Search
  • Follow NativePlanet
Share
» »ನೀಮ್ ಕರೋಲಿ ಬಾಬಾರ ಕೈಂಚಿಧಾಮ!

ನೀಮ್ ಕರೋಲಿ ಬಾಬಾರ ಕೈಂಚಿಧಾಮ!

ನೀಮ್ ಕರೋಲಿ ಬಾಬಾರ ಆಶ್ರಮವಿರುವ ಕೈಂಚಿಧಾಮವು ಉತ್ತರಾಖಂಡ ರಾಜ್ಯದ ನೈನಿತಾಲ್ ತಾಣದಿಂದ ಹದಿನೇಳು ಕಿ.ಮೀ ಗಳಷ್ಟು ದೂರದಲ್ಲಿ ನೆಲೆಸಿರುವ ಅದ್ಭುತ ಆಶ್ರಮವಾಗಿದೆ

By Vijay

ಇವರಿಗೆ ಸಾಕಷ್ಟು ಜನ ಭಕ್ತರಿದ್ದಾರೆ. ಅದರಲ್ಲೂ ವಿಶೇಷವಾಗಿ ವಿದೇಶ ಭಕ್ತರ ಸಂಖ್ಯೆ ಅಪಾರ. ಇವರಿಗೆ ಹತ್ತಾರು ಹೆಸರುಗಳಿವೆ. ಪವಾಡ ಬಾಬಾ, ತಲಯ್ಯಾ ಬಾಬಾ, ಹಂಡಿವಾಲಾ ಬಾಬಾ, ಲಕ್ಷ್ಮಣ ದಾಸ ಹೀಗೆ ಹೆಸರುಗಳು ಸಾಗುತ್ತವೆ. ಇವರ ವ್ಯಕ್ತಿತ್ವ ಹಾಗು ಪ್ರಭಾವ ಹೇಗಿತ್ತೆಂದರೆ ಎಷ್ಟೊ ವಿದೇಶಿ ಭಕ್ತರು ಇವರ ಆಧ್ಯಾತ್ಮಿಕತೆಯಿಂದ ಪ್ರಭಾವ ಹೊಂದಿ ತಾವು ಹಿಂದುಗಳಾಗಿ ಪರವರ್ತಿತರಾಗಿದ್ದಾರೆ.

ಆ ಸಾಲಿನಲ್ಲಿ ಇಬ್ಬರು ಪ್ರಸಿದ್ಧ ವ್ಯಕ್ತಿಗಳೆಂದರೆ ರಾಮ್ ದಾಸ್ (ಡಾ. ರಿಚರ್ಡ್ ಅಲ್ಪರ್ಟ್) ಹಾಗೂ ಭಗವಾನ್ ದಾಸ್ (ಮೈಕೆಲ್ ರಿಗ್ಸ್). ಇವರು ನೀಮ್ ಕರೋಲಿ ಬಾಬಾರ ಅನುಯಾಯಿಗಳಾಗಿದ್ದರು ಹಾಗೂ ಹಿಂದು ಸಂಸ್ಕೃತಿ ಮತ್ತು ಆಧ್ಯಾತ್ಮಿಕತೆಯಿಂದ ಸಾಕಷ್ಟು ಪ್ರಭಾವಿತರಾದವರು.

ನೀಮ್ ಕರೋಲಿ ಬಾಬಾರ ಕೈಂಚಿಧಾಮ!

ನೀಮ್ ಕರೋಲಿ ಬಾಬಾ, ಚಿತ್ರಕೃಪೆ: Ken Wieland

ಇಂದಿಗೂ ನೀಮ್ ಕರೋಲಿ ಬಾಬಾಗೆ ಜಗತಿನಾದ್ಯಂತ ಲಕ್ಷಾಂತರ ಸಂಖ್ಯೆಯಲ್ಲಿ ಭಕ್ತರಿದ್ದಾರೆ. ಅವರಿಗೆ ಮುಡಿಪಾದ ಕೆಲವು ಸ್ಥಳಗಳು ಉತ್ತರ ಭಾರತದ ಹಲವೆಡೆ ಕಾಣಬಹುದು. ಅದರಲ್ಲೂ ವಿಶೇಷವಾಗಿ ಕೈಂಚಿಧಾಮವು ಸಾಕಷ್ಟು ಮಹತ್ವ ಪಡೆದ ಕ್ಷೇತ್ರವಾಗಿದ್ದು ಉತ್ತರಾಖಂಡದ ನೈನಿತಾಲ್ ನಿಂದ ಕೇವಲ 17 ಕಿ.ಮೀ ದೂರದಲ್ಲಿ ಅಲ್ಮೋರಾ ಮಾರ್ಗದಲ್ಲಿ ಸ್ಥಿತವಿದೆ.

ಇಲ್ಲಿ ಆಂಜನೇಯನ ದೇವಾಲಯವನ್ನು ಪ್ರಮುಖವಾಗಿ ಕಾಣಬಹುದು. ಮಿಕ್ಕಂತೆ ತಮ್ಮ ಕೊನೆಯ ಜೀವನವನ್ನು ಕಳೆದ ನೀಮ್ ಕರೋಲಿ ಬಾಬಾರಿಗೆ ಮುಡಿಪಾದ ಆಶ್ರಮವಿರುವುದನ್ನು ನೋಡಬಹುದು. 1900-1973 ರವರೆಗಿದ್ದ ನೀಮ್ ಕರೋಲಿ ಬಾಬಾ ಭಾರತದ ಹಲವಾರು ಪ್ರಸಿದ್ಧ ಗುರುಗಳಲ್ಲಿ ಒಬ್ಬರಾಗಿ ಹೆಸರುವಾಸಿಯಾದವರು.

