• Follow NativePlanet
Share
Menu
» »ಪ್ರಪಂಚದಲ್ಲಿ ಈ ರೀತಿಯ ಶಿವಾಲಯವಿದೆ ಎಂದು ನಿಮಗೆ ಗೊತ್ತ?

ಪ್ರಪಂಚದಲ್ಲಿ ಈ ರೀತಿಯ ಶಿವಾಲಯವಿದೆ ಎಂದು ನಿಮಗೆ ಗೊತ್ತ?

Written By:

ಪರಮ ಶಿವನನ್ನು ಲಿಂಗ ಆಧಾರಿತವಾಗಿಯೇ ಪೂಜೆ ಮಾಡುವುದು ಸಾಮಾನ್ಯ. ಪರಮ ಶಿವನು ಶೈವ ಧರ್ಮದವರಿಗೆ ಮಾತ್ರವಲ್ಲದೇ ಇತರ ಧರ್ಮದವರಿಗೂ ಆರಾಧ್ಯ ದೈವ. ಈ ದೈವವನ್ನು ನಾವು ಸೋಮವಾರದ ದಿನದಂದು ಭರ್ಜರಿಯಾಗಿ ಪೂಜೆಗಳನ್ನು ನೆರವೇರಿಸುತ್ತೇವೆ. ಕಾರ್ತಿಕ ಮಾಸದ ದಿನದಂದು ಸಂಭ್ರಮ ಸಡಗರದಿಂದ ಹಾಗೂ ಭಕ್ತಿಯಿಂದ ಆರಾಧಿಸುತ್ತೇವೆ.

ಆದರೆ ಪರಮಶಿವನು ತಲೆ ಕೆಳಗೆ ಮಾಡಿ ತಪಸ್ಸು ಮಾಡುತ್ತಿರುವ ಮೂರ್ತಿಯನ್ನು ನೀವೂ ಯಾವುದಾದರು ದೇವಾಲಯದಲ್ಲಿ ಕಂಡಿದ್ದೀರಾ? ಏನೂ ಎಂದು ಉದ್ಗಾರ ತೆಗೆಯುತ್ತಿದ್ದೀರಾ? ನಿಜ ಪ್ರಪಂಚದಲ್ಲಿಯೇ ನೀವೂ ಎಲ್ಲೂ ಕಂಡಿರದ ಶಿವನ ಮೂರ್ತಿಯು ಆಂಧ್ರ ಪ್ರದೇಶದ ಭೀಮಾವರಂ ಯಮನದೂರ ಗ್ರಾಮದಲ್ಲಿದೆ.

ಈ ದೇವಾಲಯದಲ್ಲಿನ ಈ ರೀತಿಯ ಶಿವನು ಇರುವುದು ಏಕೆ ಎಂಬುದನ್ನು ಲೇಖನದ ಮೂಲಕ ತಿಳಿಯೋಣ.

ಶಿವಲಿಂಗ

ಶಿವಲಿಂಗ

ಆಂಧ್ರ ಪ್ರದೇಶದ ಭೀಮಾವರಂನಲ್ಲಿರುವ ಈ ದೇವಾಲಯದಲ್ಲಿ ತಲೆ ಕೆಳಗೆ ಮಾಡಿ ತಪಸ್ಸು ಮಾಡುತ್ತಿರುವ ಹಾಗೆ ಶಿವ ಲಿಂಗವಿರುವುದು ವಿಶೇಷ. ಈ ದೇವಾಲಯಕ್ಕೆ ಹಲವಾರು ವಿಶೇಷಗಳಿವೆ.

ವಿಶೇಷಗಳು

ವಿಶೇಷಗಳು

ಆಂಧ್ರ ಪ್ರದೇಶದ ಪಶ್ಚಿಮ ಗೋದಾವರಿ ಜಿಲ್ಲೆಯಲ್ಲಿದೆ. ಸಾಧಾರಣವಾಗಿ ಶೈವ ಕ್ಷೇತ್ರದಲ್ಲಿ ಶಿವನು ಲಿಂಗ ರೂಪದಲ್ಲಿ ದರ್ಶನವನ್ನು ನೀಡುತ್ತಿರುತ್ತಾನೆ.

