ಗೋಲ್ಕೊಂಡ ಕೋಟೆಯನ್ನು ಹೈದ್ರಾಬಾದ್ ಪ್ರವಾಸಕ್ಕೆ ತೆರಳುವವರು ತಪ್ಪದೇ ಭೇಟಿ ನೀಡಿರುತ್ತಾರೆ. ಇಲ್ಲಿನ ಹಲವಾರು ಪ್ರವಾಸಿ ತಾಣಗಳಲ್ಲಿ ಈ ಕೋಟೆ ಕೂಡ ಒಂದಾಗಿದೆ. ಕುತುಬ್ ಷಾಹಿ ರಾಜರು ನಿರ್ಮಾಣ ಮಾಡಿರುವ ಈ ಅದ್ಭುತವಾದ ಕಟ್ಟಡವನ್ನು ಕಂಡರೆ ಮಂತ್ರಮುಗ್ಧರಾಗಲೇಬೇಕು. ಕೋಟೆಯ ಗೋಡೆಗಳು, ಕೆಳಗೆ ಚಪ್ಪಳೆ ಹೊಡೆದರೆ ಅಲ್ಲೆಲ್ಲೋ ಬೆಟ್ಟದ ಮೇಲೆ ಇರುವ ರಾಣಿ ಮಹಲ್‍ವರೆವಿಗೂ ಕೇಳಿಸುವ ಶಬ್ಧ ಎಂಥವರನ್ನು ಆಶ್ಚರ್ಯ ಚಕಿತರನ್ನಾಗಿಸದೇ ಬಿಡದು.
ಇಲ್ಲಿನ ಅದ್ಭುತವಾದ ಕಟ್ಟಡಗಳು, ಪುರಾತನವಾದ ಕೋಟೆಗಳು ಮತ್ತು ಆಹ್ಲಾದಕರವಾದ ಉದ್ಯಾನವನಗಳು ಹೊಂದಿರುವ ಗೋಲ್ಕೊಂಡ ಕೋಟೆಯು ದೆವ್ವಗಳ ಮತ್ತು ಆತ್ಮಗಳ ವಾಸಸ್ಥಾನವಾಗಿದೆಯಂತೆ.
ಕಾಕತೀಯ ರಾಜರು, ಬಹುಮನಿಸುಲ್ತಾನರು, ಕುತುಬ್ ಷಾಹಿಗಳು ಸುಲ್ತಾನರ ಜೊತೆಗೆ ಒಂದು ಅಮರ ಪ್ರೇಮ ಕೂಡ ತನ್ನಲ್ಲಿ ಅಡಗಿಸಿಕೊಂಡ ಈ ಚಾರಿತ್ರಿಕ ಕಟ್ಟಡ ಈಗ ಭಯಾನಕ ಸ್ಥಳವಾಗಿದೆ ಎಂದು ಹೇಳಲಾಗುತ್ತಿದೆ.
ಪ್ರೇಮಕ್ಕಾಗಿ ಪ್ರಾಣವನ್ನೇ ಅರ್ಪಿಸಿದ ತಾರಾಮತಿ ಆತ್ಮ ಈ ಗೋಲ್ಕೊಂಡ ಕೋಟೆಯಲ್ಲಿ ತಿರುಗುತ್ತಿದೆ ಎಂಬ ಮಾತು ಕೇಳಿಬರುತ್ತಿದೆ. ಅಸಲಿಗೆ ಆ ತಾರಾಮತಿ ಯಾರು? ಆ ಪ್ರೇಮ ಕಥೆ ಏನು? ಎಂಬ ಹಲವಾರು ಪ್ರಶ್ನೆಗಳಿಗೆ ಉತ್ತರವನ್ನು ಲೇಖನದ ಮೂಲಕ ತಿಳಿಯಿರಿ.

