ಕರ್ನಾಟಕದ ಈ ಐದು ಸ್ಥಳಗಳು ಪ್ರವಾಸ ಪ್ರೀಯರ ಸ್ವರ್ಗವೆನ್ನಬಹುದು!
ವಾಸ್ತುಶಿಲ್ಪದ ಅದ್ಭುತಗಳು, ವಿಶ್ವ ಪರಂಪರೆಯ ತಾಣಗಳು, ಹಚ್ಚ ಹಸಿರಿನ ಕಾಡುಗಳು, ಅದ್ಭುತ ವನ್ಯಜೀವಿಗಳು, ಆಕರ್ಷಕವಾದ ನದಿಗಳು, ಸೊಗಸಾದ ಜಲಪಾತಗಳು, ಪ್ರಶಾಂತ ಕಡಲತೀರಗಳು ಮತ್ತು ಪ್ರಾಚೀನ ಸ್ಥಳಗಳು ಕರ್ನಾಟಕದ ಬಹುಕಾಂತೀಯ ಭೂಮಿಯನ್ನು ಸಮೃದ್ಧಗೊಳಿಸುತ್ತವೆ! ಅದು ಪರಂಪರೆ, ಪ್ರಕೃತಿ, ವನ್ಯಜೀವಿ ಅಥವಾ ಕಡಲತೀರಗಳು, ಕರ್ನಾಟಕವು ಅನೇಕ ಛಾಯೆಗಳು ಮತ್ತು ಪ್ರಪಂಚಗಳಿಂದ ಆಶೀರ್ವದಿಸಿದ ಭೂಮಿಯಾಗಿದೆ! ಆದರೆ ಈ ಸ್ಥಳದ ಬಗ್ಗೆ ನಿಮಗೆಷ್ಟು ಗೊತ್ತು? ಇದು ಇನ್ನೂ ಸಾಕಷ್ಟು ಪರಿಶೋಧಿಸಬೇಕಾದ ಅನೇಕ ಪ್ರಾಚೀನ ಸ್ಥಳಗಳನ್ನು ತನ್ನ ಮಡಿಲಲ್ಲಿ ಅವಿತಿಸಿಟ್ಟುಕೊಂಡಿದೆ.
ಹೆಚ್ಚಿನ ಜನರಿಗೆ ಕರ್ನಾಟಕದ ಆಫ್ಬೀಟ್ ತಾಣಗಳ ಬಗ್ಗೆ ಹಲವರಿಗೆ ಪರಿಚಯ ಕಡಿಮೆ ಇದೆ. ಈ ಕಡಿಮೆ ಪರಿಚಿತ ಕರ್ನಾಟಕದ ಮನಮೋಹಕ ತಾಣಗಳು ನಿಮ್ಮನ್ನು ಖಂಡಿತವಾಗಿಯೂ ಮಂತ್ರಮುಗ್ದಗೊಳಿಸುತ್ತವೆ.

ದಕ್ಷಿಣದ ಚಿರಾಪುಂಜಿ! ಆಗುಂಬೆ
ಮನಮೋಹಕ ಸೂರ್ಯಾಸ್ತ, ಹೊಳೆಯುವಂತಹ ತೊರೆಗಳು, ಪ್ರಾಚೀನ ಗ್ರಾಮೀಣ ವಾಸ್ತವ್ಯಗಳು, ಮತ್ತು ಸಂಪದ್ಬರಿತ ಜೀವವೈವಿಧ್ಯಗಳು ಇವೆಲ್ಲ್ಲವನ್ನು ಹೊಂದಿರುವ ಆಗುಂಬೆಯು ಒಂದು ಅತ್ಯದ್ಬುತವಾದ ಹಳ್ಳಿಯಾಗಿದ್ದು, ಸೋಮೇಶ್ವರ ಘಟ್ಟದ ಮೇಲಿರುವ ಪ್ರಸ್ಥಭೂಮಿಯ ಮೇಲೆ ನೆಲೆಸಿದೆ. ಕರ್ನಾಟಕದ ಶಿವಮೊಗ್ಗ ಜಿಲ್ಲೆಯಲ್ಲಿರುವ ಈ ಸ್ಥಳವು ಅನೇಕ ಸುಂದರವಾದ ಜಲಪಾತಗಳಿಂದ ಆಶೀರ್ವದಿಸಲ್ಪಟ್ಟಿದೆ.
