Search
  • Follow NativePlanet
Share
» »ಬದ್ರಿ-ಕೇದಾರ್ ಪ್ರವಾಸದ ಪ್ಯಾಕೇಜ್ ಅಕ್ಟೋಬರ್‌ನಲ್ಲಿ ಪ್ರಾರಂಭ; ಪ್ರವಾಸಿಗರಿಗೆ ಏನೆಲ್ಲಾ ಸೌಲಭ್ಯಗಳು ಸಿಗಲಿವೆ?

ಬದ್ರಿ-ಕೇದಾರ್ ಪ್ರವಾಸದ ಪ್ಯಾಕೇಜ್ ಅಕ್ಟೋಬರ್‌ನಲ್ಲಿ ಪ್ರಾರಂಭ; ಪ್ರವಾಸಿಗರಿಗೆ ಏನೆಲ್ಲಾ ಸೌಲಭ್ಯಗಳು ಸಿಗಲಿವೆ?

IRCTC Badri-Kedar Tour Package: ಐಆರ್‌ಸಿಟಿಸಿ ಎಂದಿನಂತೆ ಬದ್ರಿ-ಕೇದಾರ್ ಸ್ವಾಮಿ ಯಾತ್ರಾ ಪ್ರವಾಸ ಪ್ಯಾಕೇಜ್ ಅನ್ನು ಪರಿಚಯಿಸಿದೆ. ಪ್ರವಾಸದ ಪ್ಯಾಕೇಜ್‌ನಲ್ಲಿ, ನೀವು ಮನಸ್ಕಂಡ್ ಎಕ್ಸ್‌ಪ್ರೆಸ್ ಭಾರತ್ ಗೌರವ್ ರೈಲಿನಲ್ಲಿ ಪ್ರಯಾಣಿಸಬಹುದು. ಟೂರ್ ಪ್ಯಾಕೇಜ್‌ನ ಆರಂಭಿಕ ಬೆಲೆ 56325 ರೂ. ಇದನ್ನು ದೇಖೋ ಅಪ್ನಾ ದೇಶ್ ಅಡಿಯಲ್ಲಿ ಪರಿಚಯಿಸಲಾಗಿದೆ.

ಐಆರ್‌ಸಿಟಿಸಿಯ ಈ ಪ್ರವಾಸ ಪ್ಯಾಕೇಜ್ ಮುಂಬೈನಿಂದ ಪ್ರಾರಂಭವಾಗುತ್ತದೆ. ಪ್ರವಾಸವು 11 ದಿನಗಳ ಕಾಲ ಇರುತ್ತದೆ.

ಏನೆಲ್ಲಾ ನೋಡಬಹುದು?

ಋಷಿಕೇಶ: ಋಷಿಕೇಶವನ್ನು ಪ್ರಪಂಚದ 'ಯೋಗ ರಾಜಧಾನಿ' ಎಂದು ಕರೆಯಲಾಗುತ್ತದೆ. ಅಲ್ಲಿ ನೀವು ಪ್ರಕೃತಿಯ ಮಡಿಲಲ್ಲಿ ನೆಲೆಸಿರುವ ಅನೇಕ ಆಶ್ರಮಗಳು ಮತ್ತು ಯೋಗ ಕೇಂದ್ರಗಳನ್ನು ಕಾಣಬಹುದು. ರಾಜಧಾನಿ ದೆಹಲಿಯಿಂದ ನಾಲ್ಕೂವರೆ ಗಂಟೆಗಳ ದೂರದಲ್ಲಿರುವ ಋಷಿಕೇಶವು ಪ್ರಕೃತಿ ಪ್ರಿಯರಿಗೆ ತುಂಬಾ ಇಷ್ಟ. ಹಿಮಾಲಯದ ಮಡಿಲಲ್ಲಿರುವ ಋಷಿಕೇಶವು ಉತ್ತರಾಖಂಡದ ಧಾರ್ಮಿಕ ನಗರವಾಗಿದೆ.

ರುದ್ರಪ್ರಯಾಗ: ರುದ್ರಪ್ರಯಾಗವು ಪಂಚ ಪ್ರಯಾಗಗಳಲ್ಲಿ ಒಂದೆಂದು ಪರಿಗಣಿಸಲ್ಪಟ್ಟ ಪವಿತ್ರ ಸ್ಥಳವಾಗಿದೆ ಮತ್ತು ಪ್ರಮುಖ ಧಾರ್ಮಿಕ ಸ್ಥಳವಾಗಿದೆ. ಈ ಸುಂದರ ನಗರವು ಸ್ವರ್ಗಕ್ಕಿಂತ ಕಡಿಮೆಯಿಲ್ಲ. ನೈಸರ್ಗಿಕ ಸೌಂದರ್ಯದ ಹೊರತಾಗಿ, ರುದ್ರಪ್ರಯಾಗವು ಅನೇಕ ಪುರಾತನ ದೇವಾಲಯಗಳಿಗೆ ನೆಲೆಯಾಗಿದೆ. ಹಾಗೂ ಕೇದಾರನಾಥ ಮತ್ತು ಬದರಿನಾಥದಂತಹ ಪ್ರಮುಖ ಯಾತ್ರಾಸ್ಥಳಗಳಿಗೆ ಗೇಟ್‌ವೇ ಆಗಿ ಕಾರ್ಯನಿರ್ವಹಿಸುತ್ತದೆ. ಇದರಿಂದಾಗಿ ಪ್ರತಿ ವರ್ಷ ಹೆಚ್ಚಿನ ಸಂಖ್ಯೆಯ ಪ್ರವಾಸಿಗರು ರುದ್ರಪ್ರಯಾಗಕ್ಕೆ ಪ್ರಯಾಣಿಸುತ್ತಾರೆ.