ಗೋಲ್ಕೊಂಡ ಕೋಟೆಯ ತಾರಾಮತಿ ಪ್ರೇಮಕಥೆ
ಹೈದ್ರಾಬಾದ್ ಮಹಾನಗರದಲ್ಲಿನ ಈ ಗೋಲ್ಕೊಂಡ ಕೋಟೆಯು ಪೂರ್ವದಲ್ಲಿ ಮಂಗಳಗಿರಿ ಎಂದು ಕರೆಯುತ್ತಿದ್ದರು. ಕ್ರಿ.ಶ 1143 ಪ್ರದೇಶದಲ್ಲಿ ಒಬ್ಬ ದನಕಾಯುವವನಿಗೆ ಇಲ್ಲಿ ಒಂದು ದೇವತಾ ಮೂರ್ತಿ ದೊರೆಯಿತು. ಈ ವಿಷಯವನ್ನು ತಿಳಿದ ಅಂದಿನ ಕಾಕತೀಯ ರಾಜರು ಆ ಪ್ರದೇಶವನ್ನು ಅತ್ಯಂತ ವಿಶಿಷ್ಟವಾದುದು ಎಂದು ಭಾವಿಸಿ ಇಲ್ಲಿ ಮಣ್ಣಿನ ಕೋಟೆಯನ್ನು ನಿರ್ಮಾಣ ಮಾಡಿದರು.

ಗೋಲ್ಕೊಂಡ ಕೋಟೆಯ ತಾರಾಮತಿ ಪ್ರೇಮಕಥೆ
ಸಾಮಾನ್ಯವಾಗಿ ದನಕಾಯುವವನನ್ನು ಗೊಲ್ಲ ಎಂದು ಕರೆಯುತ್ತಾರೆ. ಹಾಗಾಗಿ ಈ ಕೋಟೆಯನ್ನು ಗೊಲ್ಲಕೊಂಡ ನಂತರ ಗೋಲ್ಕೊಂಡ ಕೋಟೆ ಎಂದು ಕರೆಯಲಾಯಿತು.

ಗೋಲ್ಕೊಂಡ ಕೋಟೆಯ ತಾರಾಮತಿ ಪ್ರೇಮಕಥೆ
ಅಂದಿನಿಂದ 2 ನೇ ಶತಮಾನದಲ್ಲಿ ಈ ಕೋಟೆ ಕಾಕತೀಯ ಆಳ್ವಿಕೆಯಲ್ಲಿಯೇ ಇತ್ತು. 1364 ರಲ್ಲಿ ಈ ಕೋಟೆಯನ್ನು ಬಹುಮನಿ ಸುಲ್ತಾನರ ಕೈವಶವಾಯಿತು. 1518 ರಲ್ಲಿ ಕುಲಿಕುತುಬ್ ಷಾ ಬಹುಮನಿ ಸುಲ್ತಾನನ್ನು ಓಡಿಸಿ ಗೋಲ್ಕೊಂಡ ಕೋಟೆಯನ್ನು ರಾಜಧಾನಿಯಾಗಿ ಕುಲಿಕುತುಬ್ ಷಾಹಿ ಸಾಮ್ರಾಜ್ಯವಾಗಿ ಆಳ್ವಿಕೆ ಮಾಡಿದನು.

ಗೋಲ್ಕೊಂಡ ಕೋಟೆಯ ತಾರಾಮತಿ ಪ್ರೇಮಕಥೆ
ಕುಲಿಕುತುಬ್ ಷಾಹಿ ಸುಲ್ತಾನನ ಪಾಲನೆಯಲ್ಲಿ ಗೋಲ್ಕೊಂಡ ಕೋಟೆಯು ಅತ್ಯಂತ ಪ್ರಸಿದ್ಧಿ ಹೊಂದಿತು. ಅಂದಿನಿಂದ 60 ವರ್ಷಗಳ ಕಾಲ ಮೊದಲ ಮೂರು ಸುಲ್ತಾನರು ಗ್ರಾನೈಟ್‍ನಿಂದ ಗೋಲ್ಕೊಂಡ ಕೋಟೆಯನ್ನು ಪುನರ್ ನಿರ್ಮಾಣ ಮಾಡಿದರು. ಅದರ ವಿಸ್ತೀರ್ಣವನ್ನು 5 ಕಿ.ಮೀ ಹೆಚ್ಚಾಗಿ ವಿಸ್ತರಿಸಿದರು.

