Search
  • Follow NativePlanet
Share
» »ರಾಮ, ಸೀತೆ, ಲಕ್ಷ್ಮಣ, ಭರತರಿಗೆ ಸಂಬಂಧಿಸಿದ ಈ ನಗರದ ವಿಶೇಷತೆ ಏನು ಗೊತ್ತಾ?

ರಾಮ, ಸೀತೆ, ಲಕ್ಷ್ಮಣ, ಭರತರಿಗೆ ಸಂಬಂಧಿಸಿದ ಈ ನಗರದ ವಿಶೇಷತೆ ಏನು ಗೊತ್ತಾ?

By Manjula Balaraj Tantry

ಧಾರ್ಮಿಕ ಪೂಜ್ಯ ಪಟ್ಟಣಗಳಲ್ಲಿ ಚಿತ್ರಕೂಟ ಕೂಡ ಒಂದಾಗಿದೆ. ಮತ್ತು ಈ ನಗರಕ್ಕೂ ಅನೇಕ ವಿಧಗಳಲ್ಲಿ ಮಹಾಕಾವ್ಯವಾದ ರಾಮಾಯಣ ಮತ್ತು ರಾಮ ದೇವರಿಗೆ ಸಂಬಂಧಿಸಿದ ವಿಷಯಗಳಿಗೂ ಹತ್ತಿರದ ಸಂಬಂಧವಿದೆ. ಆದುದರಿಂದ ಈ ನಗರವನ್ನು ಹಿಂದೂ ಧರ್ಮದವರಲ್ಲಿ ಅದರಲ್ಲೂ ವಿಶೇಷವಾಗಿ ವೈಷ್ಣವ ಪಂಥದವರಿಗೆ ಪುಣ್ಯ ಸ್ಥಳವೆಂದು ಪರಿಗಣಿಸಲಾಗುತ್ತದೆ.

ರೋಹರುಗೆ ಒಂದು ಮೀನುಗಾರಿಕಾ ಪ್ರವಾಸ ಕೈಗೊಳ್ಳಿ

ಭಕ್ತಿಪರ ಸೆಳವಿನಲ್ಲಿ ನಮ್ಮನ್ನು ನಾವು ಕಳೆದುಕೊಳ್ಳಲು ಚಿತ್ರಕೂಟವು ದೇಶದ ಒಂದು ಅತ್ಯುತ್ತಮವಾದ ಸ್ಥಳವೆಂಬ ಹೇಳಿಕೆಯು ಸರಿಯಾಗಿಯೇ ಇದೆ. ಮಧ್ಯಪ್ರದೇಶದ ಸಾತ್ನಾ ಜಿಲ್ಲೆಯಲ್ಲಿ ಮತ್ತು ಉತ್ತರಪ್ರದೇಶದ ಗಡಿಭಾಗದಲ್ಲಿರುವ ಈ ಧಾರ್ಮಿಕ ನಗರವಾದ ಚಿತ್ರಕೂಟದಲ್ಲಿ ರಾಮದೇವರು ಸೀತೆಮಾತೆ ಮತ್ತು ಲಕ್ಷ್ಮಣರೊಡಗೂಡಿ ಗಡಿಪಾರು ಆದ ಸಂಧರ್ಭದಲ್ಲಿ ಉಳಿದಿದ್ದರು ಎನ್ನಲಾಗುತ್ತದೆ. ಅಲ್ಲದೆ ಈ ಸ್ಥಳದಲ್ಲಿ ಅನೇಕ ದೊಡ್ಡ ಸಾಧುಗಳು ಧ್ಯಾನ ಮಾಡಿ ಆತ್ಯುನ್ನತ ಜ್ಞಾನ ವನ್ನು ಪಡೆದ ಸ್ಥಳವೂ ಇದಾಗಿದೆ.

