Search
  • Follow NativePlanet
Share
» »ಕಪ್ಪು ಬಣ್ಣ ಹೊತ್ತು ನಿಂತಿರುವ ಕಾಲಾರಾಮ!

ಕಪ್ಪು ಬಣ್ಣ ಹೊತ್ತು ನಿಂತಿರುವ ಕಾಲಾರಾಮ!

By Vijay

ಭಾರತದ ಎರಡು ಮಹಾಕಾವ್ಯಗಳಲ್ಲೊಂದಾಗಿರುವ ರಾಮಯಾಣದ ಮಹಾ ನಾಯಕ ಪ್ರಭು ಶ್ರೀರಾಮಚಂದ್ರ. ವಿಷ್ಣುವಿನ ದಶಾವತಾರಗಳಲ್ಲಿ ಒಂದಾಗಿರುವ ರಾಮನು ಮೂಲತಃ ಮನುಷ್ಯನಾಗಿ ಹುಟ್ಟಿದಾಗ ಧರ್ಮ ಮಾರ್ಗದಲ್ಲಿ ಯಾವ ರೀತಿ ಬದುಕನ್ನು ಬದುಕ ಬೇಕೆಂಬುದನ್ನು ಸಾರುವ ವ್ಯಕ್ತಿಯಾಗಿ ಸಮಾಜಕ್ಕೆ ಸಂದೇಶ ನೀಡಿದ್ದಾನೆಂಬುದು ಹಲವರ ಅಭಿಪ್ರಾಯವಾಗಿದೆ.

ನಿಮಗೆ ಈ ರಾಮನ ದೇವಾಲಯಗಳು ಗೊತ್ತೆ?

ಅದೇನೆ ಇರಲಿ, ರಾಮನನ್ನು ಪೂಜಿಸುವವರು ಕೋಟಿ ಕೋಟಿ ಜನ. ಅವನಿಗೆಂದೆ ಮುಡಿಪಾದ ದೇವಾಲಯಗಳನ್ನು ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಭಾರತದಾದ್ಯಂತ ಕಾಣಬಹುದು. ಹೀಗೆ ಕಂಡುಬರುವ ರಾಮನ ಬಹುತೇಕ ಎಲ್ಲ ದೇವಾಲಯಗಳಲ್ಲಿ ರಾಮನ ವಿಗ್ರಹವು ನೀಳ ವರ್ಣದಲ್ಲೊ, ಶ್ವೇತ ವರ್ಣದಲ್ಲೊ ಇರುವುದನ್ನು ಸಾಮಾನ್ಯವಾಗಿ ಕಾಣಬಹುದು.

ಕಪ್ಪು ಬಣ್ಣ ಹೊತ್ತು ನಿಂತಿರುವ ಕಾಲಾರಾಮ!

ಚಿತ್ರಕೃಪೆ: shrikalaramsansthannashik.org

ಆದರೆ ಪ್ರಸ್ತುತ ಲೇಖನದಲ್ಲಿ ತಿಳಿಸಲಾದ ರಾಮನ ದೇವಾಲಯವು ಒಂದು ವಿಶಿಷ್ಟ ಬಗೆಯ ರಾಮನ ದೇವಾಲಯವೆಂದೆ ಹೇಳಬಹುದು. ಏಕೆಂದರೆ ಇಲ್ಲಿ ಸೀತಾ ಹಾಗೂ ಲಕ್ಷ್ಮಣ ಸಮೇತನಾಗಿ ನೆಲೆಸಿರುವ ರಾಮನು ಕಪ್ಪು ಬಣ್ಣದ ವಿಗ್ರಹ ಹೊಂದಿದ್ದಾನೆ. ಇದು ಅಪರೂಪ ಎಂದೆ ಹೇಳಬಹುದು. ಹಾಗಾಗಿ ಇದನ್ನು ಕಾಲಾರಾಮನ ದೇವಾಲಯ ಎಂದೆ ಕರೆಯಲಾಗುತ್ತದೆ.

ಈ ದೇವಾಲಯದ ನಿರ್ಮಾಣವು 1792 ರ ಆಸುಪಾಸಿನಲ್ಲಾಗಿದ್ದು ಇದರ ನಿರ್ಮಾತೃ ಅಂದು ಈ ಪ್ರದೇಶದ ಸರ್ದಾರರಾಗಿದ್ದ ರಂಗರಾವ್ ಓಧೇಕರ್ ಎಂಬುವವರು. ಅವರಿಗೊಂದು ದಿನ ರಾತ್ರಿ ಮಲಗಿದ್ದಾಗ ಕನಸೊಂದು ಬಿದ್ದು ಅದರಲ್ಲಿ ರಾಮನ, ಲಕ್ಷ್ಮಣ ಹಾಗೂ ಸೀತೆಯರ ವಿಗ್ರಹಗಳು ಪರಿಚಿತವಿದ್ದ ನೀರಿನ ಕೋಳವೊಂದರಲ್ಲಿ ಬಿದ್ದಿದ್ದು ಕಂಡಿತು.

