Search
  • Follow NativePlanet
Share
» »ಎಲ್ಲೋರದ ಕೈಲಾಸ ದೇವಾಲಯ ಒಂದು ಬೃಹತ್ ಶಿಲಾ ಅದ್ಬುತ!

ಎಲ್ಲೋರದ ಕೈಲಾಸ ದೇವಾಲಯ ಒಂದು ಬೃಹತ್ ಶಿಲಾ ಅದ್ಬುತ!

ಇಂದಿನ ಜಗತ್ತಿನಲ್ಲಿ ಗಗನಚುಂಬಿ ಮತ್ತು ಅದ್ಬುತ ಕಟ್ಟಡಗಳು ಸಾಮಾನ್ಯವಾಗಿ ಎಲ್ಲಾ ಕಡೆಯೂ ಕಾಣಸಿಗುತ್ತದೆ. ಅದರಲ್ಲಿ ಹೊಸ ವಿಷಯವೇನಿಲ್ಲ ಈಗಿನ ಕಾಲದ ಕಟ್ಟಡಗಳನ್ನು ಎಷ್ಟೇ ಅದ್ಬುತ ವಿನ್ಯಾಸಗಳಿಂಡ ಅಲಂಕರಿಸಿದರೂ ಪ್ರಾಚೀನ ಕಾಲದ ದೇವಾಲಯಗಳಿಗೆ ಸಾಟಿಯಾಗಲು ಸಾಧ್ಯವೇ ಇಲ್ಲ.

ಈ ದೇವಾಲಯಗಳು ಯಾವುದೇ ಆಧುನಿಕ ಮೆಶೀನುಗಳ ಸಹಾಯವಿಲ್ಲದೇ ನಿರ್ಮಿಸಿದಂತವುಗಳಾಗಿವೆ. ಅಂತಹ ಅದ್ಬುತ ವಾಸ್ತುಶಿಲ್ಪ ಮೇರುಕೃತಿಗಳಲ್ಲಿ ಏಕಶಿಲೆಯಲ್ಲಿ ಕೆತ್ತಲಾಗಿರುವ ಎಲ್ಲೋರಾದ ಕೈಲಾಸ ದೇವಾಲಯವೂ ಒಂದಾಗಿದೆ.

ellora-temple

ಕೈಲಾಸ ದೇವಾಲಯದ ಒಂದು ನೋಟ

ಎಲ್ಲೋರಾ ಗುಹೆಗಳಲ್ಲಿರುವ 34 ಶಿಲೆಯಿಂದ ನಿರ್ಮಿಸಲಾದ ದೇವಾಲಯ್ಗಳಲ್ಲಿ ಕೈಲಾಸ ದೇವಾಲಯವೂ ಒಂದಾಗಿದ್ದು ಸುಂದರವಾದ ದೇವಾಲಯವು ಔರಂಗಾಬಾದ್ ನಲ್ಲಿ ನೆಲೆಸಿದೆ . ಬೃಹತ್ ಶಿಲೆಯ ಈ ದೇವಾಲಯವು 8 ನೇ ಶತಮಾನದಲ್ಲಿ ಬಸಾಲ್ಟಿಕ್ ಬಂಡೆಗಳಿಂದ ಕೆತ್ತಲಾಗಿದೆ ಎಂದು ನಂಬಲಾಗಿದೆ. ರಚನೆಯು ದ್ರಾವಿಡ ಶೈಲಿಯ ವಾಸ್ತುಶಿಲ್ಪವನ್ನು ಅನುಸರಿಸುತ್ತದೆ.

ಕೈಲಾಸ ದೇವಾಲಯವು ರಾಷ್ಟ್ರಕೂಟ ವಂಶದ ರಾಜ ಒಂದನೇ ಕೃಷ್ಣನಿಂದ ನಿರ್ಮಿಸಲ್ಪಟ್ಟಿತು. ಹಿಂದೂ ಪುರಾಣಗಳ ಪ್ರಕಾರ ಕೈಲಾಸ ಪರ್ವತದಲ್ಲಿ ಶಿವನ ನಿವಾಸದ ಪ್ರತಿರೂಪವಾಗಿ ಈ ದೇವಾಲಯವನ್ನು ನಿರ್ಮಿಸಲಾಗಿದೆ ಎಂದು ನಂಬಲಾಗಿದೆ. ಈ ದೇವಾಲಯವನ್ನು ಪೂರ್ಣಗೊಳಿಸಲು ಸುಮಾರು ಇಪ್ಪತ್ತು ವರ್ಷಗಳು ಬೇಕಾದವೆಂದು ಹೇಳಲಾಗುತ್ತದೆ. ಈ ವಿನ್ಯಾಸವನ್ನು ರಚಿಸಲು ಅವರು 3 ರೀತಿಯ ಉಳಿಗಳನ್ನು ಬಳಸಿದ್ದಾರೆ ಎಂದು ಪುರಾತತ್ತ್ವಜ್ಞರು ನಂಬಿದ್ದಾರೆ. ಈ ಗುಹೆ 16 (ಕೈಲಾಸ ದೇವಸ್ಥಾನ) ಲಂಬವಾದ ಉತ್ಖನನಕ್ಕೆ ಒಳಗಾಗಿದೆ ಮತ್ತು ಅದು ಅದರ ಒಟ್ಟಾರೆ ಚೌಕಟ್ಟನ್ನು ವಿವರಿಸುತ್ತದೆ.

