Search
  • Follow NativePlanet
Share
» »ಒಂದೇ ರಾತ್ರಿಯಲ್ಲಿ ಸ್ವತಃ ದೆವ್ವಗಳೇ ನಿರ್ಮಿಸಿದ ದೇವಾಲಯವಿದು.

ಒಂದೇ ರಾತ್ರಿಯಲ್ಲಿ ಸ್ವತಃ ದೆವ್ವಗಳೇ ನಿರ್ಮಿಸಿದ ದೇವಾಲಯವಿದು.

ಸಾಮಾನ್ಯವಾಗಿ ಭಗವಂತನ ಮೇಲಿರುವ ಭಕ್ತಿ ಹಾಗೂ ನಂಬಿಕೆಯಿಂದಾಗಿ ದೇವಾಲಯಗಳನ್ನು ನಿರ್ಮಿಸುತ್ತೇವೆ. ಹಾಗಾಗಿ ರಾಜರಿಂದ ಹಾಗೂ ಭಕ್ತರಿಂದ ದೇವಾಲಯವನ್ನು ಸ್ಥಾಪಿಸಲ್ಪಟ್ಟಿವೆ. ಮತ್ತೇ ಕೆಲವು ದೇವಾಲಯಗಳು ಸ್ವಯಂ ದೇವರೇ ನಿರ್ಮಿಸಿದ ಅಥವಾ ಸ್ವಯಂ ಭೂ ದೇ

ಸಾಮಾನ್ಯವಾಗಿ ಭಗವಂತನ ಮೇಲಿರುವ ಭಕ್ತಿ ಹಾಗೂ ನಂಬಿಕೆಯಿಂದಾಗಿ ದೇವಾಲಯಗಳನ್ನು ನಿರ್ಮಿಸುತ್ತೇವೆ. ಹಾಗಾಗಿ ರಾಜರಿಂದ ಹಾಗೂ ಭಕ್ತರಿಂದ ದೇವಾಲಯವನ್ನು ಸ್ಥಾಪಿಸಲ್ಪಟ್ಟಿವೆ. ಮತ್ತೇ ಕೆಲವು ದೇವಾಲಯಗಳು ಸ್ವಯಂ ದೇವರೇ ನಿರ್ಮಿಸಿದ ಅಥವಾ ಸ್ವಯಂ ಭೂ ದೇವಾಲಯಗಳೆಂದು ಪ್ರಖ್ಯಾತಿ ಪಡೆದಿರುವ ಅದೇಷ್ಟು ದೇವಾಲಯಗಳನ್ನು ನಾವು ಕಣ್ಣಾರೆ ಕಂಡಿದ್ದೇವೆ.

ಮಹಿಮಾನ್ವಿತವಾದ ದೇವತ ರಹಸ್ಯವನ್ನು, ಸುಂದರವಾದ ಗೋಪುರ, ರಮಣೀಯ ವಾಸ್ತು ಶಿಲ್ಪಗಳಿಂದ ಕೂಡಿದ ದೇವಾಲಯಗಳನ್ನು ಕಾಣುವುದೇ ಒಂದು ಅದ್ಭುತ. ಇದೆನೂ ದೇವಾಲಯದ ಬಗ್ಗೆ ಇಷ್ಟೊಂದು ಮಾಹಿತಿ ಎಂದು ಯೋಚಿಸುತ್ತಿದ್ದಿರಾ? ಹಾಗಾದರೆ ಹೇಳುತ್ತೇನೆ ಕೇಳಿ. ದೆವ್ವಗಳು ಒಂದು ಸುಂದರವಾದ ದೇವಾಲಯಗಳನ್ನು ನಿರ್ಮಾಣ ಮಾಡಿವೆ. ಆಶ್ಚರ್ಯ ಪಡಬೇಡಿ ಇದು ಅಕ್ಷರಶಃ ನಿಜ.

ಪ್ರಸ್ತುತ ಲೇಖನದಲ್ಲಿ ದೆವ್ವಗಳು ನಿರ್ಮಿಸಿದ ದೇವಾಲಯದ ಬಗ್ಗೆ ತಿಳಿಯಿರಿ.

ಎಲ್ಲಿದೆ?

ಎಲ್ಲಿದೆ?

