ಮೈಸೂರು ದಸರ ಎಷ್ಟೊಂದು ಸುಂದರ! ಇಲ್ಲಿದೆ ಮೈಸೂರಿನ ದಸರ ಸಮಯದ ಆಕರ್ಷಣೆಗಳು
ಮೈಸೂರು ದಸರಾಗೆ ವಿಜಯನಗರದ ಕಾಲದಿಂದಲೂ ಇತಿಹಾಸವಿದ್ದು ಅಂದಿನಿಂದ ಇಂದಿಗೂ ಇದು ಜನರನ್ನು ತನ್ನತ್ತ ಸೆಳೆಯುವ ಹಬ್ಬವಾಗಿದೆ. ಮೈಸೂರಿನಲ್ಲಿ ನಡೆಯುವ ದಸರ ಹಬ್ಬವು ನಿಜವಾಗಿಯೂ ದೃಶ್ಯ ಸೌಂದರ್ಯಕ್ಕೆ ಸಾಕ್ಷಿಯಾಗಿದ್ದು ಇದು ಎಲ್ಲಾ ವಯೋಮಾನದವರನ್ನೂ ತನ್ನೆಡೆಗೆ ಆಕರ್ಷಿಸುತ್ತದೆ. ಇದು ರಾಜ್ಯದ ಅತ್ಯಂತ ಹೆಚ್ಚಿನ ಪ್ರಮಾಣದಲ್ಲಿ ಜನರು ಭೇಟಿ ಕೊಡುವ ಹಬ್ಬವಾಗಿದ್ದು, ಮೈಸೂರು ದಸರಾ ಹಬ್ಬವನ್ನು ಕರ್ನಾಟಕದ 'ನಾಡ ಹಬ್ಬ'ವೆಂದು ಕರೆಯಲಾಗುತ್ತದೆ. ದುಷ್ಟ ಶಕ್ತಿಯ ಮೇಲೆ ಜಯ ಸಾಧಿಸುವುದರ ಸಂಕೇತವಾಗಿ ಈ ಹಬ್ಬವನ್ನು ಆಚರಿಸುವ ಮುಖ್ಯ ಉದ್ದೇಶವಾಗಿದ್ದು, ಈ ಹಬ್ಬವನ್ನುಮೈಸೂರು ನಗರದ ಅಧಿ ದೇವತೆ ಶ್ರೀ ಚಾಮುಂಡೇಶ್ವರಿ ದೇವಿಗೆ ಅರ್ಪಿಸಲಾಗುತ್ತದೆ.
ದಸರಾ ಸಮಯದಲ್ಲಿ ಮೈಸೂರಿನ ಎಲ್ಲೆಡೆ ಹಬ್ಬದ ವಾತಾವರಣದಿಂದ ಕೂಡಿದ್ದು ಜಂಬೂ ಸವಾರಿ, ಮೈಸೂರು ಅರಮನೆ, ಫ಼ುಡ್ ಕಾರ್ನಿವಲ್, ಸೇನಾ ಮೆರವಣಿಗೆಗಳು, ಕ್ರೀಡೆಗಳು ಮತ್ತು ಅಸಂಖ್ಯಾತ ಕಾರ್ಯಕ್ರಮಗಳನ್ನು ಹಬ್ಬದ ಪ್ರಯುಕ್ತ ಹಮ್ಮಿಕೊಳ್ಳಲಾಗುತ್ತದೆ. ಈ ನಗರವು ಇಲ್ಲಿಗೆ ಭೇಟಿ ಕೊಡುವವರಿಗೆ ಅವಿಸ್ಮರಣೀಯ ನೆನಪುಗಳನ್ನು ಉಳಿಸುವಂತಹ ನಗರಗಳಲ್ಲಿ ಒಂದಾಗಿದ್ದು ಇದು ಕರ್ನಾಟಕದ ಸಂಸ್ಕೃತಿಯ ಸಾರವನ್ನು ಪ್ರತಿಬಿಂಬಿಸುತ್ತದೆ.

