ದೀಪಾವಳಿಗೆ ಇನ್ನೇನು ಕೆಲವೇ ದಿನಗಳು ಬಾಕಿ ಉಳಿದಿವೆ. ಈ ವರ್ಷ ದೀಪಾವಳಿ ಹಬ್ಬವನ್ನು ಕೆಲವೆಡೆ ಅಕ್ಟೋಬರ್ 31 ರಂದು, ಮತ್ತೆ ಕೆಲವೆಡೆ ನವೆಂಬರ್ 1 ರಂದು ಆಚರಿಸಲಾಗುತ್ತದೆ. ಸಾಮಾನ್ಯವಾಗಿ ಹಬ್ಬವನ್ನು ಮನೆಯಲ್ಲಿಯೇ ಆಚರಿಸುವುದು ವಾಡಿಕೆ. ಆದರೆ ಕೆಲವರು ಮಾತ್ರ ಹಬ್ಬ ಹಾಗೂ ರಜಾ ದಿನಗಳು ಒಟ್ಟಿಗೆ ಬರುವುದರಿಂದ ಪ್ರವಾಸಕ್ಕೆ ತೆರಳುತ್ತಾರೆ. ಅದರಲ್ಲೂ ದೀಪಾವಳಿಯನ್ನು ಯಾವ ಭಾಗಗಳಲ್ಲಿ ಅಥವಾ ದೇವಾಲಯಗಳಲ್ಲಿ ವಿಶೇಷವಾಗಿ ಆಚರಿಸಲ್ಪಡುತ್ತಾರೋ ಅಲ್ಲಿಗೆ ತೆರಳುವುದು ರೂಢಿ. ಪ್ರಸ್ತುತ ದೀಪಾವಳಿಯನ್ನು ಆಚರಿಸಲು ಜನರು ಉತ್ತರ ಪ್ರದೇಶದ ಅಯೋಧ್ಯೆಯತ್ತ ಮುಖ ಮಾಡುತ್ತಿದ್ದಾರೆ.
ಪ್ರತಿ ವರ್ಷ ಲಕ್ಷಾಂತರ ದೇಶೀಯ ಮತ್ತು ವಿದೇಶಿ ಪ್ರವಾಸಿಗರು ದೀಪಾವಳಿ ಹಬ್ಬವನ್ನು ಆಚರಿಸಲು ರಾಮನ ನಗರ ಎಂದು ಕರೆಯಲ್ಪಡುವ ಅಯೋಧ್ಯೆಗೆ ತೆರಳುತ್ತಾರೆ. ಹಾಗೆ ಪ್ರವಾಸಿಗರು ಅಯೋಧ್ಯೆಗೆ ತೆರಳಿದ ಅವಧಿಯಲ್ಲಿ ಕೆಲವು ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಆದ್ದರಿಂದ ಈ ಲೇಖನದಲ್ಲಿ ಕೆಲವು ಪ್ರಯಾಣ ಸಲಹೆಗಳು ಸೇರಿದಂತೆ ಅಯೋಧ್ಯೆಯಲ್ಲಿ ಸ್ಮರಣೀಯ ಮತ್ತು ಅದ್ಭುತವಾದ ರೀತಿಯಲ್ಲಿ ಬೆಳಕಿನ ಹಬ್ಬವನ್ನು ಆಚರಿಸವುದು ಹೇಗೆಂದು ತಿಳಿಯೋಣ.
ಕನ್‌ಫರ್ಮ್ ಟಿಕೆಟ್ ಇದ್ರೆ ಅರ್ಧದಷ್ಟು ಸಮಸ್ಯೆ ಬಗೆಹರಿದಂತೆ!
