ನಮ್ಮ ರಾಜ್ಯದಲ್ಲಿ ಸಾಕಷ್ಟು ಹನುಮಂತನ ದೇವಾಲಯಗಳಿವೆ. ಅವುಗಳಲ್ಲಿ ಹನುಮಂತನ ವಿಶೇಷವಾದ ದೇವಾಲಯವೊಂದು ಬೆಂಗಳೂರಿನಲ್ಲಿದೆ. ಇದನ್ನು ಕಾರ್ಯಸಿದ್ಧಿ ಹನುಮ ಎನ್ನುತ್ತಾರೆ. ಈ ದೇವಸ್ಥಾನದಲ್ಲಿ ನೀವು ಏನೇ ಭಕ್ತಿಯಿಂದ ಬೇಡಿದರೂ ನೆರವೇರುತ್ತದಂತೆ. ಬನ್ನಿ ಆ ವಿಶೇಷ ಹನುಮನ ದೇವಸ್ಥಾನದ ಬಗ್ಗೆ ನಾವಿಂದು ತಿಳಿಸಲಿದ್ದೇವೆ.

ಎಲ್ಲಿದೆ ಈ ದೇವಾಲಯ
ಬೆಂಗಳೂರಿನ ನೈಋತ್ಯ ಭಾಗದಲ್ಲಿರುವ ಗಿರಿನಗರದಲ್ಲಿರುವ ಅವಧೂತ ದತ್ತ ಪೀಠದಲ್ಲಿ ಕಾರ್ಯಸಿದ್ಧಿ ಆಂಜನೇಯ ಕ್ಷೇತ್ರವಿದೆ. ಸಾವಿರಾರು ಭಕ್ತರು ಈ ಕ್ಷೇತ್ರಕ್ಕೆ ಆಗಮಿಸುತ್ತಾರೆ. ಇಲ್ಲಿ ಭಕ್ತಿಯಿಂದ ಬೇಡಿಕೊಂಡರೆ ನಿಮ್ಮಇಚ್ಛೆ ಈಡೇರುವುದರಂತೆ.

ದೇವಸ್ಥಾನದ ವಿಶೇಷತೆ
PC: youtube
ಇಲ್ಲಿ ಭಕ್ತರು ಪ್ರದಕ್ಷಿಣೆ ಹಾಕುತ್ತಾ ಇರುವುದು ಕಾಣುತ್ತದೆ. ಹಾಗೂ ದೇವಸ್ಥಾನಾದ್ಯಂತ ತೆಂಗಿನಕಾಯಿ ಕಟ್ಟಿರುವುದು ನಿಮಗೆ ಕಾಣಿಸುತ್ತದೆ. ಹಾಗದರೆ ಈ ಪ್ರದಕ್ಷಿಣೆ ಹಾಗೂ ತೆಂಗಿನಕಾಯಿಯ ವಿಶೇಷತೆ ಏನು ಅನ್ನೋದನ್ನು ತಿಳಿಯೋಣ.

ಪೂರ್ಣಫಲ
PC: youtube
ತೆಂಗಿನಕಾಯಿಯನ್ನು ಪೂರ್ಣಫಲ ಎನ್ನುತ್ತಾರೆ. ಇದನ್ನು ಅರ್ಪಣೆ ಮಾಡುವುದರಿಂದ ಎಲ್ಲಾ ಶುಭವಾಗುತ್ತದಂತೆ. ಭಕ್ತರು ಅಲ್ಲೇ ಕೌಂಟರ್‌ನಲ್ಲಿರುವ ತೆಂಗಿನಕಾಯಿಯನ್ನು ತೆಗೆದುಕೊಂಡು ಕೌಂಟರ್‌ನಲ್ಲಿ ಕೊಡಬೇಕು. ಅಲ್ಲಿ ಕಾಯಿಯ ಮೇಲೆ ಸಂಖ್ಯೆ ಹಾಗೂ ದಿನಾಂಕವನ್ನು ನಮೂದಿಸುತ್ತಾರೆ. ಆ ಕಾಯಿಯನ್ನು ತೆಗೆದುಕೊಂಡು ದೇವರ ಮುಂದೆ ಕುಳಿತು ಸಂಕಲ್ಪ ಮಾಡುತ್ತಾರೆ.