ಆಗುಂಬೆಯ ಸೂರ್ಯಾಸ್ತವಾಗುವ ಸ್ಥಳವು ಅತ್ಯಂತ ಸುಂದರ ಮತ್ತು ಸೂಕ್ತವಾದ ಸ್ಥಳವಾಗಿದ್ದು ಪ್ರಕೃತಿಯ ಸೌಂದರ್ಯತೆಯನ್ನು ಆಸ್ವಾದಿಸುವ ಸೂಕ್ತ ಸ್ಥಳವಾಗಿದೆ. ಕರ್ನಾಟಕದ ಶಿವಮೊಗ್ಗ ಜಿಲ್ಲೆಯಲ್ಲಿರುವ ಈ ಸ್ಥಳವು ಸುಂದರವಾದ ಜಲಪಾತಗಳಿಂದ ಆಶೀರ್ವದಿಸಲ್ಪಟ್ಟಿದೆ. ಆಗುಂಬೆಯು ತನ್ನಲ್ಲಿರುವ ಮೂಕವಿಸ್ಮಿತಗೊಳಿಸುವಂತಹ ಪರಿಸರ ಮತ್ತು ಸ್ವರ್ಗಸುಖವೆನ್ನುವಂತಹ ಹವಾಮಾನ ಇವೆಲ್ಲವನ್ನು ಹೊಂದಿದ್ದು, ಇದು ನಿಸ್ಸಂದೇಹವಾಗಿಯೂ ಕಡಿಮೆ ಪರಿಶೋಧಿಸಲ್ಪಟ್ಟ ಕರ್ನಾಟಕದ ಟ್ರೆಕ್ಕಿಂಗ್ ತಾಣವೆನ್ನಬಹುದು. ಆಗುಂಬೆಯು ಹಲವಾರು ಟ್ರೆಕ್ಕಿಂಗ್ ಮಾರ್ಗಗಳನ್ನು ಹೊಂದಿದ್ದು, ಇವು ನಿಮಗೆ ಸುಂದರ ಪ್ರಪಂಚದ ಅನುಭವವನ್ನು ನೀಡುತ್ತದೆ.

ಕುದುರೆಮುಖದ ಮನಮೋಹಕ ಶಿಖರ
ಸಮುದ್ರಮಟ್ಟದಿಂದ 1894 ಮೀಟರ್ ಎತ್ತರವಿರುವ ಕುದುರೆಮುಖ ಶಿಖರವು ಕರ್ನಾಟಕದ ಚಿಕ್ಕಮಗಳೂರು ಚಿಲ್ಲೆಯಲ್ಲಿದ್ದು, ಇಲ್ಲಿರುವ ಪರ್ವತದ ಮಾರ್ಗಗಳು ಮತ್ತು ಶ್ರೀಮಂತ ಸಸ್ಯವರ್ಗ ಮತ್ತು ಪ್ರಾಣಿವರ್ಗಗಳಿಂದಾಗಿ ಇದನ್ನು ಚಾರುಣಿಗರು ಮತ್ತು ಪ್ರಕೃತಿ ಪೇಮಿಗಳ ಸ್ವರ್ಗವೆನ್ನಬಹುದಾಗಿದೆ. ಸುಂದರವಾದ ಪರಿಸರವು ಅತ್ಯುತ್ತಮ ಆಫ್ಬೀಟ್ ತಾಣವನ್ನಾಗಿಸುತ್ತಾ ಕರ್ನಾಟಕದಲ್ಲಿ ಭೇಟಿ ಕೊಡಬಹುದಾದ ಸುಂದರವಾದ ಸ್ಥಳಗಳಲ್ಲಿ ಒಂದಾಗಿಸಿದೆ.
