Search
  • Follow NativePlanet
Share
» »ಭಾರತದಲ್ಲಿ ಆತ್ಮಗಳು ಇರುವ ಭಯಂಕರವಾದ ಪ್ರದೇಶಗಳು

ಭಾರತದಲ್ಲಿ ಆತ್ಮಗಳು ಇರುವ ಭಯಂಕರವಾದ ಪ್ರದೇಶಗಳು

ಸಿನಿಮಾದಲ್ಲಿ ದೆವ್ವಗಳ ದೃಶ್ಯ ಬಂದರೆ ಸಾಕು ಭಯದಿಂದ ಕಣ್ಣು ಮುಚ್ಚಿಕೊಳ್ಳುತ್ತೇವೆ. ಹಾಗೆ ನೋಡಿದರೆ ನಮ್ಮ ಭಾರತ ದೇಶದಲ್ಲಿ ನಿಜವಾಗಿಯೂ ದೆವ್ವಗಳು ಇರುವ ಅನೇಕ ಸ್ಥಳಗಳು ಇವೆ. ಒಂದು ವೇಳೆ ಇದ್ದರೆ ಕೇವಲ ಪಾಳು ಬಿದ್ದ ಬಂಗಲೆಗಳಲ್ಲಿ ಇರುತ್ತವೆಯೇ?

By Sowmyabhai

ಸಿನಿಮಾದಲ್ಲಿ ದೆವ್ವಗಳ ದೃಶ್ಯ ಬಂದರೆ ಸಾಕು ಭಯದಿಂದ ಕಣ್ಣು ಮುಚ್ಚಿಕೊಳ್ಳುತ್ತೇವೆ. ಹಾಗೆ ನೋಡಿದರೆ ನಮ್ಮ ಭಾರತ ದೇಶದಲ್ಲಿ ನಿಜವಾಗಿಯೂ ದೆವ್ವಗಳು ಇರುವ ಅನೇಕ ಸ್ಥಳಗಳು ಇವೆ. ಒಂದು ವೇಳೆ ಇದ್ದರೆ ಕೇವಲ ಪಾಳು ಬಿದ್ದ ಬಂಗಲೆಗಳಲ್ಲಿ ಇರುತ್ತವೆಯೇ? ಅಥವಾ ಖಾಲಿ ಜಾಗದಲ್ಲಿ ತಿರುಗುತ್ತಾ ಇರುತ್ತದೆಯೋ? ಎಂಬ ಹಲವಾರು ಪ್ರೆಶ್ನೆಗಳು ನಿಮ್ಮ ತಲೆಯಲ್ಲಿ ಓಡುತ್ತಿರಬಹುದು.

ಇಂದಿಗೂ ನಮ್ಮ ಭಾರತ ದೇಶದಲ್ಲಿ ಆ ಸ್ಥಳಕ್ಕೆ ಕಾಲು ಇಡಲು ಕೂಡ ಭಯ ಪಡುವವರು ಕೂಡ ಇದ್ದಾರೆ. ಅವುಗಳು ಯಾವುವು ಎಂಬುದನ್ನು ನೋಡೋಣ. ಆ ಸ್ಥಳವೆಲ್ಲಾ ಹಚ್ಚ ಹಸಿರಿನಿಂದ ಕೂಡಿರುತ್ತದೆ. ಆ ಸ್ಥಳಕ್ಕೆ ಹಗಲಿನ ಸಮಯದಲ್ಲಿ ಪಿಕ್ನಿಕ್‍ಗಾಗಿ ಭೇಟಿ ನೀಡುತ್ತಿರುತ್ತಾರೆ. ಸಂಜೆ 6 ಗಂಟೆ ದಾಟಿದರೆ ಮಾತ್ರ ಒಂದು ಪ್ರಾಣಿ ಕೂಡ ಇಲ್ಲಿರುವುದಿಲ್ಲ. ಇಲ್ಲಿನ ಸುತ್ತಮುತ್ತ ಇರುವವರ ಪ್ರಕಾರ ಇಲ್ಲಿ ಆತ್ಮದ ಸಂಚಾರವಿದೆ ಎಂದು ಹೇಳುತ್ತಾರೆ. ಆ ಆತ್ಮದ ಕಥೆ ಏನೆಂದರೆ ಒಂದು ವರ್ಷದ ಹಿಂದೆ ಒಬ್ಬ ಮಹಿಳೆ ರಸ್ತೆ ಅಪಘಾತದಲ್ಲಿ ಮರಣ ಹೊಂದಿದಳಂತೆ. ಆಕೆಯೇ ಇಲ್ಲಿ ಆತ್ಮವಾಗಿ ತಿರುಗುತ್ತಿದ್ದಾಳೆ ಎಂದು ಸುತ್ತ-ಮುತ್ತಲ ಜನರು ವಾದಿಸುತ್ತಿದ್ದಾರಂತೆ.

