Search
  • Follow NativePlanet
Share
» »ಮೇಧಾವಿಗಳಿಗೂ ಷಾಕ್ ನೀಡುವ ಟೆಕ್ನಾಲಜಿ ನಮ್ಮ ಕರ್ನಾಟಕದಲ್ಲಿದೆ...

ಮೇಧಾವಿಗಳಿಗೂ ಷಾಕ್ ನೀಡುವ ಟೆಕ್ನಾಲಜಿ ನಮ್ಮ ಕರ್ನಾಟಕದಲ್ಲಿದೆ...

ನಮ್ಮ ಭಾರತ ದೇಶದಲ್ಲಿನ ಹಲವಾರು ರಹಸ್ಯವನ್ನು ತನ್ನಲ್ಲಿ ಅಡಗಿಸಿಕೊಂಡಿರುವ ದೇವಾಲಯಗಳನ್ನು ಕಾಣುತ್ತಾಲೇ ಇದ್ದೇವೆ. ಒಂದೊಂದು ದೇವಾಲಯವು ತನ್ನದೇ ಆದ ಮಹತ್ವವನ್ನು ಹೊಂದಿರಬೇಕು ಎಂದು ಅಂದಿನ ರಾಜರು ಒಂದಲ್ಲಾ ಒಂದು ನಿಗೂಢವನ್ನು ಇಟ್ಟು ದೇವಾಲಯವನ್

ನಮ್ಮ ಭಾರತ ದೇಶದಲ್ಲಿನ ಹಲವಾರು ರಹಸ್ಯವನ್ನು ತನ್ನಲ್ಲಿ ಅಡಗಿಸಿಕೊಂಡಿರುವ ದೇವಾಲಯಗಳನ್ನು ಕಾಣುತ್ತಾಲೇ ಇದ್ದೇವೆ. ಒಂದೊಂದು ದೇವಾಲಯವು ತನ್ನದೇ ಆದ ಮಹತ್ವವನ್ನು ಹೊಂದಿರಬೇಕು ಎಂದು ಅಂದಿನ ರಾಜರು ಒಂದಲ್ಲಾ ಒಂದು ನಿಗೂಢವನ್ನು ಇಟ್ಟು ದೇವಾಲಯವನ್ನು ನಿರ್ಮಾಣ ಮಾಡಿಸುತ್ತಿದ್ದರು. ಹಾಗೆಯೇ ನಮ್ಮ ದಕ್ಷಿಣ ಭಾರತದಲ್ಲಿಯೇ ಇಂತಹ ದೇವಾಲಯಗಳು ಹೆಚ್ಚು ಎಂದೇ ಹೇಳಬಹುದು.

ಅದರಲ್ಲಿ ನಮ್ಮ ಕರ್ನಾಟಕವೇನು ಕಡಿಮೆ ಇಲ್ಲ. ಪ್ರಸ್ತುತ ಟೆಕ್ನಾಲಜಿ ಕೂಡ ಎಂದೂ ಕಂಡು ಕೇಳರಿಯದ ವೈಜ್ಞಾನಿಕ ರಹಸ್ಯಗಳನ್ನು ಹೊಂದಿರುವ ಅಪೂರ್ವ ಶಿಲ್ಪಕಲಾ ಸಂಪತ್ತನ್ನು ಹೊಂದಿರುವ ದೇವಾಲಯವಿದೆ. ಅದು ತನ್ನಲ್ಲಿ ಅಡಗಿಸಿಕೊಂಡಿರುವ ವಿಭಿನ್ನವಾದ ರಹಸ್ಯಗಳಿಂದ ವಿಶ್ವವಿಖ್ಯಾತವಾಗಿದೆ. ಕರ್ನಾಟಕದ ಈ ದೇವಾಲಯ ಬಗ್ಗೆ ಸಂಪೂರ್ಣವಾದ ವಿವರಗಳನ್ನು ತಿಳಿದುಕೊಳ್ಳೋಣ.

