ಭಾರತದಲ್ಲಿಯ ಸರೋವರಗಳು ಅಥವಾ ಕೊಳಗಳ ಬಳಿ ಇರುವ ದೇವಾಲಯಗಳ ಅನ್ವೇಷಣೆ ಮಾಡಿ
ಭಾರತದಲ್ಲಿಯ ದೇವಾಲಯಗಳ ಸೌಂದರ್ಯತೆಯು ಅವುಗಳ ಪ್ರಾರಂಭದ ಕಾಲದಿಂದಲೂ ನಾವು ನೋಡಬಹುದಾಗಿದೆ ಹಾಗೆಯೇ ಅವುಗಳಿರುವ ಸ್ಥಳಗಳೂ ಸಹ ಮೋಹಕ ಮತ್ತು ಸುಂದರವಾದ ಪರಿಸರದ ಮಧ್ಯೆಯೇ ನೆಲೆಸಿದೆ ಎನ್ನುವುದನ್ನೂ ಸಹ ನಾವು ತಳ್ಳಿ ಹಾಕುವಂತಿಲ್ಲ. ಈ ಪರಿಸರಗಳು ದೇವಾಲಯಗಳ ಸೌಂದರ್ಯತೆಗೆ ಒಂದು ಕಾರಣ ಎನ್ನುವುದೂ ಖಂಡಿತವಾಗಿಯೂ ಅಷ್ಟೇ ನಿಜವಾದ ಸಂಗತಿ.
ಸರೋವರಗಳ ಸಮೀಪದಲ್ಲಿರುವ ದೇವಾಲಯಗಳ ಸೌಂದರ್ಯವನ್ನೂ ನಾವು ಎಂದೂ ನಿರ್ಲಕ್ಷಿಸಲು ಸಾಧ್ಯವೆ ಇಲ್ಲ. ಸರೋವರದ ಪಕ್ಕದಲ್ಲಿರುವ ದೇವಾಲಯಗಳ ಶಾಂತತೆ ಮತ್ತು ಪ್ರಶಾಂತತೆಗಳ ಸಾರವನ್ನು ಇಂಥಹ ದೇವಾಲಯಗಳಲ್ಲಿ ನಾವು ಅನುಭವಿಸಬಹುದಾಗಿದೆ ಆದ್ದರಿಂದ ಭಾರತದಲ್ಲಿಯ ಇಂತಹ ಸರೋವರ ದೇವಾಲಯಗಳ ಬಗ್ಗೆ ತಿಳಿದುಕೊಂಡು ಅವುಗಳ ಅನಂತ ಸೌಂದರ್ಯತೆಗಳ ಬಗ್ಗೆ ತಿಳಿದುಕೊಳ್ಳೋಣ

ಅನಂತಪುರ ಸರೋವರ ದೇವಾಲಯ (ಲೇಕ್ ಟೆಂಪಲ್)
ಅನಂತಪುರ ಲೇಕ್ ಅಥವಾ ಸರೋವರ ದೇವಾಲಯವು ಕಾಸರಗೋಡು ಜಿಲ್ಲೆಯಲ್ಲಿ ನೆಲೆಸಿದ್ದು, ಈ ಸುಂದರ ದೇವಾಲಯವು ಕೇರಳ ರಾಜ್ಯದಲ್ಲಿ ನೆಲೆಸಿರುವ ಏಕೈಕ ಸರೋವರ ದೇವಾಲಯವಾಗಿದೆ. ವಿಷ್ಣು ದೇವರಿಗೆ ಅರ್ಪಿತವಾದ ಈ ದೇವಾಲಯವು ಕೇರಳದ ವೈಷ್ಣವರಿಗೆ ಒಂದು ಪ್ರಮುಖ ಯಾತ್ರಾಸ್ಥಳವೆನಿಸಿದ್ದು, ಈ ದೇವಾಲಯವು ಭೂಮಿಯ ಮೇಲಿನ ವಿಷ್ಣುವಿನ ಮೂಲ ನೆಲೆ ಎಂದು ನಂಬಲಾಗಿದೆ. ಇಲ್ಲಿ ಸರೋವರದ ಸುತ್ತ ನೆಲೆಸಿರುವ ಒಂದು ಸಣ್ಣ ಗುಹೆಗೂ ಕೂಡಾ ನೀವು ಭೇಟಿ ಕೊಡಬಹುದಾಗಿದೆ. ಇಂತಹ ವಿಭಿನ್ನವಾದ ಹಾಗೂ ಅತ್ಯಂತ ಸುಂದರವಾದ ದೇವಾಲಯ ಮತ್ತು ಕಾಸರಗೋಡಿಗೆ ಭೇಟಿ ಕೊಡುವ ಅವಕಾಶವನ್ನು ತಪ್ಪಿಸಬಾರದು.

