Search
  • Follow NativePlanet
Share
» » ಹೊಟೇಲ್‌ನಲ್ಲಿ ರೂಂ ಬುಕ್ ಮಾಡುವಾಗ ಇದನ್ನು ನೆನಪಿನಲ್ಲಿಟ್ಟುಕೊಳ್ಳಿ

ಹೊಟೇಲ್‌ನಲ್ಲಿ ರೂಂ ಬುಕ್ ಮಾಡುವಾಗ ಇದನ್ನು ನೆನಪಿನಲ್ಲಿಟ್ಟುಕೊಳ್ಳಿ

ಎಲ್ಲಾದರೂ ಬೇರೆ ಊರಿಗೆ ಹೊಸ ಪ್ರದೇಶಕ್ಕೆ ಪ್ರವಾಸಕ್ಕೆ ಹೋಗುವುದೆಂದರೆ ಉಳಿದುಕೊಳ್ಳಲು ಹೋಟೇಲ್ ಹುಡುಕುವುದು ಒಂದು ದೊಡ್ಡ ತಲೆಬಿಸಿಯ ಕೆಲಸವಾಗಿಬಿಡುತ್ತದೆ. ಅದಕ್ಕಾಗಿ ಹೋಟೆಲ್‌ನ್ನು ಯಾವ ರೀತಿ ಸೆಲೆಕ್ಟ್ ಮಾಡಬೇಕು ಎನ್ನುವುದಕ್ಕೆ ನಾವು ಕೆಲವು ಟಿಪ್ಸ್‌ಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳಲಿದ್ದೇವೆ.

ಲೋಕೇಶನ್

ನೀವು ಮುಂಬೈಯ ಸಿಟಿಯಲ್ಲಿ ತಂಗಲು ಬಯಸಿದ್ದಲ್ಲಿ,ಇಲ್ಲಿನ ಟ್ರಾಫಿಕ್ ಜಾಮ್‌ನಲ್ಲಿ ನಿಮ್ಮ ಸಮಯದ ಬಹುಪಾಲು ಸಮಯವನ್ನು ವ್ಯರ್ಥವಾಗುತ್ತದೆ. ಆದ್ದರಿಂದ ನೀವು ಭೇಟಿ ನೀಡುವ ತಾಣಗಳಿಗೆ ಸಮೀಪವಿರುವ ಹೋಟೆಲ್‌ನಲ್ಲಿ ತಂಗಲು ಪ್ರಯತ್ನಿಸಿ.

ಮುಂಚಿತವಾಗಿ ಬುಕ್ ಮಾಡಿ

ನೀವು ಪ್ರವಾಸ ಪ್ಲ್ಯಾನ್ ಮಾಡಿದ್ದೀರೆಂದಾರೆ ಅದಕ್ಕೆ ಅನುಗುಣವಾಗಿ ಆಯಾಯಾ ಲೋಕೇಶನ್‌ಗೆ ಸಮೀಪದಲ್ಲಿನ ಹೋಟೇಲ್‌ನ್ನು ಒಂದು ತಿಂಗಳು ಮುಂಚಿತವಾಗಿಯೇ ಬುಕ್ ಮಾಡಿ. ಕೊನೆ ಘಳಿಗೆಯಲ್ಲಿ ಬುಕ್ ಮಾಡಿದ್ರೆ ರೂಮ್ ಖಾಲಿ ಇಲ್ಲದೆ ಇರುವ ಸಂಭವ ಜಾಸ್ತಿ ಇರುತ್ತದೆ.

ಹೊಟೇಲ್‌ ಪ್ಯಾಕೇಜ್

ನೀವು ಉಳಿದುಕೊಳ್ಳುವ ಹೋಟೇಲ್‌ನಲ್ಲಿ ಸೇವೆಗಳು ಮುಖ್ಯವಾಗಿರುತ್ತದೆ. ಹೋಟೆಲ್‌ನ್ನು ಬುಕ್ ಮಾಡುವಾಗ ಪ್ಯಾಕೇಜ್ ಇದೆಯೋ ಎನ್ನುವುದನ್ನುನೋಡಿ ಉಪಹಾರ, WiFi, ಅಪ್ಗ್ರೇಡ್, ಊಟ, ಸ್ಪಾ ರಶೀದಿ ನೀಡುವ ಹೋಟೇಲ್ ಪ್ಯಾಕೇಜ್‌ಗಳೂ ಲಭ್ಯವಿರುತ್ತದೆ. ಇದು ನಿಮ್ಮ ಪ್ರವಾಸವನ್ನು ಇನ್ನಷ್ಟು ಆರಾಮದಾಯಕವಾಗಿಸುತ್ತದೆ.

