ಕರ್ನಾಟಕದಲ್ಲಿ ಸುಬ್ರಹ್ಮಣ್ಯನಾಗಿ, ಕಾರ್ತಿಕೇಯನಾಗಿ, ಶಣ್ಮುಖನಾಗಿ ಪೂಜಿಸಲ್ಪಡುವ ದೇವನೆ ತಮಿಳುನಾಡಿನಲ್ಲಿ ಮುರುಗನ್ ಆಗಿ ಭಕ್ತರನ್ನು ಹರಸುತ್ತಾನೆ ಅಲ್ಲದೆ ಮುರುಗ ದೇವರು ತಮಿಳುನಾಡಿನಲ್ಲೆ ಸಾಕಷ್ಟು ಹೆಸರುವಾಸಿ ಹಾಗೂ ಬಹಳಷ್ಟು ಜನರು ನಡೆದುಕೊಳ್ಳುವ ಪ್ರಭಾವಶಾಲಿ ದೇವ.
ಮುರುಗನಿಗೆಂದೆ ಮುಡಿಪಾದ ಸಾವಿರಾರು ದೇವಾಲಯಗಳು ತಮಿಳುನಾಡಾದ್ಯಂತ ಕಂಡುಬರುತ್ತವೆ. ಅಲ್ಲದೆ ಮುರುಗನ್ ತಮಿಳರ ಪ್ರೀತಿಯ ಹಾಗೂ ಪ್ರಧಾನ ದೇವನಾಗಿದ್ದು ತಮಿಳು ಪ್ರಭಾವವಿರುವ ಪ್ರದೇಶಗಳಲೆಲ್ಲ ಮುರುಗನ್ ಗೆ ಮುಡಿಪಾದ ದೇವಾಲಯಗಳನ್ನು ಕಾಣಬಹುದು.
ಸ್ಕಂದ ಪುರಾಣದ ಪ್ರಕಾರ, ಮುರುಗನ್ ಅಥವಾ ಕಾರ್ತಿಕೇಯನು ದೇವತೆಗಳ ಸೈನ್ಯದ ವೀರ ಸೇನಾಧಿಪತಿ ಹಾಗೂ ಶಿವನ ಎರಡನೇಯ ಮಗ. ಪ್ರಸ್ತುತ ಲೇಖನದಲ್ಲಿ ಕಾರ್ತಿಕೇಯನಿಗೆ ಮುಡಿಪಾದ ತಮಿಳುನಾಡಿನಲ್ಲಿರುವ ಕೆಲವು ಪ್ರಮುಖ ದೇವಾಲಯಗಳ ಕುರಿತು ತಿಳಿಸುತ್ತದೆ.

ಪ್ರಸಿದ್ಧ ಮುರುಗನ್ ದೇವಾಲಯಗಳು:
ಈ ಲೇಖನದಲ್ಲಿ ಮುರುಗನಿಗೆ ಮುಡಿಪಾದ ಕೆಲವು ಆಯ್ದ ದೇವಾಲಯಗಳ ಕುರಿತು ತಿಳಿಸಲಾಗಿದೆ. ಸಮಯ ಸಿಕ್ಕರೆ ನೀವು ಭೇಟಿ ನೀಡಿ ಕೃತಾರ್ಥರಾಗಿ. ಸಾಂದರ್ಭಿಕ ಚಿತ್ರ. ಮಲೇಷಿಯಾದ ಕೌಲಾಲಾಂಪುರದ ಬಳಿಯಿರುವ ಬಾತು ಗುಹೆಗಳ ಬಳಿ ನಿರ್ಮಿಸಲಾಗಿರುವ ಮುರುಗನ್ ಪ್ರತಿಮೆ.
ಚಿತ್ರಕೃಪೆ: Mspraveen