1. ಆರ್ಯ ಮಿಲ್ಕ ಕಾಲೋನಿ ರಸ್ತೆ

1. ಆರ್ಯ ಮಿಲ್ಕ ಕಾಲೋನಿ ರಸ್ತೆ

ಎಲ್ಲೇ ನೋಡಿದರು ಕೂಡ ಹಚ್ಚ ಹಸಿರಿನಿಂದ ಕೂಡಿರುವ ಆ ಸ್ಥಳಕ್ಕೆ ಅನೇಕ ಮಂದಿ ಹಗಲಿನ ಸಮಯದಲ್ಲಿ ಪಿಕ್ನಿಕ್‍ಕ್ಕಾಗಿ ಭೇಟಿ ನೀಡುತ್ತಿರುತ್ತಾರೆ, ಸಂಜೆ 6 ದಾಟಿದರೆ ಸಾಕು ಅಲ್ಲಿ ಒಬ್ಬರು ಕೂಡ ಕಾಣಿಸುವುದಿಲ್ಲ. ಇಲ್ಲಿನ ಸುತ್ತಮುತ್ತಲಿರುವವರು ಹೇಳುವ ಪ್ರಕಾರ ಇಲ್ಲಿ ಒಂದು ಆತ್ಮವು ಸಂಚಾರ ಮಾಡುತ್ತಿದೆ ಎಂದು.

2. ಆರ್ಯ ಮಿಲ್ಕ ಕಾಲೋನಿ ರಸ್ತೆ

2. ಆರ್ಯ ಮಿಲ್ಕ ಕಾಲೋನಿ ರಸ್ತೆ

ಆ ಆತ್ಮದ ಹಿಂದೆ ಇರುವ ಕಥೆ ಏನೆಂದರೆ ಕೆಲವು ವರ್ಷಗಳ ಹಿಂದೆ ಒಬ್ಬ ಮಹಿಳೆ ಅಪಘಾತವಾಗಿ ಮೃತಳಾದಳು. ಆ ಆತ್ಮವೇ ಇಲ್ಲಿ ಸಂಚಾರ ಮಾಡುತ್ತಿದೆ ಎಂದು ನಂಬಲಾಗಿದೆ. ಇಲ್ಲಿ ದಿನನಿತ್ಯವು ಬಸ್ಸನ್ನು ನಡೆಸುತ್ತಿದ್ದ ಒಬ್ಬ ಡ್ರೈವರ್ ಒಂದು ಸಂಜೆ ಇಲ್ಲಿ ಆತನ ಬಸ್ ಟ್ರಿಪ್ ಆದನಂತರ ಮನೆಗೆ ತೆರಳುವ ಸಮಯದಲ್ಲಿ ಒಂದು ಮಹಿಳೆ ಮರದ ಹಿಂಭಾಗದಲ್ಲಿ ಕೂತು ಅಳುತ್ತಿದ್ದ ಶಬ್ಧ ಕೇಳಿಸುತ್ತಿತ್ತಂತೆ.

