Search
  • Follow NativePlanet
Share
» »ವಾರಣಾಸಿಯಲ್ಲಿರುವ ಈ ದುರ್ಗಾ ದೇವಿ ಮಂದಿರದ ವಿಶೇಷತೆ ಏನು ಗೊತ್ತಾ?

ವಾರಣಾಸಿಯಲ್ಲಿರುವ ಈ ದುರ್ಗಾ ದೇವಿ ಮಂದಿರದ ವಿಶೇಷತೆ ಏನು ಗೊತ್ತಾ?

ಉತ್ತರ ಭಾರತದ ವಾಸ್ತುಶಿಲ್ಪ ನಾಗರ ಶೈಲಿಯಲ್ಲಿ ಈ ಮಂದಿರವನ್ನು ನಿರ್ಮಿಸಲಾಗಿದೆ. ದುರ್ಗಾ ಕುಂಡ ಕೊಳದ ಎದುರಿಗೆ ಚೌಕ ವೇದಿಕೆಯಲ್ಲಿ ಈ ಮಂದಿರವಿದೆ. ಮಂದಿರದ ನಾಲ್ಕು ಬದಿಯಲ್ಲಿ ಎತ್ತರದ ಗೋಪುರಗಳಿವೆ ಮತ್ತು ಬಹುಶ್ರೇಣಿಯ ಶಿಖರವಿದೆ.

ಗಂಗಾ ನದಿ ದಂಡೆಯಲ್ಲಿರುವ ಈ ಹಳೆಯ ನಗರವಾಗಿರುವ ವಾರಣಾಸಿಯು, ಹೆಚ್ಚಿನ ಸಂಖ್ಯೆಯ ದೇವಾಲಯಗಳಿಗೆ ತವರಾಗಿದೆ. ಪ್ರಪಂಚದ ಅತ್ಯಂತ ಪವಿತ್ರ ನಗರಗಳಲ್ಲಿ ಒಂದಾಗಿದೆ. ಆಧ್ಯಾತ್ಮಿಕ ಆನಂದವನ್ನು ಅನ್ವೇಷಿಸುವ ಸಲುವಾಗಿ ಭಕ್ತರು ಇಲ್ಲಿಗೆ ಆಗಮಿಸುತ್ತಾರೆ. ಧಾರ್ಮಿಕ ಅನುಯಾಯಿಗಳು ಇಲ್ಲಿನ ದೇವಸ್ಥಾನಗಳತ್ತ ಆಕರ್ಷಿತರಾಗುತ್ತಾರೆ.

ದುರ್ಗಾ ದೇವಿ ಮಂದಿರ

ದುರ್ಗಾ ದೇವಿ ಮಂದಿರ

PC: AKS.9955
ಅಂತಹ ಪುಣ್ಯ ಭೂಮಿಯಲ್ಲಿ ದುರ್ಗಾ ಮಂದಿರವೊಂದಿದೆ. 18ನೇ ಶತಮಾನದಲ್ಲಿ ಬೆಂಗಾಳಿ ಮಹಾರಾಣಿ ಇದನ್ನು ನಿರ್ಮಿಸಿದರೆಂದು ನಂಬಲಾಗಿದೆ. ಬನಾರಸ್ ನ ರಾಜ ಮನೆತನದವರು ಈಗ ಮಂದಿರದ ಆಡಳಿತ ನೋಡಿಕೊಳ್ಳುತ್ತಿದ್ದಾರೆ.