ಪ್ರಸಿದ್ಧ ಮುರುಗನ್ ದೇವಾಲಯಗಳು:
ಸ್ವಾಮಿಮಲೈ ಮುರುಗನ್ ದೇವಾಲಯ : ತಮಿಳುನಾಡಿನ ತಂಜಾವೂರು ಜಿಲ್ಲೆಯ ಸ್ವಾಮಿಮಲೈನಲ್ಲಿ ಮುರುಗನ್ ಸ್ವಾಮಿಗೆ ಮುಡಿಪಾದ ಪ್ರಸಿದ್ಧ ದೇವಾಲಯವಿದೆ. ಕುಂಭಕೋಣಂನಿಂದ ಕೇವಲ ಐದು ಕಿ.ಮೀ ದೂರದಲ್ಲಿರುವ ಈ ದೇವಾಲಯಕ್ಕೆ ಸಹಸ್ರಾರು ಸಂಖ್ಯೆಯಲ್ಲಿ ಜನರು/ಭಕ್ತಾದಿಗಳು ಭೇಟಿ ನೀಡುತ್ತಾರೆ.
ಚಿತ್ರಕೃಪೆ: பா.ஜம்புலிங்கம்

ಪ್ರಸಿದ್ಧ ಮುರುಗನ್ ದೇವಾಲಯಗಳು:
ತಮಿಳುನಾಡಿನಲ್ಲಿ ಕರೆಯಲಾಗುವ ಆರುಪಡೈವೀಡು ಕ್ಷೇತ್ರಗಳ ಪೈಕಿ ಮುರುಗನ ಈ ದೇವಾಲಯವೂ ಒಂದು. ಆರುಪಡೈವೀಡು ಅಂದರೆ ಮುರುಗನ ಆರು ದಿವ್ಯ ದೇವಾಲಯಗಳು ಅಥವಾ ನೆಲೆಗಳು ಎಂದರ್ಥ. ಇದರಲ್ಲಿ ಸ್ವಾಮಿಮಲೈನ ಮುರುಗನ್ ದೇವಾಲಯ ಒಂದಾಗಿರುವುದರಿಂದ ಇಲ್ಲಿಗೆ ಬರುವ ಭಕ್ತಾದಿಗಳ ಸಂಖ್ಯೆಯೂ ಅಪಾರ.
ಚಿತ್ರಕೃಪೆ: Ravichandar84

ಪ್ರಸಿದ್ಧ ಮುರುಗನ್ ದೇವಾಲಯಗಳು:
ಪಳನಿ ಮುರುಗನ್ ದೇವಾಲಯ : ದಿಂಡುಗಲ್ ಜಿಲ್ಲೆಯ ಪಳನಿ ಪಟ್ಟಣದ ಬೆಟ್ಟದ ಮೇಲಿರುವ ಮುರುಗನ ಈ ದೇವಾಲಯ ಆರು ಮುರುಗನ ಪವಿತ್ರ ದಿವ್ಯ ನೆಲೆಯಲ್ಲೊಂದಾಗಿದೆ. ಕೊಯಮತ್ತೂರಿನಿಂದ ನೂರು ಕಿ.ಮೀ ದೂರವಿರುವ ಪಳನಿಗೆ ತೆರಲಲು ಬಸ್ಸುಗಳು ದೊರೆಯುತ್ತವೆ.
ಚಿತ್ರಕೃಪೆ: Thejas Panarkandy

ಪ್ರಸಿದ್ಧ ಮುರುಗನ್ ದೇವಾಲಯಗಳು:
ಒಂದು ಕಥೆಯಂತೆ, ಒಮ್ಮೆ ಕೈಲಾಸದಲ್ಲಿ ಎಲ್ಲ ದೇವ, ದೇವತೆ, ಋಷಿ-ಮುನಿಗಳು ಸಭೆ ಸೇರಿದ್ದಾಗ ಜಗತ್ತು ಒಂದೆ ಕಡೆ ಆಗುತ್ತಿರುವ ಭಾರದಿಂದ ಬಾಗಿತು. ಇದನ್ನರಿತ ಶಿವನು ಅಗಸ್ತ್ಯರಿಗೆ ಹೇಳಲು ಅವರು ರಾಕ್ಷಸ ಒಬ್ಬನನ್ನು ನಿರ್ಮಿಸಿ ಎರಡು ಬೆಟ್ಟಗಳನ್ನು ದಕ್ಷಿಣದಲ್ಲಿ ಇಡಲು ಹೇಳಿದನು. ಆ ಬೆಟ್ಟಗಳೆ ಇಂದು ಪಳನಿ ಹಾಗೂ ಸ್ವಾಮಿಮಲೈ ಆಗಿವೆ. ಕಾರ್ತಿಕೇಯನು ಇಲ್ಲಿ ನೆಲೆಸಿದ್ದಾನೆನ್ನಲಾಗಿದೆ.
ಚಿತ್ರಕೃಪೆ: Ranjithsiji