ದೆವ್ವಗಳು ನಿರ್ಮಿಸಿದ ದೇವಾಲಯವು ಕರ್ನಾಟಕದ ಬೆಂಗಳೂರು ಗ್ರಾಮಾಂತರ ದೊಡ್ಡಬಳ್ಳಾಪುರ ಹಾಗೂ ದೇವನ ಹಳ್ಳಿಯ ಮಾರ್ಗ ಮಧ್ಯೆಯಲ್ಲಿರುವ ಬೊಮ್ಮವರ ಹಳ್ಳಿಯಲ್ಲಿ ಕಾಣಬಹುದಾಗಿದೆ ಇಲ್ಲಿನ ದೇವಾಲಯವನ್ನು ದೆವ್ವಗಳೇ ಸ್ವತಃ ನಿರ್ಮಿಸಿರುವ ದೇವಾಲಯ ಎಂದು ಅಲ್ಲಿರುವ ಸ್ಥಳೀಯರು ದೃಡವಾಗಿ ಹೇಳುತ್ತಾರೆ.


PC:YOUTUBE

ಸುಂದರೇಶ್ವರ ದೇವಾಲಯ

ಸುಂದರೇಶ್ವರ ದೇವಾಲಯ

ಬೊಮ್ಮವರ ಹಳ್ಳಿಯಲ್ಲಿರುವ ಈ ಸುಂದರೇಶ್ವರ ದೇವಾಲಯವನ್ನು ದೆವ್ವಗಳಿಂದ ನಿರ್ಮಿತವಾಗಿದೆ. ಈ ದೇವಾಲಯದಲ್ಲಿ ಮಹಾ ಶಿವನು ಸುಂದರೇಶ್ವರನಾಗಿ ಈ ದೇವಾಲಯದಲ್ಲಿ ನೆಲೆಸಿದ್ದಾನೆ.

PC:YOUTUBE

ಬೊಮ್ಮವರ ಹಳ್ಳಿ

ಬೊಮ್ಮವರ ಹಳ್ಳಿ

ಬೊಮ್ಮವರ ಹಳ್ಳಿಯ ಸ್ಥಳೀಯ ಕಥೆಯ ಪ್ರಕಾರ ಸುಮಾರು 600 ವರ್ಷಗಳ ಹಿಂದೆ ದೆವ್ವಗಳು ಅಲ್ಲಿನ ಸ್ಥಳೀಯರಿಗೆ ಹಿಂಸಿಸುತ್ತಿದ್ದವಂತೆ. ಈ ಹಳ್ಳಿಯಲ್ಲಿನ ಪ್ರಜೆಗಳಿಗೆ ಹಲವು ರೀತಿಯ ಕಷ್ಟಗಳನ್ನು ಕೊಡುತ್ತಿದ್ದವು. ಈ ದೆವ್ವಗಳ ಕಾಟಕ್ಕೆ ಅಂದಿನ ಪ್ರಜೆಗಳು ಬೆಸತ್ತು ಹೋಗಿದ್ದರಂತೆ.


PC:YOUTUBE

ಬೊಚ್ಚಯ್ಯ

ಬೊಚ್ಚಯ್ಯ

ಬೊಮ್ಮವರ ಹಳ್ಳಿಯಲ್ಲಿನ ಮಾಂತ್ರಿಕ ವಿಧ್ಯೆಯಲ್ಲಿ ಬೊಚ್ಚಯ್ಯ ಪರಿಣಿತನಾಗಿದ್ದ. ಈತ ಮಹಾ ಶಿವನ ಪರಮ ಭಕ್ತನಾಗಿದ್ದನು. ಈತ ಶಿವನ ಮೇಲಿದ್ದ ಅಪಾರವಾದ ಭಕ್ತಿ ಭಾವದಿಂದಾಗಿ ಒಂದು ಶಿವನ ಗುಡಿಯನ್ನು ಕಟ್ಟಬೇಕು ಎಂದು ಬೊಮ್ಮವರ ಹಳ್ಳಿಯ ಪ್ರಜೆಗಳ ಸಹಾಯದಿಂದ ಕಷ್ಟ ಪಟ್ಟು ಒಂದು ದೇವಾಲಯವನ್ನು ನಿರ್ಮಿಸಿದ.


