ಮಧ್ಯಪ್ರದೇಶದಲ್ಲಿರುವ ದೇವ್‌ಜೀ ಮಹಾಮಂದಿರಕ್ಕೆ ಸಾವಿರಾರು ಭಕ್ತರು ಆಗಮಿಸುತ್ತಾರೆ . ಈ ದೇವಸ್ಥಾನದ ವಿಶೇಷತ ಎಂದರೆ ಇಲ್ಲಿ ಭೂತ ಪ್ರೇತವನ್ನು ಬಿಡಿಸುತ್ತಾರೆ. ಇಲ್ಲಿಗೆ ಹೆಚ್ಚಾಗಿ ಮಹಿಳೆಯರು ಆಗಮಿಸುತ್ತಾರೆ. ಭೂತ, ಪ್ರೇತವನ್ನು ಬಿಡಿಸಲು ಇಲ್ಲಿಗೆ ಆಗಮಿಸುತ್ತಾರೆ.

ಎಲ್ಲಿದೆ ಈ ಮಂದಿರ
PC: youtube
ಭೋಪಾಲ್ ನಿಂದ ಬೆತುಲ್ ಜಿಲ್ಲೆಯ ಸುಮಾರು 300 ಕಿ.ಮೀ ದೂರದಲ್ಲಿರುವ ಮಲಜಾಪುರ್‌ನಲ್ಲಿ ನಡೆಯುವ ಈ ವಾರ್ಷಿಕ ಜಾತ್ರೆಯು ಪ್ರೇತಗಳ ಭೂತೋಚ್ಚಾಟನೆಗೆಂದೇ ಮೀಸಲಾಗಿರುತ್ತದೆ. ಈ ಭೂತ ಮೇಳದಂದು ಮಧ್ಯಪ್ರದೇಶ, ಮಹಾರಾಷ್ಟ್ರ, ರಾಜಸ್ಥಾನ, ಆಂಧ್ರಪ್ರದೇಶದಿಂದಲೂ ಜನರು ಆಗಮಿಸುತ್ತಾರೆ,

ನಡೆಯುತ್ತೆ ಭೂತ ಮೇಳ
PC: youtube
ಈ ಮೇಳವು ಪೌಶ್ ಪೂರ್ಣೀಮಾದ ಮೊದಲ ದಿನದಂದು ಪ್ರಾರಂಭವಾಗಿ ವಸಂತ ಪಂಚಮಿ ವರೆಗೂ ಇರುತ್ತದೆ, ಇದು ಹಲವು ಶತಮಾನಗಳಿಂದ ನಡೆದು ಬರುತ್ತಿದೆ. ಅಲ್ಲಿ ಗುರು ದೆಯೋಜಿಯ ಸಮಾಧಿ ಇದೆ. ಪ್ರತಿ ದಿನ ಸಂಜೆ ಪ್ರಾರ್ಥನೆಯಾದ ನಂತರ ಪ್ರೇತಾತ್ಮ ಬಾಧಿತರಿಗೆ ಚಿಕಿತ್ಸೆ ನೀಡಲಾಗುತ್ತದೆ.

ದೆಯೋಜಿ ಸರ್ಮಾದಿ ಇದೆ.
PC: youtube
ಅಲೌಕಿಕ ಶಕ್ತಿಯನ್ನು ಹೊಂದಿದ್ದ ಓರ್ವ ಸಂತ ದೇಯೋಜಿ. ಇವರು 1700ಎಡಿ ಯಲ್ಲಿ ಜನಿಸಿದ್ದು, ಇವರಿಗೆ ಯಾವ ರೀತಿಯ ಶಕ್ತಿಗಳಿದ್ದವೆಂದರೆ ಹೊಯ್ಗೆಯನ್ನು ಸಕ್ಕರೆ, ಆವೆ ಮಣ್ಣನ್ನು ಬೆಲ್ಲ ಮಾಡುವ ತಾಕತ್ತಿತ್ತು. ಅವರ ಮರಣಾನಂತರ ಸಮಾಧಿಯನ್ನು ಅಲ್ಲೇ ನಿರ್ಮಿಸಲಾಯಿತು. ಕಳೆದ ಎರಡೂವರೆ ಶತಮಾನಗಳಿಂದ ಇಲ್ಲಿ ಭೂತೋಚ್ಛಾಟನೆಯನ್ನು ನಡೆಸಲಾಗುತ್ತಿದೆ.

ಬೇಡಿಕೆ ಈಡೇರಿದ್ದಲ್ಲಿ ಬೆಲ್ಲ ಅರ್ಪಣೆ
ಇಲ್ಲಿಗೆ ಹೆಚ್ಚಾಗಿ ಮಹಿಳೆಯರೇ ಬರುವುದು. ಇಲ್ಲಿ ಯಾವುದೇ ಶುಲ್ಕವಿಲ್ಲ. ಎಲ್ಲವೂ ಉಚಿತ. ನಿಮ್ಮ ಬೇಡಿಕೆ ಈಡೇರಿದಲ್ಲಿ ಬೆಲ್ಲವನ್ನು ನೀಡಬಹುದು. ಈ ವರ್ಷ ಸುಮಾರು 1000 ಮಹಿಳೆಯರು ಭೂತೋಚ್ಛಾಟನೆ ಮಾಡಲಾಗಿದೆಯಂತೆ.


Click it and Unblock the Notifications
