ಪ್ರಸಿದ್ಧ ಮುರುಗನ್ ದೇವಾಲಯಗಳು:
ಮುರುಗನ್ ಪ್ರಧಾನ ದೇವತೆಯಾಗಿರುವ ಕೌಮಾರನ್ ಸಮುದಾಯದವರ ಕಾರ್ತಿಕೇಯನ ಆರು ಪವಿತ್ರ ನೆಲೆಗಳ ಪೈಕಿ ತಿರುಚೆಂಡೂರು ಮುರುಗನ್ ದೇವಾಲಯವೂ ಒಂದು. ತಮಿಳುನಾಡಿನ ತೂತುಕುಡಿ ಜಿಲ್ಲೆಯ ತಿರುಚೆಂಡೂರಿನಲ್ಲಿ ಮುರುಗನ ಈ ದೇವಾಲಯವಿದೆ.
ಚಿತ್ರಕೃಪೆ: Ssriram mt

ಪ್ರಸಿದ್ಧ ಮುರುಗನ್ ದೇವಾಲಯಗಳು:
ತಿರುಚೆಂಡೂರಿನಲ್ಲಿರುವ ಮುರುಗನ ಈ ದೇವಾಲಯವು ಸಾಕಷ್ಟು ವಿಶೇಷತೆಗಳಿಂದ ಕೂಡಿದೆ. ತಮಿಳುನಾಡಿನಲ್ಲೆ ಈ ಒಂದು ದೇವಾಲಯದಲ್ಲಿ ಮಾತ್ರವೆ ಪಶ್ಚಿಮ ದ್ವಾರದಲ್ಲಿ ರಾಜ ಗೋಪುರ ಸ್ಥಿತವಿದೆ. ವಿದೇಶಿಗರಿಂದ ಹೆಚ್ಚು ಭೇಟಿ ನೀಡಲ್ಪಡುವ ದೇವಾಲಯಗಳ ಪೈಕಿ ಇದೂ ಒಂದು. ಪಶ್ಚಿಮ ದ್ವಾರದಲ್ಲಿರುವ ರಾಜ ಗೋಪುರ.
ಚಿತ್ರಕೃಪೆ: Aravind Sivaraj

ಪ್ರಸಿದ್ಧ ಮುರುಗನ್ ದೇವಾಲಯಗಳು:
ಈ ದೇವಾಲಯ ತನ್ನದೆ ಆದ ಪ್ರತ್ಯೇಕ ಬಸ್ಸು ಅಂಕಣವನ್ನು ಹೊಂದಿದೆ ಹಾಗೂ ತಮಿಳುನಾಡಿನ ಶ್ರೀಮಂತ ದೇವಾಲಯಗಳ ಪೈಕಿ ಒಂದಾಗಿರುವ ಇದು ಯಾವ ರಾಜರುಗಳಿಂದ ನಿರ್ಮಿಸಲ್ಪಡದೆ ಕೇವಲ ಸಂತರಿಂದ ನಿರ್ಮಿಸಲ್ಪಟ್ಟ ಏಕೈಕ ದೊಡ್ಡ ದೇವಾಲಯವಾಗಿದೆ.
ಚಿತ್ರಕೃಪೆ: Aravind Sivaraj

