• Follow NativePlanet
Share
Menu
» »ದಕ್ಷಿಣ ಭಾರತದ ಖಜುರಾಹೊ ದೇವಾಲಯ

ದಕ್ಷಿಣ ಭಾರತದ ಖಜುರಾಹೊ ದೇವಾಲಯ

Written By:

ಡಿಚ್ ಪಲ್ಲಿ ತೆಲಗಾಂಣ ರಾಜ್ಯದಲ್ಲಿನ ನಿಜಾಮಾಬಾದ್ ಜಿಲ್ಲೆಯಲ್ಲಿದೆ. ನಿಜಾಮಾಬಾದ್ ನಗರದಿಂದ 17 ಕಿ,ಮೀ ದೂರದಲ್ಲಿದೆ. ಡಿಚ್ ಪಲ್ಲಿಯಲ್ಲಿ ಕ್ರಿ.ಶ 14 ನೇ ಶತಮಾನದಲ್ಲಿ ನಿರ್ಮಿಸಿದ ರಾಮಾ ದೇವಾಲಯವಿದೆ. ಈ ಸುಂದರವಾದ ರಾಮ ದೇವಾಲಯವನ್ನು ಕಾಕತೀಯ ಸಾಮ್ರಾಜ್ಯದ ರಾಜರು ನಿರ್ಮಿಸಿದ ದೇವಾಲಯವಾಗಿದೆ. ಈ ದೇವಾಲಯಕ್ಕೆ ತಲುಪಲು ಚಿಕ್ಕದಾದ ಮೆಟ್ಟಿಲುಗಳ ಸಹಾಯದಿಂದ ಸಾಗಬೇಕು.

ಡಿಚ್ ಪಲ್ಲಿಯನ್ನು ದಕ್ಷಿಣ ಭಾರತದ ಖಜುರಾಹೊ ಎಂದೂ ಸಹ ಚರಿತ್ರಕಾರರು ಕರೆಯುತ್ತಾರೆ. ಈ ತೆಲಂಗಾಣದಲ್ಲಿರುವ ಡಿಚ್ ಪಲ್ಲಿಯಲ್ಲಿನ ರಾಮ ದೇವಾಲಯ ಅತ್ಯಂತ ಪ್ರಸಿದ್ಧವಾದ ದೇವಾಲಯವಾಗಿದೆ. ಇಂದೊರ್ ಖಜುರಾಹೊ ಎಂದು ಸಹ ಕರೆಯುತ್ತಾರೆ. ಈ ದೇವಾಲಯದ ವಾಸ್ತು ಶಿಲ್ಪವು ಅತ್ಯಂತ ವೈಭವಯುತವಾಗಿ ಹಾಗೂ ಸುಂದರವಾಗಿರುತ್ತದೆ.

ಪ್ರಸ್ತುತ ಲೇಖನದಲ್ಲಿ ಹೆಸರಾಂತ ಡಿಚ್ ಪಲ್ಲಿಯಲ್ಲಿನ ರಾಮ ದೇವಾಲಯದ ಬಗ್ಗೆ ತಿಳಿಯೋಣ.

ಡಿಚ್ ಪಲ್ಲಿ ರಾಮಾಲಯ ದೇವಾಲಯದ ಇತಿಹಾಸ

ಡಿಚ್ ಪಲ್ಲಿ ರಾಮಾಲಯ ದೇವಾಲಯದ ಇತಿಹಾಸ

ಈ ದೇವಾಲಯದ ನಿರ್ಮಾಣದ ಸಮಯದಲ್ಲಿ ಇಸ್ಲಾಮಿಕ್ ದಾಳಿಯಿಂದಾಗಿ ರಾಮಾಲಯದಲ್ಲಿನ ಅದ್ಭುತ ಶಿಲ್ಪ ವೈಭವವನ್ನು ಧ್ವಂಸ ಮಾಡಿದರು. ಈ ದೇವಾಲಯವು ಅಪೂರ್ಣವಾಗಿಯೇ ಉಳಿಯಿತು. ಆದರಿಂದ ಈ ಗುಡಿಗೆ ಅಷ್ಟು ಪ್ರಮುಖ್ಯಾತೆ ದೊರೆತಿಲ್ಲ.

