Search
  • Follow NativePlanet
Share
» »ಹಿಮಾಚಲ ಪ್ರದೇಶದಲ್ಲಿ ವರ್ಷದ ಐದು ದಿನ ಮಹಿಳೆಯರು ವಸ್ತ್ರ ಧರಿಸುವಂತಿಲ್ಲ

ಹಿಮಾಚಲ ಪ್ರದೇಶದಲ್ಲಿ ವರ್ಷದ ಐದು ದಿನ ಮಹಿಳೆಯರು ವಸ್ತ್ರ ಧರಿಸುವಂತಿಲ್ಲ

ಭಾರತ ದೇಶದಲ್ಲಿ ಒಂದೊಂದು ಪ್ರದೇಶಕ್ಕೆ ಒಂದೊಂದು ಆಚಾರ, ವಿಚಾರ ಸಂಪ್ರದಾಯಗಳಿವೆ. ಭಾರತ ವಿಭಿನ್ನವಾದ ಸಂಪ್ರದಾಯಗಳಿಗೆ ಪ್ರಪಂಚದಲ್ಲಿಯೇ ಹೆಸರು ವಾಸಿಯಾಗಿರುವ ದೇಶ. ಪ್ರಾಂತ್ಯಗಳಲ್ಲಿ ತಮ್ಮ ನಂಬಿಕೆಗೆ ಅನುಸಾರವಾಗಿ ಮಾನಸಿಕವಾಗಿ ಹಾಗೂ ದೈಹಿಕವಾಗಿ ಸಂಪ್ರದಾಯಗಳನ್ನು ಪಾಲಿಸುತ್ತಾರೆ.

ಹಿಮಾಚಲ ಪ್ರದೇಶದಲ್ಲಿಯೂ ಕೂಡ ನಿಮಗೆ ಊಹಿಸಲು ಅಸಾಧ್ಯವಾದ ಹಾಗೂ ನಿಮಗೆ ತಿಳಿಯದ ಆಚಾರಗಳ ಕೇಳಿದರೆ ನೀವು ಬೆರಗಾಗದೆ ಇರುವುದಿಲ್ಲ. ಹಿಮಾಚಲ ಪ್ರದೇಶ ದೇಶದಲ್ಲಿ ಒಂದು ಸುಂದರ ಪ್ರದೇಶಕ್ಕೆ ಹೆಸರುವಾಸಿ ತನ್ನದೇ ಆದ ಕೌಶಲ್ಯ ಹಾಗೂ ಹಿರಿಮೆಯಿಂದಾಗಿ ಪ್ರಖ್ಯಾತಿ ಪಡೆದಿರುವ ರಾಜ್ಯ. ಇಲ್ಲೂ ಕೂಡ ಕೆಲವು ಸಂಪ್ರದಾಯಗಳನ್ನು ಆಚಾರಿಸುತ್ತಾರೆ. ಹೀಗೆ ಪ್ರತ್ಯೇಕವಾಗಿ ಸಂಪ್ರದಾಯದ ಹಿಂದೆ ಮಹತ್ವವಾದ ಕಾರಣಗಳಿವೆ ಎಂದು ಸ್ಥಳೀಯರು ಹೇಳುತ್ತಾರೆ.

ಹಿಮಾಚಲ ಪ್ರದೇಶದಲ್ಲಿರುವ ವಿಭಿನ್ನ ಆಚಾರದ ಬಗ್ಗೆ ಪ್ರಸ್ತುತ ಲೇಖನದಲ್ಲಿ ತಿಳಿಯೋಣ.

ಪ್ರವಾಸ

ಪ್ರವಾಸ

ಹಿಮಾಚಲ ಪ್ರದೇಶದ ವಾತಾವರಣ ಎಲ್ಲರಿಗೂ ಅಚ್ಚು ಮೆಚ್ಚು. ಸಾಮಾನ್ಯವಾಗಿ ಪ್ರವಾಸಿಗರು ಹಿಮಾಚಲ ಪ್ರದೇಶದ ಸುಂದರವಾದ ಸ್ಥಳಗಳಿಗೆ ಭೇಟಿ ನೀಡಲು ಬರುತ್ತಾರೆ. ಇಲ್ಲಿ ಹಲವಾರು ಹಿಂದೂ ದೇವಾಲಯಗಳು ಹಾಗೂ ಪ್ರವಾಸಿ ತಾಣಗಳಿವೆ. ಇಲ್ಲಿನ ಸಂಪ್ರದಾಯಗಳು, ಉಡುಗೆ ತೊಡುಗೆ ಆಚಾರಗಳು ವಿಭಿನ್ನತೆಯಿಂದ ಕೂಡಿದೆ.

