Search
  • Follow NativePlanet
Share
» »ರಾಮನು ಹನುಮನಿಗಾಗಿ ನಿರ್ಮಿಸಿದ ಘಾಟ್‌ ಇದು

ರಾಮನು ಹನುಮನಿಗಾಗಿ ನಿರ್ಮಿಸಿದ ಘಾಟ್‌ ಇದು

ಜುನಾ ಅಖಾಡ್ ನಲ್ಲಿ ನೆಲೆನಿಂತಿರುವ ಹನುಮಾನ್ ಘಾಟ್ ವಾರಣಾಸಿಯ ಜನಪ್ರಿಯ ಧಾರ್ಮಿಕ ತಾಣವಾಗಿದೆ. ಇದನ್ನು ಮೊದಲು ರಾಮೇಶ್ವರಂ ಘಾಟ್ ಎಂದು ಕರೆಯಲಾಗುತ್ತಿತ್ತು.

ವಾರಣಾಸಿಯು ಘಾಟ್‌ಗಳಿಗೆ ಹೆಸರುವಾಸಿಯಾಗಿದೆ. ಈ ನಗರವು ಒಟ್ಟಾರೆ 88 ಘಾಟ್ಗಳನ್ನು ಹೊಂದಿದೆ. ಈ ಘಾಟ್‌ಗಳು ಗಂಗಾ ನದಿ ತೀರದಲ್ಲಿದೆ. ಹೆಚ್ಚಿನ ಘಾಟ್‌ಗಳು ಸ್ನಾನ ಮತ್ತು ಪೂಜಾ ಸಮಾರಂಭಕ್ಕೆ ಬಳಸಲಾಗುತ್ತದೆ. ಎರಡು ಘಾಟ್‌ಗಳನ್ನು ಪ್ರತ್ಯೇಕವಾಗಿ ಸ್ಮಶಾನ ಸ್ಥಳಗಳಾಗಿ ಬಳಸಲಾಗುತ್ತದೆ.

ರಾಮೇಶ್ವರಂ ಘಾಟ್ ಎಂದೂ ಕರೆಯುತ್ತಾರೆ

ರಾಮೇಶ್ವರಂ ಘಾಟ್ ಎಂದೂ ಕರೆಯುತ್ತಾರೆ

PC: Rudolph.A.furtado
ಜುನಾ ಅಖಾಡ್ ನಲ್ಲಿ ನೆಲೆನಿಂತಿರುವ ಹನುಮಾನ್ ಘಾಟ್ ವಾರಣಾಸಿಯ ಜನಪ್ರಿಯ ಧಾರ್ಮಿಕ ತಾಣವಾಗಿದೆ. ಇದನ್ನು ಮೊದಲು ರಾಮೇಶ್ವರಂ ಘಾಟ್ ಎಂದು ಕರೆಯಲಾಗುತ್ತಿತ್ತು. ತನ್ನ ಭಕ್ತ ಹಾಗೂ ಬಂಟ ಹನುಮಂತನಿಗಾಗಿ ಶ್ರೀರಾಮನು ಈ ಘಾಟ್ ನ್ನು ನಿರ್ಮಿಸಿದನೆಂಬ ನಂಬಿಕೆಯಿದೆ.

ಕುಸ್ತಿಪಟುಗಳ ನೆಚ್ಚಿನ ತಾಣ

ಕುಸ್ತಿಪಟುಗಳ ನೆಚ್ಚಿನ ತಾಣ

PC: juggadery
ಹನುಮಂತ ಒಳ್ಳೆಯ ದೇಹದಾರ್ಢ್ಯವನ್ನು ಹೊಂದಿದ್ದ ಕಾರಣಕ್ಕಾಗಿ ಈ ಘಾಟ್ ಗೆ ದೇಹದಾರ್ಢ್ಯಪಟುಗಳು, ಕುಸ್ತಿಪಟುಗಳಿಗೆ ನೆಚ್ಚಿನ ತಾಣವಾಗಿದೆ. ಕುಸ್ತಿಪಟುಗಳು ಮತ್ತು ದೇಹದಾರ್ಢ್ಯಪಟುಗಳು ವ್ಯಾಯಾಮ ಮತ್ತು ಪ್ರದರ್ಶನ ನೀಡುವ ಸ್ಥಳವನ್ನು ಅಖಾಡವೆನ್ನುತ್ತಾರೆ.