ಹೊಟೇಲ್ ಬಿಲ್

ನೀವು ಯಾವುದೇ ಹೊಟೇಲ್‌ನ್ನು ಬುಕ್ ಮಾಡುವ ಮೊದಲು ಹೊಟೇಲ್‌ನ ದರ ಎಷ್ಟು ಎನ್ನುವುದನ್ನು ಖಚಿತಪಡಿಸಿಕೊಳ್ಳಿ. ಯಾವುದೇ ಹೆಚ್ಚುವರಿ ಶುಲ್ಕವಿದೆಯೋ ಎನ್ನುವುದರ ಬಗ್ಗೆಯೂ ತಿಳಿಯಿರಿ. ಇಲ್ಲವಾದಲ್ಲಿ ಚೆಕ್‌ಔಟ್‌ ಮಾಡುವಾಗ ನಿಮಗೆ ದೊಡ್ಡ ಬಿಲ್‌ನ್ನೇ ನೀಡಬಹುದು.

ಸುರಕ್ಷತೆ ಮುಖ್ಯ

ನಿಮ್ಮ ಬ್ಯಾಗ್‌ಗಳಲ್ಲಿ ಬೆಲೆಬಾಳುವ ವಸ್ತುಗಳು, ದುಡ್ಡು ಇದ್ದರೆ ಅದನ್ನು ಜಾಗರೂಕತೆಯಿಂದ ನೋಡಿಕೊಳ್ಳಬೇಕು. ಹೋಟೆಲ್‌ನಲ್ಲಿ ಉತ್ತಮ ಸುರಕ್ಷತೆ ಇದೆಯೋ ಎನ್ನುವುದನ್ನು ಅರಿಯಿರಿ. ನೀವು ಕೋಣೆಯಲ್ಲಿ ಇಲ್ಲದಿರುವಾಗ ನಿಮ್ಮ ಬ್ಯಾಗ್‌ಗಳಿಗೆ ಲಾಕ್ ಹಾಕಿ. ಯಾಕೆಂದರೆ ರೂಂನ ಇನ್ನೊಂದು ಕೀ ರಿಸೆಪ್ಷನ್‌ನಲ್ಲಿ ಇರುತ್ತದೆ. ಹಾಗಾಗಿ ನಿಮ್ಮ ವಸ್ತುಗಳನ್ನು ನೀವೇ ಕಾಪಾಡಿಕೊಳ್ಳಬೇಕು.

ಐಷರಾಮಿ ಹೊಟೇಲ್‌ಗಳು

ಭಾರತದಲ್ಲಿ ಜನಪ್ರಿಯ ಐಷಾರಾಮಿ ಹೊಟೇಲ್‌ಗಳು ಸಾಕಷ್ಟಿವೆ. ಇದು ಸುರಕ್ಷಿತವಾಗಿಯೂ ಇರುತ್ತದೆ. ಒಬೆರಾಯ್ ಹೋಟೆಲ್‌ಗಳಂತಹ ಕೆಲವು ಬ್ರಾಂಡ್ ಹೊಟೇಲ್‌ಗಳು ಹಲವು ರೀತಿಯ ಆತಿಥ್ಯಕ್ಕಾಗಿ ಹೆಸರುವಾಸಿಯಾಗಿದೆ. ಇಲ್ಲಿನ ಕೊಠಡಿಗಳು, ಸೇವೆ, ಆಹಾರವೂ ಕೂಡಾ ಒಂದು ನಿರ್ದಿಷ್ಟ ಗುಣಮಟ್ಟದ್ದಾಗಿರುತ್ತದೆ.

ಪ್ರವಾಸದ ಬಗ್ಗೆ ಇನ್ನಷ್ಟು ಮಾಹಿತಿ, ಪ್ರವಾಸದ ಸಲಹೆಗಳು ಹಾಗೂ ಪ್ರವಾಸ ಲೇಖನಗಳನ್ನು ಪಡೆಯಿರಿ

We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Nativeplanet sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Nativeplanet website. However, you can change your cookie settings at any time. Learn more