ಗೋಲ್ಕೊಂಡ ಕೋಟೆಯ ತಾರಾಮತಿ ಪ್ರೇಮಕಥೆ
1590 ರಲ್ಲಿ ಸುತ್ತಲೂ 15 ಕಿ.ಮೀಗಳ ಒಂದು ದೊಡ್ಡ ಪ್ರಾಕಾರವನ್ನು ನಿರ್ಮಾಣ ಮಾಡಿದರು. ನಂತರ ಕುತುಬ್ ಷಾಹಿ ಆಳ್ವಿಕೆಗೆ ಸುಮಾರು 1686 ರಲ್ಲಿ ಅವರ ರಾಜಧಾನಿಯಾದ ಗೋಲ್ಕೊಂಡದಿಂದ ಹೈದ್ರಾಬಾದ್‍ಗೆ ಸ್ಥಳಾಂತರಿಸಿದರು.

ಗೋಲ್ಕೊಂಡ ಕೋಟೆಯ ತಾರಾಮತಿ ಪ್ರೇಮಕಥೆ
1687 ರಲ್ಲಿ ಹೈದ್ರಾಬಾದ್ ಅನ್ನು ಮೊಗಲ್ ಸಾಮ್ರಾಜ್ಯದಲ್ಲಿ ವಿಲೀನಗೊಳಿಸಬೇಕು ಎಂಬ ಉದ್ದೇಶದಿಂದ ಮೊಗಲ್ ಚಕ್ರವರ್ತಿ ಔರಂಗಜೇಬ್ ದಂಡೆತ್ತಿ ಬಂದನು. ಆದರೆ ಭದ್ರಚಾಗಿದ್ದ ಗೋಲ್ಕೊಂಡ ಕೋಟೆಯನ್ನು ಮಾತ್ರ ವಶಪಡಿಸಿಕೊಳ್ಳಲು ಸಾಧ್ಯವಾಗಲಿಲ್ಲ.

ಗೋಲ್ಕೊಂಡ ಕೋಟೆಯ ತಾರಾಮತಿ ಪ್ರೇಮಕಥೆ
ಕೊನೆಯದಾಗಿ ಗೋಲ್ಕೊಂಡಗೆ ಸೇರಿದ ಒಬ್ಬ ರಾಜ ದ್ರೋಹಿ ಮೊಗಲ್ ಸೈನ್ಯ ನೀಡುವ ಕಾಣಿಗೆ ಆಸೆ ಬಿದ್ದು ಕೋಟೆಯ ರಹಸ್ಯಗಳನ್ನು ಶತ್ರು ಸೈನ್ಯಕ್ಕೆ ತಿಳಿಸಿದನು. ಹೀಗಾಗಿ ಔರಂಗಜೇಬ್ ಸುಲಭವಾಗಿ ಗೋಲ್ಕೊಂಡ ಕೋಟೆಯನ್ನು ವಶಪಡಿಸಿಕೊಂಡನು.

ಗೋಲ್ಕೊಂಡ ಕೋಟೆಯ ತಾರಾಮತಿ ಪ್ರೇಮಕಥೆ
ನಂತರ ಮೊಗಲ್ ಸೈನ್ಯವು ಗೋಲ್ಕೊಂಡ ಕೋಟೆಯನ್ನು ಧ್ವಂಸ ಮಾಡಿದರು. ಗೋಲ್ಕೊಂಡ ಕೋಟೆಯನ್ನು ಹಿಂದೂ ಮತ್ತು ಇಸ್ಲಾಮಿಕ್ ಸಮಿಶ್ರ ಶೈಲಿಯಲ್ಲಿ ನಿರ್ಮಾಣವಾದ ಒಂದು ಅಪೂರ್ವವಾದ ಕಟ್ಟಡವಾಯಿತು.

ಗೋಲ್ಕೊಂಡ ಕೋಟೆಯ ತಾರಾಮತಿ ಪ್ರೇಮಕಥೆ
400 ಅಡಿ ಎತ್ತರ ಒಂದು ಗ್ರಾನೈಟ್ ಪರ್ವತದ ಮೇಲೆ 4 ಪ್ರತ್ಯೇಕವಾದ ಕೋಟೆ ಮತ್ತು ಕೋಟೆಯ ಸುತ್ತಲೂ ಅದ್ಭುತವಾದ ಪ್ರಾಕಾರದಿಂದ ಸುಂದರವಾಗಿದೆ. ಈ ಪ್ರಾಕಾರದ ಮೇಲೆ ಕೋಟೆಗೆ ರಕ್ಷಣೆಗಾಗಿ ಎಂದು 87 ಕಮಾನುಗಳನ್ನು ಇಲ್ಲಿ ನಿರ್ಮಾಣ ಮಾಡಿದರು.