1. ಸಾಂಚಿ

1. ಸಾಂಚಿ

Kaal Bhairav

ಸಾಂಚಿ ಮಧ್ಯಪ್ರದೇಶದ ಐತಿಹಾಸಿಕ ಮಹತ್ವ ಇರುವಂತಹ ಸ್ಥಳಗಳಲ್ಲೊಂದಾಗಿದೆ ಮತ್ತು ಬೌದ್ದ ಸಂಕೀರ್ಣಗಳನ್ನು ಹೊಂದಿರುವುದಕ್ಕೆ ಹೆಸರುವಾಸಿಯಾಗಿದೆ. ಇದು ಸಾವಿರಾರು ವರ್ಷಗಳ ಹಿಂದೆ ಮೌರ್ಯ ಸಾಮ್ರಾಜ್ಯದ ಸಮಯದಲ್ಲಿ ನಿರ್ಮಿಸಲಾಗಿರುವ ದೊಡ್ಡದಾದ ಸಾಂಚಿ ಸ್ತುಪವನ್ನು ಹೊಂದಿದೆ. ಸಾಂಚಿ ಸ್ತುಪವು ದೇಶದಲ್ಲಿಯೇ ಅತ್ಯಂತ ದೊಡ್ಡದಾದ ಕಲ್ಲಿನ ರಚನೆಗಳಲ್ಲೊಂದಾಗಿದೆ ಮತ್ತು ಇದು ಅತ್ಯಂತ ಪ್ರಶಂಸನೀಯವಾದ ವಾಸ್ತುಶಿಲ್ಪದಿಂದಾಗಿ ಗುರುತಿಸಲ್ಪಟ್ಟಿದೆ ಮಾತ್ರವಲ್ಲದೆ ಅತ್ಯಂತ ಸುಂದರವಾದ ಸಾಂಪ್ರದಾಯಿಕ ವಾಸ್ತುಶಿಲ್ಪ ಮತ್ತು ಭವ್ಯವಾದ ಮಾದರಿಗಳನ್ನು ತನ್ನಲ್ಲಿ ಹೊಂದಿದೆ.

ಚಿತ್ರಕೂಟಕ್ಕೆ ಹೋಗುವ ದಾರಿಯಲ್ಲಿ ನೀವು ಇಲ್ಲಿಯ ಕೆಲವು ಕಲ್ಲಿನ ಅದ್ಬುತಗಳ ಕಡೆಗೆ ದೃಷ್ಟಿ ಹಾಯಿಸಬಹುದಾಗಿದೆ ಇವು ತಮ್ಮ ಭವ್ಯತೆ ಮತ್ತು ಅದ್ಬುತ ಶೈಲಿಯಿಂದಾಗಿ ನಿಮ್ಮನ್ನು ಅಚ್ಚರಿಗೊಳಿಸುತ್ತವೆ. ಸಾಂಚಿಯು ಭೋಪಾಲ್ ನಿಂದ ಸುಮಾರು 50 ಕಿ.ಮೀ ಅಂತರದಲ್ಲಿದೆ ಮತ್ತು ಚಿತ್ರಕೂಟದಿಂದ 445 ಕಿಮೀ ದೂರದಲ್ಲಿದೆ.

2. ಪನ್ನಾ

2. ಪನ್ನಾ

vaticanus

ಪನ್ನಾ ಒಂದು ಮಧ್ಯಪ್ರದೇಶದ ಸುಂದರವಾದ ನಗರವಾಗಿದೆ ಮತ್ತು ವಿಶೇಷವಾಗಿ ವಜ್ರಗಳ ಗಣಿಗಾರಿಕೆಗೆ ಪ್ರಸಿದ್ದಿಯಾಗಿದೆ. ಅನೇಕ ವರ್ಷಗಳಿಂದಲೂ ತನ್ನ ಐತಿಹಾಸಿಕ ಕಟ್ಟಡಗಳು ಮತ್ತು ನೈಸರ್ಗಿಕ ತಾಣಗಳ ಇರುವಿಕೆಯಿಂದಾಗಿ ಇದು ಆಫ್ಬೀಟ್ ಪ್ರವಾಸಿಗರಲ್ಲಿ ಅತ್ಯಂತ ಪ್ರಸಿದ್ದಿಯನ್ನು ಪಡೆದ ನಗರವಾಗಿದೆ. ಪನ್ನಾ ರಾಷ್ಟ್ರೀಯ ಉದ್ಯಾನವನ ಅತ್ಯಂತ ಹೆಚ್ಚಿನ ಪ್ರಮಾಣದಲ್ಲಿ ಪ್ರವಾಸಿಗರು ಭೇಟಿ ಮಾಡುವ ಸ್ಥಳವಾಗಿದೆ ಮತ್ತು ಪ್ರತೀ ವರ್ಷ ಪ್ರವಾಸಿಗರು ಇಲ್ಲಿಗೆ ನಿರಂತರವಾಗಿ ಭೇಟಿ ಕೊಡುತ್ತಾರೆ.