ಸಂಸ್ಕೃತಿ ಮತ್ತು ಸಂಪ್ರದಾಯಗಳು
16ನೇ ಶತಮಾನಗಳ ಕಾಲ ಅಂದರೆ ವಿಜಯನಗರ ಸಾಮ್ರಾಜ್ಯದ ಕಾಲದಿಂದ ಇಂದಿನವರೆಗೂ ಮೈಸೂರು ದಸರವನ್ನು ಬಹಳ ವಿಜೃಂಭಣೆಯಿಂದ ಆಚರಿಸುತ್ತಾ ಬರಲಾಗಿದೆ. ಇಂದು ಕೂಡ ವಿಜಯನಗರ ಸಾಮ್ರಾಜ್ಯದ ಕಾಲದಲ್ಲಿ ನಡೆಯುತ್ತಿದ್ದ ಹಾಗೆಯೇ ದೊಡ್ಡ ದೊಡ್ಡ ಕಾರ್ಯಕ್ರಮಗಳನ್ನು ಆಯೋಜಿಸುವುದರ ಮೂಲಕ ಹಳೆಯ ಸಂಪ್ರದಾಯಗಳನ್ನು ಎತ್ತಿ ಹಿಡಿಯಲಾಗುತ್ತಿದೆ. ದಸರಾ ಮೆರವಣಿಗೆಯು ಮೈಸೂರು ಅರಮನೆಯಲ್ಲಿ ಪ್ರಾರಂಭಗೊಂಡು ಬನ್ನಿ ಮಂಟಪ ಮೈದಾನದಲ್ಲಿ ಕೊನೆಗೊಳ್ಳುತ್ತದೆ.
ವರ್ಣರಂಜಿತ ಉಡುಪುಗಳು, ನೃತ್ಯ ಗುಂಪುಗಳು, ಸಂಗೀತ ಬ್ಯಾಂಡ್‌ಗಳು, ಸೇನಾಪಡೆಯ ಮೆರವಣಿಗೆಗಳು, ಜಾನಪದ ಕಥೆಗಳು, ಅಲಂಕರಿಸಿದ ಆನೆಗಳು, ಕುದುರೆಗಳು, ಒಂಟೆಗಳ ಸೌಂದರ್ಯವನ್ನು ಪ್ರದರ್ಶಿಸುವ ಕಾರ್ನಿವಲ್ ಗಳು ಇತ್ಯಾದಿಗಳು ಈ ಮೆರವಣಿಗೆಯ ಭಾಗವಾಗಿರುತ್ತವೆ. ಇದನ್ನು 1610 ರಲ್ಲಿ ರಾಜ ಒಡೆಯರ್ ಅವರು ಪ್ರಾರಂಭಿಸಿದರು ಮತ್ತು ಇಂದಿಗೂ ಇದು ತನ್ನ ಹಳೆಯ ಸಂಪ್ರದಾಯ, ಸಂಸ್ಕೃತಿ ಮತ್ತು ಪರಂಪರೆಯನ್ನು ಮುಂದುವರೆಸುತ್ತಾ ಬಂದಿದೆ .

ಜಂಬೂ ಸವಾರಿ
ಮೈಸೂರು ದಸರಾದ ಪ್ರಮುಖ ಆಕರ್ಷಣೆಯ ಭಾಗವೆಂದರೆ ಭವ್ಯವಾದ ಜಂಬೂ ಸವಾರಿ. ಇದು ಶತಮಾನಗಳಿಂದಲೂ ದಸರ ಸಮಯದಲ್ಲಿ ಕಂಡು ಬರುವ ಪ್ರಸಿದ್ದ ಮೆರವಣಿಗೆಯಾಗಿದೆ. ನವರಾತ್ರಿಯ ಹತ್ತನೆ ದಿನದ್ಂದು ನೂರಾರು ಆನೆಗಳನ್ನು ಚಿನ್ನ ಲೇಪಿತ ವಸ್ತ್ರಗಳನ್ನು ಹೊದಿಸಿ ಮೈಸೂರಿನ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಗುತ್ತದೆ.
ಈ ಆನೆಗಳ ಸಮೂಹದಲ್ಲಿ ಒಂದು ನಾಯಕ ಸ್ಥಾನದಲ್ಲಿದ್ದು ಇದು750 ಕಿಲೋಗ್ರಾಂ ಗಳಷ್ಟು ತೂಕವಿರುವ ದೇವಿ ಶ್ರೀಚಾಮುಂಡೇಶ್ವರಿ ದೇವಿಯನ್ನು ಕುಳ್ಳಿರಿಸಿದ ಚಿನ್ನದ ಅಂಬಾರಿಯನ್ನು ಹೊರುವ ಜವಾಬ್ದಾರಿಯನ್ನು ಹೊತ್ತು ನಡೆಯುತ್ತದೆ. ಈ ಆನೆಗಳು ಕಾರ್ಯಕ್ರಮದ ಪ್ರಮುಖ ಆಕರ್ಷಣೆಗಳಾಗಿದ್ದು ಮೈಸೂರು ದಸರಾ ಹಬ್ಬಕ್ಕೆ ಇನ್ನಷ್ಟು ಮೆರುಗನ್ನು ನೀಡುತ್ತಾ ನೋಡುಗರ ಕಣ್ಣಿಗೆ ಹಬ್ಬದ ರಸದೌತಣವನ್ನು ನೀಡುತ್ತದೆ.