PC:pullurinaveen

ಡಿಚ್ ಪಲ್ಲಿ ರಾಮಾಲಯ ದೇವಾಲಯದ ಇತಿಹಾಸ

ಡಿಚ್ ಪಲ್ಲಿ ರಾಮಾಲಯ ದೇವಾಲಯದ ಇತಿಹಾಸ

ಕ್ರಿ.ಶ 19 ನೇ ಶತಮಾನದಲ್ಲಿ ಒಬ್ಬ ಭಕ್ತನು ಸೀತಾರಾಮ ಲಕ್ಷ್ಮಣ ವಿಗ್ರಹಗಳನ್ನು ಪ್ರತಿಷ್ಟಾಪಿಸಲು ಮುಂದೆ ಬಂದನು. ಪೂರ್ವ ದಿಕ್ಕಿನಿಂದ ಬಂದ ರಾಜರು ದಂಡಯಾತ್ರೆಯೆಂದು ಅಲ್ಲಿದ್ದ ವಿವಿಧ ದೇವಾಲಯವನ್ನು ನಾಶಗೊಳಿಸುತ್ತಿದ್ದರು. ನಂತರದಲ್ಲಿಯೇ ಈ ದೇವಾಲಯದಲ್ಲಿ ವಿಗ್ರಹವನ್ನು ಪ್ರತಿಷ್ಟಾಪಿಸಲಾಯಿತು. ಅದಕ್ಕಿಂತ ಮುಂಚೆ ಯಾವುದೇ ರೀತಿಯ ಮೂರ್ತಿಯಾಗಲಿ ಇರಲಿಲ್ಲ.

PC:Nizamabad District

ಡಿಚ್ ಪಲ್ಲಿ ರಾಮಾಲಯ ದೇವಾಲಯದ ಇತಿಹಾಸ

ಡಿಚ್ ಪಲ್ಲಿ ರಾಮಾಲಯ ದೇವಾಲಯದ ಇತಿಹಾಸ

ಕಪ್ಪು ಬಿಳಿಪಿನ ಕಲ್ಲಿನಿಂದ ನಿರ್ಮಿಸಿದ ಈ ದೇವಾಲಯಲ್ಲಿ ಬಳ್ಳಿಯ ಹಾಗೆ ಬಳಕುತ್ತಿರುವ ಶಿಲ್ಪಗಳ ಅದ್ಭುತ ಲಾವಣ್ಯವನ್ನು ಗಮನಿಸಿದರೆ ಆ ದಿನಗಳ ಶಿಲ್ಪಗಳನ್ನು ಕಂಡ ಪ್ರವಾಸಿಗರು ಬೆರಗಾಗದೇ ಇರುವುದಿಲ್ಲ. ಅಂಥಹ ಶಿಲ್ಪಗಳನ್ನು ಅಲ್ಲಿಯೇ ಭೇಟಿ ನೀಡಿ ಕಾಣಬೇಕಾಗಿದೆ.

PC:Naveen Dichpally

ಡಿಚ್ ಪಲ್ಲಿ ರಾಮಾಲಯ ದೇವಾಲಯದ ಇತಿಹಾಸ

ಡಿಚ್ ಪಲ್ಲಿ ರಾಮಾಲಯ ದೇವಾಲಯದ ಇತಿಹಾಸ

ಆಲಯದ ಮೇಲೆ ಹಲವು ರತಿ ಮನ್ಮಥರ ಹಲವು ಶಿಲ್ಪಗಳನ್ನು ಕಾಣಬಹುದಾಗಿದೆ. ಈ ದೇವಾಲಯದ ಒಳಹೊಕ್ಕರೆ ಭಕ್ತರ ಮನಸ್ಸು ಆಧ್ಯಾತ್ಮಿಕ ಭಾವವು ಅವರಿಸುತ್ತದೆ. ಈ ರಾಮ ದೇವಾಲಯವು ದಕ್ಷಿಣ ದಿಕ್ಕಿಗೆ ಇದೆ. ಇಲೋಂದು ಸುಂದರವಾದ ಮಂಟಪವನ್ನು ಕಾಣಬಹುದಾಗಿದೆ.