3. ಆರ್ಯ ಮಿಲ್ಕ ಕಾಲೋನಿ ರಸ್ತೆ

3. ಆರ್ಯ ಮಿಲ್ಕ ಕಾಲೋನಿ ರಸ್ತೆ

ಆಕೆಯು ಏಕೆ ಅಳುತ್ತಿದ್ದಾಳೆ ಎಂದು ತಿಳಿದುಕೊಳ್ಳಬೇಕು ಎಂದು ಆ ಸ್ಥಳಕ್ಕೆ ಹೋದರೆ ಆ ಮಹಿಳೆಯು ದಾಳಿ ಮಾಡಿತಂತೆ. ಈ ಬಸ್ ಡ್ರೈವರ್ ಒಬ್ಬನಿಗೆ ಅಲ್ಲ, ಆ ಸ್ಥಳದಲ್ಲಿ ಹೋಗುವವರಿಗೆಲ್ಲರಿಗೂ ಕೂಡ ಹೀಗೆಯೇ ಮಾಡಿ ಹಿಂಸೆ ನೀಡುತ್ತಿದೆ ಎಂತೆ. ಇಷ್ಟೇ ಅಲ್ಲ ದಾರಿಯಲ್ಲಿ ಹೋಗುತ್ತಿರುವವರಿಗೆಲ್ಲಾ ಲಿಫ್ಟ್ ಕೂಡ ಕೇಳುತ್ತದೆ ಎಂತೆ. ಆ ಆತ್ಮ ಆ ದಾರಿಯಲ್ಲಿ ಹೋಗುವವರಿಗೆಲ್ಲಾ ಹಿಂಸಿಸುತ್ತಿದೆ. ಅನೇಕ ಬಾರಿ ಈ ಆತ್ಮದಿಂದಾಗಿ ರಸ್ತೆ ಅಪಘಾತಗಳು ಕೂಡ ನಡೆದಿವೆ ಎಂತೆ.

4. ರಾಜ್ ಕಿರಣ್ ಹೋಟೆಲ್

4. ರಾಜ್ ಕಿರಣ್ ಹೋಟೆಲ್

ರಾಜ್ ಕಿರಣ್ ಹೋಟೆಲ್ ಅನ್ನು ಭೂತದ ಹೋಟೆಲ್ ಎಂದೂ ಸಹ ಕರೆಯುತ್ತಾರೆ. ಇದು ಮಹಾರಾಷ್ಟ್ರದಲ್ಲಿನ ಅತ್ಯಂತ ಭಯಂಕರವಾದ ಸ್ಥಳವಾಗಿದೆ. ಇಲ್ಲಿ ದೆವ್ವವಿದೆ ಎಂಬ ವಿಷಯ ತಿಳಿಯದೇ ಅನೇಕ ಪ್ರವಾಸಿಗರು ಇಲ್ಲಿ ತಂಗಿದ್ದರು. ಅವರು ಏನು ಹೇಳಿದರು ಎಂದರೆ...

5. ರಾಜ್ ಕಿರಣ್ ಹೋಟೆಲ್

5. ರಾಜ್ ಕಿರಣ್ ಹೋಟೆಲ್

"ನಮಗೆ ಒಂದು ರೂಂ ಏರ್ಪಾಟು ಮಾಡಿದರು. ಆ ರೂಂನಲ್ಲಿ ತೆರಳಿದ ನಂತರ ನಾವು ನಿದ್ರೆಗೆ ಜಾರಿದೆವು. ಆ ಸಮಯದಲ್ಲಿ ಹೊದಿಕೆಯನ್ನು ಯಾರೋ ಎಳೆದ ಹಾಗೆ ಅನುಭವವಾಗುತ್ತದೆ ಎಂತೆ. ನಾವು ತಂದ ಸಾಮಾನುಗಳು ರಾತ್ರಿ ಒಂದು ಕೊಠಡಿಯಲ್ಲಿ ಇಟ್ಟಿದ್ದರೆ ಬೆಳಗಿನ ಜಾವ ಮತ್ತೊಂದು ಕೊಠಡಿಯಲ್ಲಿ ಇರುತ್ತದೆ ಎಂತೆ.

