Search
  • Follow NativePlanet
Share
» » ಸೇಬಿನ ತೋಟ ನೋಡ್ಬೇಕಾದ್ರೆ ಇಲ್ಲಿಗೆ ಹೋಗಿ

ಸೇಬಿನ ತೋಟ ನೋಡ್ಬೇಕಾದ್ರೆ ಇಲ್ಲಿಗೆ ಹೋಗಿ

ಭಾರತದ ಪ್ರವಾಸದ ವಿಷ್ಯದಲ್ಲಿ ಹಿಮಾಚಲ ಪ್ರದೇಶ ಎನ್ನಲಾಗುತ್ತದೆ. ಮಂಜಿನ ಪರ್ವತಗಳ ಜೊತೆಗೆ ದೇಶ ವಿದೇಶಿ ಪ್ರವಾಸಿಗಳನ್ನು ತನ್ನತ್ತ ಸೆಳೆಯುತ್ತದೆ. ಸಾಮಾನ್ಯವಾಗಿ ಇಲ್ಲಿನ ಹೆಚ್ಚಿನ ಸ್ಥಳಗಳ ಬಗ್ಗೆ ಎಲ್ಲರಿಗೂ ತಿಳಿದಿದೆ. ಆದರೆ ಬಹುತೇಕರಿಗೆ ತಿಳಿದಿಲ್ಲದೇ ಇರುವ ಅನೇಕ ಸ್ಥಳಗಳು ಹಿಮಾಚಲ ಪ್ರದೇಶದಲ್ಲಿದೆ. ಅಂತಹ ಸ್ಥಳಗಳಲ್ಲೊಂದು ಸೋಲನ್ ಜಿಲ್ಲೆಯಲ್ಲಿರುವ ಪರವಾಣು. ಹಿಮಾಲಯದ ಶಿವಾಲಿಕ ಪರ್ವತದ ಜೊತೆಗೆ ಇರುವ ಈ ತಾಣವು ಪ್ರಾಕೃತಿಕ ಸೌಂದರ್ಯದಿಂದ ಕೂಡಿದೆ. ಹಾಗಾಗಿ ಜನರು ಇಲ್ಲಿ ಟ್ರಕ್ಕಿಂಗ್‌ಗೆ ಆಗಮಿಸುತ್ತಾರೆ. ಇಲ್ಲಿಗೆ ನೀವು ವರ್ಷದ ಯಾವುದೇ ತಿಂಗಳಲ್ಲೂ ಹೋಗಬಹುದು. ಹಾಗಾಗಿ ಪರವಾಣು ಹಾಗೂ ಅದರ ಸುತ್ತಮುತ್ತಲಿನ ಪ್ರೇಕ್ಷಣೀಯ ಸ್ಥಳಗಳ ಬಗ್ಗೆ ಇಲ್ಲಿ ನೀಡಲಾಗಿದೆ.

ಯಾದವೇಂದ್ರ ಗಾರ್ಡನ್

ಯಾದವೇಂದ್ರ ಗಾರ್ಡನ್

PC- L. Shyamal

ಪರವಾಣುವಿನಿಂದ ಸುಮಾರು 14.5 ಕಿ.ಮಿ ದೂರದಲ್ಲಿ ಈ ಮೊಘಲ್ ಗಾರ್ಡನ್ ಇದೆ. ಇದನ್ನು ಯಾದವೇಂದ್ರ ಗಾರ್ಡನ್ ಎನ್ನಲಾಗುತ್ತದೆ. 17ನೇ ಶತಮಾನದಲ್ಲಿ ಈ ಗಾರ್ಡನ್‌ನ್ನು ಡಿಸೈನ್ ಮಾಡಲಾಗಿತ್ತು. ಈ ಗಾರ್ಡನ್‌ನಲ್ಲಿ ಸರ್ಕಾರವು ವಿವಿಧ ಸಾರ್ವಜನಿಕ ಕಾರ್ಯಕ್ರಮವನ್ನು ಉತ್ಸವವನ್ನು ಆಯೋಜಿಸುತ್ತದೆ. ಇದರಲ್ಲಿ ಬೈಸಾಕಿ ಉತ್ಸವವು ಜನಪ್ರೀಯವಾಗಿದೆ.