ಮೈಸೂರು ಅರಮನೆ : ದೀಪಾಲಂಕಾರ
ಮೈಸೂರಿನ ಆಂತರಿಕ ಭಾಗವಾಗಿರುವ ಮೈಸೂರು ಅರಮನೆಯು ದಸರಾ ಆಚರಣೆಯನ್ನು ಸಂಪೂರ್ಣಗೊಳಿಸುವಲ್ಲಿ ಮಹತ್ತರವಾದ ಪಾತ್ರವಹಿಸುತ್ತದೆ ಈ ವೈಭವೋಪೇತ ಅರಮನೆಯು ಹತ್ತುಸಾವಿರ ಬಲ್ಬುಗಳಿಂದ ಅಲಂಕಾರ ಮಾಡಲಾಗುತ್ತದೆ. ದುಷ್ಟ ಶಕ್ತಿಯ ಮೇಲೆ ಒಳಿತಿನ ವಿಜಯದ ದಾರಿದೀಪದ ಸಂಕೇತವಾಗಿ ತೋರಿಸಲು ರಾತ್ರಿಯಲ್ಲಿ ಬೆಳಗುತ್ತದೆ. ಆದ್ದರಿಂದ ಮೈಸೂರು ಅರಮನೆಯು ಮೈಸೂರು ದಸರಾ ಆಚರಣೆಯ ಪ್ರಮುಖ ಆಕರ್ಷಣೆಗಳಲ್ಲಿ ಒಂದಾಗಿದೆ.

ಫ಼ುಡ್ ಕಾರ್ನಿವಲ್
ಆಹಾರಪ್ರಿಯರಿಗೆ, ಮೈಸೂರು ಭೇಟಿಗೆ ಒಂದು ಆದರ್ಶಪ್ರಾಯವಾದ ತಾಣವಾಗಿದೆ. ಸ್ವಾದಿಷ್ಟವಾದ ಸ್ಥಳೀಯ ಆಹಾರ ಪದ್ದತಿ, ಮತ್ತು ಸಿಹಿಯಿಂದ ಹಿಡಿದು ತಿನ್ನುವ ತಿಂಡಿಗಳು ಮತ್ತು ಅಡುಗೆ ವಸ್ತುಗಳು ಮತ್ತು ಸ್ಥಳೀಯ ಹೂವುಗಳು ಇತ್ಯಾದಿಗಳನ್ನು ಮೈಸೂರು ತನ್ನಲ್ಲಿ ಹೊಂದುತ್ತದೆ. ಮೈಸೂರು ನೀಡುವ ಅತ್ಯುತ್ತಮ ಆಹಾರ ಸಂಸ್ಕೃತಿ ಮತ್ತು ವೈವಿಧ್ಯತೆಯನ್ನು ಅನ್ವೇಷಿಸಲು ಮತ್ತು ಸವಿಯಲು ನೀವು ಆಹಾರ ಮೇಳಕ್ಕೆ ಹೋಗಬಹುದು.