ವೀರುಪಾಕ್ಷಾ ದೇವಾಲಯ

ವೀರುಪಾಕ್ಷಾ ದೇವಾಲಯ

ಇದು ಕರ್ನಾಟಕದಲ್ಲಿನ ಒಂದು ಸುಪ್ರಸಿದ್ಧವಾದ ದೇವಾಲಯವಾಗಿದೆ. ಈ ವೀರುಪಾಕ್ಷ ದೇವಾಲಯವನ್ನು ಹಂಪೆಯಲ್ಲಿ ಕಾಣಬಹುದಾಗಿದೆ. ಬೆಂಗಳೂರಿನಿಂದ ಸುಮಾರು 350 ಕಿ.ಮೀ ದೂರದಲ್ಲಿ ಈ ಅದ್ಭುತವಾದ ಸ್ವರ್ಗ ದೇವಾಲಯವಿದೆ. ವಿಶ್ವ ಪಾರಂಪರಿಕ ಪಟ್ಟಿಯಲ್ಲಿ ಈ ದೇವಾಲಯವು ಸೇರ್ಪಡೆಯಾಗಿದೆ. ಲಕ್ಕನ್ನ ಮತ್ತು ದಂಡೇಷ್ ಎಂಬ ವಿಜಯನಗರ ಸಾಮ್ರಾಜ್ಯದಲ್ಲಿನ ಕೆಲಸ ನಿರ್ವಹಿಸುತ್ತಿದ್ದ ಕೋಶಾಧಿಕಾರಿಗಳು ನಿರ್ಮಾಣ ಮಾಡಿದರಂತೆ.

ವಿಜಯನಗರ ಸಾಮ್ರಾಜ್ಯ

ವಿಜಯನಗರ ಸಾಮ್ರಾಜ್ಯ

ಹಂಪೆ ವಿಜಯನಗರ ಸಾಮ್ರಾಜ್ಯಕ್ಕೆ ರಾಜಧಾನಿಯಾಗಿ ಇತ್ತು. ಈ ಪಟ್ಟಣವನ್ನು ತುಂಗಭದ್ರ ನದಿಯ ತೀರದಲ್ಲಿದೆ. ತುಂಗಭದ್ರ ನದಿಯನ್ನು ಪಂಪಾನದಿ ಎಂದು ಕರೆಯುತ್ತಿದ್ದರು. ಕನ್ನಡದಲ್ಲಿ ಹಂಪಿ ಎಂದರೆ ಪಂಪ ಎಂಬ ಅರ್ಥ ಕೂಡ ಇದೆ. ಇಲ್ಲಿ ವಿಜಯನಗರ ರಾಜರ ಕುಲದೈವನಾದ ವೀರೂಪಾಕ್ಷಸ್ವಾಮಿಯು ನೆಲೆಸಿದ್ದಾನೆ.

ಸ್ಥಳ ಪುರಾಣ

ಸ್ಥಳ ಪುರಾಣ

ಈ ಪವಿತ್ರವಾದ ಸ್ಥಳ ಪುರಾಣದ ಪ್ರಕಾರ ಪಾರ್ವತಿ ದೇವಿಯು ಶಿವನೊಂದಿಗೆ ವಿವಾಹವನ್ನು ಮಾಡಿಕೊಳ್ಳುವ ಸಲುವಾಗಿ ಪಂಪಾ ನದಿ ತೀರ್ಥದಲ್ಲಿ ಶಿವನಿಗಾಗಿ ತಪಸ್ಸು ಮಾಡಿದಳು ಎಂದೂ, ಮತ್ತು ಪಾರ್ವತಿ ದೇವಿಯ ತಪಸ್ಸನ್ನು ಮೆಚ್ಚಿದ ಪರಮಶಿವನು ಈ ಪ್ರದೇಶದಲ್ಲಿಯೇ ವಿವಾಹ ಮಾಡಿಕೊಂಡನು ಎಂದು ಕೂಡ ನಂಬಲಾಗಿದೆ.

ವಿಶೇಷತೆ

ವಿಶೇಷತೆ

ಈ ದೇವಾಲಯದಲ್ಲಿ ಅತ್ಯಂತ ವಿಶೇಷವಾದದು ಹಾಗು ಅದ್ಭುತವಾದುದು ಆನೇಕವಿದೆ. ಅವುಗಳನ್ನು ಕಾಣಲು ದೇಶದಿಂದಲೇ ಅಲ್ಲದೇ ವಿದೇಶದಿಂದಲೂ ಕೂಡ ಈ ದೇವಾಲಯಕ್ಕೆ ಭೇಟಿ ನೀಡುತ್ತಾರೆ.

