Search
  • Follow NativePlanet
Share
» »ಕೂಡಲ ಸಂಗಮ - ಬಾಗಲಕೋಟೆ

ಕೂಡಲ ಸಂಗಮ - ಬಾಗಲಕೋಟೆ

ವೀರಶೈವ ಧರ್ಮದ ಅನುಯಾಯಿಗಳ ಪ್ರಮುಖ ಯಾತ್ರಾಸ್ಥಳ

Kudalasangama-1

12 ನೇ ಶತಮಾನದ ಕನ್ನಡದ ಕವಿ, ಸಮಾಜ ಸುಧಾರಕ ಮತ್ತು ಸಂತರೆನಿಸಿಕೊಂಡಿದ್ದ ಬಸವಣ್ಣನವರು ಕರ್ನಾಟಕದಲ್ಲಿ ರಾಜ ಬಿಜ್ಜಳ I ರ ಆಶ್ರಯದಲ್ಲಿದ್ದರು. ಬಸವಣ್ಣನವರು ಶಿವದೇವರ ಮಹಾ ಭಕ್ತರಾಗಿದ್ದರು ಮತ್ತು ಅವರ ಕ್ರಾಂತೀ ಕಾರಿ ಚಳುವಳಿಯು ವೀರಶೈವ ಪಂಥದ ಹುಟ್ಟಿಗೆ ಕಾರಣವಾಯಿತು(ಲಿಂಗಾಯತ ಸಮಾಜ) ಕೂಡಲಸಂಗಮ ಬಸವಣ್ಣನವರು ತಮ್ಮ ಬಾಲ್ಯವನ್ನು ಕಳೆದು ಮರಣ ಹೊಂದಿದ ಸ್ಥಳವಾಗಿದೆ. ಆದ್ದರಿಂದ, ಇದು ಲಿಂಗಾಯತರು ಅಥವಾ ವೀರಶೈವ ಧರ್ಮದ ಅನುಯಾಯಿಗಳ ಪ್ರಮುಖ ಯಾತ್ರಾ ಸ್ಥಳಗಳಲ್ಲಿ ಒಂದಾಗಿದೆ.

kudlasangama-2

ಕೂಡಲಸಂಗಮವು ಸಂಗಮೇಶ್ವರ ದೇವಾಲಯ (ಸಂಗಮನಾಥ ದೇವಾಲಯ) ಮತ್ತು ಐಕ್ಯ ಮಂಟಪ (ಬಸವಣ್ಣನವರ ಸಮಾಧಿ) ಗಳಿಗೆ ಹೆಸರುವಾಸಿಯಾಗಿದೆ. ಅಲ್ಲದೆ ಇಲ್ಲಿ ಬಸವಣ್ಣನವರ ಸಾಹಿತ್ಯ ಮತ್ತು ಪ್ರಾಚೀನ ಕರ್ನಾಟಕದ ಅನೇಕ ಕಲಾಕೃತಿಗಳನ್ನು ಹೊಂದಿರುವ ವಸ್ತುಸಂಗ್ರಹಾಲಯವೂ ಇದೆ.

kudala-sangama-1

ಕೂಡಲಸಂಗಮವು ಬಾಗಲಕೋಟೆ ಜಿಲ್ಲೆಯ ಕೃಷ್ಣಾ ಮತ್ತು ಮಲಪ್ರಭಾ ನದಿಗಳ ದಡದಲ್ಲಿರುವ ಒಂದು ಪುಟ್ಟ ಗ್ರಾಮ. ಇದು ಕರ್ನಾಟಕದಲ್ಲಿ ಬೃಹತ್ ಭಕ್ತಿ ಚಳುವಳಿಯ ಭಾಗವಾಗಿದ್ದ ಆಸಕ್ತಿದಾಯಕ ಸ್ಥಳಗಳಲ್ಲಿ ಒಂದಾಗಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X