ಭಾರತದ ಇಂಜಿನಿಯರ್ ಗಳ ಅನನ್ಯ ತಾಂತ್ರಿಕ ಕೌಶಲ್ಯತೆಗೆ ಸಾಕ್ಷಿಯಾದ ಕೆಲವು ಅದ್ಬುತಗಳು
ಭಾರತದ ಅತ್ಯಂತ ಹೆಸರುವಾಸಿಯಾದ ಎಂಜಿನಿಯರ್, ರಾಜನೀತಿಜ್ಞರಾದ ಭಾರತ ರತ್ನ ಮೋಕ್ಷಗುಂಡಂ ವಿಶ್ವೇಶ್ವರಯ್ಯ ಅವರ ಜನ್ಮದಿನವನ್ನು ಗೌರವಿಸುತ್ತಾ ಅವರು ಮಾಡಿದ ಮಹತ್ತರ ಸಾಧನೆಯನ್ನು ಸ್ಮರಿಸುತ್ತಾ ಪ್ರತಿ ವರ್ಷ ಸೆಪ್ಟೆಂಬರ್ 15 ರಂದು ಇಂಜಿನಿಯರ್ ಗಳ ದಿನವಾಗಿ ಭಾರತದಲ್ಲಿ ಆಚರಿಸಲಾಗುತ್ತದೆ. ಬ್ರಿಟಿಷ್ ಇಂಡಿಯನ್ ಎಂಪಿ (ಕೆಸಿಐಇ)ಯ ನೈಟ್ ಕಮಾಂಡರ್ ಆಗಿ ಕಿಂಗ್ ಜಾರ್ಜ್ 5 ರಿಂದ ನೈಟ್ ಕಮಾಂಡರ್ ಹುದ್ದೆಯನ್ನು ಅಲಂಕರಿಸಿದ್ದ ಸರ್ ಎಂ ವಿಶ್ವೇಶ್ವರಯ್ಯನವರು ಸಾರ್ವಜನಿಕ ಒಳಿತಿಗಾಗಿ ನೀಡಿದ ಕೊಡುಗೆ ಅಪಾರವಾಗಿದೆ. ಅವರಿಂದ ಮಾಡಲಾದ ಕೆಲಸಗಳೂ ಮತ್ತು ಅಪಾರವಾದ ಸೊತ್ತುಗಳು ಕೆಲವು ರಾಷ್ಟ್ರಗಳ ಬೆಳವಣಿಗೆಗೂ ಕಾರಣವಾಯಿತು ಆದ್ದರಿಂದ ಭಾರತ ಶ್ರೀಲಂಕ ಮತ್ತು ಟ್ಯಾಂಜೇನಿಯಾ ಈ ಮೂರೂ ರಾಷ್ಟ್ರಗಳು ಅವರ ಜನ್ಮದಿನವಾದ ಸೆಪ್ಟೆಂಬರ್ 15 ಅನ್ನು ಇಂಜಿನಿಯರ್‌ಗಳ ದಿನವಾಗಿ ಆಚರಿಸುತ್ತವೆ.
ಈ ದಿನದಂದು ಎಂಜಿನಿಯರ್ ಗಳಿಗೆ ಹಾಗೂ ಅವರು ಮಾಡಿದ ಅದ್ಬುತ ಕೆಲಸಗಳಿಗಾಗಿ ನಮನವನ್ನು ಸಲ್ಲಿಸುತ್ತಾ, ನಾವು ನಿಮಗಾಗಿ ಭಾರತದಲ್ಲಿ ತಾಂತ್ರಿಕತೆಯನ್ನು ಮೆರೆದ ಹಲವು ಅದ್ಬುತಗಳನ್ನು ಪರಿಚಯಿಸುತ್ತಿದ್ದೇವೆ ಹಾಗೂ ಅವುಗಳು ಹೇಗೆ ಮಾನವ ಕುಲದ ಮೇಲೆ ಧನಾತ್ಮಕ ಪರಿಣಾಮ ಬೀರಿವೆ ಎಂಬುದನ್ನು ತಿಳಿಸುತ್ತಿದ್ದೇವೆ.