ಅದ್ಭುತ

ಅದ್ಭುತ

ಆ ಅದ್ಭುತ ಏನೆಂದರೆ ವೀರೂಪಾಕ್ಷ ಸ್ವಾಮಿಯ ಹಿಂದಿರುವ ಸ್ವಾಮಿ ಮಂಟಪವು ಗೋಡೆಯ ಮೇಲೆ ಅಂದರೆ ರಾಜಗೋಪುರದ ನೆರಳು ಎಂಬುದು ತಲೆಕೆಳಗಾಗಿರುವಂತೆ ಕಾಣುವುದು. ರಾಜಗೋಪುರದಿಂದ ಸುಮಾರು 300 ಅಡಿ ದೂರದಲ್ಲಿರುವ ಮಂಡಪ ಗೋಡೆಯ ಮೇಲೆ ಈ ನೆರಳು ಎಂಬುದು ತಲೆಕೆಳಗಾಗಿ ಬೀಳುವುದು ಒಂದು ಅದ್ಭುತವೇ ಸರಿ.

ಪ್ರಧಾನ ದೇವಾಲಯ

ಪ್ರಧಾನ ದೇವಾಲಯ

ಪ್ರಧಾನ ದೇವಾಲಯದ ಒಳಭಾಗದಲ್ಲಿ 6 ಅಡಿ ಎತ್ತರದಲ್ಲಿ ಒಂದು ಚಿಕ್ಕದಾದ ರಂಧ್ರವಿದೆ. ಆ ರಂಧ್ರದ ಮೂಲಕ ಸೂರ್ಯಕಿರಣಗಳು ಎಂಬುದು ದೇವಾಲಯದ ಒಳಭಾಗದ ಗೋಡೆ ಮೇಲೆ, ಪಶ್ಚಿಮಗೋಡೆಯ ಮೇಲೆ ಬಿದ್ದು, ಪೂರ್ವ ಅಭಿಮುಖವಾಗಿರುವ ರಾಜಗೋಪುರದ ಬೆಳಕು ಎಂಬುದು ಮಂಟಪದ ಮೇಲೆ ಬೀಳುವುದು ಇಲ್ಲಿನ ಮತ್ತೊಂದು ಆಕರ್ಷಣೆ ಹಾಗು ಅದ್ಭುತವಾಗಿದೆ.

ನೆರಳು

ನೆರಳು

ಈ ನೆರಳನ್ನು ಎಲ್ಲರೂ ಕಾಣಬಹುದಾಗಿದೆ. ಈ ವಿಧವಾಗಿ ನೆರಳು ಬೀಳುವುದು ಅಲ್ಲಿನ ದೈವವಾದ ಶಿವನ ಮಹಿಮೆಯೇ ಎಂದೇ ಭಾವಿಸಲಾಗುತ್ತದೆ. ಇದು ಭಾರತೀಯ ಶಿಲ್ಪಕಲೆಗೆ, ವಾಸ್ತು ನೈಪುಣ್ಯಕ್ಕೆ , ವಿಜ್ಞಾನಕ್ಕೆ ನಿದರ್ಶನವಾಗಿದೆ ಎಂದು ಹೇಳಲಾಗುತ್ತದೆ.

ಅದ್ಭುತವಾದ ದೃಶ್ಯ

ಅದ್ಭುತವಾದ ದೃಶ್ಯ

ಅದೇನೆ ಇರಲಿ ಈ ದೇವಾಲಯ ಮಾತ್ರ ಒಂದು ಅತ್ಯದ್ಭುತವಾದುದು ಎಂದು ಅಂಗೀಕಾರ ಮಾಡಲೇಬೇಕಾಗಿದೆ. ಮತ್ತೊಂದು ವಿಷಯವೆನೆಂದರೆ ಯುಗಾದಿಯ ದಿನದಂದು ಸೂರ್ಯಕಿರಣಗಳು ಎಂಬುದು ಗರ್ಭಗುಡಿಯಲ್ಲಿನ ಶಿವಲಿಂಗದ ಮೇಲೆ ಬೀಳುತ್ತದೆ. ಈ ಮಧ್ಯಕಾಲದಲ್ಲಿ ಮತ್ತೊಂದು ಅದ್ಭುತವನ್ನು ಕೂಡ ಕಾಣಬಹುದಾಗಿದೆ.