ನೀವು ರಾಮನ ನಗರವಾದ ಅಯೋಧ್ಯೆಯಲ್ಲಿ ದೀಪಾವಳಿಯನ್ನು ಆಚರಿಸಲು ಹೊರಟಿದ್ದರೆ, ಮೊದಲು ರಿಟರ್ನ್ ಅಥವಾ ನಿರ್ಗಮನ ಟಿಕೆಟ್ ಅನ್ನು ಬುಕ್ ಮಾಡಬೇಕು. ನೀವು ರೈಲಿನಲ್ಲಿ ಅಥವಾ ವಿಮಾನದಲ್ಲಿ ಯಾವುದೇ ಸಾರಿಗೆ ವ್ಯವಸ್ಥೆಯಲ್ಲಿ ಹೋಗುತ್ತಿರಲಿ. ದೃಢೀಕೃತ ಟಿಕೆಟ್ ಹೊಂದಿದ್ದರೆ ಅರ್ಧದಷ್ಟು ಸಮಸ್ಯೆ ಪರಿಹಾರವಾಗುತ್ತದೆ. ದೀಪಾವಳಿಯ ಸಮಯದಲ್ಲಿ, ಅಯೋಧ್ಯೆಗೆ ಹೋಗುವ ಪ್ರತಿಯೊಂದು ರೈಲಿನಲ್ಲಿ ತುಂಬಾ ಜನಸಂದಣಿ ಇರುತ್ತದೆ, ಆದ್ದರಿಂದ ಮುಂಚಿತವಾಗಿ ಟಿಕೆಟ್ ಕಾಯ್ದಿರಿಸುವುದು ಬುದ್ಧಿವಂತರ ಲಕ್ಷಣ. ಅದರಲ್ಲೂ ದೂರದೂರುಗಳಿಂದ ಅಯೋಧ್ಯೆಗೆ ಹೊರಟಿದ್ದರೆ ಕೂಡಲೇ ಟಿಕೆಟ್ ಬುಕ್ ಮಾಡಬೇಕು. ಅಷ್ಟೇ ಅಲ್ಲ, ರೈಲಿನಲ್ಲಿ ಜನಸಂದಣಿಯಲ್ಲಿ ಕಷ್ಟಪಡದೆ ಒಂದು ದಿನ ಮುಂಚಿತವಾಗಿಯೇ ನೀವು ಅಯೋಧ್ಯೆಗೆ ತಲುಪಬಹುದು.

ಹೋಟೆಲ್ ಬುಕ್ ಮಾಡಿದ್ರಾ?
ಉತ್ತರ ಪ್ರದೇಶದ ಅಯೋಧ್ಯೆಯು ದೀಪಾವಳಿಯ ಸಮಯದಲ್ಲಿ ಮಾತ್ರವಲ್ಲದೆ ಇತರ ದಿನಗಳಲ್ಲಿಯೂ ಅಪಾರ ಸಂಖ್ಯೆಯ ಭಕ್ತರನ್ನು ಹೊಂದಿರುವ ನಗರವಾಗಿದೆ. ವಿಶೇಷವಾಗಿ ರಾಮ ಮಂದಿರವು ಭಕ್ತರಿಗಾಗಿ ತೆರೆದಿರುವುದರಿಂದ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಾರೆ. ಹಾಗಾಗಿಯೇ ಇಲ್ಲಿನ ಹೊಟೇಲ್ ಗಳಲ್ಲೂ ಭಕ್ತರ ದಂಡನ್ನು ಕಾಣಬಹುದು. ನೀವು ದೀಪಾವಳಿಯಂದು ಅಯೋಧ್ಯೆಗೆ ಹೋಗುತ್ತಿದ್ದರೆ, ಮನೆಯಿಂದ ಹೊರಡುವ ಮೊದಲು ನೀವು ಆನ್‌ಲೈನ್‌ನಲ್ಲಿ ಹೋಟೆಲ್ ಅನ್ನು ಬುಕ್ ಮಾಡಬೇಕು . ಅಯೋಧ್ಯೆಗೆ ಹೋಗಿ ಹೋಟೆಲ್ ಬುಕ್ ಮಾಡುವ ಯೋಚನೆಯಲ್ಲಿದ್ದರೆ ಹೋಟೆಲ್ ಸಿಗದಿರುವ ಸಾಧ್ಯತೆ ಇದೆ. ನೀವು ಆನ್‌ಲೈನ್‌ನಲ್ಲಿ ಬುಕ್ ಮಾಡಿದರೆ, ಕೆಲವು ರಿಯಾಯಿತಿಗಳನ್ನು ಸಹ ಪಡೆಯುತ್ತೀರಿ. ಅಂದಹಾಗೆ ನೀವು ರಾಮಮಂದಿರ ಅಥವಾ ರೈಲ್ವೆ ನಿಲ್ದಾಣದ ಬಳಿ ಹೋಟೆಲ್‌ಗಳನ್ನು ಬುಕ್ ಮಾಡಬಹುದು.
ಅಯೋಧ್ಯೆಯಲ್ಲಿ ಎಲ್ಲಿಗೆಲ್ಲಾ ಹೋಗಬಹುದು?
