Search
  • Follow NativePlanet
Share
» »ದೀಪಾವಳಿ ರಜೆಗೆ ಮಕ್ಕಳಿಗೆ ಬೆಂಗಳೂರು ನಗರದಲ್ಲಿರುವ ಈ ಸ್ಥಳಗಳಿಗೆ ಕರೆದುಕೊಂಡು ಹೋಗಿ…

ದೀಪಾವಳಿ ರಜೆಗೆ ಮಕ್ಕಳಿಗೆ ಬೆಂಗಳೂರು ನಗರದಲ್ಲಿರುವ ಈ ಸ್ಥಳಗಳಿಗೆ ಕರೆದುಕೊಂಡು ಹೋಗಿ…

ಬೆಳಕಿನ ಹಬ್ಬ ದೀಪಾವಳಿಗೆ ಎರಡು ದಿನ ಬಾಕಿಯಿದೆ. ಈಗಾಗಲೇ ಮಕ್ಕಳು ಪಟಾಕಿ ಸಿಡಿಸಲು ಆರಂಭಿಸಿದ್ದಾರೆ. ಈ ಮಧ್ಯೆ ಸ್ವಚ್ಛತೆ ಮತ್ತು ಪರಿಸರ ಸಂರಕ್ಷಣೆಯ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ. ಪಟಾಕಿ ಹೊರತುಪಡಿಸಿದರೆ ಮಕ್ಕಳಿಗೆ ಬಣ್ಣ ಬಣ್ಣದ ದೀಪಗಳು ಆಕರ್ಷಿಸುತ್ತವೆ. ಮನೆಯ ಹೆಣ್ಣುಮಕ್ಕಳು ಸಹ ಪ್ರತಿ ವರ್ಷ ದೀಪಾವಳಿ ಅಲಂಕಾರವನ್ನು ವಿಭಿನ್ನವಾಗಿ ಮಾಡಲು ಇಷ್ಟಪಡುತ್ತಾರೆ. ಇನ್ನು ದೊಡ್ಡ ನಗರಗಳಲ್ಲಿನ ಪ್ರಮುಖ ಮಾರುಕಟ್ಟೆಗಳು ಮತ್ತು ಉತ್ಸವದ ಸ್ಥಳಗಳು ಈ ಸಂದರ್ಭದಲ್ಲಿ ಇನ್ನಷ್ಟು ಸುಂದರವಾಗಿ ಕಾಣುತ್ತವೆ. ಹಾಗಾಗಿ ದೀಪಾವಳಿ ರಜಾದಿನಗಳಲ್ಲಿ ನಿಮ್ಮ ಮಕ್ಕಳನ್ನು ನಗರದಲ್ಲಿರುವ ವಿವಿಧ ಸ್ಥಳಗಳಿಗೆ ಕರೆದೊಯ್ಯಲು ಪ್ಲಾನ್‌ ಮಾಡಬಹುದು. ಇಂದಿನ ಲೇಖನದಲ್ಲಿ ನಾವು ಬೆಂಗಳೂರಿನ ಕೆಲವು ಜನಪ್ರಿಯ ಸ್ಥಳಗಳ ಬಗ್ಗೆ ಮಾಹಿತಿ ಕೊಡುತ್ತಿದ್ದು, ಇಲ್ಲಿಗೆ ಮಕ್ಕಳನ್ನು ಮಿಸ್‌ ಮಾಡದೆ ಕರೆದುಕೊಂಡು ಹೋಗಿ...