ಪನ್ನಾದ ಗಡಿಯೊಳಗೆ ಅಜಯ್ ಗಢ ಅರಮನೆ ಮತ್ತು ಹನುಮಾನ್ ಭಾಟದಂತಹ ಅನೇಕ ಐತಿಹಾಸಿಕ ಮಹತ್ವವುಳ್ಳ ಸ್ಥಳಗಳನ್ನೂ ಹೊಂದಿದೆ ಅಲ್ಲದೆ ಇದರ ಜೊತೆಗೆ ರಾಣ್ಹೆ ಜಲಪಾತ ಮತ್ತು ಪಾಂಡವ ಜಲಪಾತಗಳೂ ಸೇರಿವೆ. ಪನ್ನಾ ಭೋಪಾಲ್ ನಿಂದ 385 ಕಿ.ಮೀ ಅಂತರದಲ್ಲಿದೆ ಮತ್ತು ಚಿತ್ರಕೂಟದಿಂದ 110 ಕಿ.ಮೀ ಅಂತರದಲ್ಲಿದೆ.

3. ಅಂತಿಮ ಗಮ್ಯಸ್ಥಾನ- ಚಿತ್ರಕೂಟ

3. ಅಂತಿಮ ಗಮ್ಯಸ್ಥಾನ- ಚಿತ್ರಕೂಟ

Aashishsainik

ಚಿತ್ರಕೂಟಕ್ಕೆ ಪ್ರವಾಸ ಮಾಡುವುದು ಯಾವಾಗಲೂ ಸ್ಮರಣೀಯ ಎನಿಸುವಂತಹುದು. ಇದು ಕೇವಲ ಧಾರ್ಮಿಕ ಸ್ಥಳಗಳು ಮತ್ತು ಪವಿತ್ರ ತಾಣಗಳ ಇರುವಿಕೆಯಿಂದಾಗಿ ಮಾತ್ರವಲ್ಲದೆ ಇದರ ನೈಸರ್ಗಿಕ ಸೌಂದರ್ಯತೆಗಳು ಜಲರೂಪದಲ್ಲಿ ಹಸಿರುಮಯ ಪ್ರಕೃತಿಯ ಇರುವಿಕೆಯಿಂದಾಗಿಯೂ ಕೂಡಾ ಆಗಿದೆ. ಇಲ್ಲಿ ಅತ್ಯಂತ ಪ್ರಮುಖವಾದ ಪ್ರವಾಸಿ ತಾಣಗಳು ಮಹಾಕಾವ್ಯ ರಾಮಾಯಣಕ್ಕೆ ಸಂಬಂಧಿಸಿದವುಗಳಾಗಿವೆ. ಆದುದರಿಂದ ಹಿಂದೂ ಧರ್ಮದ ಪುರಾಣ ಮತ್ತು ಅದರೊಳಗಿನ ರಹಸ್ಯವನ್ನು ಬಿಡಿಸಲು ಮತ್ತು ಕಲಿಯಲು ಬಯಸುತ್ತಿರುವಿರಾದಲ್ಲಿ, ಈ ಕೆಳಗಿನ ಚಿತ್ರಕೂಟ ಮತ್ತು ಅದರ ಸುತ್ತಮುತ್ತಲಿರುವ ಸ್ಥಳಗಳಿಗೆ ಭೇಟಿ ಕೊಡಿ.

4. ರಾಮ್ ಘಾಟ್

4. ರಾಮ್ ಘಾಟ್

Engshubham

ಚಿತ್ರಕೂಟದಲ್ಲಿರುವ ರಾಮ್ ಘಾಟ್ ಒಂದು ವಿಶ್ರಾಂತಿ ಪಡೆಯುವ ಸ್ಥಳವಾಗಿದ್ದು ಈ ಪಟ್ಟಣದಲ್ಲಿ ಹರಿಯುವ ಮಂದಾಕಿನಿ ನದಿ ದಡವನ್ನು ಸ್ಪರ್ಶಿಸುವ ಎಲ್ಲಾ ತಾಣಗಳನ್ನೂ ತನ್ನಲ್ಲಿ ಒಳಗೊಂಡಿದೆ.ಇಲ್ಲಿಯ ತಾಜಾ ಹಾಗೂ ರೋಮಾಂಚಕ ಪ್ರಕೃತಿಯ ಸುಂದರಮಯ ವಾತಾವರಣದಲ್ಲಿ ಬೆಳಗಿನ ಮತ್ತು ಸಂಜೆಯ ಸಮಯವನ್ನು ಆರಾಮವಾಗಿ ಕಳೆಯಲು ಸೂಕ್ತವಾದ ಸ್ಥಳವಾಗಿದೆ.

