣ್ಣಿಗೆ ಹಬ್ಬವನ್ನುಂಟು ಮಾಡುತ್ತವೆ.

ಚಿತ್ರಕೃಪೆ: Nishanth Jois
ಅದ್ಭುತವಾದ ಥೀಮ್ ಪಾರ್ಕ್, ಉತ್ಕೃಷ್ಟ ಮಟ್ಟದ ಶೈಕ್ಷಣಿಕ ವಿಶ್ವ ವಿದ್ಯಾನಿಲಯ, ಅತ್ಯಾಧುನಿಕ ವ್ಯವಸ್ಥೆಯುಳ್ಳು ಆಟದ ಕ್ರೀಡಾಂಗಣಗಳು, ಆರೋಗ್ಯ ಕೇಂದ್ರಗಳು, ಆಸ್ಪತ್ರೆಗಳು ಹೀಗೆ ಹಲವು ಅದ್ಭುತ ವ್ಯ್ವಸ್ಥೆಗಳನ್ನು ಇಲ್ಲಿ ಅನುಷ್ಠಾನಗೊಳಿಸಲು ಯೋಜಿಸಲಾಗಿದೆ. ಇಂದು ಲಾವಸಾ ರಜೆಗಳಿಗೆ ಮಾತ್ರವೆ ಸೀಮಿತವಾಗಿರದೆ ಔತಣ ಕೂಟ ಮುಂತಾದ ಸಮಾರಂಭಗಳಿಗೂ ಹೆಚ್ಚು ಪ್ರಖ್ಯಾತಿಗಳಿಸುತ್ತಿದೆ. ಹೊಸ ವರ್ಷದ ಸಂಭ್ರಮಾಚರಣೆಯಂತೂ ಲಾವಸಾದಲ್ಲಿ ಬಲು ಸೊಗಸಾಗಿರುತ್ತದೆ. ಹಾಡು, ನೃತ್ಯ ಹೀಗೆ ಮೋಜು ಮಸ್ತಿಗಳಿಗೇನೂ ಇಲ್ಲಿ ಕಮ್ಮಿ ಇರಲ್ಲ.
ವಿಶೇಷ ಲೇಖನ : ಪುಣೆ ಜಿಲ್ಲೆಯ ಧಾರ್ಮಿಕ ಆಕರ್ಷಣೆಗಳು

ಚಿತ್ರಕೃಪೆ: V Malik
ಲಾವಸಾ ಪುಣೆಯಿಂದ 65 ಕಿ.ಮೀ ಹಾಗೂ ಮುಂಬೈನಿಂದ ಸುಮಾರು 190 ಕಿ.ಮೀ ಗಳಷ್ಟು ದೂರದಲ್ಲಿದೆ. ಈ ಎರಡು ನಗರಗಳಿಂದ ಲಾವಸಾಗೆ ತೆರಳು ಸರ್ಕಾರಿ ಹಾಗೂ ಖಾಸಗಿ ಬಸ್ಸುಗಳು ಲಭ್ಯವಿದೆ. ರೈಲಿನ ಮುಖಾಂತರ ತೆರಳ ಬೇಕಿದ್ದರೆ ಪುಣೆ ಅಥವಾ ಲೋಣಾವಲಾದಿಂದ ತಲುಪಬಹುದು. ಮೊದಲಿಗೆ ಪುಣೆಗೆ ತೆರಳಿ ಅಲ್ಲಿಂದ ಟ್ಯಾಕ್ಸಿ ಅಥವಾ ಬಸ್ಸುಗಳ ಮೂಲಕ ಲಾವಸಾ ತಲುಪಬಹುದು. ಇಲ್ಲವೆ ಪುಣೆ - ಮುಂಬೈ ರೈಲಿನಲ್ಲಿ ಪ್ರಯಾಣಿಸುತ್ತ ಲೋಣವಲಾದಲ್ಲಿ ಇಳಿದು ಇಲ್ಲಿಂದ ಟ್ಯಾಕ್ಸಿ ಅಥವಾ ಬಸ್ಸಿನ ಮೂಲಕ ಲಾವಸಾ ತಲುಪಬಹುದು. ಲೋಣಾವಲಾದಿಂದ ಲಾವಸಾ ಕೇವಲ 30 ಕಿ.ಮೀ ಗಳಷ್ಟು ದೂರದಲ್ಲಿದೆ.

ಚಿತ್ರಕೃಪೆ: Arjun Singh Kulkarni
ಮತ್ತೊಂದು ವಿಷಯವೆಂದರೆ ಲಾವಸಾ ಇನ್ನೂ ನಿರ್ಮಾಣ ಹಂತದಲ್ಲಿರುವುದರಿಂದ ಗಿರಿಧಾಮದಲ್ಲಿ ಸಂಚಾರಕ್ಕೆ ಬಸ್ಸುಗಳು ಲಭ್ಯವಿಲ್ಲ. ಸ್ವಂತ ವಾಹನವಿದ್ದರೆ ಒಳಿತು ಇಲ್ಲವೆ ಖಾಸಗಿ ಪ್ರವಾಸ ಆಯೋಜಕರಿಂದ ಬಾಡಿಗೆಯ ಮೇಲೆ ವಾಹನ ಪಡೆದುಕೊಂಡು ಗಿರಿಧಾಮದ ಸುತ್ತಲೂ ಸಂಚರಿಸಿ ಅದರ ಸುಂದರತೆಯನ್ನು ಸವಿಯಬಹುದು. ನಡೆಯಬಯಸುವ ಪ್ರವಾಸಿಗರೂ ಸಹ ಯಾವುದಾದರೂ ಹೋಟೆಲಿನಲ್ಲಿ ವಸತಿ ಹೂಡಿ ಕಾಲ್ನಡಿಗೆಯ ಮೂಲಕ ಇಲ್ಲಿರುವ ಕೆರೆ, ದಟ್ಟ ಹಸಿರಿನ ಬೆಟ್ಟಗಳನ್ನು ಕಣ್ತುಂಬ ಆಸ್ವಾದಿಸಬಹುದು.


Click it and Unblock the Notifications


