ಗೋಲ್ಕೊಂಡ ಕೋಟೆಯ ತಾರಾಮತಿ ಪ್ರೇಮಕಥೆ
ಗೋಲ್ಕೊಂಡ ವಜ್ರಗಳ ವ್ಯಾಪಾರಕ್ಕೆ ಹೆಚ್ಚಾಗಿ ಪ್ರಸಿದ್ಧಿ ಹೊಂದಿತ್ತು. ಪ್ರಪಂಚ ಪ್ರಸಿದ್ಧಿಯ ಹಲವಾರು ವಜ್ರಗಳು ಇಲ್ಲಿ ಲಭ್ಯವಾದುವು. ಅಷ್ಟೇ ಅಲ್ಲ ಭಾರತದ ವಿಶ್ವವಿಖ್ಯಾತ ಕೊಹಿನೋರ್ ವಜ್ರ ಕೂಡ ಕುತುಬ್ ಷಾಹಿಗಳ ಕಾಲದಲ್ಲಿ ಇತ್ತು ಎಂದು ಚರಿತ್ರೆ ಹೇಳುತ್ತದೆ.

ಗೋಲ್ಕೊಂಡ ಕೋಟೆಯ ತಾರಾಮತಿ ಪ್ರೇಮಕಥೆ
ಇಲ್ಲಿ ಸುಮಾರು 360 ಮೆಟ್ಟಿಲುಗಳನ್ನು ಹೊಂದಿರುವ ಸುಂದರವಾದ ಭವನವಿದೆ. ಇದರ ಮೇಲಿನ ಭಾಗದಿಂದ ಪರ್ವತ ಶಿಖರದ ಮೇಲೆ ತಾರಾಮತಿಗಾನ ಮಂದಿರವಿದೆ. ಇದೊಂದು ಪ್ರೇಮಮತಿ ನೃತ್ಯ ಮಂದಿರವಾಗಿದ್ದು, 2 ಗೃಹಗಳು ಇವೆ.

ಗೋಲ್ಕೊಂಡ ಕೋಟೆಯ ತಾರಾಮತಿ ಪ್ರೇಮಕಥೆ
ಇಲ್ಲಿ ತಾರಮತಿ ಮತ್ತು ಪ್ರೇಮಮತಿ ಎಂಬ ಇಬ್ಬರು ನರ್ತಕಿಯರು ಇಲ್ಲಿ ನಿವಾಸಿಸುತ್ತಿದ್ದರು. ಇವರು ಇಲ್ಲಿ ನೃತ್ಯ ಮಾಡಿದರೆ ಸುಲ್ತಾನ ದರ್ಬಾರ್ ನಿಂದ ನೋಡುತ್ತಾ ಆನಂದಿಸುತ್ತಿದ್ದ.

ಗೋಲ್ಕೊಂಡ ಕೋಟೆಯ ತಾರಾಮತಿ ಪ್ರೇಮಕಥೆ
ದಿನನಿತ್ಯವು ಸಾವಿರಾರು ಮಂದಿ ಪ್ರವಾಸಿಗರು ಈ ಗೋಲ್ಕೊಂಡ ಕೋಟೆಗೆ ಭೇಟಿ ನೀಡುತ್ತಾರೆ. ಕೆಲವರು ಇಲ್ಲಿನ ಅಪೂರ್ವವಾದ ಅನುಭೂತಿಯನ್ನು ಪಡೆದರೆ ಇನ್ನೂ ಕೆಲವರು ಇಲ್ಲಿನ ಭಯಾನಕ ದೃಶ್ಯವನ್ನು ಕಂಡು ಹೆದರುತ್ತಾರೆ.