ಏಕತೆಯ ಪ್ರತಿಮೆ (ಸ್ಟ್ಯಾಚೂ ಆಫ್ ಯುನಿಟಿ) - ಗುಜರಾತ್
ಸ್ಟ್ಯಾಚೂ ಆಫ್ ಯುನಿಟಿ ಅಥವಾ ಏಕತೆಯ ಪ್ರತಿಮೆಯು ನರ್ಮದಾ ನದಿಯ ದಡದಲ್ಲಿ ನೆಲೆಸಿದ್ದು, ಇದು ಭಾರತದ ಉಕ್ಕಿನ ಮನುಷ್ಯ ಎಂದೇ ಹೆಸರು ಪಡೆದಿರುವ ಸರ್ದಾರ್ ವಲ್ಲಭ ಭಾಯಿ ಪಟೇಲರ ಸ್ಮರಣಾರ್ಥವಾಗಿ ನಿರ್ಮಿಸಲ್ಪಟ್ಟಿದ್ದು, ಸುಮಾರು ಇದು 182 ಮೀಟರ್ ಎತ್ತರವಿರುವ ಈ ಪ್ರತಿಮೆಯು ವಿಶ್ವದ ಅತ್ಯಂತ ಎತ್ತರದ ಸ್ವತಂತ್ರ ವಾಗಿ ನಿಂತಿರುವ ಪ್ರತಿಮೆಯಾಗಿದೆ ಹಾಗೂ ಇದು ಭಾರತದ ರಮಣೀಯ ಕಲಾಕೃತಿಗಳ ಪಟ್ಟಿಗೆ ಸೇರಿಸಬೇಕಾದ ಅತ್ಯಾಧುನಿಕ ತಾಂತ್ರಿಕತೆಯ ಅದ್ಭುತವಾಗಿದೆ. ಈ ಪ್ರತಿಮೆಯು ಆಧುನಿಕ ಪೀಳಿಗೆಯ ಜನರು ಅನುಮೋದನೆ ಪಡೆದುಕೊಂಡು ದಾಖಲಿಸಲಾದ ಸಮಯದಲ್ಲಿ ಪೂರ್ಣಗೊಳಿಸಿದ ಯೋಜನೆಗಳಲ್ಲಿ ಒಂದಾಗಿದೆ. ಇದು ಖಂಡಿತವಾಗಿಯೂ ಭಾರತೀಯ ಪ್ರವಾಸೋದ್ಯಮವನ್ನು ಉತ್ತೇಜಿಸುತ್ತದೆ ಎಂಬ ಭರವಸೆಯನ್ನು ಹೊಂದಿದೆ.

ಮಹಾತ್ಮಾ ಗಾಂಧಿ ಸೇತು
ಬಿಹಾರವನ್ನು ನಿಜವಾಗಿಯೂ ಇಂಜಿನಿಯರಿಂಗ್ ಪವಾಡ ಎಂದು ಕರೆಯಲಾಗುತ್ತದೆ. ಇದು ಏಕೆಂದರೆ ಇಲ್ಲಿರುವ ಹೆಸರುವಾಸಿಯಾದ ಸೇತುವೆಗಾಗಿ ಈ ಸೇತುವೆಯು ಸಮತೋಲನವಾಗಿದ್ದು ಮತ್ತು ನೋಟದಲ್ಲಿ ಅತ್ಯಂತ ಉನ್ನತ ಮಟ್ಟದಲ್ಲಿರುವುಕ್ಕೆ ಹೆಸರುವಾಸಿಯಾಗಿದೆ. ನಾವು ಹೇಳುತ್ತಿರುವುದು ಮಹಾತ್ಮಾಗಾಂಧಿ ಸೇತು ಬಗ್ಗೆ ಹೌದು! ಇಲ್ಲಿರುವ ಮಹಾತ್ಮ ಗಾಂಧಿ ಸೇತು ಎಂಜಿನಿಯರಿಂಗ್ ವಿನ್ಯಾಸ ಮತ್ತು ತಂತ್ರಜ್ಞಾನ ಎರಡರ ಅಸಾಧಾರಣ ಕೌಶಲ್ಯತೆಯನ್ನು ಚಿತ್ರಿಸುತ್ತದೆ.