PC:youtube

ಡಿಚ್ ಪಲ್ಲಿ ರಾಮಾಲಯ ದೇವಾಲಯದ ಇತಿಹಾಸ

ಡಿಚ್ ಪಲ್ಲಿ ರಾಮಾಲಯ ದೇವಾಲಯದ ಇತಿಹಾಸ

ಟಿಚಿ ಪಲ್ಲಿ ರಾಮಾಲಯವನ್ನು ಇಂದೊರು ಖಜುರಹೊ ಎಂದು ಕರೆಯುತ್ತೇವೆ. ಅಲ್ಲಿರುವ ಅದ್ಭುತವಾದ ಶಿಲ್ಪವನ್ನು ಖಜುರಹೊ ಕೂಡ ಹೊಂದಿದೆ. ಬೆಟ್ಟದ ಮೇಲೆ ಈ ರಾಮಾಲಯವಿರುವುದರಿಂದ ಖಿಲ್ಲಾ ರಾಮಾಲಯ ಎಂದು ಸಹ ಕರೆಯುತ್ತಾರೆ.

PC:Nizamabad District

ಕೂರ್ಮಾಕರ ದೇವಾಲಯ

ಕೂರ್ಮಾಕರ ದೇವಾಲಯ

14 ನೇ ಶತಮಾನದಲ್ಲಿ ಕಾಕತೀಯ ಸಾಮ್ರಾಜ್ಯದ ಅರಸರು ಈ ದೇವಾಲಯವನ್ನು ನಿರ್ಮಿಸಿದರು. ದೇವಾಲಯದ ನಿರ್ಮಾಣದಲ್ಲಿ ಶ್ರೇಷ್ಟವಾದ ಕೂರ್ಮಾಕಾರ ದೇವಾಲಯವನ್ನು ಕೂಡ ಈ ಡಿಚಿ ಪಲ್ಲಿಯಲ್ಲಿ ನಿರ್ಮಿಸಿದರು.

PC: TS Tourism

ದಂಡಯಾತ್ರೆ

ದಂಡಯಾತ್ರೆ

ಇಂಥಹ ಅದ್ಭುತವಾದ ದೇವಾಲಯವು ಅಪೂರ್ಣವಾದುದು ವಿಪರ್ಯಸವೇ ಸರಿ. ದಂಡಯಾತ್ರೆಗೆ ಬಂದ ಹಲವಾರು ರಾಜರು ಈ ದೇವಾಲಯವನ್ನು ಧ್ವಂಸ ಮಾಡಿದರು. ಅದ್ದರಿಂದಲೇ ಈ ದೇವಾಲಯ ಸಿಗಬೇಕಾಗಿದ್ದ ಪ್ರಸಿದ್ಧಿಯನ್ನು ಪಡೆದಿಲ್ಲ ಎಂದು ಪಂಡಿತರು ಹೇಳುತ್ತಾರೆ.


PC:youtube

ಸೀತಾರಾಮಲಕ್ಷ್ಮಣರ ವಿಗ್ರಹ

ಸೀತಾರಾಮಲಕ್ಷ್ಮಣರ ವಿಗ್ರಹ

1949 ರಲ್ಲಿ ಗಜವಾಡ ವಿನ್ನಯ್ಯ ಗುಪ್ತ ಎಂಬ ಭಕ್ತನು ಸೀತಾರಾಮಲಕ್ಷ್ಮಣರ ವಿಗ್ರಹವನ್ನು ಈ ದೇವಾಲಯದಲ್ಲಿ ಪ್ರತಿಷ್ಟಾಪಿಸಿದನು. ಹಲವು ರಾಜರು ದಂಡಯಾತ್ರೆ ಮಾಡುವ ಸಮಯದಲ್ಲಿ ಯಾವುದೇ ದೇವತ ಮೂರ್ತಿ ಕೂಡ ಇಲ್ಲಿ ಇರಲಿಲ್ಲ.

