Search
  • Follow NativePlanet
Share
» »ಬೇಕೆಂದಾಗ ಹೋಗಲಾಗಲ್ಲ, ಸಮುದ್ರದೊಳಗಿದೆ ಈ ಶಿವಾಲಯ!

ಬೇಕೆಂದಾಗ ಹೋಗಲಾಗಲ್ಲ, ಸಮುದ್ರದೊಳಗಿದೆ ಈ ಶಿವಾಲಯ!

By Vijay

ನೀವು ಕೇಳುತ್ತಿರುವುದು ನಿಜ. ಸಾಮಾನ್ಯವಾಗಿ ದೇವಾಲಯಗಳಿಗೆ ಅವುಗಳ ತೆರೆದಿರುವ ಸಮಯದಲ್ಲಿ ನಮಗನುಕೂಲವಾದ ಯಾವ ದಿನದಲ್ಲಾದರೂ ಭೇಟಿ ನೀಡುತ್ತೇವೆ. ಆದರೆ ಈ ಶಿವ ದೇವಾಲಯದ ವಿಷಯ ಹಾಗಲ್ಲ. ಪ್ರಕೃತಿಯು ಅನುಕೂಲಕರ ಅವಕಾಶ ಮಾಡಿಕೊಟ್ಟ ಸಂದರ್ಭದಲ್ಲಿ ಮಾತ್ರವೆ ತೆರಳಬಹುದು. ಏಕೆಂದರೆ ಇದು ಸಮುದ್ರದೊಳಗಿರುವ ಶಿವ ದೇವಾಲಯ.

ವಿಶ್ವದಲ್ಲೆ ಅತಿ ಎತ್ತರದಲ್ಲಿರುವ ವಿಶ್ವನಾಥನಿವನು!

ಏಕೆಂದರೆ ಈ ಶಿವನ ದೇವಾಲಯವು ಸಮುದ್ರ ತೀರದಿಂದಲೆ ಸಮುದ್ರದೊಳಗೆ ಸುಮಾರು 1.5 ಕಿ.ಮೀ ಗಳಷ್ಟು ದೂರದಲ್ಲಿ ನೆಲೆಸಿದೆ. ಸಮುದ್ರದಲ್ಲಿ ಅಲೆಗಳ ಆರ್ಭಟ ಕಡಿಮೆಯಿದ್ದಾಗ ಮಾತ್ರವೆ ನೋಡುಗರಿಗೆ ಈ ದೇವಾಲಯ ದರ್ಶನ ಕೊಡುತ್ತದೆ. ಇದು ಇಲ್ಲಿ ಭೇಟಿ ನೀಡುವ ಭಕ್ತಾದಿಗಳ ಸಕಲ ಪಾಪ ಕರ್ಮಗಳನ್ನು ಸಮುದ್ರದ ನೀರಿನಿಂದ ತೊಳೆಯುವುದರ ಸಂಕೇತ ಎಂದು ಭಾವಿಸಲಾಗಿದೆ.

ಬೇಕೆಂದಾಗ ಹೋಗಲಾಗಲ್ಲ, ಸಮುದ್ರದೊಳಗಿದೆ ಈ ಶಿವಾಲಯ!

ಸಾಂದರ್ಭಿಕ ಚಿತ್ರ, ಚಿತ್ರಕೃಪೆ: Master Octa

ಹೀಗಾಗಿ ಇಲ್ಲಿ ನೆಲೆಸಿರುವ ಶಿವನನ್ನು ನಿಷ್ಕಳಂಕ ಮಹಾದೇವನನ್ನಾಗಿ ಆರಾಧಿಸುತ್ತಾರೆ. ಅಂದರೆ ಯಾವುದೆ ಕಳಂಕ ಹೊಂದಿರದ ಸಕಲರ ಕಳಂಕಗಳನ್ನು ನಾಶ ಮಾಡುವ ಶಿವನನ್ನಾಗಿ ಪೂಜಿಸುತ್ತಾರೆ. ಅಲ್ಲದೆ ಸಮುದ್ರದಲ್ಲಿರುವ ಶಿವನ ಈ ದೇವಾಲಯದಲ್ಲಿ ನಂದಿ ವಿಗ್ರಹದ ಜೊತೆ ಐದು ಶಿವಲಿಂಗಳಿರುವುದು ವಿಶೇಷ.

ಸ್ಥಳ ಪುರಾಣದಂತೆ, ಹಿಂದೆ ದ್ವಾಪರ ಯುಗದಲ್ಲಿ ಪಾಂಡವರು ತಮ್ಮ ಸಹೋದರರೂ ನಂತರ ದಾಯಾದಿಗಳೂ ಆದ ಕೌರವರನ್ನು ಕುರುಕ್ಷೇತ್ರ ಯುದ್ಧದಲ್ಲಿ ಹತ್ಯೆಗೈದ ನಂತರ ತಮಗಂಟಿದ ಹತ್ಯಾ ಪಾಪಗಳನ್ನು ಕಳೆದುಕೊಳ್ಳಲು ಸಾಕಷ್ಟು ದೇವಾಲಯಗಳಿಗೆ ಭೇಟಿ ನೀಡಿದ್ದರು. ಅದರಲ್ಲಿ ಈ ಶಿವನ ದೇವಾಲಯವೂ ಒಂದು ಎಂದು ಹೇಳಲಾಗುತ್ತದೆ.