5. ಕಮದ್ ಗಿರಿ

5. ಕಮದ್ ಗಿರಿ

ಚಿತ್ರಕೂಟದಲ್ಲಿರುವ ಕಮದ್ ಗಿರಿ ರಾಮ ದೇವರ ನಿಜವಾದ ವಾಸ ಸ್ಥಾನವೆಂದು ನಂಬಲಾಗುತ್ತದೆ ರಾಮ ದೇವರು ಚಿತ್ರಕೂಟದಲ್ಲಿರುವ ಸಮಯದಲ್ಲಿ ಈ ಸ್ಥಳದಲ್ಲಿಯೇ ತಮ್ಮ ಹೆಚ್ಚಿನ ಸಮಯವನ್ನು ಕಳೆಯುತ್ತಿದ್ದರು ಎಂದು ನಂಬಲಾಗುತ್ತದೆ. ಈ ಸ್ಥಳವು ಅನೇಕ ದೇವಾಲಯಗಳಿಂದ ಮತ್ತು ದಟ್ಟವಾದ ಹಸಿರು ಅರಣ್ಯಗಳಿಂದ ಸುತ್ತುವರಿಯಲ್ಪಟ್ಟಿದೆ. ಆದುದರಿಂದ ಸುಂದರವಾದ ಮತ್ತು ಸಂತೋಷಕರವಾದ ಸೆಳವಿರುವ ಈ ಸ್ಥಳವು ನಿಮ್ಮ ಭೇಟಿಗೆ ಸೂಕ್ತವಾದ ತಾಣವೆನ್ನುವುದರಲ್ಲಿ ಸಂಶಯವಿಲ್ಲ.

6. ಜಾನಕಿ ಕುಂಡ್

6. ಜಾನಕಿ ಕುಂಡ್

Aashishsainik

ಜಾನಕಿ ಕುಂಡ್ ಮಂದಾಕಿನಿ ನದಿಯ ಒಂದು ಭಾಗವಾಗಿದೆ ಮತ್ತು ಗಡಿಪಾರಾದ ಸಮಯದಲ್ಲಿ ಸೀತಾದೇವಿಯು ಈ ಸ್ಥಳದಲ್ಲಿ ಸ್ನಾನ ಮಾಡುತ್ತಿದ್ದರು ಎನ್ನುವ ನಂಬಿಕೆ ಇದೆ. ಈ ಸ್ಥಳವು ಸುಸಜ್ಜಿತವಾಗಿ ನಿರ್ವಹಣೆ ಮಾಡಲಾಗಿಲ್ಲದಿದ್ದರೂ ಇದು ಹಿಂದಿನ ಪುರಾಣಗಳ ಕಥೆಗಳನ್ನು ವಿವರಿಸುತ್ತದೆ.

7. ಭರತ್ ಮಿಲಾಪ್

7. ಭರತ್ ಮಿಲಾಪ್

c. 1740-50

ಭರತ್ ಮಿಲಾಪ್ ಇದು ತನ್ನ ಮಲತಾಯಿಯ ಆದೇಶವನ್ನು ಪಾಲಿಸುವ ಸಲುವಾಗಿ ರಾಮದೇವರು ಕಾಡಿಗೆ ಹೋದ ಸಂಧರ್ಭದಲ್ಲಿ ಭರತನು ತನ್ನ ಅಣ್ಣನಾದ ರಾಮದೇವರಿಗೆ ಅಯೋಧ್ಯೆಯ ಪಟ್ಟವನ್ನು ಹಿಂತಿರುಗಿಸುವ ಕಾರಣಕ್ಕಾಗಿ ಮತ್ತು ತನ್ನ ಜೊತೆ ಹಿಂದಕ್ಕೆ ಕರೆದೊಯ್ಯುವ ಸಲುವಾಗಿ ಭೇಟಿ ಮಾಡಿದ ಜಾಗವಿದು ಎಂದು ಹೇಳಲಾಗುತ್ತದೆ. ಇಂದು ಇಲ್ಲಿ ಭರತ್ ಮಿಲಾಪ್ ಎಂಬ ದೇವಾಲಯವನ್ನು ನೋಡಬಹುದಾಗಿದೆ.