ನೀಮ್ ಕರೋಲಿ ಬಾಬಾರ ಕೈಂಚಿಧಾಮ!

ಕೈಂಚಿ ಆಶ್ರಮ, ಚಿತ್ರಕೃಪೆ: Nickk Bisht

ಹುಟ್ಟುತ್ತ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿ ಮದುವೆಯಾಗಿ ಕೆಲ ಕಾಲ ಸಂಸಾರ ಮಾಡಿ ತದನಂತರ ಹಟಾತ್ತನೆ ಆಧ್ಯಾತ್ಮಿಕತೆಯಲ್ಲಿ ಹೊಕ್ಕಿಕೊಂಡರು. ಸನ್ಯಾಸಿಯ ಹಾಗೆ ಅಲೆಮಾರಿ ಜೀವನ ಬಯಸಿದರು. ಒಂದೊಮ್ಮೆ ಅಕಸ್ಮಾತ್ತಾಗಿ ಟಿಕೆಟ್ ಪಡೆಯದೆ ರೈಲೊಂದನ್ನು ಏರಿಯೆ ಬಿಟ್ಟರು. ಮಧ್ಯದಲ್ಲಿ ಟಿಟಿ ಬಂದಾಗ ಟಿಕೆಟ್ ಇಲ್ಲದೆ ಇರುವುದು ಗೊತ್ತಾಗಿ ಅವರನ್ನು ರೈಲನ್ನು ಅಲ್ಲಿಯೆ ನಿಲ್ಲಿಸಿ ಅವರನ್ನು ಹೊರದಬ್ಬಿದನು.

ಆದರೆ ಮುಂದೆ ರೈಲು ಆರಂಭಗೊಳ್ಳಲಾಗದೆ ಅಲ್ಲಿಯೆ ನಿಂತುಬಿಟ್ಟಿತು. ಕೆಲ ಸಮಯದ ನಂತರ ರೈಲಿನಲ್ಲಿದ್ದ ಕೆಲವರ ಅಭಿಪ್ರಾಯದಂತೆ ಬಾಬಾರನ್ನು ಮತ್ತೆ ರೈಲಿನೊಳಗೆ ಬರಲು ಪ್ರಾರ್ಥಿಸಲಾಯಿತು. ಅದಕ್ಕೆ ಬಾಬಾ ಒಂದು ಶರತ್ತು ವಿಧಿಸಿದರು. ಅದೆನೆಂದರೆ ಮುಂದೆ ಈ ಸ್ಥಳಕ್ಕೂ ಸಹ ರೈಲು ನಿಲುಗಡೆಯನ್ನು ನೀಡಬೇಕೆಂಬುದು. ಅದಕ್ಕೆ ಸಮ್ಮತಿಸಲಾಗಿ ಬಾಬಾ ಅದರೊಳಗೆ ಪ್ರವೇಶಿಸಿ, ಸರಿ ನಡಿ ಮುಂದೆ ಗಾಡಿ ಎಂದು ಹೇಳಿದರು.

ನೀಮ್ ಕರೋಲಿ ಬಾಬಾರ ಕೈಂಚಿಧಾಮ!

ಚಿತ್ರಕೃಪೆ: Rakshit Pandey

ತಕ್ಷಣ ಗಾಡಿ ಪ್ರಾರಂಭವಾಗಿ ಮುನ್ನಡೆಯಲು ಪ್ರಾರಂಭಿಸಿತು. ಈ ರೀತಿಯಾಗಿ ಅಂದಿನಿಂದ ಇವರೊಬ್ಬ ಪ್ರಸಿದ್ಧ ಆಧ್ಯಾತ್ಮಿಕ ಗುರುಗಳಾಗಿ ವಿವಿಧ ಹೆಸರುಗಳಿಂದ ಹೆಸರುವಾಸಿಯಾದರು. ಅಷ್ಟಕ್ಕೂ ಅವರು ನಿಲುಗಡೆ ನೀಡಬೇಕೆಂಬ ಶರತ್ತು ವಿಧಿಸಿದ್ದ ಆ ಸ್ಥಳದ ಹೆಸರು ನೀಬ್ ಕರೋರಿ ಎಂಬ ಹಳ್ಳಿ.

ಸತ್ಯಸಾಯಿ ನೆಲೆಸಿರುವ ಪ್ರಶಾಂತಿನಿಲಯಂ!

ಹಾಗಾಗಿ ಆ ಬಾಬಾರಿಗೆ ಆ ಹೆಸರೆ ಬಂದಿತು. ಕ್ರಮೇಣವಾಗಿ ಉಚ್ಛಾರಣಾ ದೋಷದಿಂದ ಅವರು ನೀಮ್ ಕರೋಲಿ ಬಾಬಾ ಎಂದು ಪ್ರಸಿದ್ಧರಾದರು. ತಮ್ಮ ಕೊನೆಯ ಸಮಯದಲ್ಲಿ ಸಾಕಷ್ಟು ಭಕ್ತ ಜನರನ್ನುಗಳಿಸಿದ್ದ ಅವರು ಅದೆ ಹಳ್ಳಿಗೆ ಬಂದು ನೆಲೆಸಿದರು. ಕೈಂಚಿ ಎಂಬಲ್ಲಿ ಈ ಆಶ್ರಮವಿದ್ದು ಇಂದಿಗೂ ಜೂನ್ ಸಂದರ್ಭದಲ್ಲಿ ಇಲ್ಲಿ ನಡೆಯುವ ಉತ್ಸವಕ್ಕೆಂದು ಪ್ರಪಂಚಾದ್ಯಂತ ಭಕ್ತರು ಇಲ್ಲಿಗೆ ಭೇಟಿ ನೀಡುತ್ತಾರೆ.

More News

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+