ದೇವಾಲಯದ ವಿಶೇಷತೆಗಳು

ದೇವಾಲಯದ ವಿಶೇಷತೆಗಳು

PC: Henk Kosters
ಉತ್ತರ ಭಾರತದ ವಾಸ್ತುಶಿಲ್ಪ ನಾಗರ ಶೈಲಿಯಲ್ಲಿ ಈ ಮಂದಿರವನ್ನು ನಿರ್ಮಿಸಲಾಗಿದೆ. ದುರ್ಗಾ ಕುಂಡ ಕೊಳದ ಎದುರಿಗೆ ಚೌಕ ವೇದಿಕೆಯಲ್ಲಿ ಈ ಮಂದಿರವಿದೆ. ಮಂದಿರದ ನಾಲ್ಕು ಬದಿಯಲ್ಲಿ ಎತ್ತರದ ಗೋಪುರಗಳಿವೆ ಮತ್ತು ಬಹುಶ್ರೇಣಿಯ ಶಿಖರವಿದೆ. ದೇವಿಯ ಸೀರೆಯ ಬಣ್ಣದಂತೆ ಮಂದಿರಕ್ಕೆ ಕೆಂಪು ಮತ್ತು ತಿಳಿ ಹಳದಿ ಬಣ್ಣ ಬಳಿಯಲಾಗಿದೆ. ದುರ್ಗಾ ದೇವಿಯ ವಿಗ್ರಹವನ್ನು ಯಾರೂ ಮಾಡಿದಲ್ಲ, ಅದು ತಾನಾಗಿಯೇ ಸೃಷ್ಟಿಯಾಗಿದ್ದು , ಇದು ಎಲ್ಲಾ ದುಷ್ಟಶಕ್ತಿಗಳಿಂದ ನಗರವನ್ನು ರಕ್ಷಿಸುತ್ತದೆ ಎನ್ನುವ ನಂಬಿಕೆ ಇಲ್ಲಿನ ಜನರದ್ದು.

ಮಂಗನ ಮಂದಿರ

ಮಂಗನ ಮಂದಿರ

PC: AKS.9955
ನವರಾತ್ರಿ ಮತ್ತು ಇತರ ಹಬ್ಬಗಳ ವೇಳೆ ಮಂದಿರಕ್ಕೆ ಸಾವಿರಾರು ಮಂದಿ ಭಕ್ತರು ಭೇಟಿ ನೀಡುತ್ತಾರೆ. ಅನ್ಯ ಧರ್ಮಿಯರು ಮಂದಿರದ ಅಂಗಣ ಪ್ರವೇಶ ಮಾಡಬಹುದು. ಆದರೆ ಗರ್ಭಗುಡಿಗೆ ಪ್ರವೇಶ ಮಾಡುವಂತಿಲ್ಲ. ಮಂದಿರದ ಸುತ್ತಮುತ್ತಲು ಇರುವ ಮಂಗಗಳಿಂದಾಗಿ ಈ ಮಂದಿರವನ್ನು 'ಮಂಗನ ಮಂದಿರ' ವೆಂದೂ ಕರೆಯುತ್ತಾರೆ.

ನವರಾತ್ರಿಗೆ ಹೆಚ್ಚಿನ ಭಕ್ತರು ಆಗಮಿಸುತ್ತಾರೆ

ನವರಾತ್ರಿಗೆ ಹೆಚ್ಚಿನ ಭಕ್ತರು ಆಗಮಿಸುತ್ತಾರೆ

PC: youtube
ಈ ದೇವಸ್ಥಾನದ ಭಕ್ತರ ನಂಬಿಕೆಯ ಪ್ರಕಾರ ದುರ್ಗಾ ದೇವಿಯು ಈ ಪವಿತ್ರ ಸ್ಥಳದ ರಕ್ಷಕಿಯಾಗಿದ್ದಾಳೆ. ದುರ್ಗೆಯು ಈ ಊರನ್ನು ಅಲ್ಲಿನ ಜನರನ್ನು ರಕ್ಷಿಸುತ್ತಿದ್ದಾಳೆ. ದುರ್ಗೆಯು ಶಿವನ ಸಂಗಾತಿ ಪಾರ್ವತಿ ರೂಪ ಮತ್ತು ಶಕ್ತಿ ರೂಪಿನಿಯಾಗಿದ್ದಾಳೆ. ಲಕ್ಷಾಂತರ ಜನರು ತಮ್ಮ ಪ್ರಾರ್ಥನೆಗಳನ್ನು ಅರ್ಪಿಸಲು ಇಲ್ಲಿಗೆ ಬರುತ್ತಾರೆ. ನವರಾತ್ರಿ ಮತ್ತು ಇತರ ಮಂಗಳಕರ ಸಂದರ್ಭಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಾರೆ.