ಎರಡು ದೇವಾಲಯಗಳಿವೆ

ಎರಡು ದೇವಾಲಯಗಳಿವೆ

PC: Marcin Białek
ಕೃಷ್ಣನ ಭಕ್ತರಾಗಿದ್ದ ವೈಷ್ಣವ ಪಂಥದ ಸಂತ ವಲ್ಲಭಾಚಾರ್ಯರು ಹನುಮಾನ್ ಘಾಟ್ ನಲ್ಲಿ ವಾಸವಾಗಿದ್ದರು. ಹನುಮಾನ್ ಘಾಟ್ ಬಳಿಯಿರುವ ಎರಡು ದೇವಾಲಯಗಳಿವೆ. ರಾಮಾಯಣವನ್ನು ಮತ್ತೆ ಬರೆದಿದ್ದ ಸಂತ-ಕವಿ ತುಳಸಿ ದಾಸ ಅವರು ನಿರ್ಮಿಸಿದ ಮಂದಿರವೂ ಈ ಘಾಟ್ ನಲ್ಲಿದೆ. ರೂರ್ ಭೈರವನ ಅತ್ಯುತ್ತಮ ಚಿತ್ರಣವನ್ನು ನೋಡಲು ನಿಮಗೆ ಆಶ್ಚರ್ಯವಾಗುವುದು. ಇದು ಎಂಟು ಜನಪ್ರಿಯ ಬೈರವರುಗಳಲ್ಲಿ ಒಂದಾಗಿದೆ. ವಾರಣಾಸಿಯ ಶ್ರೀ ಕಾಂಚಿ ಕಾಮಕೋಟಿ ಪೀಠ ಶ್ರೀ ಶಂಕರಾಚಾರ್ಯ ಮಠ ಈ ಘಾಟ್ ನಲ್ಲಿದೆ. ಶ್ರೀ ಕಾಮಕೋಟೀಶ್ವರ ಮಂದಿರವನ್ನು ಈ ಮಠದವರು ಸ್ಥಾಪಿಸಿದ್ದು, ಇಲ್ಲಿ ಯಾವಾಗಲೂ ಪೂಜಾ ಕಾರ್ಯಗಳು ನಡೆಯುತ್ತಿರುತ್ತದೆ.

ಯಾವಾಗ ಭೇಟಿ ನೀಡುವುದು ಸೂಕ್ತ

ಯಾವಾಗ ಭೇಟಿ ನೀಡುವುದು ಸೂಕ್ತ

PC:Dan Kamminga
ಚಳಿಗಾಲದ ಋತುವಿನಲ್ಲಿ ವಾರಣಾಸಿಗೆ ಭೇಟಿ ನೀಡುವುದು ಸೂಕ್ತವಾಗಿದೆ. ತಾಪಮಾನವು 5 ರಿಂದ 15 ಡಿಗ್ರಿ ಸೆಲ್ಷಿಯಸ್‌ವರೆಗೆ ಇರುತ್ತದೆ. ಚಳಿಗಾಲದಲ್ಲಿ ಗಂಗಾ ನದಿಯಲ್ಲಿ ದೋಣಿ ಸವಾರಿ ಮಾಡುತ್ತಾ ವಿವಿಧ ದೇವಾಲಯಗಳನ್ನು ಭೇಟಿ ಮಾಡುವುದು ಒಂದು ರೋಮಾಂಚಕ ಅನುಭವವನ್ನು ನೀಡುತ್ತದೆ.

ತಲುಪುವುದು ಹೇಗೆ?

ತಲುಪುವುದು ಹೇಗೆ?