PC:YOUTUBE

ಆದಾಯ

ಆದಾಯ

ನಿಮಗೆ ಗೊತ್ತ? ಸುಂದರ ಹಿಮಾಚಲ ಪ್ರದೇಶಕ್ಕೆ ಬರುವ ಹಲವಾರು ಪ್ರವಾಸಿಗರಿಂದಲೇ ಭಾರತಕ್ಕೆ ಮುಖ್ಯವಾದ ಆದಾಯವಾಗಿದೆ. ಹಾಗಾದರೆ ಹಿಮದಿಂದ ಆಕರ್ಷಿಸುವ ಸುಂದರ ಪ್ರದೇಶ ಹೀಗಿರಬಹುದು ಒಮ್ಮೆ ಊಹಿಸಿ.

ಜೀವನ ಶೈಲಿ

ಜೀವನ ಶೈಲಿ

ಹಿಮಾಚಲ ಪ್ರದೇಶದಲ್ಲಿರುವ ಜನರ ಜೀವನ ಶೈಲಿಯಂತೂ ಭಿನ್ನವಾಗಿರುತ್ತದೆ. ಭಾರತವು ಹಲವಾರು ಆಚಾರಗಳನ್ನು ಹೊಂದಿದೆ ಎಂಬುದನ್ನು ಕಾಣಬಹುದಾಗಿದೆ. ಪ್ರತಿಯೊಬ್ಬರ ಹಾಗೂ ಪ್ರದೇಶದ ಜೀವನಶೈಲಿ ಆಯಾ ಪ್ರಾಂತ್ಯಗಳಿಗೆ ಸಂಬಂಧಿಸಿರುತ್ತದೆ. ಹಾಗೆಯೇ ಹಿಮಾಚಲದಲ್ಲೂ ಹಲವು ರೀತಿಯ ಜೀವನ ಶೈಲಿಯನ್ನು ಕಾಣಬಹುದಾಗಿದೆ.

PC:YOUTUBE

ಆಚಾರ

ಆಚಾರ

ಇಂದಿಗೂ ಹಿಮಾಚಲ ಪ್ರದೇಶದಲ್ಲಿರುವ ವಿಣ ಎಂಬ ಗ್ರಾಮದಲ್ಲಿನ ಜನರು ಪುರಾತನವಾದ ಆಚಾರ ವಿಚಾರಗಳನ್ನು ಪಾಲಿಸಿಕೊಂಡು ಬರುತ್ತಿದ್ದಾರೆ. ಪ್ರಾಯಶಃ ಇಂಥಹ ಆಚಾರಗಳನ್ನು ಭಾರತದಲ್ಲಿ ನೀವೆಲ್ಲೂ ಕೇಳಿರುವುದಿಲ್ಲ, ಕಂಡಿರುವುದಿಲ್ಲ. ಹಾಗಾದರೆ ಇಲ್ಲಿದೆ ಆ ವಿಭಿನ್ನ ಸಂಪ್ರದಾಯ.

PC:YOUTUBE

5 ದಿನಗಳವರೆಗೆ

5 ದಿನಗಳವರೆಗೆ

ವರ್ಷದಲ್ಲಿನ 5 ದಿನಗಳು ಪತಿಯರು ತಮ್ಮ ಪತ್ನಿತರ ಜೊತೆ ಮಾತನಾಡುವುದಿಲ್ಲ. ಇದು ವರ್ಷಕೊಮ್ಮೆ ನಡೆಯುವ ಈ ಗ್ರಾಮಸ್ಥರ ವಿಭಿನ್ನವಾದ ಆಚಾರಗಳಲ್ಲಿ ಒಂದಾಗಿದೆ. ಇದು ಈ ಪ್ರದೇಶದ ಒಂದು ವಿಶಿಷ್ಟವಾದ ಆಚಾರ.

PC:YOUTUBE

ಗ್ರಾಮಸ್ಥರು

ಗ್ರಾಮಸ್ಥರು

ಅಷ್ಟೇ ಅಲ್ಲ ಈ ಗ್ರಾಮದಲ್ಲಿರುವ ಜನರು ಮಧ್ಯೆ ಸೇವಿಸುವ ಆಭ್ಯಾಸವಿದ್ದರೆ ಅದನ್ನು ವರ್ಷದ 5 ದಿನಗಳ ಕಾಲ ಸಂಪೂರ್ಣವಾಗಿ ಸ್ಥಗಿತಗೊಳಿಸ ಬೇಕಾಗುತ್ತದೆ. ಅಂದರೆ ಗ್ರಾಮಸ್ಥರು 5 ದಿನಗಳು ಯಾವುದೇ ರೀತಿಯಲ್ಲೂ ಮಧ್ಯಪಾನವನ್ನು ಮಾಡುವುದಿಲ್ಲ.