kedaranth

ಕೇದಾರನಾಥ: ಉತ್ತರಾಖಂಡದ ಪ್ರಸಿದ್ಧ ಚಾರ್ ಧಾಮ್‌ಗಳಲ್ಲಿ ಒಂದಾದ ಬದರಿನಾಥ್, ಕೇದಾರನಾಥ, ಗಂಗೋತ್ರಿ ಮತ್ತು ಯಮುನೋತ್ರಿಗೆ ಭೇಟಿ ನೀಡಲು ಜನರು ದೂರದೂರುಗಳಿಂದ ಪ್ರತಿ ವರ್ಷ ಬರುತ್ತಾರೆ. ಈ ನಾಲ್ಕು ಪವಿತ್ರ ಸ್ಥಳಗಳಿಗೆ ಭೇಟಿ ನೀಡಲು ಈ ಋತು ಮತ್ತು ಸಂದರ್ಭ ಸೂಕ್ತವಾಗಿದೆ. ಬಾಬಾ ಬರ್ಫಾನಿಯಂತೆ ಕೇದಾರನಾಥ ಕೂಡ ಲಕ್ಷಾಂತರ ಭಕ್ತರ ನಂಬಿಕೆಯೊಂದಿಗೆ ಸಂಬಂಧ ಹೊಂದಿದೆ. ಅನೇಕ ತೊಂದರೆಗಳನ್ನು ಎದುರಿಸುತ್ತಿರುವ ಭಕ್ತರು ಕೇದಾರನಾಥಕ್ಕೆ ದರ್ಶನಕ್ಕಾಗಿ ತಲುಪುತ್ತಾರೆ. ಉತ್ತರಾಖಂಡದ ಎತ್ತರದ ಶಿಖರಗಳ ನಡುವೆ ನೆಲೆಗೊಂಡಿರುವ ಕೇದಾರನಾಥ ಧಾಮ, ಜನರು ಖಂಡಿತವಾಗಿ ಒಮ್ಮೆ ಭೇಟಿ ನೀಡಲು ಬಯಸುವ ಸ್ಥಳವಾಗಿದೆ.

ಜೋಶಿಮಠ: ಉತ್ತರಾಖಂಡದ ಜೋಶಿಮಠದ ಇತಿಹಾಸವು 8 ನೇ ಶತಮಾನದಷ್ಟು ಹಿಂದಿನದು. ಇದನ್ನು ಜ್ಯೋತಿರ್ಮಠ ಅಥವಾ ಶ್ರೀ ಶಂಕರಾಚಾರ್ಯ ಮಠ ಎಂದೂ ಕರೆಯುತ್ತಾರೆ. ಜೋಶಿಮಠದ ಸುತ್ತಮುತ್ತ ಅನೇಕ ಪ್ರಸಿದ್ಧ ಮತ್ತು ಆಕರ್ಷಕ ಪ್ರವಾಸಿ ತಾಣಗಳಿವೆ. ಚಳಿಗಾಲದಲ್ಲಿ ಇಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚಾಗುತ್ತದೆ. ಜೋಶಿಮಠ ಕೂಡ ಒಂದು ಗಿರಿಧಾಮವಾಗಿದೆ.

Badrinath

ಬದರಿನಾಥ: ಬದರಿನಾಥ ದೇವರ ದರ್ಶನ ಪಡೆಯಲು ಜನರು ದೂರದೂರುಗಳಿಂದ ಬರುತ್ತಾರೆ. ದೇವಸ್ಥಾನದ ಹಿಂದೆ ಹಿಮದಿಂದ ಅವೃತವಾದ ಬೆಟ್ಟಗಳನ್ನು ನೋಡಿದಾಗ ಮನಸ್ಸು ಸಂತೋಷವಾಗುತ್ತದೆ. ನೀವು ಬದರಿನಾಥ್ ಧಾಮ ಯಾತ್ರೆಗೆ ಹೋಗುತ್ತಿದ್ದರೆ, ಸುತ್ತಮುತ್ತಲಿನ ಸ್ಥಳಗಳನ್ನು ಸಹ ಅನ್ವೇಷಿಸಿ. ಬದರಿನಾಥ ದೇವಾಲಯದ ಬಳಿ ಅನೇಕ ಸುಂದರ ಸ್ಥಳಗಳಿವೆ. ಇದು ನಿಮ್ಮ ಪ್ರವಾಸವನ್ನು ಸ್ಮರಣೀಯವಾಗಿಸುತ್ತದೆ.