6. ರಾಜ್ ಕಿರಣ್ ಹೋಟೆಲ್

6. ರಾಜ್ ಕಿರಣ್ ಹೋಟೆಲ್

ಸಡನ್ ಆಗಿ ಬಾತ್ರೂಂ ಲಾಕ್ ಆಗುತ್ತದೆ. ಎಂದು ಅನೇಕ ಪ್ರವಾಸಿಗಳು ಅವರು ಆ ಹೋಟೆಲ್‍ನಲ್ಲಿ ಪಟ್ಟ ಅನುಭವವನ್ನು ಹಂಚಿಕೊಂಡಿದ್ದಾರೆ. ಈ ಹೋಟೆಲ್‍ನ ಒಂದು ಕೊಠಡಿಯಲ್ಲಿ 21 ವರ್ಷದ ಹುಡುಗಿಯು ಆತ್ಮಹತ್ಯೆ ಮಾಡಿಕೊಂಡಳು. ಅದೇ ಆತ್ಮ ಈ ಹೋಟೆಲ್‍ನಲ್ಲಿ ಸಂಚಾರಿಸುತ್ತಿದೆ ಎಂದು ಪ್ರಚಾರದಲ್ಲಿದೆ. ಈ ದಿನಕ್ಕೂ ಅಲ್ಲಿನ ಪರಿಸ್ಥಿತಿ ಇದೇ ರೀತಿಯಲ್ಲಿಯೇ ಇದೆಯಂತೆ. ರಾಜ್ ಕಿರಣ್ ಹೋಟೆಲ್ ಅನ್ನು ಭೂತಗಳ ಹೋಟೆಲ್ ಎಂದೇ ಮಾರ್ಪಾಟು ಮಾಡಿದ್ದಾರೆ ಅಲ್ಲಿನ ಜನರು.

7. ರಬಿಂದರ್ ನಗರ್

7. ರಬಿಂದರ್ ನಗರ್

ಹೈದ್ರಾಬಾದ್‍ನ ರಬಿಂದರ್ ನಗರದ ಬಗ್ಗೆ ಸೀತಾಫಲ ಮಂಡಿಯಲ್ಲಿ ಪ್ರತಿಯೊಬ್ಬರಿಗೂ ತಿಳಿದಿದೆ. 2012 ರಲ್ಲಿ 4 ಜನ ಬ್ಯಾಚುಲರ್ಸ್ ಆತ್ಮಹತ್ಯೆ ಮಾಡಿಕೊಂಡರು. ಈ ಆತ್ಮಹತ್ಯೆ ನಡೆದ ದಿನ ಈ ಪ್ರದೇಶದಲ್ಲಿ ಏನೇನೂ ವಿಚಿತ್ರಗಳು ನಡೆದವಂತೆ.

8. ರಬಿಂದರ್ ನಗರ್

8. ರಬಿಂದರ್ ನಗರ್

ಅರ್ಧರಾತ್ರಿಯ ಸಮಯದಲ್ಲಿ ಯಾರೂ ನಡೆಯುತ್ತಿರುವ ಹಾಗೆ ಕಾಣಿಸುತ್ತದೆ ಎಂತೆ. ಇನ್ನು ಅಂದಿನಿಂದ ಈ ರಬಿಂದ್ರ ನಗರದಲ್ಲಿರುವ ಜನರು ಆ ಪ್ರದೇಶದಲ್ಲಿರುವ ಜನರೆಲ್ಲರು ಜೈ ಶ್ರೀರಾಮ್ ಎಂಬ ಹೆಸರಿನ ಧ್ವಜವನ್ನು ಪ್ರತಿ ಬೀದಿಯಲ್ಲಿ ನೆಟ್ಟಿದ್ದಾರಂತೆ.

9. ಅಪಾರ್ಟ್‍ಮೆಂಟ್ ಆಫ್ ಜೋಗೇಶ್ವರಿ

9. ಅಪಾರ್ಟ್‍ಮೆಂಟ್ ಆಫ್ ಜೋಗೇಶ್ವರಿ

ಈ ಅಪಾರ್ಟ್‍ಮೆಂಟ್ ರಸ್ತೆ ಮೇಲೆಯೇ ಇದೆ. 4 ಅಂತಸ್ತಿನ ಅಪಾರ್ಟ್‍ಮೆಂಟ್. ಆದ್ದರಿಂದ ಈ ಅಪಾರ್ಟ್‍ಮೆಂಟ್‍ನ 2 ನೇ ಫ್ಲೋರ್‍ನಲ್ಲಿ ಆತ್ಮವಿರುತ್ತದೆ ಎಂದು ಆ ಬಿಲ್ಡಿಂಗ್ ಅವರು ಹೇಳುತ್ತಿದ್ದಾರೆ. ಒಂದು ಕಾಲದಲ್ಲಿ ಆ ಬಿಲ್ಡಿಂಗ್‍ನಲ್ಲಿ ಏರ್ ಹಾಸ್ಟೇಸ್ ಇರುತ್ತಿದ್ದಳಂತೆ. ಒಂದು ದಿನ ಆಕೆ ಆತ್ಮಹತ್ಯೆ ಮಾಡಿಕೊಂಡಳಂತೆ.

