Search
  • Follow NativePlanet
Share
» »ಟಿಪ್ಪುವಿಗಿತ್ತಂತೆ ಇಲ್ಲಿಯ ಶ್ರೀಕಂಠನ ಮೇಲೆ ಅಪಾರ ನಂಬಿಕೆ !

ಟಿಪ್ಪುವಿಗಿತ್ತಂತೆ ಇಲ್ಲಿಯ ಶ್ರೀಕಂಠನ ಮೇಲೆ ಅಪಾರ ನಂಬಿಕೆ !

ಕಪಿಲ ನದಿಯ ತೀರದಲ್ಲಿ ನಂಜನಗೂಡು ಇದೆ. ಇದನ್ನು ಸ್ಥಳ ಪುರಾಣದಲ್ಲಿ ಗರಳಪುರಿ ಎಂದೂ ಕರೆಯಲಾಗುತ್ತಿತ್ತು. ಈ ಪಟ್ಟಣದ ಹೆಸರು ಬೃಹತ್ ನಂಜುಂಡೇಶ್ವರ ಅಥವಾ ಶ್ರೀಕಂಠೇಶ್ವರ ದೇವಸ್ಥಾನದಿಂದ ಹುಟ್ಟಿಕೊಂಡಿದೆ.. ಶಿವನಿಗೆ ಅರ್ಪಿತವಾದ ಈ ದೇವಸ್ಥಾನವನ್ನು ಸ್ಥಳೀಯವಾಗಿ ನಂಜುಂಡೇಶ್ವರ ಎಂದು ಕರೆಯಲಾಗುತ್ತದೆ.

ದ್ರಾವಿಡ ಶೈಲಿ

ದ್ರಾವಿಡ ಶೈಲಿ

PC: Dineshkannambadi

ಈ ದೇವಾಲಯವು ದ್ರಾವಿಡ ಶೈಲಿಯಲ್ಲಿದ್ದು ಮೂಲತಃ ಗಂಗರು ಅಥವಾ ಚೋಳರು ನಿರ್ಮಿಸಿದಂತೆ ಕಂಡುಬರುತ್ತದೆ . 1900 ರ ವರೆಗೆ ಹೊಯ್ಸಳರು, ವಿಜಯನಗರ ಆಡಳಿತಗಾರರು, ಪಾಳೆಗಾರರು ಮತ್ತು ಇತರರು ಕೈಜೋಡಿಸಿದ್ದಾರೆ.

ಅತೀ ಎತ್ತರದ ದೇವಾಲಯ

ಅತೀ ಎತ್ತರದ ದೇವಾಲಯ

PC: Dineshkannambadi

ಮೈಸೂರು ಒಡೆಯರ್‌ಗಳು ದೇವಸ್ಥಾನವನ್ನು ನವೀಕರಿಸಲು ಸಾಕಷ್ಟು ಅನುದಾನಗಳನ್ನು ನೀಡಿದ್ದಾರೆ. ಇದನ್ನು ಕೃಷ್ಣರಾಜ ಒಡೆಯರ್ III ರವರು ನವೀಕರಿಸಿದರು ಮತ್ತು ಎತ್ತರದ ಗೋಪುರವನ್ನು 1845 ರಲ್ಲಿ ನಿರ್ಮಿಸಲಾಯಿತು. ಇದು ಕರ್ನಾಟಕದ ಅತಿದೊಡ್ಡ ದೇವಾಲಯಗಳಲ್ಲಿ ಒಂದಾಗಿದೆ, 385 ಅಡಿ ಉದ್ದ ಮತ್ತು 160 ಅಡಿ ಅಗಲವಾಗಿದೆ.

ಟಿಪ್ಪುವಿಗೆ ಈ ದೇವರ ಮೇಲೆ ನಂಬಿಕೆ ಇತ್ತು

ಟಿಪ್ಪುವಿಗೆ ಈ ದೇವರ ಮೇಲೆ ನಂಬಿಕೆ ಇತ್ತು

PC: Pavan R K
ಮುಸ್ಲಿಂ ಆಡಳಿತಗಾರ ಟಿಪ್ಪು ಸುಲ್ತಾನಿಗೆ ಈ ದೇವರ ಮೇಲೆ ಬಲವಾದ ನಂಬಿಕೆ ಇತ್ತು. ಹಾಗಾಗಿ ನಂಜುಂಡೇಶ್ವರ ನನ್ನು 'ಹಕಿಂ ನಂಜುಂಡೇಶ್ವರ' ಎಂದು ಕರೆಯುತ್ತಿದ್ದನು. ಇಲ್ಲೊಂದು ತೀರ್ಥವಿದೆ. ಈ ತೀರ್ಥದಲ್ಲಿ ಸ್ನಾನ ಮಾಡಿದ್ರೆ ಸಕಲ ರೋಗ, ರುಜಿನಗಳು ವಾಸಿಯಾಗುತ್ತವೆ ಎನ್ನಲಾಗುತ್ತದೆ.

ತೆಪ್ಪೋತ್ಸವ

ತೆಪ್ಪೋತ್ಸವ

PC: Abhijith Rao

ಪ್ರತಿವರ್ಷ ಮಾರ್ಚ್ / ಏಪ್ರಿಲ್‌ನಲ್ಲಿ ರಥೋತ್ಸವ ಆಯೋಜಿಸಲಾಗುವುದು, ಲಕ್ಷಾಂತರ ಭಕ್ತರು ಈ ಸಂದರ್ಭದಲ್ಲಿ ಇಲ್ಲಿ ಸೇರುತ್ತಾರೆ. ರಥೋತ್ಸವ ಸಾಂಸ್ಕೃತಿಕ ಕಾರ್ಯಕ್ರಮದ ಸಮಯದಲ್ಲಿ, ದೇವಾಲಯದ ಬೆಳಕು, ವರ್ಣರಂಜಿತ ತೆಪ್ಪೋತ್ಸವವನ್ನೂ ನಡೆಸಲಾಗುತ್ತದೆ.

 ಉಯ್ಯಾಲೆ ಉತ್ಸವ

ಉಯ್ಯಾಲೆ ಉತ್ಸವ

PC: Pavithrah

ಇಲ್ಲಿ ಕಪಿಲಾ ನದಿಯಲ್ಲಿ ಹದಿನಾರು ಕಾಲಿನ ಮಂಟಪವಿದೆ. ಆದರೆ ಈಗ ಅದು ಶಿಥಿಲಾವಸ್ಥೆಯಲ್ಲಿದೆ. ಹಿಂದೆ ರಾಜರುಗಳ ಕಾಲದಲ್ಲಿ ಇಲ್ಲೇ ತೆಪ್ಪೋತ್ಸವನ್ನು ನಡೆಸಲಾಗುತ್ತಿತ್ತು. . ಶ್ರೀಕಂಠ, ಪಾರ್ವತಿಗೆ ಉಯ್ಯಾಲೆ ಉತ್ಸವವನ್ನು ಮಾಡಲಾಗುತ್ತಿತ್ತು. ಆದರೆ ಈಗ ಬೇರೆ ಕಡೆ ತೆಪ್ಪೋತ್ಸವವನ್ನು ನಡೆಸಲಾಗುತ್ತದೆ..

More News

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+