ಸಾಲೆ ಮಂಟಪ

ಸಾಲೆ ಮಂಟಪ

ಅದೆನೆಂದರೆ ಗರ್ಭಗುಡಿಯಲ್ಲಿನ ನೆರಳು, ಸಾಲೆ ಮಂಟಪದಲ್ಲಿನ ಒಂದು ಸ್ಥಳದಲ್ಲಿ ತಲೆ ಕೆಳಗಾಗಿರುವಂತೆ ಕಾಣಿಸುವುದು. ಈ ನೆರಳು ಎಂಬುದು ಗರ್ಭಗುಡಿಯಲ್ಲಿನ ಒಂದು ಚಿಕ್ಕದಾದ ರಂಧ್ರದ ಮೂಲಕ ಪ್ರಸರಿಸುತ್ತದೆ. ಬೆಳಗ್ಗೆ 9 ಗಂಟೆಯ ಒಳಗೆ ಮತ್ತು ಸಾಯಂಕಾಲದ ಸಮಯದಲ್ಲಿ ಕೆಲವು ಬಾರಿ ಈ ನೆರಳು ಭಕ್ತರಿಗೆ ಆಕರ್ಷಿಸುತ್ತದೆ.

ಪಾತಾಳೇಶ್ವರ ಸ್ವಾಮಿ

ಪಾತಾಳೇಶ್ವರ ಸ್ವಾಮಿ

ಈ ದೇವಾಲಯದಲ್ಲಿ ಆನೇಕ ಚಿಕ್ಕದಾದ ಶಿವಾಲಯಗಳು ಇವೆ. ಇಲ್ಲಿರುವ 2 ಉಪ ದೇವಾಲಯಗಳು ಅತ್ಯಂತ ಪ್ರಾಚೀನ ಕಾಲದ್ದು ಎಂದು ಭಾವಿಸಲಾಗಿದೆ. ಪ್ರಧಾನವಾದ ದೇವಾಲಯಕ್ಕೆ ಪೂರ್ವ ದಿಕ್ಕಿಗೆ ಇರುವ ಪಾತಾಳೇಶ್ವರ ಸ್ವಾಮಿ ದೇವಾಲಯವು ಕೂಡ ಪುರಾತವಾದುದೇ ಅಲ್ಲ ಅತ್ಯಂತ ಸುಂದರವಾದುದು ಕೂಡ ಆಗಿದೆ. ಈ ದೇವಾಲಯಕ್ಕೆ ತೆರಳಲು ಮೆಟ್ಟಿಲುಗಳ ಸೌಲಭ್ಯವಿದೆ. ಈ ದೇವಾಲಯವನ್ನು 7 ನೇ ಶತಮಾನಕ್ಕಿಂತ ಹಿಂದೆಯಿಂದಲೂ ಕೂಡ ಪ್ರಜೆಗಳು ಪೂಜೆಗಳನ್ನು ನಿರ್ವಹಿಸುತ್ತಿದ್ದಾರೆ.

ವಿಠಲಸ್ವಾಮಿ ದೇವಾಲಯ

ವಿಠಲಸ್ವಾಮಿ ದೇವಾಲಯ

ವಿಠಲಸ್ವಾಮಿ ದೇವಾಲಯವು ಅತ್ಯಂತ ಸುಂದರವಾದುದು. ಈ ದೇವಾಲಯದ ಬಗ್ಗೆ ವರ್ಣಿಸಲು ಪದಗಳೇ ಸಾಲದು. ಏಕೆಂದರೆ ಈ ದೇವಾಲಯದಲ್ಲಿರುವುದೆಲ್ಲಾ ಅದ್ಭುತವೇ ಅದ್ಭುತ. ಮನೋಹರವಾದ ಶಿಲ್ಪಕಲೆಗಳಿಂದ ಆಕರ್ಷಿಸುವ ಈ ದೇವಾಲಯದಲ್ಲಿ ಶ್ರೀ ಮಹಾವಿಷ್ಣುವು ನೆಲೆಸಿದ್ದಾನೆ. ಈ ಅಪೂರ್ವವಾದ ದೇವಾಲಯವನ್ನು 15 ನೇ ಶತಮಾನದಲ್ಲಿ ನಿರ್ಮಾಣ ಮಾಡಿದರು ಎನ್ನಲಾಗಿದೆ.