ಕಪ್ಪು ಬಣ್ಣ ಹೊತ್ತು ನಿಂತಿರುವ ಕಾಲಾರಾಮ!

ಚಿತ್ರಕೃಪೆ: World8115

ಮರುದಿನ ಅವರು ಆ ಕನಸನ್ನು ನೆನೆಸಿಕೊಂಡು ಸಂತಸ ಹೊಂದಿ ಅವರಿಗೆ ತಿಳಿದಿದ್ದ ಆ ಕೊಳಕ್ಕೆ ಹೋಗಿ ಹುಡುಕಲು ಕಪ್ಪು ವರ್ಣದ ವಿಗ್ರಹಗಳು ದೊರೆತವು. ಹೀಗೆ ದೊರೆತ ವಿಗ್ರಹಗಳನ್ನು ಅವರು ದೇವಾಲಯ ನಿರ್ಮಿಸಿ ಅದರಲ್ಲಿ ಪ್ರತಿಷ್ಠಾಪಿಸಿದರು. ಅದೆ ಕಾಲಾರಾಮ ದೇವಾಲಯ. ವಿಗ್ರಹಗಳು ದೊರೆತಿದ್ದ ಕೊಳವೆ ಇಂದು ರಾಮಕುಂಡ ಎಂಬ ಹೆಸರಿನಿಂದ ಎಲ್ಲರಿಗೂ ಪರಿಚಿತವಿದೆ.

ಇನ್ನೊಂದು ಕುತೂಹಲಕರ ಅಂಶವೆಂದರೆ ಈ ದೇವಾಲಯ ಹಾಗೂ ರಾಮಕುಂಡಗಳಿರುವುದು ರಾಮಾಯಣದಲ್ಲಿ ಉಲ್ಲೇಖಗೊಂಡ ಪ್ರಸಿದ್ಧ ಪಂಚವಟಿಯಲ್ಲಿ. ಹೌದು, ರಾಮನು ಸೀತೆ, ಲಕ್ಷ್ಮಣರೊಡಗೂಡಿ ತನ್ನ ವನವಾಸ ಆರಂಭಿಸಿದ್ದಾಗ ಒಂದು ದಿನ ದಂಡಕಾರಣ್ಯ ಪ್ರವೇಶಿಸಿ ಅಲ್ಲಿರುವ ಪಂಚವಟಿ ಎಂಬ ಸ್ಥಳದಲ್ಲಿ ಬಂದು ಕುಟಿರ ಮಾಡಿಕೊಂಡು ನೆಲೆಸುತ್ತಾನೆ.

ಕಪ್ಪು ಬಣ್ಣ ಹೊತ್ತು ನಿಂತಿರುವ ಕಾಲಾರಾಮ!

ಚಿತ್ರಕೃಪೆ: ganuullu

ಇದೆ ಸ್ಥಳದಲ್ಲಿದ್ದ ನೀರಿನ ಕೊಳವೊಂದು ಈ ಮೂವರಿಗೂ ದಿನ ನಿತ್ಯದ ಬಳಕೆಗೆ ಅವಶ್ಯಕವಾದ ನೀರನ್ನು ಒದಗಿಸುತ್ತಿರುತ್ತದೆ. ಹೀಗೆ ಸಾಕಷ್ಟು ಸಮಯವನ್ನು ರಾಮ, ಸೀತೆ ಹಾಗೂ ಲಕ್ಷ್ಮಣರು ಇಲ್ಲಿ ಕಳೆಯುತ್ತಾರೆ. ಅಲ್ಲದೆ ಇದೆ ಪ್ರದೇಶದಲ್ಲಿ ಶೂರ್ಪನಖಾ ಲಕ್ಷ್ಮಣನನ್ನು ಮೋಹಿಸಿ ಅವನನ್ನು ಪಡೆಯಲಾರದೆ ಅವನಿಂದ ಮೂಗು ಕತ್ತರಿಸಿಕೊಂಡು ಹೋಗುತ್ತಾಳೆ.

ವನವಾಸದಲ್ಲಿ ರಾಮನು ಭೇಟಿ ನೀಡಿದ ಸ್ಥಳಗಳು

ಹಾಗಾದರೆ ಈ ಸ್ಥಳ ಯಾವುದೆಂದು ನಿಮಗೆ ಗೊತ್ತಾಗಿರಬೇಕಲ್ಲವೆ? ಹೌದು, ಮಹಾರಾಷ್ಟ್ರದ ನಾಶಿಕ್ ಪಟ್ಟಣ. ಇಲ್ಲಿರುವ ಕುಂಭ ಮೇಳದ ಆಕರ್ಷಣೆಯಾದ ಆ ಕೊಳವೆ ರಾಮಕುಂಡ ಹಾಗೂ ಇದರ ಬಳಿಯಲ್ಲಿ ನೆಲೆಸಿರುವ ಆ ದೇವಾಲಯವೆ ಕಾಲಾರಾಮನ ದೇವಾಲಯ.

More News

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+