ಪ್ರಾಶರ್ ಮುನಿಯ ದೇವಾಲಯ
ನಿಸ್ಸಂದೇಹವಾಗಿಯೂ ಹಿಮಾಚಲ ಪ್ರದೇಶದ ಅತ್ಯಂತ ಸುಂದರ ದೇವಾಲಯಗಳಲ್ಲಿ ಒಂದೆನಿಸಿರುವ ಪ್ರಾಶರ್ ಋಷಿಯ ದೇವಾಲಯವು ಪ್ರಾಶರ್ ಸರೋವರದ ಸುತ್ತ ಹಾಗೂ ಪರ್ವತ ಶ್ರೇಣಿಗಳ ಮೇಲೆ ನೆಲೆಸಿದೆ ಅಷ್ಟೇ ಅಲ್ಲದೆ ಈ ದೇವಾಲಯವು ಬೆಟ್ಟಗಳ ದಟ್ಟವಾದ ಹಸಿರು ಮತ್ತು ಹಿಮಚ್ಚಾದಿತ ಪರ್ವತಗಳಿಂದ ಸುತ್ತುವರೆಯಲ್ಪಟ್ಟಿದೆ. ಇದು 13ನೇ ಶತಮಾನಗಳ ಪಗೋಡಾ ರೀತಿಯ ದೇವಾಲಯವಾಗಿದ್ದು, ಇಲ್ಲಿರುವ ಸರೋವರದ ಸುತ್ತ ಧ್ಯಾನ ಮಾಡುತ್ತಿದ್ದರೆಂದು ಹೇಳಲಾಗುವ ಪ್ರಾಶರ್ ಮುನಿಗೆ ಅರ್ಪಿತವಾದುದಾಗಿದೆ. ಆದ್ದರಿಂದ, ಈ ಸರೋವರದ ಶುದ್ಧ ನೀರನ್ನು ಅವರ ಅನುಯಾಯಿಗಳಲ್ಲಿ ಪವಿತ್ರವೆಂದು ಪರಿಗಣಿಸಲಾಗಿದೆ.
ಈ ದೇವಾಲಯಕ್ಕೆ ಸಂಬಂಧಿಸಿದ ದಂತಕತೆಗಳ ಪ್ರಕಾರ, ಒಂದೇ ಮರವನ್ನು ಬಳಸಿ ಈ ದೇವಾಲಯವನ್ನು ಒಬ್ಬ ಶಿಶುವಿನಿಂದ ನಿರ್ಮಿಸಲಾಗಿದೆ ಎಂದು ನಂಬಲಾಗುತ್ತದೆ. ಇನ್ನೊಂದು ದಂತಕಥೆಯ ಪ್ರಕಾರ, ಮಹಾಭಾರತ ಯುದ್ಧದ ನಂತರ ತಮ್ಮ ಉಳಿದ ಜೀವನವನ್ನು ಕಳೆಯಲು ಇಲ್ಲಿಗೆ ಬಂದ ಪಾಂಡವರು ಈ ಸರೋವರವನ್ನು ರಚಿಸಿದರು ಎಂದು ಹೇಳಲಾಗುತ್ತದೆ.