ಮುಖ್ಯವಾದ ಆಕರ್ಷಣೆ

ಮುಖ್ಯವಾದ ಆಕರ್ಷಣೆ

ಇಲ್ಲಿನ ಮುಖ್ಯವಾದ ಆಕರ್ಷಣೆ ಏನೆಂದರೆ ಕಲ್ಲಿನಿಂದ ನಿರ್ಮಾಣ ಮಾಡಿರುವ ರಥ. ಅಂದರೆ ಕಲ್ಲಿನ ರಥ. ದೇವಾಲಯದ ಗೋಪುರದ ನಮೂನೆಯು ಗರುಡ ಪಕ್ಷಿ ಆಕಾರದಲ್ಲಿದೆ. ರಥದ ಮುಂದೆ ಇರುವ ಆನೆಗಳು ನಿಜವಾಗಿಯೂ ರಥವನ್ನು ಮುನ್ನಡೆಸುತ್ತಿದೆ ಎಂದೇ ಭಾಸವಾಗುತ್ತದೆ.

ದೇವಾಲಯದಲ್ಲಿನ ಸ್ತಂಭಗಳು

ದೇವಾಲಯದಲ್ಲಿನ ಸ್ತಂಭಗಳು

ಇದರ ಬಗ್ಗೆ ಪ್ರಪಂಚವೆಲ್ಲಾ ವ್ಯಾಪಕವಾಗಿ ಪ್ರಸಿದ್ಧಿಯನ್ನು ಪಡೆದಿದೆ. ಏಕೆಂದರೆ ಈ ದೇವಾಲಯದಲ್ಲಿನ ಸ್ತಂಭಗಳನ್ನು "ಮ್ಯೂಸಿಕಲ್ ಪಿಲ್ಲರ್ಸ್" ಎಂದು ಕರೆಯುತ್ತಾರೆ. ಈ ದೇವಾಲಯವನ್ನು 1422 ರಿಂದ 1444 ರ ಮಧ್ಯ ಭಾಗದಲ್ಲಿ ನಿರ್ಮಾಣ ಮಾಡಿದರು. ಈ ದೇವಾಲಯವನ್ನು ಶ್ರೀ ಕೃಷ್ಣ ದೇವರಾಯ ತನ್ನ ಆಳ್ವಿಕೆಯ ಸಮಯದಲ್ಲಿ ಮತ್ತಷ್ಟು ಈ ಸಂಗೀತ ಸ್ತಂಭಗಳನ್ನು ಪ್ರಸಿದ್ಧಿಗೊಳಿಸಿದನು ಎಂದು ನಂಬಲಾಗಿದೆ.

ಮ್ಯೂಸಿಕಲ್ ಪಿಲ್ಲರ್ಸ್ ರಹಸ್ಯ

ಮ್ಯೂಸಿಕಲ್ ಪಿಲ್ಲರ್ಸ್ ರಹಸ್ಯ

ಈ ದೇವಾಲಯದಲ್ಲಿ ಅತ್ಯದ್ಭುತವಾದ ಮ್ಯೂಸಿಕಲ್ ಪಿಲ್ಲರ್ಸ್ ರಹಸ್ಯ ಏನು ಗೊತ್ತ? ಬ್ರಿಟೀಷ್ ಅವರು 2 ಸಂಗೀತ ಸ್ತಂಭಗಳನ್ನು ಕತ್ತರಿಸಿ ತಮ್ಮ ದೇಶಕ್ಕೆ ತೆಗೆದುಕೊಂಡು ಹೋದರು. ಆ ಕತ್ತರಿಸಿದ ಸ್ತಂಭಗಳ ಪರೀಕ್ಷೆಯನ್ನು ಮಾಡಿದರಂತೆ.

ಪರೀಕ್ಷೆ

ಪರೀಕ್ಷೆ

ಏಕೆಂದರೆ ಆ ಸ್ತಂಭದ ಒಳಭಾಗದಲ್ಲಿ ಯಾವುದಾದರೂ ರಹಸ್ಯವೇನಾದರೂ ಇರಬುದು ಎಂಬುದು ಅವರ ಅನುಮಾನವಾಗಿತ್ತು. ಆದರೆ ಆ ಸ್ತಂಭದಲ್ಲಿ ಅಂಥಹದೇನು ಇಲ್ಲದೇ ಇರುವ ಕಾರಣ ಅವರಿಗೆ ನಿರಾಶೆಯಾಯಿತು.

More News

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+