PC:YOUTUBE

ವಸ್ತ್ರ

ವಸ್ತ್ರ

ಇಲ್ಲಿನ ಅತ್ಯಂತ ವಿಭಿನ್ನವಾದ ಆಚಾರವೆಂದರೆ ವರ್ಷದ 5 ದಿನಗಳ ಕಾಲ ಪ್ರತಿ ಕೆಲಸವನ್ನು ವಸ್ತ್ರವಿಲ್ಲದೆ ಮಾಡಬೇಕು. ಅಂದರೆ ಶರೀರದ ಮೇಲೆ ಯಾವುದೇ ರೀತಿ ವಸ್ತ್ರಗಳಿಂದ ದೇಹವನ್ನು ಮುಚ್ಚಿಕೊಳ್ಳುವಂತಿಲ್ಲ.

PC:YOUTUBE

ಅಶುಭ

ಅಶುಭ

ಈ ಆಚಾರಗಳನ್ನು ಗ್ರಾಮಸ್ಥರು ಪಾಲಿಸದಿದ್ದರೆ ಗ್ರಾಮಕ್ಕೆ ಹಾಗೂ ಪ್ರಜೆಗಳಿಗೆ ಅಶುಭದ ಸಂಕೇತ ಎಂದು ಭಾವಿಸುತ್ತಾರೆ. ಈ ಆಚಾರವು ಹಿಮಾಚಲ ಪ್ರದೇಶದ ಗ್ರಾಮಸ್ಥರಲ್ಲಿ ಇನ್ನೂ ಉಳಿದಿದೆ. ಇದೊಂದು ಪುರಾತನವಾದ ಆಚಾರಗಳಲ್ಲಿ ಒಂದಾಗಿದ್ದು ಜನರ ನಂಬಿಕೆ ಇಲ್ಲಿ ಕಾಣಬಹುದಾಗಿದೆ.

PC:YOUTUBE

ಇತಿಹಾಸ

ಇತಿಹಾಸ

ಪೂರ್ವದಲ್ಲಿ ಈ ಪ್ರದೇಶಕ್ಕೆ ರಕ್ಷಸರು ಪ್ರವೇಶಿಸಿ ಅಲ್ಲಿರುವ ಜನರನ್ನು ಭಯಬ್ರಾಂತರಾಗಿಸಿದ್ದವು ಆಗ ದೇವ ಲೋಕದಿಂದ ಬಂದ ದೇವತೆಗಳು ಈ ರಕ್ಷಸರನ್ನು ಸದೆಬಡೆದರಂತೆ ಎಂದು ಹಿಮಾಚಲ ಪ್ರದೇಶದ ಆ ಸ್ಥಳೀಯ ಗ್ರಾಮಸ್ಥರು ಹೇಳುತ್ತಾರೆ.

PC:YOUTUBE

ಶಿವಾಲಿಕ ಪರ್ವತ

ಶಿವಾಲಿಕ ಪರ್ವತ

ಹಿಮಾಚಲ ಪ್ರದೇಶದ ಹೋರಭಾಗದ ಧಾಳಾಧರ ಸರ್ಕ್ಯೂಟ್ ಡಾಲ್ ಹೌಸಿಯಿಂದ ಪ್ರಾರಂಭವಾಗಿ ಬದ್ರಿನಾಥ್‍ನವರೆಗೆ ಈ ಯುದ್ಧವು ಅಂತ್ಯವಾಗುವ ಸ್ಥಳವಾಗಿದೆ ಎಂದು ಸ್ಥಳೀಯರು ಪುರಾಣವನ್ನು ತಿಳಿಸುತ್ತಾರೆ. ಸೆಟ್ಲೆಜ್ ಸರ್ಕ್ಯೂಟ್ ಶಿವಾಲಿಕ್ ಪರ್ವತದ ಕೆಳಭಾಗದಲ್ಲಿ ಈ ಸ್ಥಳವನ್ನು ಕಾಣಬಹುದಾಗಿದೆ.