ಗೋಲ್ಕೊಂಡ ಕೋಟೆಯ ತಾರಾಮತಿ ಪ್ರೇಮಕಥೆ
ಈ ಐತಿಹಾಸಿಕ ಕೋಟೆಯಲ್ಲಿ ಆತ್ಮಗಳ ಸಂಚಾರವಿದೆ ಎಂದು ಪ್ರಚಾರದಲ್ಲಿದೆ. ಹಲವಾರು ಮಂದಿ ಗೋಲ್ಕೊಂಡ ಕೋಟೆಯನ್ನು "ಹಂಟೆಡ್ ಪ್ಲೆಸ್" ಎಂದು ಭಾವಿಸುತ್ತಾರೆ. ಇಲ್ಲಿನ ಕೆಲವು ಭಯಾನಕ ಘಟನೆಗಳಿಂದ ಈ ಕೋಟೆಯನ್ನು ಹೀಗೆ ಕರೆಯಲು ಕಾರಣ ಎಂದು ಹೇಳುತ್ತಾರೆ.

ಗೋಲ್ಕೊಂಡ ಕೋಟೆಯ ತಾರಾಮತಿ ಪ್ರೇಮಕಥೆ
ಮಧ್ಯಾಹ್ನದ ಸಮಯದಲ್ಲಿ ಮತ್ತು ಸಂಜೆಯ ಸಮಯದಲ್ಲಿ ಅಂದರೆ 6 ಗಂಟೆಯ ನಂತರ ಕೆಲವು ಭಯಾನಕವಾದ ಶಬ್ಧಗಳು ಕೇಳಿಸುತ್ತವೆ ಎಂತೆ. ಅಂದರೆ ಯಾರೊ ಆಳುವುದು, ಗೆಜ್ಜೆಯ ಶಬ್ಧ, ಅದೃಶ್ಯವಾದ ಹಾಡುಗಳು ಕೇಳಿಸುತ್ತಿರುತ್ತದೆ ಎಂತೆ.

ಗೋಲ್ಕೊಂಡ ಕೋಟೆಯ ತಾರಾಮತಿ ಪ್ರೇಮಕಥೆ
ಕೆಲವರ ಅಭಿಪ್ರಾಯವೆನೆಂದರೆ ತಾರಾಮತಿಯ ಆತ್ಮ ರಾಯಲ್ ಕೋಟೆಯ ಹಾಲ್‍ನಲ್ಲಿ ನೃತ್ಯ ಮಾಡುತ್ತಾ ತನ್ನ ಪ್ರೇಮ ವಿಫಲತೆಗೆ ರ್ದುಮರಣ ಹೊಂದಿದ ತಾರಾಮತಿಯ ಆತ್ಮವೇ ಇಲ್ಲಿ ಸಂಚಾರವಿದೆ ಎಂದು ಹೇಳುತ್ತಾರೆ.

ಗೋಲ್ಕೊಂಡ ಕೋಟೆಯ ತಾರಾಮತಿ ಪ್ರೇಮಕಥೆ
ತಾನು ಪ್ರೇಮಿಸಿದ ಭಾಗಮತಿಯ ಗುರುತಿಗಾಗಿ ಭಾಗ್ಯನಗರವನ್ನು ನಿರ್ಮಾಣ ಮಾಡಿದ ಮಹಮ್ಮದ್ ಕುತುಬ್ ಷಾ ಮೊಮ್ಮಗನಾದ 7 ನೇ ಕುತುಬ್ ಷಾಹಿ ಸುಲ್ತಾನ ಅಬ್ದುಲ್ ಕುತುಬ್ ಷಾ ಕಾಲದಲ್ಲಿ ತಾರಾಮತಿ, ಪ್ರೇಮಮತಿ ಎಂಬ ಇಬ್ಬರು ಸುಂದರಿಯರು ಗೋಲ್ಕೊಂಡ ರಾಜ್ಯದಲ್ಲಿ ನರ್ತಕಿಯರಾಗಿ ಇರುತ್ತಿದ್ದರಂತೆ.