ಶೋಲಾ ಹುಲ್ಲುಗಾವಲು ಪ್ರದೇಶದ ನೋಟ ಮತ್ತು ಸುತ್ತಲೂ ದಟ್ಟವಾದ ಕಾಡುಗಳು ಪ್ರತಿಯೊಬ್ಬ ಪ್ರವಾಸಿಗರನ್ನೂ ಖಂಡಿತವಾಗಿಯೂ ರೋಚಕಗೊಳಿಸುತ್ತದೆ. ಕುದುರೆಮುಖಕ್ಕೆ ಪ್ರಯಾಣಿಸಿ ಮತ್ತು ಪ್ರಶಾಂತತೆಯಲ್ಲಿ ಕಳೆದುಹೋಗಿ!

ಪ್ರಶಾಂತತೆಯ ಪ್ರತಿರೂಪ ಕೊಡಚಾದ್ರಿ!
ಕರ್ನಾಟಕದ ಉಡುಪಿ ಜಿಲ್ಲೆಯಲ್ಲಿರುವ ಕೊಲ್ಲೂರು ಒಂದು ಸಣ್ಣ ಪಟ್ಟಣವಾಗಿದ್ದು ಈ ಸ್ಥಳವು ಪ್ರಸಿದ್ದ ಮೂಕಾಂಬಿಕಾ ದೇವಾಲಯಕ್ಕೆ ಹೆಸರುವಾಸಿಯಾಗಿದೆ. ಕೊಲ್ಲೂರು ಕೇವಲ ಯಾತ್ರಾಸ್ಥಳಕ್ಕಾಗಿ ಮಾತ್ರ ಜನಮನ್ನಣೆ ಪಡೆದುದಲ್ಲದೆ ಇಲ್ಲಿರುವ ಕೊಡಚಾದ್ರಿ ಶಿಖರವೂ ಕೂಡಾ ಪ್ರತಿಯೊಬ್ಬ ಪ್ರಕೃತಿ ಪ್ರೇಮಿಯು ಹೋಗಬಯಸುವಂತಹ ಸ್ಥಳವಾಗಿದೆ. ಈ ಹತ್ತನೇ ಶಿಖರವು ಕರ್ನಾಟಕದ ಪಾರಂಪರಿಕ ಪ್ರಕೃತಿ ತಾಣವಾಗಿದೆ.
ಈ ಜೀವವೈವಿಧ್ಯತೆಯ ತಾಣವು ಹಲವಾರು ಅಳಿವಂಚಿನಲ್ಲಿರುವ ಮತ್ತು ವೈವಿಧ್ಯಮಯವಾದ ಜಾತಿಯ ಸಸ್ಯವರ್ಗ ಮತ್ತು ಜೀವವೈವಿಧ್ಯದ ನೆಲೆಯಾಗಿದೆ. ಈ ಸುಂದರವಾದ ಜಲಪಾತಗಳು ನಿಮ್ಮ ಜೋಡಿಕಣ್ಣುಗಳಿಗೆ ಹಬ್ಬವನ್ನು ನೀಡುತ್ತದೆ. ಈ ಮನಮೋಹಕ ಶಿಖರದಲ್ಲಿಯ ಸೂರ್ಯಾಸ್ತವು ಜೀವಮಾನದಲ್ಲೊಮ್ಮೆ ಅನುಭವಿಸಲೇಬೇಕು ಎನ್ನುವಂತದ್ದಾಗಿದೆ.