PC:YOUTUBE

ನಾಶಪಡಿಸಿದ ದೆವ್ವಗಳು

ನಾಶಪಡಿಸಿದ ದೆವ್ವಗಳು

ಈ ಪ್ರದೇಶದಲ್ಲಿ ದೇವಾಲಯವನ್ನು ನಿರ್ಮಾಣ ಆ ದೆವ್ವಗಳಿಗೆ ಇಷ್ಟವಿಲ್ಲದ ಕಾರಣ ರಾತ್ರೋ ರಾತ್ರಿ ಬೊಚ್ಚಯ್ಯ ಕಷ್ಟಪಟ್ಟು ನಿರ್ಮಿಸಿದ ದೇವಾಲಯವನ್ನು ನಾಶ ಪಡಿಸಿದವು. ತಾನು ಕಷ್ಟ ಪಟ್ಟು ಶಿವನಿಗಾಗಿ ನಿರ್ಮಿಸಿದ ದೇವಾಲಯವನ್ನು ದೆವ್ವಗಳು ನಾಶ ಪಡಿಸಿದವು ಎಂದು ಅತ್ಯಂತ ಕೋಪಗೊಂಡನು.


PC:YOUTUBE

ದೆವ್ವಗಳನ್ನು ವಶಪಡಿಸಿಕೊಂಡ

ದೆವ್ವಗಳನ್ನು ವಶಪಡಿಸಿಕೊಂಡ

ಕೆಲವು ಮಾತ್ರಿಂಕ ವಿದ್ಯೆಯನ್ನು ಮತ್ತಷ್ಟು ಕಲಿತು ದೆವ್ವಗಳನ್ನು ತನ್ನ ಮಾಂತ್ರಿಕ ಶಕ್ತಿಯಿಂದ ವಶಪಡಿಸಿಕೊಂಡನು. ಆ ದೆವ್ವಗಳು ತನ್ನನ್ನು ಬಂಧನದಿಂದ ವಿಮುಕ್ತಿ ನೀಡು ಎಂದು ಪರಿ ಪರಿಯಾಗಿ ಕೇಳಿ ಕೊಂಡರು ಬೊಚ್ಚಯ್ಯನು ಬಿಡಲಿಲ್ಲ.


PC:YOUTUBE

ಷರತ್ತು

ಷರತ್ತು

ಕೊನೆಗೆ ದೆವ್ವಗಳನ್ನು ಬಂಧನದಿಂದ ಬಿಡಲು 2 ಷರತ್ತುಗಳನ್ನು ದೆವ್ವಗಳ ಮುಂದೆ ಇಟ್ಟನು. ಈ ಷರತ್ತುಗಳನ್ನು ಒಪ್ಪಿದರೆ ಮಾತ್ರ ಬಿಡುತ್ತೇನೆ ಇಲ್ಲವಾದರೆ ಇಲ್ಲ ಎಂದು ದೃಡವಾಗಿ ಹೇಳಿದನಂತೆ.

PC:YOUTUBE

ಎರಡು ಷರತ್ತುಗಳು

ಎರಡು ಷರತ್ತುಗಳು

ಆ 2 ಷರತ್ತುಗಳೆನೆಂದರೆ ಈಗಾಗಲೇ ನಾಶ ಪಡಿದ ದೇವಾಲಯವನ್ನು ಒಂದೇ ರಾತ್ರಿಯಲ್ಲಿ ಪುನರ್ ನಿರ್ಮಾಣ ಮಾಡಬೇಕು. ಇನ್ನೊಂದು ಬೊಮ್ಮವರ ಹಳ್ಳಿಯಲ್ಲಿನ ಪ್ರಜೆಗಳಿಗೆ ಯಾವುದೇ ರೀತಿಯಲ್ಲಿ ಹಿಂಸಿಸಬಾರದು ಎಂದು ಷರತ್ತು ವಿಧಿಸಿದ.


PC:YOUTUBE

ದೇವಾಲಯ ನಿರ್ಮಿಸಿದ ದೆವ್ವಗಳು

ದೇವಾಲಯ ನಿರ್ಮಿಸಿದ ದೆವ್ವಗಳು

ಷರತ್ತುಗಳಿಗೆ ಒಪ್ಪಿದ ದೆವ್ವಗಳು ನಾಶ ಪಡಿಸಿದ ದೇವಾಲಯವನ್ನು ರಾತ್ರೋ ರಾತ್ರಿ ಪುನರ್ ನಿರ್ಮಾಣ ಮಾಡಿದವಂತೆ. ನಂತರ ಅಲ್ಲಿರುವ ಪ್ರಜೆಗಳಿಗೆ ಹಿಂಸಿಸುವುದನ್ನು ನಿಲ್ಲಿಸಿದವಂತೆ ಎಂದು ಸ್ಥಳೀಯರು ತಿಳಿಸುತ್ತಾರೆ.