PC:YOUTUBE

ಹಿಂದೂ ದೇವಾಲಯ

ಹಿಂದೂ ದೇವಾಲಯ

ಈ ಸರ್ಕ್ಯೂಟ್‍ನಲ್ಲಿ ಸುಂದರವಾದ ಸೇಬಿನ ತೋಟ, ದೇವಧಾರ ಅರಣ್ಯ ಪ್ರದೇಶ, ಸಟ್ಲೆಜ್ ನದಿ ಇದ್ದು ಇಲ್ಲಿನ ಸುಂದರವಾದ ಪ್ರಕೃತಿಯಿಂದಾಗಿ ಪ್ರವಾಸಿಗರನ್ನು ಬರ ಮಾಡಿಕೊಳ್ಳುತ್ತದೆ. "ದೇವರ ನಿವಾಸ" ಎಂದು ಕರೆತಲ್ಪಡುವ ಈ ರಾಜ್ಯವು ಹಲವು ಹಿಂದೂ ದೇವಾಲಯಗಳನ್ನು ಹೊಂದಿದೆ.

PC:YOUTUBE

ಪ್ರಧಾನ ಸಿಖ್ ಮತ ಕೇಂದ್ರ

ಪ್ರಧಾನ ಸಿಖ್ ಮತ ಕೇಂದ್ರ

ಜ್ವಾಲಾಮುಖಿ, ಚಾಮುಂಡಾ, ವಜ್ರೇಶ್ವರಿ, ಚಿನ್ನಪೂರ್ನಿ, ವೈದ್ಯಬಾಥ್, ಲಕ್ಷ್ಮೀನಾರಾಯಣ, ಚೌರಸಿ ದೇವಾಲಯಗಳನ್ನು ಇಲ್ಲಿ ಕಾಣಬಹುದಾಗಿದೆ. ಇಲ್ಲಿ ಆನೇಕ ಗುರುದ್ವಾರ ಮತ್ತು ಚರ್ಚ್‍ಗಳು ಹಾಗೂ ಸಾಹೀಬಾ, ರೆವಲ್ಸಾರ್ ಮತ್ತು ಮನಿಕಾರಾನ್ ಪ್ರದೇಶಗಳಲ್ಲಿ ಪ್ರಧಾನ ಸಿಖ್‍ರ ದೇವಾಲಯಗಳನ್ನು ಕಾಣಬಹುದಾಗಿದೆ.

PC:YOUTUBE

ಚಾರಿತ್ರಿಕ ವೈಭವ

ಚಾರಿತ್ರಿಕ ವೈಭವ

ನ್ಯಾಷನಲ್ ಪಾರ್ಕ್, ರೇಣುಕ ಸಂಕ್ಚುರಿ, ಪಾಂಗಿ ಡ್ಯಾಂ ಸಂಕ್ಚುರಿ ಮತ್ತು ಕುಫ್ರಿ ಹೀಗೆ ಹಲವಾರು ಪ್ರದೇಶಗಳು. ಕಾಂಗ್ರಾ ಕೋಟೆ, ಗೋಂಡ್ಲಾ ಕೋಟೆ, ವುಡ್ ವಿಲಾಸ್ ಪ್ಯಾಲೆಸ್ ಇನ್ನು ಹಲವಾರು ವೈಭವಗಳನ್ನು ಹಿಮಾಚಲ ಪ್ರದೆಶದಲ್ಲಿ ಕಾಣಬಹುದಾಗಿದೆ.

PC:YOUTUBE

ಪ್ರವಾಸ

ಪ್ರವಾಸ

ಹಿಮಾಚಲ ಪ್ರದೇಶದಲ್ಲಿ ಆನೇಕ ಉತ್ಸವಗಳಿಗೆ ಪ್ರಸಿದ್ಧಿಯನ್ನು ಪಡೆದಿದೆ. ಶಿವರಾತ್ರಿಯ ದಿನ, ಲಾದರ್ಚಾ ಫಯರ್, ಮಿನ್ಜಾರ್ ಪಯರ್, ಮನಿ ಮಹೀಷ ಫಯರ್, ರೆಣುಕ ಫಯರ್, ಐಸ್ ಸ್ಕೇಟಿಂಗ್ ಕಾರ್ನಿವಾಲ್ ಇವುಗಳಿಗೆ ಪ್ರಸಿದ್ಧಿಯನ್ನು ಪಡೆದಿದೆ.

PC:YOUTUBE

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Nativeplanet sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Nativeplanet website. However, you can change your cookie settings at any time. Learn more