ಬೇಕೆಂದಾಗ ಹೋಗಲಾಗಲ್ಲ, ಸಮುದ್ರದೊಳಗಿದೆ ಈ ಶಿವಾಲಯ!

ಸಾಂದರ್ಭಿಕ ಚಿತ್ರ, ಚಿತ್ರಕೃಪೆ: Roberto Faccenda

ಪಾಂಡವರು ಐದು ಜನರಿದ್ದ ಕಾರಣ ಪ್ರತಿಯೊಬ್ಬರು ಒಂದೊಂದು ಶಿವಲಿಂಗವನ್ನು ಆರಾಧಿಸಿರುವುದರ ಗುರುತಾಗಿ ಇಲ್ಲಿ ಐದು ಶಿವಲಿಂಗಗಳಿವೆ ಎಂಬ ಪ್ರತೀತಿಯಿದೆ. ಹೀಗಾಗಿ ಇಲ್ಲಿಗೆ ಭೇಟಿ ನೀಡುವ ಪ್ರತಿಯೊಬ್ಬ ಭಕ್ತನು ತನ್ನ ಪಾಪ ಕರ್ಮಾದಿಗಳನ್ನು ಈ ಶಿವನು ತೊಳೆದು ತಾನು ಶಿವಕೃಪೆಗೆ ಪಾತ್ರನಾಗುತ್ತೇನೆಂಬ ವಿಶ್ವಾಸದಿಂದ ಇಲ್ಲಿಗೆ ಬರುತ್ತಾನೆ/ಬರುತ್ತಾಳೆ.

ಕಾಲದೊಂದಿಗೆ ಗುದ್ದಾಡುತ್ತ ಸೆಟೆದು ನಿಂತಿರುವ ಸೋಮನಾಥ

ಇಷ್ಟಕ್ಕೂ ಈ ದೇವಾಲಯವಿರುವುದು ಗುಜರಾತ್ ರಾಜ್ಯದಲ್ಲಿ. ಗುಜರಾತ್ ರಾಜ್ಯದ ಭಾವನಗರ ಜಿಲ್ಲೆಯ ಕೋಲಿಯಾಕ್ ಎಂಬ ಪ್ರದೇಶದಲ್ಲಿ. ಭಾವನಗರ ರೈಲು ನಿಲ್ದಾಣದಿಂದ ಈ ದೇವಾಲಯ ತಾಣ ಸುಮಾರು 30 ಕಿ.ಮೀ ಗಳಷ್ಟು ದೂರವಿದ್ದು ಅಲ್ಲಿಗೆ ತೆರಳಲು ಸ್ಥಳೀಯವಾಗಿ ವಾಹನಗಳು ದೊರೆಯುತ್ತವೆ. ಅಂದರೆ ನೀವು ಭಾವನಗರ ರೈಲು ನಿಲ್ದಾಣದಿಂದ ಇಲ್ಲಿಗೆ ಸುಲಭವಾಗಿ ತಲುಪ್ಬಹುದು.

ಬೇಕೆಂದಾಗ ಹೋಗಲಾಗಲ್ಲ, ಸಮುದ್ರದೊಳಗಿದೆ ಈ ಶಿವಾಲಯ!

ಸಾಂದರ್ಭಿಕ ಚಿತ್ರ, ಚಿತ್ರಕೃಪೆ: shankar s.

ಇನ್ನೊಂದು ಅಂಶವೆಂದರೆ ಅಮವಾಸ್ಯೆಯ ನಂತರದ ದಿನದಲ್ಲಿ ಸಮುದ್ರದಲೆಗಳ ಆರ್ಭತ ಗರಿಷ್ಠ ಮಟ್ಟಕ್ಕೆ ತಗ್ಗಿರುವುದರಿಂದ ಈ ಸಮಯದಲ್ಲಿ ನಡೆದುಕೊಂಡು ದೇವಾಲಯಕ್ಕೆ ತೆರಳಿ ದರ್ಶನ ಪಡೆದು ಬರಬಹುದು. ಅಲ್ಲದೆ ಸಾಕಷ್ಟು ಜನರು ತಮ್ಮ ತೀರಿ ಹೋದ ನೆಂಟರ ಬೂಧಿಯನ್ನು ಇಲ್ಲಿಗೆ ಬಂದು ಅರ್ಪಣ ಮಾಡುತ್ತಾರೆ.

More News

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+