ಹಣ್ಣಿನ ಉದ್ಯಾನ

ಹಣ್ಣಿನ ಉದ್ಯಾನ

ಪರವಾಣುವಿನ ಪ್ರಾಕೃತಿಕ ಸೌಂದರ್ಯವನ್ನು ನೀವು ಹತ್ತಿರದಿಂದ ನೋಡಿದರೆ ಇಲ್ಲಿನ ಹಣ್ಣಿನ ಉದ್ಯಾನದ ಆನಂದವನ್ನು ಪಡೆಯಲೇ ಬೇಕು. ಪರವಾಣುವಿನ ಅರ್ಥವ್ಯವಸ್ಥೆಯ ಮುಖ್ಯ ಭಾಗ ಹಣ್ಣಿನ ಉತ್ಪಾದನೆಯಾಗಿದೆ. ಹಾಗಾಗಿ ನಿಮಗೆ ಇಲ್ಲಿ ಅಧಿಕ ಸಂಖ್ಯೆಯಲ್ಲಿ ಹಚ್ಚ ಹಸುರಿನ ತೋಟ ಕಾಣಸಿಗುತ್ತದೆ. ಇಲ್ಲಿನ ವಾತಾವರಣವು ಸೇಬು ಹಾಗೂ ಪೀಚ್‌ ಹಣ್ಣಿನ ಬೆಳೆಗೆ ಯೋಗ್ಯವಾಗಿದೆ. ಇಲ್ಲಿ ಬೆಳೆದಿರುವ ಹಣ್ಣುಗಳು ಉತ್ತಮ ಗುಣಮಟ್ಟದ್ದಾಗಿರುತ್ತದೆ. ಹಾಗಾಗಿ ಅದನ್ನು ದೇಶ, ವಿದೇಶಗಳಿಗೆ ರಫ್ತು ಮಾಡುತ್ತಾರೆ.

ಗೋರಕ್‌ನ ಕೋಟೆ

ಗೋರಕ್‌ನ ಕೋಟೆ

ಪರವಾಣುವಿನಲ್ಲಿ ಪ್ರಾಕೃತಿಕ ಸ್ಥಳಗಳನ್ನು ಹೊರತುಪಡಿಸಿ ಕೆಲವು ಐತಿಹಾಸಿಕ ಸ್ಥಳಗಳನ್ನೂ ಕಾಣಬಹುದು. ಗೋರಕ್‌ನ ಮುಖ್ಯಸ್ಥ ಅಮರ್‌ ಸಿಂಗ್‌ ಮುಖಾಂತರ ನಿರ್ಮಿಸಲಾದ ಈ ಕೋಟೆಯು ಇಲ್ಲಿನ ಪ್ರಮುಖ ಪ್ರವಾಸಿ ತಾಣಗಳಲ್ಲೊಂದಾಗಿದೆ. ಇದು ಸಮುದ್ರ ಮಟ್ಟದಿಂದ ಸುಮಾರು 1, 371 ಮೀಟರ್ ಎತ್ತರದಲ್ಲಿದೆ. ಬ್ರಿಟಿಷರ ವಿರುದ್ಧ ರಣನೀತಿಯ ಲಾಭಪಡೆಯುವ ಉದ್ದೇಶದಿಂದ ಮಾಡಲಾಗಿದೆ. ಗೋರಕ್‌ನ ಇತಿಹಾಸವನ್ನು ತಿಳಿಯುವದಕ್ಕಾಗಿ ಇಲ್ಲಿನ ಯಾತ್ರೆಯ ಪ್ಲ್ಯಾನ್ ಮಾಡಲಾಗಿದೆ.

ಮಾನಸಾ ದೇವಿ ಮಂದಿರ

ಮಾನಸಾ ದೇವಿ ಮಂದಿರ

PC:Barthateslisa

ಇಲ್ಲಿ ಇವಿಷ್ಟೇ ಅಲ್ಲ ಬದಲಾಗಿ ಮಾನಸಾ ದೇವಿ ಮಂದಿರವೂ ಇದೆ. ಇದು ಹಿಂದೂಗಳಿಗೆ ಶ್ರದ್ಧೆಯ ಕೇಂದ್ರವಾಗಿದೆ. ವರ್ಷವಿಡೀ ಭಕ್ತರು ಇಲ್ಲಿಗೆ ಭೇಟಿ ನೀಡುತ್ತಲೇ ಇರುತ್ತಾರೆ. ಇದನ್ನು 17ನೇ ಶತಮಾನದಲ್ಲಿ ನಿರ್ಮಿಸಲಾಗಿದೆ ಎನ್ನಲಾಗುತ್ತದೆ. ಈ ಮಂದಿರವು ಶಕ್ತಿಯ ಅವತಾರ ಮಾನಸಾ ದೇವಿಗೆ ಸಮರ್ಪಿತವಾಗಿರುವುದು. ನವರಾತ್ರಿ ಸಂದರ್ಭ ಇಲ್ಲಿ ಅನೇಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ.

ತಲುಪುವುದು ಹೇಗೆ?

ತಲುಪುವುದು ಹೇಗೆ?

PC:Shyamal L

ಪರವಾಣು ಹಿಮಾಚಲ ಪ್ರದೇಶದ ಸೋಲನ್ ಜಿಲ್ಲೆಯಲ್ಲಿದೆ. ಇಲ್ಲಿಗೆ ಸಮೀಪದ ವಿಮಾನ ನಿಲ್ದಾಣವೆಂದರೆ ಚಂಡೀಘಡ್ ಏರ್‌ಪೋರ್ಟ್, ಪರವಾಣುಗೆ ರೈಲ್ವೆ ಮೂಲಕ ಹೋಗುವುದಾದರೆ ಕಾಲ್‌ಕಾ ರೈಲ್ವೆ ಸ್ಟೇಶನ್‌ ಮೂಲಕ ಹೋಗಬಹುದು. ಪರವಾಣುಗೆ ಬಸ್‌ ವ್ಯವಸ್ಥೆ ಕೂಡಾ ಬೇಕಾದಷ್ಟಿದೆ.

More News

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+