ಪ್ರದಕ್ಷಿಣೆ
PC: youtube
ಸಂಕಲ್ಪದ ನಂತರ ಪ್ರದಕ್ಷಿಣೆಗೆ ಸಿದ್ಧರಾಗಬೇಕು. ಪ್ರದಕ್ಷಿಣೆಯ ನಂತರ ಅದನ್ನು ನಿಗದಿತ ಸ್ಥಳದಲ್ಲಿ ಕಟ್ಟಲಾಗುತ್ತದೆ. ೧೬ ದಿನದಲ್ಲಿ ೪ ದಿನ ದಿನಕ್ಕೆ ೪೧ ಪ್ರದಕ್ಷಿಣೆ ಹಾಕಿ ೧೬ ನೇ ದಿನ ಬಂದು ಕಟ್ಟಿದ ಕಾಯಿಯನ್ನು ತೆಗೆದು ಸಿಹಿ ತಯಾರಿಸಿ ತಿನ್ನಬೇಕು ಆಗ ಎಲ್ಲವೂ ಶುಭವಾಗುತ್ತದೆ ಎನ್ನುತ್ತಾರೆ.

ಯಾವೆಲ್ಲಾ ದೇವರಿದ್ದಾರೆ
PC: youtube
ದೇವಸ್ಥಾನವು ಅನಘಾದೇವಿ ಸಮಾತೆ ಶ್ರೀ ದತ್ತಾತ್ರೇಯ, ಶಿವ, ಗಣಪತಿ ಮತ್ತು ನವಗ್ರಹ ಗುಡಿ ಗಳನ್ನು ಹೊಂದಿದೆ. ಈ ದೇವಸ್ಥಾನವು ಅವಧೂತಾ ದಟ್ಟ ಪೀಠದಿಂದ ನಡೆಸಲ್ಪಡುತ್ತದೆ. ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಇಲ್ಲಿ ಹನುಮಂತನನ್ನು ಸ್ಥಾಪಿಸಿದ್ದಾರೆ.

ಅನಘಾ ಪೂಜೆ
PC: youtube
ಶುಕ್ರವಾರ ಅನಘಾ ಪೂಜೆ ಮಾಡಲಾಗುತ್ತದೆ. ಮುತ್ತೈದೆಯರು ಈ ಪೂಜೆಯಲ್ಲಿ ಭಾಗಿಯಾಗುತ್ತಾರೆ. ಇಲ್ಲಿ ಹನುಮನಿಗೆ ಭಕ್ತರು ವಿಶೇಷವಾದ ಎಲೆಯ ಹಾರವನ್ನು ಅರ್ಪಿಸುತ್ತಾರೆ.

ನಿತ್ಯ ಪೂಜೆಗಳು
PC: youtube
ಬೆಳಿಗ್ಗೆ ಮತ್ತು ಸಂಜೆಯ ಸಮಯಗಳಲ್ಲಿ ಶ್ರೀ ಕಾರ್ಯ ಸಿದ್ಧಿ ಹನುಮನಿಗೆ ಸಿಂಧುರಾ ಪೂಜೆ, ನಿತ್ಯ ಪೂಜೆ ಮತ್ತು ಆರತಿ ಅಬಿಷೇಕವನ್ನು ಪ್ರತಿದಿನ ಬೆಳಗ್ಗೆ ನಡೆಸಲಾಗುತ್ತದೆ ಮತ್ತು ಪ್ರಸಾದವನ್ನು ಭಕ್ತರಿಗೆ ನೀಡಲಾಗುತ್ತದೆ. ಸಂಜೆ ಮಂಗಳಾರತಿಯನ್ನು ನಡೆಸಲಾಗುತ್ತದೆ ಮತ್ತು ಪ್ರಸಾದವನ್ನು ನೀಡಲಾಗುತ್ತದೆ.

ಹನುಮಾನ್ ಜಯಂತಿ
PC: youtube
ಪ್ರತಿವರ್ಷ ಡಿಸೆಂಬರ್ ತಿಂಗಳಲ್ಲಿ ಶ್ರೀ ಹನುಮಾನ್‌ಜಯಂತಿ ಹಬ್ಬವನ್ನು 12 ದಿನಗಳ ಕಾಲ ಉತ್ಸವವಾಗಿ ಆಚರಿಸಲಾಗುತ್ತದೆ. ದೇವಾಲಯದ ಭವ್ಯತೆಗಾಗಿ ಸುಮಾರು 35000 ಮಂದಿ ಯಾತ್ರಾರ್ಥಿಗಳು ಈ ದೇವಾಲಯಕ್ಕೆ ಭೇಟಿ ನೀಡುತ್ತಾರೆ.


Click it and Unblock the Notifications

