ವಿಗ್ರಹ

ವಿಗ್ರಹ

ಆದರೆ ಶಿವನು ವಿಗ್ರಹ ರೂಪದಲ್ಲಿ ಕಾಣಿಸಿದರೆ? ಅದರಲ್ಲೂ ತಲೆ ಕೆಳಗೆ ಮಾಡಿ ದರ್ಶನವನ್ನು ನೀಡಿದರೆ? ಆಶ್ಚರ್ಯವೇ ಪಡದೇ ಇರುವ ಭಕ್ತರು ಇರುವುದಿಲ್ಲ ಅಲ್ಲವೇ?

ಪ್ರತ್ಯೇಕವಾದ ಭಂಗಿ

ಪ್ರತ್ಯೇಕವಾದ ಭಂಗಿ

ಹಾಗೆಯೇ ಶಿವನೂ ಕೂಡ ಪ್ರತ್ಯೇಕವಾದ ಭಂಗಿಯಲ್ಲಿ ಈ ದೇವಾಲಯದಲ್ಲಿ ನೆಲೆಸಿದ್ದಾನೆ. ಸಾಧಾರಣವಾದ ಲಿಂಗ ರೂಪದಲ್ಲಿ ಅಲ್ಲದೇ ಸಕಾರ ರೂಪದಲ್ಲಿ ಲಿಂಗ ವೈವಿದ್ಯತೆಯನ್ನು ದರ್ಶನ ನೀಡುವ ಪರಮಶಿವ.

ತಪೋಭಂಗಿ

ತಪೋಭಂಗಿ

ಇಲ್ಲಿ ಮಹಾ ಶಿವನು ಸೀರ್ ಶಾಸನದಲ್ಲಿ ಅಂದರೆ ತಪೋಭಂಗಿಯಲ್ಲಿ ಶಿವನು ಕಾಣಿಸುತ್ತಾನೆ. ಶಿವನ ಜಾಟಾಜೂಟವು ಭೂಮಿಗೆ ತಗುಲುತ್ತಾ ಇರುತ್ತದೆ.

ಪರಮಶಿವ

ಪರಮಶಿವ

ಈ ಭಂಗಿಯಲ್ಲಿ ಜಾಟಾಜೂಟವೂ ಭೂಮಿಗೆ ತಾಕುತ್ತಾ ಇದ್ದು, ಮುಖ, ಕಣ್ಣು, ಮೂಗು, ಕಂಠ, ಉದರ, ಕಾಲುಗಳು ಹಾಗೂ ಪಾದಗಳು ಇರುವುದನ್ನು ಕಾಣಬಹುದಾಗಿದೆ.

ಪಾರ್ವತಿ

ಪಾರ್ವತಿ

ಇಲ್ಲಿ ಪಾರ್ವತಿ ತಾಯಿಯು ನೆಲೆಸಿದ್ದಾಳೆ. ಈ ಶಿವನ ದೇವಾಲಯದಲ್ಲಿಯೇ ಪ್ರತ್ಯೇಕವಾದ ಮಂದಿರದಲ್ಲಿ ನೆಲೆಸಿ ಭಕ್ತರಿಗೆ ಅನುಗ್ರಹಿಸುತ್ತಿರುತ್ತಾಳೆ.