PC:youtube

ದೇವಾಲಯದ ಪ್ರಾಮುಖ್ಯತೆ

ದೇವಾಲಯದ ಪ್ರಾಮುಖ್ಯತೆ

ಈ ದೇವಾಲಯದಲ್ಲಿನ ಅತ್ಯಂತ ಮನೋಹರವಾದ ಶಿಲ್ಪಕಲೆಗಳನ್ನು ಹೊಂದಿದೆ. ಅಂದಿನ ಈ ಶಿಲ್ಪಕಲೆಗಳನ್ನು ಒಮ್ಮೆ ನೋಡಿದರೆ ಜೀವನದಲ್ಲಿ ಎಂದೂ ಮರೆಯಲಾಗದಂತಹ ಕಲೆಯನ್ನು ಕಣ್ಣ್‍ಸೊರೆಗೊಳಿಸಿಕೊಳ್ಳಬಹುದು. ಈ ದೇವಾಲಯದ ಪಕ್ಕದಲ್ಲಿ ಒಂದು ಕೊಳವಿದೆ. ಕೊಳದ ಮಧ್ಯೆ ಸುಂದರವಾದ ಮಂಟಪವಿದೆ.


PC:youtube

ಕೊಳ

ಕೊಳ

ಈ ಕೊಳದ ನೀರನ್ನು ಎಷ್ಟಿರಬೇಕು ಎಂದು ಸೂಚಿಸುವ ಅವರ ಕಲಾ ನೈಪುಣ್ಯ ಹಾಗೂ ಕಲಾ ನಿರ್ಮಾಣದ ಬಗ್ಗೆ ತಿಳಿಯಬಹುದಾಗಿದೆ. ಈ ಕೊಳವು ಡಿಚಿ ಪಲ್ಲಿ ರಾಮಾಲಯದಿಂದ ನಿಜಾಮಬಾದ್‍ನಲ್ಲಿನ ರಘುನಾಥ ದೇವಾಲಯಕ್ಕೆ ತೆರಳುವ ಮಾರ್ಗದಲ್ಲಿ ದೊರೆಯುತ್ತದೆ.


PC:youtube

ಶ್ರೀ ಕಂಠೇಶ್ವರ ದೇವಾಲಯ

ಶ್ರೀ ಕಂಠೇಶ್ವರ ದೇವಾಲಯ

ಶ್ರೀ ಕಂಠೇಶ್ವರ ದೇವಾಲಯ ನಿಜಾಮಾಬಾದ್‍ದಲ್ಲಿದ್ದು, ಅತಿ ಹೆಚ್ಚು ಸಂಖ್ಯೆಯಲ್ಲಿ ಈ ದೇವಾಲಯಕ್ಕೆ ಹಲವಾರು ಭಕ್ತರು ಭೇಟಿ ನೀಡುತ್ತಿರುತ್ತಾರೆ. ಇಲ್ಲಿ ಸಾಕ್ಷಾತ್ ಶಿವನು ನೆಲೆಗೊಂಡಿದ್ದಾನೆ.


PC:youtube

ದಕ್ಷಿಣ ಭಾರತದ ವಾಸ್ತು ಶಿಲ್ಪ

ದಕ್ಷಿಣ ಭಾರತದ ವಾಸ್ತು ಶಿಲ್ಪ

ಈ ದೇವಾಲಯವನ್ನು ಶಾತವಾಹನ ಸಾಮ್ರಾಜ್ಯಕ್ಕೆ ಸೇರಿದ ಪ್ರಮುಖ ಅರಸ 2ನೇ ಶಾತಕರಣಿ ನಿರ್ಮಿಸಿದನು. ಈ ದೇವಾಲಯದ ಶಿಲ್ಪ ಶೈಲಿಯು ದಕ್ಷಿಣ ಭಾರತದ ಶೈಲಿಯಲ್ಲಿ ನಿರ್ಮಿಸಲಾಗಿದೆ. ಡಿಚ್ ಪಲ್ಲಿಯಲ್ಲಿನ ರಾಮ ದೇವಾಲಯವನ್ನು ಮಧ್ಯೆಕಾಲದಲ್ಲಿ ಇನ್ನಷ್ಟು ಅಭಿವೃದ್ಧಿ ಮಾಡಿದರು.