ಶಾಪಿಂಗ್
ದಸರಾದ ಮೊದಲ ದಿನದಂದು ಪ್ರಾರಂಭವಾದ ವಸ್ತು ಪ್ರದರ್ಶನಗಳು ಎರಡು ತಿಂಗಳುಗಳವರೆಗೆ ಮುಂದುವರೆಯುತ್ತದೆ. ಈ ಪ್ರದರ್ಶನವನ್ನು ಸಾಮಾನ್ಯವಾಗಿ ಮೈಸೂರು ಅರಮನೆಯ ಎದುರುಗಡೆ ಇರುವ ದೊಡ್ಡಕೆರೆ ಮೈದಾನದಲ್ಲಿ ನಡೆಸಲಾಗುತ್ತದೆ. ಈ ಮನಮೋಹಕ ಪ್ರದರ್ಶನದಲ್ಲಿ ಗೊಂಬೆಗಳು, ದಸರಾ ಸರಕುಗಳು, ಕರಕುಶಲ ವಸ್ತುಗಳು, ಬಟ್ಟೆಗಳು, ಗಾಜಿನ ಸಾಮಾನುಗಳು, ಆಭರಣಗಳು ಮತ್ತು ಸ್ಮರಣಿಕೆಗಳಿಂದ ಸಂಪೂರ್ಣ ಪರಿಕರಗಳನ್ನು ನೀಡುತ್ತದೆ. ಮೈಸೂರಿನಲ್ಲಿ ದಸರಾ ಆಚರಣೆಯ ಸಂದರ್ಭದಲ್ಲಿ ಇದು ಪ್ರವಾಸಿಗರು ಭೇಟಿ ನೀಡಲೇಬೇಕಾದ ಸ್ಥಳವಾಗಿದೆ.

ಗೊಂಬೆಗಳ ಹಬ್ಬ
ದಸರಾ ಪ್ರಾರಂಭವಾದಂದಿನಿಂದಲೂ ಮೈಸೂರಿನಲ್ಲಿ ನಡೆಯುವ ಗೊಂಬೆಗಳ ಹಬ್ಬವು ಒಂದು ದೃಶ್ಯ ವೈಭವವಾಗಿದೆ. ಈ ಗೊಂಬೆಗಳ ಹಬ್ಬವು ವಿವಿಧ ಸ್ಥಳೀಯ ಕಲಾವಿದರು ರಚಿಸಿದ ವಿವಿಧ ಚಿಕಣಿ ಬೊಂಬೆಗಳು ಮತ್ತು ಪ್ರತಿಮೆಗಳ ಪ್ರಾತಿನಿಧ್ಯ. ಸಂದರ್ಶಕರು ಮತ್ತು ಸ್ಥಳೀಯರಿಗೆ ಇದು ಭವ್ಯವಾದ ವರ್ಣೀಯ ಪ್ರದರ್ಶನವನ್ನು ನೀಡುತ್ತದೆ.

ಸಾಂಸ್ಕೃತಿಕ ಸಂಜೆಗಳು
ಪ್ರತೀ ವರ್ಷ ದೇಶದಾದ್ಯಂತದ ಕಲಾವಿದರು ಮೈಸೂರಿಗೆ ದಸರಾ ಸಮಯದಲ್ಲಿ ಆಗಮಿಸಿ ತಮ್ಮ ಪ್ರದರ್ಶನವನ್ನು ನೀಡಿ ನಗರದ ಜನರನ್ನು ಮನೋರಂಜಿಸುತ್ತಾರೆ. ಇದು ಯುವ ಕಲಾವಿದರಿಗೆ ಒಂದು ವೇದಿಕೆಯಾಗಿದ್ದು ಅವರ ಪ್ರತಿಭೆಯನ್ನು ಪೋತ್ಸಾಹಿಸಿ ಹೊಸ ಜೀವನದಲ್ಲಿ ಮುಂದುವರಿಯಲು ಅವಕಾಶ ನೀಡುತ್ತದೆ. ನೀವು ಇಲ್ಲಿ ವೈವಿಧ್ಯಮಯ ಸಂಗೀತ , ನೃತ್ಯ, ಚಲನಚಿತ್ರ ಮತ್ತು ಎಲ್ಲಾ ವಿಧದ ಕಲೆ ಮತ್ತು ಸಂಸ್ಕೃತಿಯನ್ನು ಇಲ್ಲಿ ಆನಂದಿಸಬಹುದಾಗಿದೆ.