ಏರೋಸ್ಪೇಸ್ ಮ್ಯೂಸಿಯಂ

ಮಕ್ಕಳು ವಿಮಾನಗಳನ್ನು ನೋಡಲು ಎಷ್ಟು ಇಷ್ಟಪಡುತ್ತಾರೆ ಅಲ್ಲವೇ. ಯಾವಾಗಲಾದರೂ ತಮ್ಮ ಮನೆಯ ಮೇಲ್ಛಾವಣಿಯಿಂದ ವಿಮಾನ ಹಾರುವ ಶಬ್ದ ಕೇಳಿದರೆ ತಕ್ಷಣ ಅವನು ಅಥವಾ ಅವಳು ಕಿಟಕಿ ಮತ್ತು ಬಾಲ್ಕನಿಯಿಂದ ವೀಕ್ಷಿಸಲು ಹೊರಗೆ ಓಡುತ್ತಾರೆ. ಒಂದು ವೇಳೆ ನಿಮ್ಮ ಮಕ್ಕಳನ್ನು ವಿಮಾನದಲ್ಲಿ ಕರೆದುಕೊಂಡು ಹೋಗಲು ಸಾಕಷ್ಟು ಬಜೆಟ್‌ ಇರದಿದ್ದರೆ ಅಥವಾ ಅವರು ಎಂದೂ ವಿಮಾನವನ್ನು ಹತ್ತಿರದಿಂದ ನೋಡದಿದ್ದರೆ ಅಥವಾ ವಿಮಾನದ ಇತಿಹಾಸದ ಬಗ್ಗೆ ತಿಳಿದುಕೊಳ್ಳಲು ಕುತೂಹಲವಿದ್ದರೆ ನೀವು ಈ ಸ್ಥಳವನ್ನು ಖಂಡಿತ ಇಷ್ಟಪಡುತ್ತೀರಿ. ವಿಶೇಷವಾಗಿ ವಿಮಾನ ಪ್ರಿಯರು ನೋಡಬಹುದಾದ ವಸ್ತುಸಂಗ್ರಹಾಲಯ ಇದಾಗಿದೆ.

ಇದಲ್ಲದೆ, 1940 ರ ನಂತರ ದೇಶ ಮತ್ತು ವಿದೇಶಗಳಲ್ಲಿ ವಿಮಾನಗಳ ಸಂಖ್ಯೆ ಹೇಗೆ ಬೆಳೆದಿದೆ ಎಂಬುದರ ಚಿತ್ರಗಳನ್ನು ಸಹ ಮಕ್ಕಳಿಲ್ಲಿ ನೋಡಬಹುದು. ಇಲ್ಲಿಗೆ ಬರಲು ಮಕ್ಕಳು ಮಾತ್ರವಲ್ಲ, ಪೋಷಕರು ಕೂಡ ಇಷ್ಟಪಡುತ್ತಾರೆ ಎಂಬುದು ವಿಶೇಷ ಸಂಗತಿ. ಪ್ರವೇಶ ಶುಲ್ಕವಿರುತ್ತದೆ. ಮ್ಯೂಸಿಯಂ ಬೆಳಗ್ಗೆ 9ರಿಂದ ಸಂಜೆ 5ರವರೆಗೆ ತೆರೆದಿರುತ್ತದೆ. ಆದರೆ 5 ರನಂತರ ಕ್ಲೋಸ್‌ ಆಗುವುದರಿಂದ ಮ್ಯೂಸಿಯಂ ಒಳಗೆ ಹೋಗಲು ಸ್ವಲ್ಪ ಮುಂಚಿತವಾಗಿ ಅಂದರೆ 4:30ರ ಒಳಗೆ ಟಿಕೆಟ್‌ ಪಡೆಯಬೇಕಾಗುತ್ತದೆ.

ಶ್ರೀ ರಾಮ ದೇವರ ದೇವಸ್ಥಾನ

ಈ ದೇವಾಲಯದ ವಾತಾವರಣ ತುಂಬಾ ಶಾಂತವಾಗಿದೆ. ದೀಪಾವಳಿಯಂದು ಇಲ್ಲಿ ವಿಶೇಷ ಅಲಂಕಾರ ಮಾಡಲಾಗುತ್ತದೆ. ಜೈ ಶ್ರೀರಾಮ್ ಎಂಬ ಧ್ವಜಗಳಿಂದ ರಸ್ತೆಗಳು ರಾರಾಜಿಸುತ್ತಿರುತ್ತದೆ. ದೀಪಾವಳಿಯಂದು ಎಲ್ಲರೂ ಜೈ ಶ್ರೀರಾಮ್ ಎಂದು ಶುಭಾಶಯ ಕೋರುವುದನ್ನು ಕಾಣಬಹುದು. ದೀಪಾವಳಿ ರಜಾದಿನಗಳಲ್ಲಿ ಇಲ್ಲಿಗೆ ಬರುವುದು ನಿಮಗೆ ಮತ್ತು ನಿಮ್ಮ ಮಕ್ಕಳಿಗೆ ಒಂದು ರೀತಿಯ ಶಾಂತ, ದೈವಿಕ ಭಾವನೆ ಮೂಡಿಸುತ್ತದೆ. ಶ್ರೀ ರಾಮ ದೇವರ ದೇವಸ್ಥಾನವು ಅತ್ಯಂತ ಸುಂದರವಾದ ಮತ್ತು ಬೃಹತ್ ದೇವಾಲಯವಾಗಿದೆ. ದೇವಾಲಯದಲ್ಲಿ ಬಿಳಿ ಅಮೃತಶಿಲೆ ಮತ್ತು ಪ್ರಾಚೀನ ವಾಸ್ತುಶೈಲಿಯನ್ನು ಕಾಣಬಹುದು.