ಪ್ರಸಿದ್ಧ ಮುರುಗನ್ ದೇವಾಲಯಗಳು:
ತಿರುಪ್ಪಾರನ್ ಕುನ್ರನ್ ಮುರುಗನ್ ದೇವಾಲಯ : ಇದೂ ಸಹ ಆರು ದಿವ್ಯ ನೆಲೆಗಳ ಪೈಕಿ ಒಂದಾಗಿದೆ. ಮದುರೈನಲ್ಲಿರುವ ತಿರುಪ್ಪಾರನ್ ಕುನ್ರನ್ ಎಂಬ ಸ್ಥಳದಲ್ಲಿ ಕಾರ್ತಿಕೇಯನ ಈ ದೇವಾಲಯವಿದೆ. ಇಲ್ಲಿರುವ ಮುರುಗನ ದೇವಾಲಯವು ಪುರಾತನವಾಗಿದ್ದು ಮುರುಗನ ಆರು ದಿವ್ಯ ನೆಲೆಗಳ ಪೈಕಿ ಇದು ಮೊದಲನೇಯದೆಂದು ನಂಬಲಾಗಿದೆ.
ಚಿತ್ರಕೃಪೆ: Kramasundar

ಪ್ರಸಿದ್ಧ ಮುರುಗನ್ ದೇವಾಲಯಗಳು:
ತಿರುತಾನಿ ಮುರುಗನ್ ದೇವಾಲಯ : ತಿರುವಳ್ಳೂರು ಜಿಲ್ಲೆಯಲ್ಲಿರುವ ತಿರುತಾನಿ ಎಂಬ ಪಟ್ಟಣದಲ್ಲಿರುವ ಕಾರ್ತಿಕೇಯನಿಗೆ ಮುಡಿಪಾದ ಈ ದೇವಾಲಯ ಮುರುಗನ ಆರು ದಿವ್ಯ ನೆಲೆಗಳಲ್ಲೊಂದಾಗಿದ್ದು ಚೆನ್ನೈ ನಗರಕೇಂದ್ರದಿಂದ ಸುಮಾರು 85 ಕಿ.ಮೀ ಗಳಷ್ಟು ದೂರದಲ್ಲಿದೆ.
ಚಿತ್ರಕೃಪೆ: Srithern

ಪ್ರಸಿದ್ಧ ಮುರುಗನ್ ದೇವಾಲಯಗಳು:
ದಂತಕಥೆಯಂತೆ ಇಂದ್ರನು ತನ್ನ ಮಗಳಾದ ದೇವಯಾನಿಯನ್ನು ಮುರುಗನಿಗೆ ಕೊಟ್ಟು ಮದುವೆ ಮಾಡಿ ವರದಕ್ಷಿಣೆಯಾಗಿ ತನ್ನ ಬಳಿಯಿದ್ದ ಐರಾವತನನ್ನು ಉಡುಗೊರೆಯಾಗಿ ನೀಡುತ್ತಾನೆ. ಹೀಗೆ ಐರಾವತ ದೂರವಾದ್ದರಿಂದ ಕ್ರಮೇಣ ಇಂದ್ರನ ಸಮ್ಪತ್ತು ಕ್ಷಯಿಸಲಾರಂಭಿಸುತ್ತದೆ. ಇದನ್ನರಿತ ಮುರುಗ ಉಡುಗೊರೆಯನ್ನು ಮರಳಿಸುವ ಇಚ್ಛೆ ವ್ಯಕ್ತಪಡಿಸುತ್ತಾನಾದರೂ ಇಂದ್ರನು ಅದಕ್ಕೆ ಸಮ್ಮತಿಸುವುದಿಲ್ಲ. ಬದಲಿಗೆ ತಾನಿರುವ ದಿಕ್ಕಿಗೆ ಆನೆಯ ದರ್ಶನವಾಗಬೇಕೆಂದು ಕೇಳಿಕೊಳ್ಳುತ್ತಾನೆ. ಹೀಗಾಗಿ ಈ ದೇವಾಲಯದಲ್ಲಿ ಆನೆಯೂ ಸಹ ಪೂರ್ವ ದಿಕ್ಕಿಗೆ ಮುಖ ಮಾಡಿ ನಿಂತಿದೆ.
ಚಿತ್ರಕೃಪೆ: Srithern