ಗಾದಿ ಸಾಗರ ದೇವಾಲಯ
ನೀವು ಜಸ್ಮಲೈರ್ ನಗರದ ಆಸುಪಾಸಿನಲ್ಲಿದ್ದಲ್ಲಿ, ಖಂಡಿತವಾಗಿಯೂ ನೀವು ಗಾದಿ ಸಾಗರ ದೇವಾಲಯಕ್ಕೆ ಭೇಟಿ ಕೊಡಬೇಕು ಮತ್ತು ಅದರ ಸೌಂದರ್ಯತೆಯ ಹಾಗೂ ವಿಶ್ರಾಂತಿದಾಯಕ ನೀರಿನಿಂದ ಸುತ್ತುವರೆದಿರುವ ಗಾದಿಸಾಗರ ಸರೋವರದ ಅನ್ವೇಷಣೆ ಮಾಡಬೇಕು. ಈ ಸರೋವರವನ್ನು ಹದಿನೈದನೇ ಶತಮಾನದಲ್ಲಿ ನೀರನ್ನು ಸಂರಕ್ಷಿಸಲು ಮತ್ತು ಹತ್ತಿರದ ಪಟ್ಟಣಗಳು ಮತ್ತು ಹಳ್ಳಿಗಳ ನೀರಿನ ಅಗತ್ಯವನು ಪೂರೈಸಲು ನಿರ್ಮಿಸಲಾಯಿತು. ಇಂದು ಈ ಸ್ಥಳವು ಒಂದು ಜನಪ್ರಿಯ ಪ್ರವಾಸಿ ತಾಣವಾಗಿದೆ. ಅಲ್ಲದೆ ಈ ಸರೋವರದ ಸುತ್ತ ಅಳಿವಂಚಿನಲ್ಲಿರುವ ಹಲವಾರು ವರ್ಣರಂಜಿತ ಪಕ್ಷಿಗಳನ್ನು ಕಾಣಬಹುದಾದ್ದರಿಂದ ಈ ಸ್ಥಳವು ಪಕ್ಷಿವೀಕ್ಷಕರಿಗೆ ವಾರಾಂತ್ಯದ ಒಂದು ತಾಣವಾಗಿದೆ. ರಾಜಸ್ಥಾನದ ಅದ್ಭುತವಾದ ಗಾಡಿ ಸಾಗರ್ ದೇವಾಲಯವು ಸುಂದರವಾದ ಗುಮ್ಮಟಗಳು ಮತ್ತು ಕಮಾನುಗಳೊಂದಿಗೆ ತನ್ನ ವಾಸ್ತುಶಿಲ್ಪದ ಸೌಂದರ್ಯವನ್ನು ಹೊಂದಿದೆ.

ಜಗ್ ಮಂದಿರ್
ಸರೋವರಗಳ ನಗರವೆನಿಸಿರುವ ಉದಯ್ ಪುರದಲ್ಲಿ ನೆಲೆಸಿರುವ ಈ ದೇವಾಲಯವು ಸುಂದರವಾದ ಸರೋವರದ ಆಕರ್ಷಣೆಯನ್ನು ಹೊಂದದೇ ಇರಲು ಅಸಾಧ್ಯ ಅಲ್ಲವೆ? ಜಗ್ ಮಂದಿರವನ್ನು ಸಂಪೂರ್ಣವಾಗಿ 17 ನೇ ಶತಮಾನದಲ್ಲಿ ಉದಯಪುರದ ರಾಜರು ನಿರ್ಮಿಸಿದರು ಹಾಗೂ ಈ ದೇವಾಲಯದ ನಿರ್ಮಾಣ ಕಾರ್ಯವನ್ನು ಪೂರ್ಣಗೊಳಿಸಿದ ಮಹಾರಾಜ ಜಗತ್ ಸಿಂಗ್ ಅವರ ಹೆಸರನ್ನು ಇಡಲಾಗಿದೆ, ಜಗ್ ಮಂದಿರವು ಭಾರತದ ಅತ್ಯಂತ ಸುಂದರವಾದ ದೇವಾಲಯಗಳಲ್ಲಿ ಒಂದಾಗಿದೆ ಮತ್ತು ಇದು ಪಿಚೋಲಾ ಸರೋವರದ ಮಧ್ಯದಲ್ಲಿರುವ ಸಣ್ಣ ದ್ವೀಪದಲ್ಲಿದೆ.