ಶ್ರೀ ವೆಂಕಟರಮಣ ಸ್ವಾಮಿ ದೇವಸ್ಥಾನ: ನೂರು ವರ್ಷಗಳ ಹಿಂದೆ ಶ್ರೀ ವೆಂಕಟರಮಣ ಸ್ವಾಮಿಯ ವಿಗ್ರಹವು ಸೊರಹುಣಸೆ ಗ್ರಾಮದಲ್ಲಿ ಕೃಷಿ ಭೂಮಿಯಲ್ಲಿ ಕಂಡುಬಂದಿತ್ತು. ಇದೀಗ ಅದೇ ವಿಗ್ರಹವನ್ನು ಇಮ್ಮಡಿಹಳ್ಳಿ ಗ್ರಾಮಕ್ಕೆ ತಂದು ದೇವಾಲಯವನ್ನು ನಿರ್ಮಿಸಲಾಗಿದೆ.

ಎಲ್ಲಿದೆ? XQ94+8C5, ಇಮ್ಮಡಿ ಹಳ್ಳಿ ಮುಖ್ಯ ರಸ್ತೆ, ಶ್ರೀರಾಮ ಮಂದಿರದ ಹತ್ತಿರ, ಹಗದೂರು, ಇಮ್ಮಡಿ ಹಳ್ಳಿ, ವೈಟ್‌ಫೀಲ್ಡ್, ಬೆಂಗಳೂರು

ದರ್ಶನದ ಸಮಯ- ಬೆಳಗ್ಗೆ 6:30 ರಿಂದ 10:30 ಮತ್ತು ಸಂಜೆ 5:30 ರಿಂದ ರಾತ್ರಿ 8:30

ub city mall

ಯುಬಿ ಸಿಟಿ ಮಾಲ್

ದೀಪಾವಳಿಯಂದು ನೀವು ಸುಂದರವಾದ ಅಲಂಕಾರ ನೋಡಲು ಬಯಸಿದರೆ ಮಕ್ಕಳನ್ನು ಈ ಮಾಲ್‌ಗೆ ಕರೆದೊಯ್ಯಬಹುದು. ಈ ಸ್ಥಳವು ಮಕ್ಕಳಿಗೆ ಅಚ್ಚುಮೆಚ್ಚಿನ ಸ್ಥಳವಾಗಿದೆ. ಇದು ದೀಪಾವಳಿಯಂದು ಹೆಚ್ಚು ಸುಂದರವಾಗಿ ಕಾಣುತ್ತದೆ. ಯುಬಿ ಸಿಟಿ ಮಾಲ್ ಬೆಂಗಳೂರಿನ ಪ್ರಮುಖ ಶಾಪಿಂಗ್ ಮತ್ತು ಮನರಂಜನಾ ತಾಣವಾಗಿದೆ. ಮಾಲ್‌ನಲ್ಲಿ ವೈವಿಧ್ಯಮಯ ಟ್ರೆಂಡಿ ರೆಸ್ಟೋರೆಂಟ್‌ಗಳು ಮತ್ತು ಮಳಿಗೆಗಳು ಕಂಡುಬರುತ್ತವೆ. ಮಕ್ಕಳಿಗಾಗಿ ವಿವಿಧ ರೀತಿಯ ಕಾರುಗಳು ಮತ್ತು ಬೈಕುಗಳಂತಹ ಆಟಿಕೆಗಳನ್ನು ಖರೀದಿಸಬಹುದು.

ಎಲ್ಲಿದೆ? 24, ವಿಟ್ಟಲ್ ಮಲ್ಯ ರಸ್ತೆ, ಕೆ.ಜಿ.ಹಳ್ಳಿ, ಡಿಸೋಜಾ ಲೇಔಟ್, ಅಶೋಕ್ ನಗರ, ಬೆಂಗಳೂರು.

More News

Read more about: diwali celebration bangalore
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+