ಪ್ರಸಿದ್ಧ ಮುರುಗನ್ ದೇವಾಲಯಗಳು:
ಪಳಮುದಿರ್ಚೋಲೈ ಮುರುಗನ್ ದೇವಾಲಯ : ಮದುರೈನಿಂದ ಕೇವಲ 25 ಕಿ.ಮೀ ಗಳಷ್ಟು ದೂರದಲ್ಲಿರುವ ಬೆಟ್ಟವೊಂದರ ಮೇಲೆ ಈ ದೇವಾಲಯವಿದೆ. ಇದು ಆರು ಪವಿತ್ರ ನೆಲೆಯಲ್ಲಿ ಒಂದಾಗಿದೆ. ತಮಿಳಿನ ಸಂತಕವಿ ಅವೈಯಾರ್ ನನ್ನು ಮುರುಗನು ಈ ಸ್ಥಳದಲ್ಲಿಯೆ ಪರೀಕ್ಷಿಸಿದ್ದನೆನ್ನಲಾಗಿದೆ.
ಚಿತ್ರಕೃಪೆ: Raji.srinivas

ಪ್ರಸಿದ್ಧ ಮುರುಗನ್ ದೇವಾಲಯಗಳು:
ವಡಾಪಳನಿ ಅಂದಾವರ/ಮುರುಗನ್ ದೇವಾಲಯ : ವಡಾಪಳನಿ ಚೆನ್ನೈನಲ್ಲಿರುವ ಒಂದು ಬಡಾವಣೆ/ಸ್ಥಳ. ಸದಾ ಜನರಿಂದ ಚುರುಕಾಗಿರುವ ಈ ಸ್ಥಳದಲ್ಲಿ ಮುರುಗನಿಗೆ ಮುಡಿಪಾದ ದೇವಾಲಯವಿದ್ದು ಪ್ರತಿನಿತ್ಯ ಬಹಳಷ್ಟು ಸಂಖ್ಯೆಯಲ್ಲಿ ಭಕ್ತಾದಿಗಳನ್ನು ಆಕರ್ಷಿಸುತ್ತದೆ. ಮುರುಗನಿಗೆ ಮುಡಿಪಾದ ಈ ದೇವಾಲಯವನ್ನು ವಡಾಪಳನಿ ಅಂಡಾವರ ದೇವಾಲಯ ಎಂದು ಕರೆಯುತ್ತಾರೆ.
ಚಿತ್ರಕೃಪೆ: L.vivian.richard

ಪ್ರಸಿದ್ಧ ಮುರುಗನ್ ದೇವಾಲಯಗಳು:
ಸುಂದರ ಕಲ್ಯಾಣಿ ಹೊಂದಿರುವ ಈ ದೇವಾಲಯ 1890 ರ ಸಮಯದಲ್ಲಿ ನಿರ್ಮಾಣವಾಗಿದ್ದು ಮುಖ್ಯ ದೇವ ಕಾರ್ತಿಕೇಯನ ಹೊರತಾಗಿ ವಿನಾಯಕ, ಮೀನಾಕ್ಷಿ ಅಮ್ಮ, ಭೈರವ ಹಾಗೂ ಕಾಳಿ ದೇವತೆಗಳ ಸನ್ನಿಧಿಗಳನ್ನೂ ಸಹ ಇಲ್ಲಿ ಕಾಣಬಹುದಾಗಿದೆ.
ಚಿತ್ರಕೃಪೆ: Simply CVR

ಪ್ರಸಿದ್ಧ ಮುರುಗನ್ ದೇವಾಲಯಗಳು:
ಮರುದಮಲೈ ಮುರುಗನ್ ದೇವಾಲಯ : ಕೊಯಮತ್ತೂರಿನಿಂದ ಸುಮಾರು ಹನ್ನೆರಡು ಕಿ.ಮೀ ಗಳಷ್ಟು ದೂರದಲ್ಲಿ ಮುರುಗನ ಈ ದೇವಾಲಯವು ಸ್ಥಿತವಿದೆ. ತೈ ಪೂಸಂ ಹಾಗೂ ಮುರುಗನ ಉತ್ಸವಗಳನ್ನು ಇಲ್ಲಿ ಬಲು ಅದ್ದೂರಿಯಿಂದ ಆಚರಿಸಲಾಗುತ್ತದೆ.
ಚಿತ್ರಕೃಪೆ: Empty Frames Photography