shivalinga-ellora

ಎಲ್ಲೋರಾದ ಶಿವಲಿಂಗ

ಮುಂಭಾಗ: ಪ್ರವೇಶದ್ವಾರವು ದೊಡ್ಡ ಸ್ತಂಭಗಳ ಜೊತೆಗೆ ವಿಭಿನ್ನವಾಗಿ ಕೆತ್ತಿದ ರಚನೆಗಳಿಂದ ತುಂಬಿದೆ. ಒಳಾಂಗಣ ಅಂಗಳವನ್ನು 'ಯು' ಆಕಾರದಲ್ಲಿ ನಿರ್ಮಿಸಲಾಗಿದ್ದು ಅದು ವಿಶಾಲವಾಗಿ ಕಾಣುತ್ತದೆ. ಸ್ತಂಭಗಳ ಮೇಲಿನ ಕೆತ್ತನೆಗಳು ಪೌರಾಣಿಕ ಕಥೆಗಳನ್ನು ಚಿತ್ರಿಸುತ್ತವೆ ಎಂದು ನೀವು ಅರ್ಥಮಾಡಿಕೊಳ್ಳಬಹುದು.

ಗರ್ಭಗುಡಿಯ ಮುಂಭಾಗದ ಅಂಗಳದಲ್ಲಿ ದೇವಿಯರ ದೊಡ್ಡ ಶಿಲ್ಪಗಳು ಮತ್ತು ಶಿವಲಿಂಗದ ಮುಂದೆ ನಂದಿ (ಗೂಳಿ) ವಿಗ್ರಹವನ್ನು ಕಾಣಬಹುದು. ಈ ದೇವಾಲಯದ ಪ್ರಮುಖ ಅಂಶವೆಂದರೆ ಆನೆಯ ಶಿಲ್ಪ; ಒಂದು ಕಣ್ಣಿಗೆ ಕಾಣುವ ಭ್ರಮೆಯ ಪ್ರಕಾರ ಇಡೀ ದೇವಾಲಯವು ಈ ಆನೆಯ ಮೇಲೆ ನಿಂತಿದೆ ಎಂದು ನೋಡುವವರಿಗೆ ಕಾಣುತ್ತದೆ.

ellorashivatemple

ದೇವಾಯದ ಮತ್ತೊಂದು ಭಾಗದ ನೋಟ

ಒಳಾಂಗಣದ ವಿನ್ಯಾಸ: ದೇವಾಲಯದ ಒಳಭಾಗದಲ್ಲಿ ಸಣ್ಣ ಕಂಬಗಳು, ವಿಭಿನ್ನ ಕೆತ್ತನೆಗಳು ಮತ್ತು ಒಳಗೆ ಕಿಟಕಿಗಳನ್ನು ಕಾಣಬಹುದಾಗಿದೆ. ದೇವಾಲಯದ ಹೃದಯಭಾಗದಲ್ಲಿ ಒಳಗಿನ ಗರ್ಭಗುಡಿಯಿದ್ದು ಇಲ್ಲಿ ಶಿವ ಲಿಂಗವನ್ನು ಇರಿಸಲಾಗಿದೆ. (ಶಿವನ ಲಿಂಗ ಸ್ವರೂಪ)

ಕಟ್ಟಡದಾದ್ಯಂತ ಪುರುಷರು ಮತ್ತು ಮಹಿಳೆಯರ ವಿವಿಧ ಕಾಮಪ್ರಚೋದಕ ಕೆತ್ತನೆಗಳನ್ನೂ ಸಹ ನೀವು ಗುರುತಿಸಬಹುದು. ಮಹಾದೇವನ ಪೌರಾಣಿಕ ಕಥೆಗಳನ್ನು ಚಿತ್ರಿಸುವ ಕೆತ್ತನೆಗಳೂ ಇಲ್ಲಿವೆ.

ಎಲ್ಲೋರಾ ಗುಹೆಗಳಲ್ಲಿ ಕೈಲಾಸ ದೇವಾಲಯವು ಭೇಟಿ ನೀಡಲೇಬೇಕಾದ ಸ್ಥಳಗಳಲ್ಲಿ ಒಂದಾಗಿದೆ. ನೀವು ಅಲ್ಲಿಗೆ ಪ್ರವಾಸವನ್ನು ಯೋಜಿಸುತ್ತಿದ್ದರೆ, ಔರಂಗಾಬಾದ್‌ನ ಹಲವಾರು ಇತರ ಪ್ರವಾಸಿ ಸ್ಥಳಗಳ ಜೊತೆಗೆ ಈ ಬಂಡೆಯಿಂದ ಕತ್ತರಿಸಿದ ದೇವಾಲಯಗಳಿಗೆ ಭೇಟಿ ನೀಡಲು ಮರೆಯದಿರಿ.

More News

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+