ಗೋಲ್ಡನ್ ಲೇಖ್ - ಹೊನ್ನೆಮರಡು
ಶರಾವತಿ ನದಿಯ ಹಿನ್ನೀರಿನಲ್ಲಿ ನೆಲೆಗೊಂಡಿರುವ ಹೊನ್ನೆಮರಡು ಬೆಟ್ಟಗಳ ಮೇಲೆ ನೆಲೆಸಿರುವ ಒಂದು ಸಣ್ಣ ಗ್ರಾಮವಾಗಿದ್ದು, ಲಿಂಗನಮಕ್ಕಿ ಜಲಾಶಯದ ಮೇಲಿದೆ. ಅದ್ಭುತ ಮತ್ತು ಗಮನಾರ್ಹ ಹಿನ್ನೆಲೆ ಹೊಂದಿರುವ ಹೊನ್ನೆಮರಡು ಜಲ ಕ್ರೀಡೆಗಳಿಗೆ ಸ್ವರ್ಗವಾಗಿದೆ. ಕೊರಾಕಲ್ ಸವಾರಿಯ ಅದ್ಭುತ ಅನುಭವಕ್ಕೆ ಹೆಸರುವಾಸಿಯಾಗಿದೆ, 'ಗೋಲ್ಡನ್ ಲೇಕ್' ಸೂರ್ಯೋದಯ ಮತ್ತು ಸೂರ್ಯಾಸ್ತದ ಕೆಲವು ಅದ್ಭುತ ನೋಟಗಳನ್ನು ಹೊಂದಿದೆ.
ಭವ್ಯ ಮತ್ತು ಹೆಸರುವಾಸಿಯಾಗುವ ಜೋಗ್ ಮತ್ತು ದಬ್ಬೆ ಜಲಪಾತಗಳು ಹೊನ್ನೆಮರಡಿಗೆ ಹತ್ತಿರದಲ್ಲಿ ನೆಲೆಸಿದೆ. ಸುಮಾರು. 830 ಅಡಿ ಎತ್ತರದಿಂದ ಬೀಳುವ ಜೋಗ್ ಜಲಪಾತವು ಭಾರತದ ಎರಡನೇ ದೊಡ್ಡ ಜಲಪಾತವಾಗಿದೆ.
ಮರವಂತೆಯ ಒಂದು ವಿಭಿನ್ನ ಭೂದೃಶ್ಯ
ಕರ್ನಾಟಕದ ಅತ್ಯಂತ ಸುಂದರ ಬೀಚ್ ಗಳಲ್ಲಿ ಒಂದೆಂದು ಪರಿಗಣಿಸಲ್ಪಟ್ಟಿರುವ ಬೀಚ್ ಗೆ ಹೆಸರುವಾಸಿಯಾಗಿರುವ ಮರವಂತೆ ಎನ್ನುವ ಸಣ್ಣ ಹಳ್ಳಿಯಾಗಿದ್ದು ಇದು ಒಂದೆಡೆ ಅರಬ್ಬೀ ಸಮುದ್ರ ಮತ್ತು ಇನ್ನೊಂದು ಕಡೆ ಸೌಪರ್ಣಿಕಾ ನದಿಯನ್ನೊಳಗೊಂಡ ಸುಂದರ ಭೂದೃಶ್ಯಗಳನ್ನೊಳಗೊಂಡಿದೆ ಈ ಮನಮೋಹಕ ದೃಶ್ಯಗಳನ್ನೊಳಗೊಂಡ ಭಾರತದ ಈ ಸ್ಥಳವು ತನ್ನದೇ ಆದ ವಿಭಿನ್ನತೆಯನ್ನು ಹೊಂದಿದೆ.
ಕರ್ನಾಟಕದ ಈ 5 ಆಫ್‌ಬೀಟ್ ಗಮ್ಯಸ್ಥಾನಗಳು ನಿಮ್ಮಲ್ಲಿರುವ ಪ್ರವಾಸಿ ಮನೋಭಾವವನ್ನು ತಣಿಸುವಂತಿದೆ! ಕರ್ನಾಟಕದ ಈ ಕಡಿಮೆ ಪ್ರಸಿದ್ಧ ಪ್ರವಾಸಿ ಸ್ಥಳಗಳು ಖಂಡಿತವಾಗಿಯೂ ನೀವು ತುಂಬಾ ಹಂಬಲಿಸುತ್ತಿದ್ದ ವಿರಾಮ ಸ್ಥಳವಾಗಿರಬಹುದು!


Click it and Unblock the Notifications


