ಪಂಬನ್ ಅಣೆಕಟ್ಟು, ತಮಿಳುನಾಡು
ರಾಮೇಶ್ವರಂ ದ್ವೀಪವನ್ನು ಭಾರತದ ಮುಖ್ಯ ಭೂಭಾಗಕ್ಕೆ ಸಂಪರ್ಕಿಸುವ ಪಂಬನ್ ಸೇತುವೆಯ ಮೇಲಿನ ರೈಲು ಪ್ರಯಾಣವನ್ನು ನೀವು ಎಂದಿಗೂ ಮರೆಯಲು ಸಾಧ್ಯವಿಲ್ಲ. 143 ಪಿಯರ್‌ಗಳೊಂದಿಗೆ, 2 ಕಿಮೀ ವ್ಯಾಪಿಸಿದೆ, ಇದು ಭಾರತದ ಎರಡನೇ ಅತಿ ಉದ್ದದ ಸಮುದ್ರ ಸೇತುವೆಯಾಗಿರುವ ಪಂಬನ್ ಸೇತುವೆಯು ಭಾರತದ ಮೊದಲ ಕ್ಯಾಂಟಿಲಿವರ್ ಸೇತುವೆಯಾಗಿದೆ. ಈ ಸೇತುವೆಯನ್ನು ನಿರ್ಮಿಸುವಾಗ ಅನೇಕ ಸವಾಲುಗಳು ಇದ್ದವು, ಏಕೆಂದರೆ ಇದನ್ನು ವಿಶ್ವದ ಎರಡನೇ ಅತ್ಯಂತ ವಿನಾಶಕಾರಿ ಪರಿಸರದಲ್ಲಿ ನಿರ್ಮಿಸಲಾಗಿದೆ.

ಕಾಳೇಶ್ವರಂ ಏತ ನೀರಾವರಿ ಯೋಜನೆ, (ಕಾಳೇಶ್ವರಂ ಲಿಫ್ಟ್ ಇರಿಗೇಶನ್ ಪ್ರೋಜೆಕ್ಟ್), ತೆಲಂಗಾಣ
ಕಾಳೇಶ್ವರಂ ಏತ ನೀರಾವರಿ (ಕೆ ಎಲ್ ಐ ಪಿ) ಯೋಜನೆಯು ವಿಶ್ವದಲ್ಲಿಯೇ ಒಂದು ವಿಭಿನ್ನವಾದ ಮತ್ತು ಸಮಗ್ರವಾದ ಒಂದು ಯೋಜನೆಯಾಗಿದ್ದು, ಇದು ಏಷ್ಯಾದ ಅತಿ ದೊಡ್ಡ ಮೂಲಸೌಕರ್ಯ ಹೂಡಿಕೆಯಾಗಿದ್ದು ಇದನ್ನು ಪೂರ್ಣಗೊಳಿಸಲು ಬರೋಬ್ಬರಿ 1.2ಲಕ್ಷ ಕೋಟಿಗಳು ಬೇಕಾಯಿತು. ತೆಲಂಗಾಣ ರಾಜ್ಯವು 2010 ನೇ ಇಸವಿಯ ಮಧ್ಯಭಾಗದಲ್ಲಿ ಗಂಭೀರ ನೀರಿನ ತೊಂದರೆಗಳನ್ನು ಅನುಭವಿಸಿದ ನಂತರ, ಈ ಯೋಜನೆಯನ್ನು 2016 ರಲ್ಲಿ ಪ್ರಾರಂಭಿಸಲಾಯಿತು ಮತ್ತು 2019 ರಲ್ಲಿ ಪೂರ್ಣಗೊಳಿಸಲಾಯಿತು - ಗೋದಾವರಿ ನದಿಯು ಸುಮಾರು 2,000 ಕಿಲೋಮೀಟರ್ ನೀರು ಸರಬರಾಜಿನ ಸರಪಳಿಗೆ ವಿಸ್ತರಿಸಲು ಅನುವು ಮಾಡಿಕೊಟ್ಟಿತು, ಇದು ಸಾವಿರಾರು ರೈತರಿಗೆ ಸಹಾಯ ಮಾಡಿದೆ ಮತ್ತು ರಾಜ್ಯದಾದ್ಯಂತದ ಹಳ್ಳಿಗಳಲ್ಲಿ ಅಂತರ್ಜಲ ಪೂರೈಕೆಯನ್ನು ಮರುಜೀವಗೊಳಿಸಿದೆ.