8. ಭರತ್ ಕೂಪ್

8. ಭರತ್ ಕೂಪ್

ಭರತ್ ಕೂಪ್ ಎಂಬ ಸ್ಥಳದಲ್ಲಿ ಒಂದು ಧಾರ್ಮಿಕ ಬಾವಿ ಇದ್ದು ಇದು ದೇಶದ ಐದು ಪವಿತ್ರ ನದಿಗಳ ನೀರನ್ನು ಹೊಂದಿದೆ ಎಂದು ಹೇಳಲಾಗುತ್ತದೆ. ಇದನ್ನು ಭರತನು ರಾಮ ದೇವರ ಪಟ್ಟಾಭಿಷೇಕ ಮಾಡುವ ಸಲುವಾಗಿ ತಂದಿರುವುದಾಗಿ ಹೇಳಲಾಗುತ್ತದೆ.

9. ಹನುಮಾನ್ ಧಾರಾ

9. ಹನುಮಾನ್ ಧಾರಾ

Arghyashonima

ಕಲ್ಲಿನ ಬೆಟ್ಟದ ಮೇಲಿರುವ ಹನುಮಾನ್ ಧಾರಾ ಒಂದು ಬುಗ್ಗೆಯಾಗಿದ್ದು ಇದನ್ನು ಸ್ವತ: ರಾಮದೇವರಿಂದ ರಚಿಸಲ್ಪಟ್ಟಿದೆ ಎಂಬ ನಂಬಿಕೆ ಇದೆ. ಹನುಮಾನ್ ಧಾರಾ ಪ್ರದೇಶವು ಅನೇಕ ಸಣ್ಣ ಸಣ್ಣ ದೇವಾಲಯಗಳನ್ನು ಹೊಂದಿದ್ದು ಇದರಿಂದಾಗಿ ಈ ಪ್ರದೇಶವು ಇನ್ನೂ ಸುಂದರವಾಗಿ ಕಾಣುವಂತೆ ಮಾಡುತ್ತದೆ. ನೀವು ಒಮ್ಮೆ ಈ ಕಲ್ಲಿನ ಬೆಟ್ಟದ ಮೇಲೆ ಹೋದಲ್ಲಿ, ಇಲ್ಲಿ ನೀವು ಚಿತ್ರಕೂಟದ ನಯನ ಮನೋಹರ ದೃಶ್ಯವನ್ನು ವೀಕ್ಷಿಸಬಹುದಾಗಿದೆ.

10. ರಾಮ್ ಶೈಯಾ

10. ರಾಮ್ ಶೈಯಾ

Bhelki

ರಾಮಶೈಯ ಚಿತ್ರಕೂಟ ಹೊರವಲಯದಲ್ಲಿರುವ ಏಕಾಂತ ಸ್ಥಳವಾಗಿದ್ದು, ರಾಮ ದೇವರು ತಮ್ಮ ಸಂಜೆ ಕಳೆಯಲು ಬಳಸಿದ ಸ್ಥಳವೆಂದು ಹೇಳಲಾಗುತ್ತದೆ. ಈ ಪ್ರದೇಶವು ಏಕಾಂತದ ಸ್ಥಳವಾಗಿದ್ದು, ಶಾಂತಿಯುತ ಜೀವನ ಮತ್ತು ಅತ್ಯುನ್ನತ ಆನಂದವನ್ನು ಪಡೆಯಲು ಬಯಸುವವರಿಗೆ ಒಂದು ಸೂಕ್ತವಾದ ನಿಲುಗಡೆಯೆನಿಸಿದೆ. ಇದು ರಾಮ್ ಶೈಯಾದ ಮಹತ್ವವಾಗಿದೆ. ಇಲ್ಲಿ ರಾಮನದೇವರ ಧ್ಯಾನ ಮಾಡುತ್ತಾ ಯಾರು ನಿಜ ಮನಸ್ಸಿನಿಂದ ಬರುವರೋ ಅವರಿಗೆ ಖಚಿತವಾಗಿಯೂ ಮೋಕ್ಷ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆ ಇದೆ.

11. ಅನ್ವೇಷಣೆ ಮಾಡಬಹುದಾದ ಇನ್ನಿತರ ಸ್ಥಳಗಳು

11. ಅನ್ವೇಷಣೆ ಮಾಡಬಹುದಾದ ಇನ್ನಿತರ ಸ್ಥಳಗಳು

LRBurdak

ಈ ಎಲ್ಲಾ ಸ್ಥಳಗಳ ಹೊರತಾಗಿಯೂ ಇಲ್ಲಿ ಇನ್ನೂ ಅನೇಕ ಆಸಕ್ತಿದಾಯಕ ಸ್ಥಳಗಳಿಗೆ ಭೇಟಿ ಕೊಡಬಹುದಾಗಿದೆ ಅವುಗಳಲ್ಲಿ ಪಂಪಾಪುರ್ ಇಲ್ಲಿ ರಾಮ ದೇವರ ಪವಿತ್ರ ಗುಹೆಗಳಿವೆ. ಗುಪ್ತ್ ಗೋದಾವರಿ ಇಲ್ಲಿ ರಾಮದೇವರು ತಮ್ಮ ಸಭೆಗಳನ್ನು ನಡೆಸುತ್ತಿದ್ದರೆನ್ನಲಾಗುತ್ತದೆ, ಶ್ಪತಿಕ್ ಶಿಲಾ ಇಲ್ಲಿ ರಾಮದೇವರು ಮತ್ತು ಸೀತಾದೇವಿಯವರ ಹೆಜ್ಜೆ ಗುರುತಿದೆ ಮತ್ತು ಸತಿ ಅನಸೂಯಾ ಆಶ್ರಮ ಇವೆಲ್ಲವನ್ನು ಕೂಡಾ ನೋಡಬಹುದಾಗಿದೆ. ಇವೆಲ್ಲವುದರ ಜೊತೆಗೆ ನೀವು ಲಕ್ಷ್ಮಣ ಚೌಕಿ, ಮಯೂರ್ ಧ್ವಜ್ ಆಶ್ರಮ, ಶಬರಿ ಜಲಪಾತ, ವಿರಧ್ ಕುಂಡ್ ಮತ್ತು ಕಾಳಿ ಬರಾಹ್ ಜಲಪಾತಗಳಿಗೂ ಭೇಟಿ ನೀಡಬಹುದಾಗಿದೆ.

12. ಚಿತ್ರಕೂಟಕ್ಕೆ ಭೇಟಿ ಕೊಡಲು ಉತ್ತಮ ಸಮಯ

12. ಚಿತ್ರಕೂಟಕ್ಕೆ ಭೇಟಿ ಕೊಡಲು ಉತ್ತಮ ಸಮಯ

Biswarup Ganguly

ಚಿತ್ರಕೂಟವು ತೀವ್ರಪ್ರಮಾಣದ ಹವಾಮಾನವನ್ನು ಅನುಭವಿಸುತ್ತದೆ ಆದುದರಿಂದ ಇಲ್ಲಿ ಬೇಸಿಗೆಯು ಹೆಚ್ಚು ಬಿಸಿಯಾಗಿರುತ್ತದೆ. ಹೀಗೆ ರಾಮಾಯಣ ಮಹಾಕಾವ್ಯದ ಬಗ್ಗೆ ತಿಳಿದುಕೊಳ್ಳಲು ಮತ್ತು ಇದಕ್ಕೆ ಸಂಬಂಧಿಸಿದ ಯುಗದ ಬಗ್ಗೆ ಹೆಚ್ಚಿನ ತಿಳುವಳಿಕೆ ಪಡೆಯಲು ಬಯಸಿದಲ್ಲಿ ಚಿತ್ರಕೂಟವು ವರ್ಷದಲ್ಲಿ ಯಾವುದೇ ಸಮಯದಲ್ಲೂ ಭೇಟಿ ಕೊಡಬಹುದಾದಂತಹ ಒಂದು ಸ್ಥಳವಾಗಿದೆ.

13. ಭೋಪಾಲ್ ನಿಂದ ಚಿತ್ರಕೂಟಕ್ಕೆ ತಲುಪುವುದು ಹೇಗೆ

13. ಭೋಪಾಲ್ ನಿಂದ ಚಿತ್ರಕೂಟಕ್ಕೆ ತಲುಪುವುದು ಹೇಗೆ

Abhinav Phangcho Choudhury

ವಾಯುಮಾರ್ಗ: ಚಿತ್ರಕೂಟಕ್ಕೆ ಸಮೀಪವಿರುವ ನಿಲ್ದಾಣವು 150 ಕಿ.ಮೀ ದೂರದಲ್ಲಿರುವ ಖಜರಾಹೋದಲ್ಲಿದೆ.ಒಮ್ಮೆ ನೀವು ವಿಮಾನ ನಿಲ್ದಾಣವನ್ನು ತಲುಪಿದ ಕೂಡಲೇ, ನೀವು ಬಾಡಿಗೆ ಟ್ಯಾಕ್ಸಿ ತೆಗೆದುಕೊಳ್ಳಬಹುದು ಅಥವಾ ನೇರವಾಗಿ ಬಸ್ ಮೂಲಕ ಚಿತ್ರಕೂಟಕ್ಕೆಹೋಗಬಹುದು.