ಗೋಲ್ಕೊಂಡ ಕೋಟೆಯ ತಾರಾಮತಿ ಪ್ರೇಮಕಥೆ
ಇವರಿಬ್ಬರ ಸೌಂದರ್ಯ ಎಂಥವರನ್ನು ಮರಳು ಮಾಡುವ ಶಕ್ತಿಯನ್ನು ಹೊಂದಿತ್ತು. ಇಬ್ಬರು ಬಹುದೊಡ್ಡ ನೃತ್ಯಗಾರಣಿಗಳು ಅವರಲ್ಲಿ ತಾರಾಮತಿ ಹಾಡುಗಾರ್ತಿ ಕೂಡ ಆಗಿದ್ದಳು. ಗೋಲ್ಕೊಂಡ ಸರಾಯಿ ಎಂಬ ಮಂದಿರದಲ್ಲಿ ನೃತ್ಯ ಮಾಡುತ್ತಾ ಗೋಲ್ಕೊಂಡಕ್ಕೆ ಭೇಟಿ ನೀಡುವ ಯಾತ್ರಿಕರನ್ನು ವಿನೋದ ಮಾಡುತ್ತಿದ್ದರು.

ಗೋಲ್ಕೊಂಡ ಕೋಟೆಯ ತಾರಾಮತಿ ಪ್ರೇಮಕಥೆ
ಒಮ್ಮೆ ತಾರಮತಿ ಹಾಡು ಹಾಡುವಾಗ ಆ ಮಧುರವಾದ ಹಾಡು ದರ್ಬಾರ್‍ನಲ್ಲಿರುವ ಸುಲ್ತಾನನ ಕಿವಿಗೆ ಬೀಳುತ್ತದೆ. ಆ ಮನೋಹರವಾದ ಗಾಯನಗಾರ್ತಿಯ ಹಾಡಿಗೆ ಮರುಳಾದ ಸುಲ್ತಾನ ತನ್ನ ಸೇವಕನಿಗೆ ಆಕೆಯ ವಿವರವನ್ನು ತಿಳಿದುಕೊಂಡು ಬಾ ಎಂದು ಕಳುಹಿಸುತ್ತಾನೆ.

ಗೋಲ್ಕೊಂಡ ಕೋಟೆಯ ತಾರಾಮತಿ ಪ್ರೇಮಕಥೆ
ಅಬ್ದುಲ್ ಕುತುಬ್ ಷಾಹಿ ತಾರಾಮತಿ ಸೌಂದರ್ಯವನ್ನು ಕಂಡು ಪ್ರೇಮದಲ್ಲಿ ಬೀಳುತ್ತಾನೆ. ತಾರಾಮತಿ ಕೂಡ ಸುಲ್ತಾನನ ಪ್ರೇಮಕ್ಕೆ ಅಂಗೀಕಾರ ಮಾಡುತ್ತಾಳೆ. ತಕ್ಷಣ ಅವರಿಗೆ ನಿವಾಸವನ್ನು ಕಟ್ಟಿ ಕೊಡುತ್ತಾನೆ. ಅದೇ ಆ ಶಿಖರದ ಭವನಗಳು.

ಗೋಲ್ಕೊಂಡ ಕೋಟೆಯ ತಾರಾಮತಿ ಪ್ರೇಮಕಥೆ
ಅಲ್ಲಿ ಅವರು ಮಾಡುವ ನೃತ್ಯವನ್ನು ಕಂಡು ಸುಲ್ತಾನನು ಆನಂದ ಪಡುತ್ತಿರುತ್ತಾನೆ. ಆಗ ತಾರಾಮತಿ ಸುಲ್ತಾನನಿಗೆ ಮತ್ತಷ್ಟು ಆನಂದ ಪಡಿಸಲು ಎರಡು ಭವನಗಳ ಮಧ್ಯೆ ಒಂದು ದಪ್ಪದಾದ ದಾರವನ್ನು ಕಟ್ಟಿ ಆ ಮೇಲೆ ನೃತ್ಯ ಮಾಡುತ್ತಾಳೆ. ಸುಲ್ತಾನನು ತಾರಾಮತಿಗೆ ರಾಜಧಾನಿಯಲ್ಲಿ ಉನ್ನತ ಸ್ಥಾನವನ್ನು ನೀಡುತ್ತಾನೆ.