ಬಾಂದ್ರಾ - ವರ್ಲಿ ಸೀ ಲಿಂಕ್, ಮುಂಬೈ
ಬಾಂದ್ರಾ - ವರ್ಲಿ ಸೀ ಲಿಂಕ್ ಇದು ಎಂಟು ಪಥಗಳ ಸೇತುವೆಯಾಗಿದ್ದು ಇದು ಮುಂಬೈನ ಪಶ್ಚಿಮ ಉಪನಗರಗಳಲ್ಲಿ ಬಾಂದ್ರಾವನ್ನು ದಕ್ಷಿಣ ಮುಂಬೈನ ವರ್ಲಿಯೊಂದಿಗೆ ಸಂಪರ್ಕಿಸುತ್ತದೆ. ಇದು ಎರಡೂ ಬದಿಗಳಲ್ಲಿ ಪೂರ್ವ ಒತ್ತಡದ ಕಾಂಕ್ರೀಟ್-ಉಕ್ಕಿನ ವಯಡಕ್ಟ್‌ಗಳನ್ನು ಹೊಂದಿರುವ ಕೇಬಲ್-ತಡೆಯಿರುವ ಸೇತುವೆಯಾಗಿದೆ. ಬಾಂದ್ರಾ-ವರ್ಲಿ ಸಮುದ್ರ ಸಂಪರ್ಕವು ಮುಂಬೈನಲ್ಲಿ ಭೂಕಂಪನ ನಿರೋಧಕಗಳನ್ನು ಬಳಸುವ ಮೊದಲ ಮೂಲಸೌಕರ್ಯ ಯೋಜನೆಯಾಗಿದ್ದು, ಇವುಗಳು ರಿಕ್ಟರ್ ಮಾಪಕದಲ್ಲಿ 7.0 ವರೆಗಿನ ಭೂಕಂಪಗಳನ್ನು ತಡೆದುಕೊಳ್ಳಲು ಸಾಧ್ಯವಾಗಿದೆ. ಇದಕ್ಕೆ ಭಾರತದ ಮಾಜಿ ಪ್ರಧಾನಿ ರಾಜೀವ್ ಗಾಂಧಿಯವರ ಹೆಸರನ್ನು ಇಡಲಾಗಿದೆ.