10. ಅಪಾರ್ಟ್‍ಮೆಂಟ್ ಆಫ್ ಜೋಗೇಶ್ವರಿ

10. ಅಪಾರ್ಟ್‍ಮೆಂಟ್ ಆಫ್ ಜೋಗೇಶ್ವರಿ

ಆ ನಂತರ ಕೆಲವು ದಿನಗಳ ನಂತರ ಅದೇ ರೂಂನಲ್ಲಿ ಮತ್ತೊಂದು ಏರ್ ಹಾಸ್ಟೇಸ್ ಬಂದಳಿದಳಂತೆ. ಆಕೆಯು ಕೆಲವು ದಿನಗಳು ಕಳೆದ ನಂತರ ಯಾರೋ ಅವಳನ್ನು ಹಿಂಬಾಲಿಸುತ್ತಿರುವ ಹಾಗೆ ಹಾಗು ಆಕೆಯ ಮೇಲೆ ಯಾರೋ ನಿಗಾ ವಹಿಸುತ್ತಿರುವ ಹಾಗೆ ಅನ್ನಿಸುತ್ತಿತ್ತಂತೆ. ಆಕೆ ನಿದ್ರೆ ಮಾಡುತ್ತಿದ್ದ ಸಮಯದಲ್ಲಿ ಯಾರೋ ಅಳುತ್ತಿರುವ ಶಬ್ಧ ಆಕೆಗೆ ಕೇಳಿಸುತ್ತಿತ್ತಂತೆ. ತ್ವರಿತವಾಗಿ ಯಾರಪ್ಪ ಎಂದು ನೋಡಿದರೆ ರಭಸವಾಗಿ ಟೆರ್ರಸ್‍ನ ಮೇಲೆ ಹೋಗುತ್ತಿತ್ತಂತೆ.

11. ಅಪಾರ್ಟ್‍ಮೆಂಟ್ ಆಫ್ ಜೋಗೇಶ್ವರಿ

11. ಅಪಾರ್ಟ್‍ಮೆಂಟ್ ಆಫ್ ಜೋಗೇಶ್ವರಿ

ಅಲ್ಲಿ ಒಂದು ಮೂಲೆಯಲ್ಲಿ ಯಾರೋ ಕುಳಿತುಕೊಂಡು ಅಳುತ್ತಿದ್ದರಂತೆ. ಆ ಏರ್ ಹಾಸ್ಟೆಸ್ ಸಮೀಪಕ್ಕೆ ತೆರಳಿದರೆ ಅಲ್ಲಿ ಯಾರು ಕೂಡ ಇರುತ್ತಿರಲಿಲ್ಲವಂತೆ. ಈ ಭಯಾನಕತೆಯಾದ ನಂತರ ಯಾರು ಕೂಡ ಆ ಕೊಠಡಿಯ ಸಮೀಪದಲ್ಲಿ ಭೇಟಿ ನೀಡುತ್ತಿಲ್ಲ.

12. ಅಪಾರ್ಟ್‍ಮೆಂಟ್ ಆಫ್ ಜೋಗೇಶ್ವರಿ

12. ಅಪಾರ್ಟ್‍ಮೆಂಟ್ ಆಫ್ ಜೋಗೇಶ್ವರಿ

ಇಲ್ಲಿರುವ ಬಾಡಿಗೆದಾರರು ಕೂಡ ಹೌದು ಇಲ್ಲಿ ಯಾರೋ ಅಳುತ್ತಿರುವ ಶಬ್ಧ, ವಿಚಿತ್ರವಾದ ಶಬ್ಧಗಳು ಕೇಳಿಸುತ್ತಿರುತ್ತವೆ ಎಂದು ಹೇಳಿಕೊಂಡಿದ್ದಾರೆ. ಇವುಗಳನ್ನು ಕೆಲವರು ನಂಬುತ್ತಾರೆ, ಕೆಲವರು ನಂಬುವುದಿಲ್ಲ. ನಂಬಿಕೆ ಎನ್ನುವುದು ಅವರವರಿಗೆ ಬಿಟ್ಟಿದ್ದು.

More News

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+