ಗೋಲ್ಕೊಂಡ ಕೋಟೆಯ ತಾರಾಮತಿ ಪ್ರೇಮಕಥೆ
ಹೀಗಾಗಿ ತಾರಾಮತಿ ಅಬ್ದುಲ್ ಕುತುಬ್ ಷಾಹಿಗಾಗಿ ಒಂದು ಸುಂದರವಾದ ಮಸೀದಿಯನ್ನು ನಿರ್ಮಾಣ ಮಾಡಿಸುತ್ತಾಳೆ. ಅದೇ ಕೋಟೆಯಲ್ಲಿನ ತಾರಾಮತಿ ಮಸೀದಿ. ಅಷ್ಟು ಸಾಧಾರಣವಾದ ಸ್ತ್ರೀಗೆ ಇಷ್ಟು ಉನ್ನತವಾದ ಪದವಿ ನೀಡುತ್ತಾ ಗೌರವಿಸುತ್ತಿರುವುದು ಕೆಲವರಿಗೆ ಇಷ್ಟವಾಗುತ್ತಿರಲಿಲ್ಲ.

ಗೋಲ್ಕೊಂಡ ಕೋಟೆಯ ತಾರಾಮತಿ ಪ್ರೇಮಕಥೆ
ಒಮ್ಮೆ ತಾರಾಮತಿ ಹಾಗು ಸುಲ್ತಾನನ ಇಬ್ಬರಿಗೂ ವಿವಾಹ ನಿಶ್ಚಯವಾಯಿತು. ಇದರಿಂದಾಗಿ ಅತ್ಯಂತ ಸಂತೋಷವಾಗಿದ್ದ ತಾರಾಮತಿ ಒಂದು ದಿನ ಆಕಸ್ಮಿಕವಾಗಿ ಮರಣ ಹೊಂದಿದಳು. ಆರೋಗ್ಯವಾಗಿದ್ದ ತಾರಾಮತಿ ಹೀಗೆ ಇದ್ದಕ್ಕಿದ್ದ ಹಾಗೆ ಮರಣ ಹೊಂದಿದ ಕಾರಣ ಹೇಗೆ ಎಂಬುದಕ್ಕೆ ಉತ್ತರ ದೊರೆಯಲಿಲ್ಲ.

ಗೋಲ್ಕೊಂಡ ಕೋಟೆಯ ತಾರಾಮತಿ ಪ್ರೇಮಕಥೆ
ತನ್ನ ಪ್ರೇಮ ಸಫಲವಾಗದೆಯೇ ಮರಣ ಹೊಂದಿದ ತಾರಾಮತಿಯ ಆತ್ಮ ಇಲ್ಲಿ ತಿರುಗಾಡುತ್ತಿದೆ ಎಂದು ಕೆಲವರು ಹೇಳುತ್ತಿದ್ದಾರೆ. ಈ ಕೋಟೆಗೆ ಸಂದರ್ಶನದ ಸಮಯ ಬೆಳಗ್ಗೆ 9 ಗಂಟೆಯಿಂದ ಸಂಜೆ 5:30 ರವರೆಗೆ.

ಹೇಗೆ ಸಾಗಬೇಕು?
ಗೋಲ್ಕೊಂಡ ಕೋಟೆಗೆ ಭೇಟಿ ಮಾಡಲು ಹೈದ್ರಾಬಾದ್‍ಗೆ ತೆರಳಬೇಕು. ಬೆಂಗಳೂರಿನಿಂದ ಹೈದ್ರಾಬಾದ್‍ಗೆ ಹಲವಾರು ಬಸ್ಸು, ರೈಲ್ವೆ ಮತ್ತು ವಿಮಾನ ಸೌಲಭ್ಯಗಳು ಇವೆಯಾದ್ದರಿಂದ ಸುಲಭವಾಗಿ ತೆರಳಬಹುದಾಗಿದೆ. ಹೈದ್ರಾಬಾದ್‍ನಿಂದ ಸಿಟಿ ಬಸ್ಸುಗಳ ಮೂಲಕ ಗೋಲ್ಕೊಂಡ ಕೋಟೆಗೆ ತಲುಪಬಹುದಾಗಿದೆ.


Click it and Unblock the Notifications
