PC:YOUTUBE

ಶಿಲ್ಪ

ಶಿಲ್ಪ

ಆಶ್ಚರ್ಯಕರವಾದ ಸಂಗತಿ ಏನೆಂದರೆ ದೇವಾಲಯಗಳಲ್ಲಿ ದೇವರ ಶಿಲ್ಪಗಳು ಅಥವಾ ಶೃಂಗಾರ ಮಯವಾದ ಶಿಲ್ಪಗಳು ಕಾಣುವುದು ಸಾಮಾನ್ಯ. ಆದರೆ ಈ ದೇವಾಲಯದಲ್ಲಿ ದೆವ್ವಗಳಿಂದ ನಿರ್ಮಿತವಾಗಿರುವುದರಿಂದ ಇಲ್ಲಿ ವಿಚಿತ್ರವಾದ ದೆವ್ವಗಳ ಶಿಲ್ಪವನ್ನು ಕಾಣಬಹುದಾಗಿದೆ. ಅಂದರೆ ದೆವ್ವಗಳೇ ಸ್ವತಃ ನಿರ್ಮಿಸಿರುವ ದೇವಾಲಯ ಇದಾಗಿದೆ ಎಂಬುದಕ್ಕೆ ಪುರಾವೆ ಎಂದು ಸ್ಥಳೀಯರು ತಿಳಿಸುತ್ತಾರೆ.


PC:YOUTUBE

ವಿಸ್ಮಯ

ವಿಸ್ಮಯ

ದೆವ್ವಗಳಿಂದ ನಿರ್ಮಿತವಾದ ದೇವಾಲಯವೆಂದರೆ ವಿಸ್ಮಯವೇ ಸರಿ. ಇಲ್ಲಿ ಹಲವಾರು ಪ್ರವಾಸಿಗರು ದೆವ್ವ ನಿರ್ಮಿಸಿರುವ ದೇವಾಲಯಕ್ಕೆ ಭೇಟಿ ನೀಡುತ್ತಾರೆ.


PC:YOUTUBE

ವಿಗ್ರಹ

ವಿಗ್ರಹ

ದೆವ್ವಗಳು ದೇವಾಲಯವನ್ನು ನಿರ್ಮಿಸಿದರು ಆದರೆ ಇಲ್ಲಿ ಯಾವುದೇ ಮೂರ್ತಿಯಾಗಲೀ ಇರಲಿಲ್ಲ. ಸುಮಾರು 50 ವರ್ಷಗಳ ಹಿಂದೆ ಕುಡಿಯುವ ನೀರಿಗಾಗಿ ಭೂಮಿಯನ್ನು ಅಗಿಯುವಾಗ ಒಂದು ಶಿವ ಲಿಂಗವು ಸಿಗುತ್ತದೆ.


PC:YOUTUBE

ದೊಡ್ಡ ಶಿವಲಿಂಗ

ದೊಡ್ಡ ಶಿವಲಿಂಗ

ಕರ್ನಾಟಕದಲ್ಲಿಯೇ ದೊಡ್ಡದಾದ ಲಿಂಗ ಎಂದು ಕರೆಯುತ್ತಾರೆ. ಈ ಶಿವ ಲಿಂಗವು ಸುಮಾರು 8 ಅಡಿ ಎತ್ತರವಿದೆ. ಈ ಲಿಂಗವನ್ನು ದೆವ್ವಗಳು ನಿರ್ಮಿಸಿದ ದೇವಾಲಯದಲ್ಲಿ ಪ್ರಜೆಗಳು ನಿರ್ಮಿಸಿದರು.

PC:YOUTUBE

ದೊಡ್ಡ ಶಿವಲಿಂಗ

ದೊಡ್ಡ ಶಿವಲಿಂಗ

ಶಿವನು ಭೂತನಾಥನಾದ್ದರಿಂದ ದೆವ್ವಗಳು ನಿರ್ಮಿಸಿದ ದೇವಾಲಯದಲ್ಲಿ ನಿರ್ಮಿಸಿದರೆ ಎಲ್ಲಾ ಒಳ್ಳೆಯದಾಗುತ್ತದೆ ಎಂದು ಅಂದಿನ ಪ್ರಜೆಗಳು ಭಾವಿಸಿದರು. ನಂತರ ಸುಂಧರೇಶ್ವರ ದೇವಾಲಯ ಎಂದು ನಾಮಕಾರಣ ಮಾಡಿದರು.

PC:YOUTUBE

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X