ಅರ್ಧನಾರೀಶ್ವರ ತತ್ವ

ಅರ್ಧನಾರೀಶ್ವರ ತತ್ವ

ಈ ದೇವಾಲಯದ ಮತ್ತೊಂದು ವಿಶೇಷವೆನೆಂದರೆ ಒಂದೇ ಪೀಠದಲ್ಲಿ ಪರಮಶಿವನು ಹಾಗೂ ಪಾರ್ವತಿ ಮಾತೆಯು ನೆಲೆಸಿರುವುದು. ಈ ಅದ್ಭುತವನ್ನು ಕಾಣಲು ಹಲವಾರು ಭಕ್ತರು ದಿನ ನಿತ್ಯ ಈ ದೇವಾಲಯಕ್ಕೆ ಭೇಟಿ ನೀಡುತ್ತಾ ಇರುತ್ತಾರೆ.

ಸಮಾನತೆ

ಸಮಾನತೆ

ಪ್ರಪಂಚದಲ್ಲಿಯೇ ಸಮಾನತೆಕ್ಕೆ ನಿದರ್ಶನವಾಗಿ ಪರಮ ಶಿವನು ಹಾಗೂ ಪಾರ್ವತಿ ದೇವಿಯು ಒಂದೇ ಪೀಠದಲ್ಲಿ ಅರ್ಧನಾರೀಶ್ವರನಾಗಿ ನೆಲೆಸಿರುವುದೇ ಆಗಿದೆ.

ಕುಮಾರ ಸ್ವಾಮಿ

ಕುಮಾರ ಸ್ವಾಮಿ

ಈ ದೇವಾಲಯದಲ್ಲಿ ಪಾರ್ವತಿ ದೇವಿಯು ತನ್ನ ಪುತ್ರನಾದ ಕುಮಾರ ಸ್ವಾಮಿಯನ್ನು ತೊಡೆಯ ಮೇಲೆ ಲಾಲಿಸುತ್ತಿರುವ ಭಂಗಿಯಲ್ಲಿ ಇರುವುದು ಮತ್ತೊಂದು ವಿಶೇಷ.

ಸ್ಥಳ ಪುರಾಣ

ಸ್ಥಳ ಪುರಾಣ

ಒಮ್ಮೆ ಯಮ ಧರ್ಮ ರಾಜ ಶಕ್ತಿಶ್ವರನಿಗೆ ತಪಸ್ಸು ಆಚರಿಸಿದ್ದರಿಂದ ಪಶ್ಚಿಮ ಗೋದಾವರಿ ತೀರಕ್ಕೆ ಈ ಹೆಸರು ಬಂದಿತು ಎಂದು ತಿಳಿಸುತ್ತಾರೆ.

ಶಂಬರ

ಶಂಬರ

ಲೋಕ ಕಂಟಕವಾಗಿದ್ದ ಶಂಬರನನ್ನು ಯಮಧರ್ಮರಾಜ ಸಂಹಾರ ಮಾಡಬೇಕಾಗಿರುತ್ತದೆ. ಆದರೆ ಶಂಬರನು ಮಹಾ ಶಿವ ಭಕ್ತನಾಗಿರುತ್ತಾನೆ. ಹಾಗಾಗಿ ಯಮಧರ್ಮರಾಜನು ಶಂಬರನ ಅನುಮತಿಯನ್ನು ತೆಗೆದುಕೊಳ್ಳಬೇಕು ಎಂದು ಕೊಳ್ಳುತ್ತಾನೆ.

ಯಮಧರ್ಮರಾಜ

ಯಮಧರ್ಮರಾಜ

ಆದಿ ದೇವನಿಗೋಸ್ಕರ ಘೋರವಾದ ತಪಸ್ಸು ಮಾಡುತ್ತಾನೆ ಯಮ. ಆ ಸಮಯದಲ್ಲಿ ಕೈಲಾಸದಲ್ಲಿನ ಶಿವನು ತಲೆ ಕೆಳಗೆ ಮಾಡಿ ತಪಸ್ಸುನ್ನು ಮಾಡುತ್ತಾ ಇರುತ್ತಾನೆ. ಪಾರ್ವತಿ ದೇವಿಯು ತನ್ನ ಒಡಲಿನಲ್ಲಿರುವ ಕುಮಾರ ಸ್ವಾಮಿಯನ್ನು ಕಂಡು ಸಂತೋಷಗೊಳ್ಳುತ್ತಾ ಇರುತ್ತಾಳೆ.