ಯಾವಾಗ ತೆರೆದಿರುತ್ತದೆ

ಯಾವಾಗ ತೆರೆದಿರುತ್ತದೆ

PC: youtube
ಬೆಳಿಗ್ಗೆ ಏಳು ಗಂಟೆಯಿಂದ ರಾತ್ರಿ ಎಂಟು ಗಂಟೆಗಳವರೆಗೆ ದೇವಸ್ಥಾನ ತೆರೆದಿರುತ್ತದೆ. ದುರ್ಗಾ ದೇವಿಯ ಅಭಿಮಾನಿಗಳು ಮಾತ್ರವಲ್ಲದೇ ಕಲಾ ಮತ್ತು ವಾಸ್ತುಶಿಲ್ಪದ ಪ್ರೇಮಿಗಳನ್ನೂ ತನ್ನತ್ತ ಸೆಳೆಯುತ್ತದೆ. ವಾರಣಾಸಿ ಪ್ರವಾಸ ಕೈಗೊಂಡಲ್ಲಿ ನೀವು ನೀವು ದುರ್ಗಾ ದೇವಸ್ಥಾನಕ್ಕೆ ಭೇಟಿ ನೀಡೋದನ್ನು ಮರೆಯದಿರಿ.

 ತಲುಪುವುದು ಹೇಗೆ?

ತಲುಪುವುದು ಹೇಗೆ?

PC: ThePiyushVerma
ವಾರಣಾಸಿ ದೇಶೀಯ ವಿಮಾನ ನಿಲ್ದಾಣವನ್ನು ಹೊಂದಿದೆ. ನಿಯಮಿತ ವಿಮಾನಗಳು ವಾರಣಾಸಿಯನ್ನು ಭಾರತದ ಕೆಲವು ಪ್ರಮುಖ ನಗರಗಳಿಗೆ ಸಂಪರ್ಕಿಸುತ್ತವೆ. ಈ ನಗರಗಳು ಅಂತರರಾಷ್ಟ್ರೀಯ ವಿಮಾನ ನಿಲ್ದಾಣಗಳಿಗೆ ನೆಲೆಯಾಗಿದೆ ಮತ್ತು ಪ್ರಪಂಚದ ಹಲವಾರು ಪ್ರಮುಖ ನಗರಗಳೊಂದಿಗೆ ಸಂಪರ್ಕ ಹೊಂದಿವೆ. ದೆಹಲಿಯಿಂದ ಆಗ್ರಾ ಮತ್ತು ಖಜುರಾಹೋ ಮೂಲಕ ವಾರಣಾಸಿಗೆ ದೈನಂದಿನ ವಿಮಾನಗಳು ಇವೆ.
ವಾರಣಾಸಿಯು ರಾಷ್ಟ್ರದ ಕೆಲವು ಪ್ರಧಾನ ಮೆಟ್ರೊ ಸ್ಟೇಶನ್‌ಗಳಿಗೆ ರೈಲುಗಳ ಮೂಲಕ ಉತ್ತಮವಾಗಿ ಸಂಪರ್ಕ ಹೊಂದಿದೆ. ದೆಹಲಿ, ಕೊಲ್ಕತ್ತಾ, ಮುಂಬೈ ಮತ್ತು ಇತರ ಭಾರತದ ನಗರಗಳು ಇದರೊಂದಿಗೆ ಸಂಪರ್ಕ ಹೊಂದಿವೆ. ವಾರಣಾಸಿಯ ಎರಡು ರೈಲು ನಿಲ್ದಾಣಗಳಾದ ವಾರಣಾಸಿ ಕಂಟೋನ್ಮೆಂಟ್, ಕಾಶಿ ಜಂಕ್ಷನ್‌ಗಳಿಗೆ ರೈಲುಗಳು ಪ್ರಯಾಣಿಸುತ್ತವೆ. ವಾರಣಾಸಿಯು ಉತ್ತರ ಪ್ರದೇಶದ ಹಲವಾರು ಪ್ರಮುಖ ನಗರಗಳಿಗೆ ಉತ್ತಮ ರಸ್ತೆ ಸಂಪರ್ಕವನ್ನು ಹೊಂದಿದೆ.

More News

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+