ನೀವು ಅಯೋಧ್ಯೆಯಲ್ಲಿ ದೀಪಾವಳಿ ಹಬ್ಬವನ್ನು ಆಚರಿಸಲು ಹೊರಟಿದ್ದರೆ, ಅಯೋಧ್ಯೆಯಲ್ಲಿ ಯಾವ ಸ್ಥಳಕ್ಕೆ ಹೋಗಬೇಕೆಂದು ನೀವು ತಿಳಿದಿರಬೇಕು, ಆಗ ನೀವು ದೀಪಾವಳಿ ಹಬ್ಬವನ್ನು ಹೃದಯಪೂರ್ವಕವಾಗಿ ಆಚರಿಸಬಹುದು. ಅಯೋಧ್ಯೆಯ ಸರಯೂ ಘಾಟ್ ದಡದಲ್ಲಿ ದೀಪೋತ್ಸವ ಕಾರ್ಯಕ್ರಮ ನಡೆಯುತ್ತದೆ ಎಂದು ಹೇಳಲಾಗುತ್ತದೆ. ಪ್ರತಿ ವರ್ಷ ಸರಯೂ ಘಾಟ್ ದಡದಲ್ಲಿ ಲಕ್ಷ ಲಕ್ಷ ದೀಪಗಳನ್ನು ಬೆಳಗಿಸುವ ಮೂಲಕ ದೀಪಗಳ ಹಬ್ಬವನ್ನು ಆಚರಿಸಲಾಗುತ್ತದೆ. ಈ ಹಿನ್ನೆಲೆಯಲ್ಲಿ ದೀಪಾವಳಿಯ ದಿನ, ಅಯೋಧ್ಯೆಯಲ್ಲಿ ಬೇರೆಡೆಗೆ ಹೋಗುವ ಬದಲು, ನೀವು ಸರಯೂ ಘಾಟ್ ದಡದತ್ತ ತೆರಳಿ. ದೀಪಾವಳಿಯ ದಿನದಂದು, ಸರಯೂ ಘಾಟ್‌ನ ದಡದಲ್ಲಿ ಲೇಸರ್ ದೀಪಗಳನ್ನು ಬೆಳಗಿಸಲಾಗುತ್ತದೆ, ಇದರಲ್ಲಿ ಭಗವಾನ್ ರಾಮನನ್ನು ಚಿತ್ರಿಸಲಾಗುತ್ತದೆ.

ಪಟಾಕಿಗಳಿಂದ ದೂರವಿರಿ
ದೀಪಾವಳಿಗೂ ಪಟಾಕಿಗೂ ಆಳವಾದ ಬಂಧವಿದೆ. ಪಟಾಕಿಗಳಿಲ್ಲದೆ ದೀಪಾವಳಿ ಅಪೂರ್ಣವೆಂದು ತೋರುತ್ತದೆ, ಆದರೆ ಕೆಲವೊಮ್ಮೆ ಪಟಾಕಿಗಳು ಸಹ ಮಾರಣಾಂತಿಕವೆಂದು ಸಾಬೀತಾಗಿವೆ. ಆದ್ದರಿಂದ ನಿಮ್ಮ ಅಯೋಧ್ಯೆ ಪ್ರವಾಸದ ಸಮಯದಲ್ಲಿ ನೀವು ಪಟಾಕಿಗಳಿಂದ ದೂರವಿರಬೇಕು. ಅಯೋಧ್ಯೆ ಪ್ರವಾಸದ ಸಮಯದಲ್ಲಿ, ಪಟಾಕಿಗಳನ್ನು ನಿಮ್ಮೊಂದಿಗೆ ಮನೆಯಿಂದ ತೆಗೆದುಕೊಂಡು ಹೋಗಬೇಡಿ, ಏಕೆಂದರೆ ಪಟಾಕಿಗಳೊಂದಿಗೆ ರೈಲು ಅಥವಾ ವಿಮಾನದಲ್ಲಿ ಪ್ರಯಾಣಿಸುವುದನ್ನು ಕಾನೂನುಬಾಹಿರವೆಂದು ಪರಿಗಣಿಸಲಾಗುತ್ತದೆ.
ಮರೆಯದೆ ಈ ಟಿಪ್ಸ್ ಫಾಲೋ ಮಾಡಿ...
· ನೀವು ಪ್ರಯಾಣಕ್ಕಾಗಿ ಕೆಲವು ತ್ವರಿತ ಆಹಾರ ಮತ್ತು ಅಗತ್ಯ ಔಷಧಿಗಳನ್ನು ಸಹ ಪ್ಯಾಕ್ ಮಾಡಬಹುದು.
· ದೀಪಾವಳಿಯಂದು ಅಯೋಧ್ಯೆಯಲ್ಲಿ ತಡರಾತ್ರಿಯವರೆಗೆ ಹೋಟೆಲ್‌ನಿಂದ ಹೊರಗೆ ಹೋಗಬೇಡಿ.
· ಎಲ್ಲಕ್ಕಿಂತ ಹೆಚ್ಚಾಗಿ ಪ್ರವಾಸದ ಸಮಯದಲ್ಲಿ ನೀವು ಅಪರಿಚಿತ ವ್ಯಕ್ತಿಗಳಿಂದ ದೂರವಿರಬೇಕು.


Click it and Unblock the Notifications

