PC:youtube

ದಕ್ಷಿಣ ಭಾರತದ ವಾಸ್ತು ಶಿಲ್ಪ

ದಕ್ಷಿಣ ಭಾರತದ ವಾಸ್ತು ಶಿಲ್ಪ

ಡಿಚಿ ಪಲ್ಲಿಯಿಂದ ನಿರ್ಮಲ್‍ಗೆ ಹೋಗುವ ಮಾರ್ಗದಲ್ಲಿ ಗುಡ್ಡೆಯ ಹಾಗೆ ಕಾಣುವ ಕಪ್ಪಗಿನ ಕಲ್ಲಿ ಪರ್ವತ ಕಾಣಿಸುತ್ತದೆ. ಈ ಗ್ರಾಮದ ಹೆಸರು ಆರ್ಮೂರ್. ಡಿಚಿ ಪಲ್ಲಿಯಿಂದ ಸುಮಾರು 25 ಕಿ,ಮೀ ದೂರ ಹಾಗೂ ನಿಜಾಮಬಾದ್‍ನಿಂದ 27 ಕಿ,ಮೀ ದೂರದಲ್ಲಿದೆ. ಈ ಬೆಟ್ಟಕ್ಕೆ ತೆರಳಲು ಮೆಟ್ಟಿಲಿನ ವ್ಯವಸ್ಥೆ ಕೂಡ ಇದೆ. ಇಲ್ಲಿನ ಪರ್ವತದ ಮೇಲೆ ಗುಹೆ ಇದ್ದು ನವನಾಥ ಸಿದ್ಧೆಶ್ವರ ಗುಹಾ ದೇವಾಲಯವಿದೆ.

PC:youtube

ಡಿಚಿ ಪಲ್ಲಿಯ ಸಮೀಪದ ನಗರಗಳು

ಡಿಚಿ ಪಲ್ಲಿಯ ಸಮೀಪದ ನಗರಗಳು

ನಿಜಾಮಾಬಾದ್ ಸಿಟಿ, ಭೂಧನ್ ಸಿಟಿ, ಕಾಮಾರೆಡ್ಡಿ ಸಿಟಿ, ನಿರ್ಮಲ ಸಿಟಿ.

ಸುಂದರವಾದ ಪ್ರದೇಶ

ಸುಂದರವಾದ ಪ್ರದೇಶ

ಸದ್ದುಲ ಶ್ರೀ ಮಲ್ಲಿಕಾರ್ಜುನ ಸ್ವಾಮಿ ದೇವಾಲಯ, ಯಾನಾ ಪರ್ವತ ಮೇಲೆ ನೆಲಸಿರುವ ಶಿವ, ನರ್ಸಿಂಗ್ ಪೂರ್‍ನಲ್ಲಿನ ಶ್ರೀ ಲಕ್ಷ್ಮಿ ನರಸಿಂಹ ಸ್ವಾಮಿ ದೇವಾಲಯ, ಹನುಮಂತನ ದೇವಾಲಯ.

ತಲುಪಬೇಕಾದ ಸ್ಥಳ

ತಲುಪಬೇಕಾದ ಸ್ಥಳ

ನಿಜಾಮಾಬಾದ್‍ನಿಂದ ಸುಮಾರು 27 ಕಿ,ಮೀ ದೂರದಲ್ಲಿ ಡಿಚಿ ಪಲ್ಲಿ ದೇವಾಲಯವಿದೆ. ಹೈದ್ರಾಬಾದ್‍ನಿಂದ ಸುಮಾರು 167 ಕಿ,ಮೀ ದೂರದಲ್ಲಿದೆ. ನಿಜಾಮಬಾದ್‍ವರೆವಿಗೂ ರೈಲು ಬಸ್‍ಗಳ ವ್ಯವಸ್ಥೆ ಇದೆ. ಇಲ್ಲಿಂದ ಡಿಚಿ ಪಲ್ಲಿಗೆ ಬಸ್ ಹಾಗೂ ಆಟೋ ಸೌಲಭ್ಯವಿದೆ.

PC:google maps

ಪ್ರವಾಸದ ಬಗ್ಗೆ ಇನ್ನಷ್ಟು ಮಾಹಿತಿ, ಪ್ರವಾಸದ ಸಲಹೆಗಳು ಹಾಗೂ ಪ್ರವಾಸ ಲೇಖನಗಳನ್ನು ಪಡೆಯಿರಿ