ಬಸ್‌, ಟ್ಯಾಕ್ಸಿ ಸೌಲಭ್ಯ

ಪ್ರವಾಸಿ ಪ್ಯಾಕೇಜ್ ಪ್ರಯಾಣಿಕರಿಗೆ ಉಚಿತ ವಸತಿ ಮತ್ತು ಆಹಾರವನ್ನು ಒದಗಿಸುತ್ತದೆ. ಅಕ್ಟೋಬರ್ 3 ರಿಂದ ಟೂರ್ ಪ್ಯಾಕೇಜ್ ಆರಂಭವಾಗಲಿದೆ. ಐಆರ್‌ಸಿಟಿಸಿ ದೇಶ ಮತ್ತು ವಿದೇಶಗಳಲ್ಲಿನ ಪ್ರವಾಸಿಗರಿಗೆ ವಿವಿಧ ಪ್ರವಾಸ ಪ್ಯಾಕೇಜ್‌ಗಳನ್ನು ನೀಡುತ್ತಿದೆ ಎಂಬುದು ಗಮನಾರ್ಹ. ಈ ಪ್ರವಾಸ ಪ್ಯಾಕೇಜ್‌ಗಳ ಮೂಲಕ, ಪ್ರಯಾಣಿಕರು ಅಗ್ಗವಾಗಿ ಮತ್ತು ಅನುಕೂಲಕರವಾಗಿ ಪ್ರಯಾಣಿಸಬಹುದು. ಇದರ ಜೊತೆಗೆ ಪ್ರವಾಸೋದ್ಯಮಕ್ಕೂ ಉತ್ತೇಜನ ಸಿಗುತ್ತದೆ. ಸ್ಥಳೀಯವಾಗಿ ಪ್ರಯಾಣಿಸಲು ಬಸ್ ಅಥವಾ ಟ್ಯಾಕ್ಸಿ ಸೌಲಭ್ಯವನ್ನು ನೀಡಲಾಗುತ್ತದೆ. ಪ್ರವಾಸಿಗರು ಅಧಿಕೃತ ವೆಬ್‌ಸೈಟ್ ಮೂಲಕ ಐಆರ್‌ಸಿಟಿಸಿಯ ಬದ್ರಿ-ಕೇದಾರ್ ಕಾರ್ತಿಕ್ ಸ್ವಾಮಿ ಯಾತ್ರಾ ಪ್ರವಾಸದ ಪ್ಯಾಕೇಜ್ ಅನ್ನು ಬುಕ್ ಮಾಡಬಹುದು. ಈ ಪ್ರವಾಸದ ಪ್ಯಾಕೇಜ್‌ನಲ್ಲಿ ಒಟ್ಟು ಸೀಟುಗಳು 300.

ಪ್ರವಾಸ ಪ್ಯಾಕೇಜ್‌ ದರ

ಈ ಮೊದಲೇ ಹೇಳಿದ ಹಾಗೆ ಇದಕ್ಕಾಗಿ ಮುಂಬೈನಿಂದ ಋಷಿಕೇಶಕ್ಕೆ ವಿಶೇಷ ರೈಲು ಸಂಚರಿಸಲಿದೆ. ಇಲ್ಲಿಂದ ಪ್ರವಾಸಿಗರನ್ನು ಬಸ್ ಮೂಲಕ ಹೇಳಿದ ಸ್ಥಳಗಳಿಗೆ ಕರೆದೊಯ್ಯಲಾಗುತ್ತದೆ. ಕೇದಾರನಾಥ ಧಾಮಕ್ಕೆ ಭೇಟಿ ನೀಡುವ ಪ್ಯಾಕೇಜ್‌ನಲ್ಲಿ ಕೇದಾರನಾಥ ಹೆಲಿ ಸೇವೆಯ ದರವನ್ನು ಸಹ ಸೇರಿಸಲಾಗಿದೆ. ಪ್ರತಿ ಪ್ರಯಾಣಿಕರಿಗೆ ಸ್ಟ್ಯಾಂಡರ್ಡ್ ಕ್ಲಾಸ್‌ಗೆ 56,325 ಮತ್ತು ಡೀಲಕ್ಸ್ ವರ್ಗಕ್ಕೆ 59,730 ರೂ. ಆಸನಗಳು AC III ಶ್ರೇಣಿಯಲ್ಲಿರುತ್ತವೆ ಮತ್ತು 06 ರಾತ್ರಿ ಸಹ ಋಷಿಕೇಶ, ರುದ್ರಪ್ರಯಾಗ ಮತ್ತು ಜೋಶಿಮಠದಲ್ಲಿ ವಸತಿ ವ್ಯವಸ್ಥೆ ಒದಗಿಸಲಾಗುತ್ತದೆ.

More News

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+