ಪಾರ್ವತಿ

ಪಾರ್ವತಿ

ಯಮಧರ್ಮರಾಜ ಮಾಡುತ್ತಿರುವ ತಪಸ್ಸು ಪಾರ್ವತಿ ದೇವಿಗೆ ತಿಳಿಯುತ್ತದೆ. ಲೋಕ ಕಲ್ಯಾಣಕ್ಕಾಗಿ ಯಮನು ತಪಸ್ಸು ಮಾಡುತ್ತಿರುವ ಸ್ಥಳದಲ್ಲಿ ಶಿವನು ಹೇಗೆ ಇದ್ದಾನೊ ಹಾಗೆಯೇ ಇಲ್ಲಿ ಪ್ರತ್ಯಕ್ಷವಾಗಬೇಕು ಎಂದು ಕೋರುತ್ತಾನೆ.

ತಪಸ್ಸು

ತಪಸ್ಸು

ತಪಸ್ಸು ಕಾರಣವಾಗಿ ಶಿವನಿಂದ ಯಾವುದೇ ರೀತಿಯ ಉತ್ತರ ಯಮನಿಗೆ ಬರುವುದಿಲ್ಲ. ಆದರೆ ಪಾರ್ವತಿ ದೇವಿ ಅಂಗೀಕಾರ ಮಾಡಿ ಕೈಲಾಸದಲ್ಲಿ ಹೇಗೆ ಇದ್ದರೂ ಹಾಗೆಯೇ ಶಿಲಾ ರೂಪದಲ್ಲಿ ನೆಲೆಸುತ್ತಾರೆ.

ಭಿನ್ನ

ಭಿನ್ನ

ಈ ಕಾರಣಕ್ಕೆ ಉಳಿದ ಕ್ಷೇತ್ರಕ್ಕಿಂತ ಭಿನ್ನವಾಗಿ ಪಾರ್ವತಿ ಪರಮೇಶ್ವರರು ದರ್ಶನವನ್ನು ನೀಡುತ್ತಾರೆ. ಸಾವಿರಾರು ಭಕ್ತರಿಗೆ ಆದಿ ದಂಪತಿಯಾಗಿ ದರ್ಶನವನ್ನು ನೀಡುತ್ತಾರೆ.

ತಲುಪುವ ಬಗೆ?

ತಲುಪುವ ಬಗೆ?

ಪಶ್ಚಿಮ ಗೋದಾವರಿಯಲ್ಲಿನ ಭೀಮವಾರ ಜಿಲ್ಲೆಯ ಪಟ್ಟಣಕ್ಕೆ ಸುಮಾರು 5 ಕಿ,ಮೀ ದೂರದಲ್ಲಿರುವ ಯಮನದುರು ಎಂಬ ಗ್ರಾಮದಲ್ಲಿದೆ ಈ ದೇವಾಲಯ. ಈ ದೇವಾಲಯವನ್ನು ತ್ರೇತಾಯುಗದ ಒಂದು ದೇವಾಲಯ ಎಂದು ಗುರುತಿಸಿರುವ ಈ ದೇವಾಲಯವು ಹಲವಾರು ವರ್ಷಗಳ ನಂತರ ಬೆಳಕಿಗೆ ಬಂದಿತು.

ಪ್ರವಾಸದ ಬಗ್ಗೆ ಇನ್ನಷ್ಟು ಮಾಹಿತಿ, ಪ್ರವಾಸದ ಸಲಹೆಗಳು ಹಾಗೂ ಪ್ರವಾಸ ಲೇಖನಗಳನ್ನು ಪಡೆಯಿರಿ