ಇದು ಉದಯಪುರದ ರಾಜ ಮನೆತನಗಳ ನಿವಾಸವಾಗಿರುವ ಅರಮನೆಯಾಗಿದ್ದರೂ, ಅದರೊಳಗೆ ಈ ದೇವಾಲಯವನ್ನು ಹೊಂದಿದೆ. ಈ ದೇವಾಲಯದ ಸೌಂದರ್ಯವು ಮಿನುಗುವ ಪಿಚೋಲಾ ಸರೋವರದ ಉಪಸ್ಥಿತಿಯೊಂದಿಗೆ ಇನ್ನೂ ಸುಂದರವಾಗಿ ಕಾಣುತ್ತದೆ.

ಚಂದ್ರ ಮೌಳೀಶ್ವರ ದೇವಾಲಯ
ವಾಸ್ತುಶಿಲ್ಪದ ಮೇರುಕೃತಿ, ಚಂದ್ರಮೌಳೇಶ್ವರ ದೇವಾಲಯವನ್ನು 11 ನೇ ಶತಮಾನದಲ್ಲಿ ನಿರ್ಮಿಸಲಾಗಿದೆ ಎಂದು ಸಂಕೀರ್ಣದ ಒಳಗೆ ಕಂಡುಬರುವ ಶಾಸನಗಳ ಪ್ರಕಾರ ನಮಗೆ ತಿಳಿದುಬರುತ್ತದೆ. ಇದನ್ನು ಉಣಕಲ್ ಸರೋವರದ ಸಮೀಪದಲ್ಲಿ ನಿರ್ಮಿಸಲಾಗಿದ್ದು, ಇದು ಪ್ರಮುಖ ಪ್ರವಾಸಿ ತಾಣವಾಗಿದೆ.
ದಿನವಿಡೀ ತಂಪಾದ ಗಾಳಿಯ ಉಪಸ್ಥಿತಿಯನ್ನು ಹೊಂದಿರುವ ಈ ದೇವಾಲಯವು ಸರೋವರದ ಜೊತೆಗೆ ಭೇಟಿ ನೀಡಲೇಬೇಕಾದ ತಾಣವಾಗಿದೆ. ಅದರ ಪ್ರಶಾಂತ ಸುತ್ತಮುತ್ತಲಿನ ಕಾರಣದಿಂದಾಗಿ, ಇದು ಪಿಕ್ನಿಕ್ ಪ್ರಿಯರಲ್ಲಿ ಜನಪ್ರಿಯವಾಗಿದೆ, ಜನರು ತಮ್ಮ ಸ್ನೇಹಿತರು ಮತ್ತು ಕುಟುಂಬಗಳೊಂದಿಗೆ ಸ್ವಲ್ಪ ಗುಣಮಟ್ಟದ ಸಮಯವನ್ನು ಕಳೆಯಲು ಬರುತ್ತಾರೆ.
ನೀವು ಪ್ರಕೃತಿ ಮತ್ತು ಇತಿಹಾಸದ ಪರಿಪೂರ್ಣ ಮಿಶ್ರಣವನ್ನು ಹುಡುಕುತ್ತಿದ್ದರೆ,ವಾಸ್ತುಶಿಲ್ಪದ ಅತ್ಯುತ್ತಮ ಕೃತಿಗಳಲ್ಲಿ ಒಂದಾಗಿದ್ದು, ಚಾಲುಕ್ಯರ. ಸ್ತಂಭ ಮತ್ತು ಗೋಡೆಗಳ ಮೇಲೆ ಕೆತ್ತನೆಗಳು ಮತ್ತು ರೇಖಾಚಿತ್ರಗಳಿಂದ ಅಲಂಕರಿಸಲ್ಪಟ್ಟಿರುವ ಕರ್ನಾಟಕ ರಾಜ್ಯದ ಹುಬ್ಬಳ್ಳಿಯಲ್ಲಿರುವ ಈ ಐತಿಹಾಸಿಕ ಚಂದ್ರಮೌಳೇಶ್ವರ ದೇವಾಲಯವು ಈ ನಿಮ್ಮ ಮುಂದಿನ ತಾಣವಾಗಬೇಕು.


Click it and Unblock the Notifications

