ಕುಸ್ತಿ (ಜಟ್ಟಿ ಕಾಳಗ)
ಕುಸ್ತಿ ಅಥವ ಜಟ್ಟಿ ಕಾಳಗವು ಹಿಂದಿನ ಕಾಲದಿಂದಲೂ ಕರ್ನಾಟಕದ ಸಂಸ್ಕೃತಿಯ ಒಂದು ಭಾಗವಾಗಿದೆ. ಅಲ್ಲದೆ ಇದು ಇದು ಮೈಸೂರಿನ ವಿಜಯನಗರ ಕಾಲದಲ್ಲಿ ರಾಜರು ಮತ್ತು ಸ್ಥಳೀಯರಿಗೆ ಒಂದು ಪ್ರಮುಖ ಪ್ರದರ್ಶನವಾಗಿತ್ತು. ಈ ಪಂದ್ಯಾವಳಿಗಳು ಇಂದಿಗೂ ಮುಂದುವರೆದಿದ್ದು, ಪ್ರವಾಸಿ ಮತ್ತು ಸ್ಥಳೀಯ ಜನರೊಳಗಿರುವ ಇದರ ಬಗೆಗಿನ ಆಸಕ್ತಿಯನ್ನು ಹೊರತರುತ್ತವೆ. ಕುಸ್ತಿ ಪಟುಗಳನ್ನು ಹುರಿದುಂಬಿಸುತ್ತಾ ಸಂತೋಷ ಪಡುತ್ತಾ ಆಟವಾಡುವ ಈ ಪುರುಷತ್ವದ ಸಂಪೂರ್ಣ ಪ್ರದರ್ಶನವು ಈ ಪಂದ್ಯಗಳಿಗೆ ಅಗತ್ಯವಿರುವ ರೋಚಕತೆಯನ್ನು ಸೃಷ್ಟಿಸುತ್ತದೆ.

ಚಾಪರ್ ಸವಾರಿ
ಹೆಲಿಕಾಪ್ಟರ್ ನಲ್ಲಿ ಸವಾರಿ ಮಾಡುವುದಕ್ಕೆ ಯಾವುದೂ ಸರಿ ಸಾಟಿಯಿಲ್ಲವೆನ್ನಬಹುದು ಅದರಲ್ಲೂ ಮೈಸೂರಿನ ಸುತ್ತಮುತ್ತಲೂ ಇದರಲ್ಲಿ ಸವಾರಿಯ ಮಜವೇ ವಿಭಿನ್ನವಾದುದಾಗಿದೆ. ಮೈಸೂರು ದಸರ ಸಮಯದಲ್ಲಿ ನಿಮ್ಮ ಪ್ರೀತಿ ಪಾತ್ರರೊಡನೆ ಮೈಸೂರು ದಸರಾದ ವೀಕ್ಷಣೆಯನ್ನು ಮಾಡಬಹುದಾಗಿದೆ. ಇದರಲ್ಲಿ ಸವಾರಿ ಮಾಡಲು ಸೂಕ್ತ ಸಮಯವೆಂದರೆ ಅದು ರಾತ್ರಿಯಲ್ಲಿ ಆಗಿದ್ದು, ದಸರಾ ಸಮಯದಲ್ಲಿ ನೀವು ಜಗ ಮಗಿಸುವ ಮೈಸೂರು ನಗರದ ಸೊಬಗನ್ನು ವೀಕ್ಷಿಸಬಹುದಾಗಿದೆ. ಮೈಸೂರು ನಿಜವಾಗಿಯೂ ದುಷ್ಟ ಶಕ್ತಿಯ ಮೇಲೆ ಒಳಿತಿನ ವಿಜಯದ ಜ್ಯೋತಿಯಾಗಿ ಹೊರಹೊಮ್ಮುತ್ತದೆ. ಮತ್ತು ಹೆಲಿಕಾಪ್ಟರ್ ಸವಾರಿಯ ಹೊರತಾಗಿ, ನೀವು 3ಡಿ ಪ್ರೊಜೆಕ್ಷನ್, ಪ್ಯಾಲೇಸ್ ಆನ್ ವೀಲ್ಸ್ ಮತ್ತು ಟ್ರಿನ್ ಟ್ರಿನ್ (ಜಾಲಿ ಸೈಕಲ್ ರೈಡ್) ನಂತಹ ಇತರ ಮೋಜಿನ ಚಟುವಟಿಕೆಗಳನ್ನು ಸಹ ಆನಂದಿಸಬಹುದು.


Click it and Unblock the Notifications

