ಪ್ರಸಿದ್ಧ ಮುರುಗನ್ ದೇವಾಲಯಗಳು:
ಮೆಟ್ಟುಪಾಳ್ಯಂನ ಬಳಿಯಿರುವ ಕುರುಂತಮಲೈ ಬೆಟ್ಟದ ಮೇಲಿರುವ ಮುರುಗನ ದೇವಾಲಯವೂ ಸಹ ಸಾಕಷ್ಟು ಜನರಿಂದ ಭೇಟಿ ನೀಡಲ್ಪಡುವ ಕ್ಷೇತ್ರವಾಗಿದೆ.
ಚಿತ್ರಕೃಪೆ: Booradleyp1

ಪ್ರಸಿದ್ಧ ಮುರುಗನ್ ದೇವಾಲಯಗಳು:
ಕಂಚೀಪುರಂ ಜಿಲ್ಲೆಯಲ್ಲಿರುವ ಉತಿರಮೇರೂರು ಒಂದು ಪಂಚಾಯತ್ ಪಟ್ಟಣವಾಗಿದೆ. ಸುಂದರವರದಾ ಪೆರುಮಾಳ ದೇವಾಲಯ, ವೈಕುಂಠ ಪೆರುಮಾಳ ದೇವಾಲಯದಂತಹ ಪ್ರಮುಖ ದೇವಾಲಯಗಳಿರುವ ಈ ಕ್ಷೇತ್ರದಲ್ಲಿ ಮುರುಗನಿಗೆ ಮುಡಿಪಾದ ಸುಬ್ರಹ್ಮಣ್ಯನ ದೇವಾಲಯವೂ ಸಹ ಇದ್ದು ಸಾಕಷ್ಟು ಭಕ್ತಾದಿಗಳನ್ನು ಸೆಳೆಯುತ್ತದೆ.
ಚಿತ್ರಕೃಪೆ: Ssriram mt

ಪ್ರಸಿದ್ಧ ಮುರುಗನ್ ದೇವಾಲಯಗಳು:
ಈರೋಡ್ ಪಟ್ಟಣದ ಬಳಿಯಿರುವ ತಿಂಡಾಲಮಲೈ ಎಂಬ ಬೆಟ್ಟದಲ್ಲಿ ಮುರುಗನಿಗೆ ಮುಡಿಪಾದ ದೇವಾಲಯವಿದ್ದು ತಿಂಡಾಲ ಮುರುಗನ್ ದೇವಾಲಯ ಎಂಬ ಹೆಸರಿನಿಂದ ಪ್ರಸಿದ್ಧವಾಗಿದೆ.
ಚಿತ್ರಕೃಪೆ: Vijay Kumar

ಪ್ರಸಿದ್ಧ ಮುರುಗನ್ ದೇವಾಲಯಗಳು:
ತಮಿಳುನಾಡಿನ ತಿರುಚ್ಚಿ ನಗರದ ಬಳಿಯಿರುವ ವಯಲೂರು ಎಂಬಲ್ಲಿರುವ ಮುರುಗನ ದೇವಾಲಯವು ಸಾಕಷ್ಟು ಹೆಸರುವಾಸಿಯಾಗಿದೆ. ಈ ಅದ್ಭುತ ದೇವಾಲಯವು 1200 ವರ್ಷಗಳಷ್ಟು ಶ್ರೀಮಂತ ಇತಿಹಾಸ ಹೊಂದಿದ್ದು ಚೋಳರ ಕಾಲದಲ್ಲಿ ನಿರ್ಮಾಣವಾದ ದೇವಾಲಯವಾಗಿದೆ.
ಚಿತ್ರಕೃಪೆ: Ssriram mt


Click it and Unblock the Notifications
