ಸಿಗ್ನೇಚರ್ ಬ್ರಿಡ್ಜ್ ದೆಹಲಿ
ವಜೀರಾಬಾದ್ ಅನ್ನು ಯಮುನಾ ನದಿಗೆ ಅಡ್ಡಲಾಗಿ ಒಳ ನಗರದೊಂದಿಗೆ ಸಂಪರ್ಕಿಸುವ ಸಿಗ್ನೇಚರ್ ಸೇತುವೆಯನ್ನು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ನವೆಂಬರ್ 4, 2018 ರಂದು ಉದ್ಘಾಟಿಸಿದರು. ಇದು ಕುತುಬ್ ಮಿನಾರ್ ನ ಎತ್ತರಕ್ಕಿಂತ ದುಪ್ಪಟ್ಟಾಗಿದೆ. ಈ ಸಿಗ್ನೇಚರ್ ಬ್ರಿಡ್ಜ್ ಅನ್ನು 'ನಮಸ್ತೆ' ಎಂಬ ಸನ್ನೆಯೊಂದಿಗೆ ಭಾರತದ ಮೊದಲ ಅಸಮತೋಲಿತ ಕೇಬಲ್-ಸ್ಟೇಡ್ ಸೇತುವೆ ಎಂದು ಬಿಂಬಿಸಲಾಗಿದೆ.

ಮಾತೃಮಂದಿರ್, ಅರೋವಿಲ್ಲೆ
ಮಾತ್ರಿಮಂದಿರ್ (ಸಂಸ್ಕೃತ ಪದವಾಗಿದ್ದು ತಾಯಿಯ ದೇವಾಲಯ ಎಂದು ಅರ್ಥಬರುತ್ತದೆ) ಅರೋವಿಲ್ಲೆಯ ಹೃದಯಭಾಗದಲ್ಲಿರುವ ಇದು ಆದ್ಯಾತ್ಮಿಕ ಮಹತ್ವವುಳ್ಳ ಕಟ್ಟಡವಾಗಿದೆ. ಇದನ್ನು ನಗರದ ಆತ್ಮವೆಂದು ಕರೆಯಲಾಗುತ್ತದೆ ಹಾಗೂ ಈ ಸ್ಥಳವು ವಿಶಾಲವಾದ ತೆರೆದ ಭಾಗದಲ್ಲಿ ನೆಲೆಸಿರುವುದರಿಂದ ಇದನ್ನು ಶಾಂತಿ ಎಂದು ಕರೆಯಲಾಗುತ್ತದೆ. ಮಾತೃ ಮಂದಿರವು ನಿರ್ಧಿಷ್ಟವಾಗಿ ಯಾವುದೇ ಜಾತಿ ಅಥವಾ ಪಂಗಡಗಳಿಗೆ ಸೇರಿಲ್ಲ. ಇದನ್ನು ನಿರ್ಮಿಸಲು 37 ವರ್ಷಗಳು ಬೇಕಾಯಿತು, ಫೆಬ್ರವರಿ 21, 1971 ರಂದು ಸೂರ್ಯೋದಯದ ಸಮಯದಲ್ಲಿ ಅಂದರೆ ತಾಯಿಯ 93 ನೇ ಜನ್ಮದಿನದಂದು ಪ್ರಾರಂಭವಾಗಿ - ಮೇ 2008 ರಲ್ಲಿ ಅದು ಪೂರ್ಣಗೊಂಡಿತು.

ಚೆನಾಬ್ ಸೇತುವೆ ಜಮ್ಮು ಮತ್ತು ಕಾಶ್ಮೀರ
ಭಾತೀಯ ರೈಲ್ವೆ ವಿಶ್ವದ ಅತಿ ಎತ್ತರದ ರೈಲ್ವೆ ಸೇತುವೆಯನ್ನು ನಿರ್ಮಿಸುತ್ತಿದೆ, ಇದು ಪ್ಯಾರಿಸ್ ನ ಐಫೆಲ್ ಟವರ್ ಗಿಂತಲೂ ಎತ್ತರವಾಗಿದೆ ಎಂದು ಅಂದಾಜಿಸಲಾಗಿದೆ. ಇದು 'ಬ್ಲಾಸ್ಟ್ ಪ್ರೂಫ್' ಸಹ ಆಗಿರುತ್ತದೆ ಮತ್ತು ಭೂಕಂಪಗಳನ್ನು ತಡೆದುಕೊಳ್ಳಲು ಇದನ್ನು ನಿರ್ಮಿಸಲಾಗುತ್ತಿದೆ.


Click it and Unblock the Notifications

