PC:Vrinda
ವಾರಣಾಸಿ ದೇಶೀಯ ವಿಮಾನ ನಿಲ್ದಾಣವನ್ನು ಹೊಂದಿದೆ. ನಿಯಮಿತ ವಿಮಾನಗಳು ವಾರಣಾಸಿಯನ್ನು ಭಾರತದ ಕೆಲವು ಪ್ರಮುಖ ನಗರಗಳಿಗೆ ಸಂಪರ್ಕಿಸುತ್ತವೆ. ಈ ನಗರಗಳು ಅಂತರರಾಷ್ಟ್ರೀಯ ವಿಮಾನ ನಿಲ್ದಾಣಗಳಿಗೆ ನೆಲೆಯಾಗಿದೆ ಮತ್ತು ಪ್ರಪಂಚದ ಹಲವಾರು ಪ್ರಮುಖ ನಗರಗಳೊಂದಿಗೆ ಸಂಪರ್ಕ ಹೊಂದಿವೆ. ಹಾಗಾಗಿ ವಿಶ್ವದ ಯಾವ ಭಾಗದಿಂದಲೂ ನೀವು ಭಾರತದ ರಾಷ್ಟ್ರೀಯ ರಾಜಧಾನಿಗೆ ಬಂದು ಅಲ್ಲಿಂದ ವಾರಣಾಸಿಗೆ ಸಂಬಂಧಿಸಿದ ಯಾವುದೇ ವಿಮಾನಗಳನ್ನು ಪಡೆದುಕೊಳ್ಳಬಹುದು. ದೆಹಲಿಯಿಂದ ಆಗ್ರಾ ಮತ್ತು ಖಜುರಾಹೊ ಮೂಲಕ ವಾರಣಾಸಿಗೆ ದೈನಂದಿನ ವಿಮಾನಗಳು ಇವೆ.

ರೈಲಿನ ಮೂಲಕ


ವಾರಣಾಸಿಯು ರಾಷ್ಟ್ರದ ಕೆಲವು ಪ್ರಧಾನ ಮಹಾನಗರಗಳಿಗೆ ರೈಲುಗಳ ಮೂಲಕ ಉತ್ತಮ ಸಂಪರ್ಕ ಹೊಂದಿದೆ. ದೆಹಲಿ, ಕೊಲ್ಕತ್ತಾ, ಮುಂಬೈ ಮತ್ತು ಇತರ ಭಾರತದ ನಗರಗಳು ಇದರೊಂದಿಗೆ ಸಂಪರ್ಕ ಹೊಂದಿವೆ. ವಾರಣಾಸಿಯ ಎರಡು ರೈಲು ನಿಲ್ದಾಣಗಳಾದ ವಾರಣಾಸಿ ಕಂಟೋನ್ಮೆಂಟ್ ಎಂದು ಕೂಡ ಕರೆಯಲ್ಪಡುವ ಕಾಶಿ ಜಂಕ್ಷನ್ ಅಥವಾ ವಾರಣಾಸಿ ಜಂಕ್ಷನ್‌ಗಳಿಗೆ ಈ ನಗರಗಳ ರೈಲುಗಳು ಪ್ರಯಾಣಿಸುತ್ತಿವೆ. ದೇಶದ ಅತ್ಯುತ್ತಮ ರೈಲುಗಳಲ್ಲಿ ಒಂದಾದ ಕೋಲ್ಕತಾ ಮತ್ತು ದೆಹಲಿ ನಡುವೆ ರಾಜಧಾನಿ ಎಕ್ಸ್ಪ್ರೆಸ್ ಸಹ ವಾರಣಾಸಿಯ ಮೂಲಕ ಹಾದು ಹೋಗುತ್ತದೆ.

ರಸ್ತೆ ಸಂಪರ್ಕ


ವಾರಣಾಸಿಯು ಉತ್ತರ ಪ್ರದೇಶದ ಹಲವಾರು ಪ್ರಮುಖ ನಗರಗಳಿಗೆ ಉತ್ತಮ ರಸ್ತೆ ಸಂಪರ್ಕವನ್ನು ಹೊಂದಿದೆ. ವಾರಾಣಸಿ ಮತ್ತು ಇತರ ಪ್ರಮುಖ ನಗರಗಳು ಮತ್ತು ಪಟ್ಟಣಗಳ ನಡುವೆ ಚಲಿಸುವ ರಾಜ್ಯ ಸರ್ಕಾರಿ ಬಸ್‌ಗಳಲ್ಲದೆ, ಇತರ ಸಾರ್ವಜನಿಕ ಸಾರಿಗೆ ಮಾರ್ಗಗಳನ್ನೂ ಸಹ ಪಡೆಯಬಹುದು. ಉತ್ತರ ಪ್ರದೇಶದ ವಾರಣಾಸಿಯಿಂದ ಒಂದು ನಿರ್ದಿಷ್ಟ ಭಾಗದಿಂದ ಪ್ರಯಾಣಿಸುವಾಗ ಅನೇಕ ಖಾಸಗಿ ಬಸ್‌ಗಳು, ಕಾರುಗಳು ಮತ್ತು ಜೀಪ್‌ಗಳನ್ನು ಕೂಡ ಬಾಡಿಗೆಗೆ ಪಡೆಯಬಹುದು.

More News

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+