ರೈಲು ಮೂಲಕ: ಚಿತ್ರಕೂಟದಿಂದ ಸುಮಾರು 5 ಕಿ.ಮೀ ದೂರದಲ್ಲಿರುವ ಚಿತ್ರಕೂಟ್ ಧಾಮ್ ಕಾರ್ವಿ ಹತ್ತಿರದ ರೈಲು ನಿಲ್ದಾಣವಾಗಿದೆ.

ರಸ್ತೆಯ ಮೂಲಕ: ಚಿತ್ರಕೂಟ ಉತ್ತಮ ರಸ್ತೆ ವ್ಯವಸ್ಥೆಯನ್ನು ಹೊಂದಿದೆ ಆದ್ದರಿಂದ ನೀವು ಬಸ್ ಅಥವಾ ಟ್ಯಾಕ್ಸಿ ಸೇವೆಗಳನ್ನು ಸುಲಭವಾಗಿ ತಲುಪಬಹುದು. ಭೋಪಾಲ್ ನಿಂದ ಇಲ್ಲಿಗೆ 495 ಕಿ.ಮೀ. ಅಂತರವಿದೆ.

14. ಭೋಪಾಲ್ - ಸಾಂಚಿ - ಪನ್ನಾ - ಚಿತ್ರಕೂಟ

14. ಭೋಪಾಲ್ - ಸಾಂಚಿ - ಪನ್ನಾ - ಚಿತ್ರಕೂಟ

ಮಾರ್ಗ 1: ಭೋಪಾಲ್ - ಸಾಂಚಿ - ಪನ್ನಾ - ಚಿತ್ರಕೂಟ

ಮಾರ್ಗ 2: ಭೋಪಾಲ್ - ಸಾಂಚಿ - ಛಾತರ್ಪುರ್ - ಚಿತ್ರಕೂಟ

ಮಾರ್ಗ 1 ಅತ್ಯಂತ ವೇಗವಾಗಿ ತಲುಪಬಹುದಾದಂತಹ ಮಾರ್ಗವಾಗಿದ್ದು ಈ ಮಾರ್ಗದಲ್ಲಿ ಪ್ರಯಾಣಿಸಿದರೆ ಚಿತ್ರಕೂಟ ತಲುಪಲು 10 ತಾಸುಗಳು ಬೇಕಾಗುವುದು. ಇನ್ನೊಂದೆಡೆ ಮಾರ್ಗ 2 ರಲ್ಲಿ ಪ್ರಯಾಣಿಸಿದಲ್ಲಿ ಚಿತ್ರಕೂಟ ತಲುಪಲು 11 ತಾಸುಗಳು ಬೇಕಾಗುವುದು. ಆದುದರಿಂದ ನಿಮ್ಮ ಪ್ರಯಾಣವನ್ನು ಕಡಿಮೆ ಸಮಯದಲ್ಲಿ ತಲುಪುವಂತೆ ಮಾಡಲು ಕುತೂಹಲಕಾರಿ ಮತ್ತು ಆಸಕ್ತಿದಾಯಕವಾಗಿ ಮಾಡಬೇಕೆಂದಿದ್ದಲ್ಲಿ ಮಾರ್ಗ 1 ರಲ್ಲಿ ಪ್ರಯಾಣಿಸುವುದು ಉತ್ತಮ. ಇದರ ಜೊತೆಗೆ ನೀವು ಕೆಲವು ನೈಸರ್ಗಿಕ ಸ್ಥಳಗಳು ಮತ್ತು ಸಾಂಚಿ ಮತ್ತು ಪನ್ನಾದ ಐತಿಹಾಸಿಕ ಸ್ಥಳಗಳ ಅನ್ವೇಷಣೆ ಕೂಡಾ ಮಾಡಬಹುದಾಗಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Nativeplanet sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Nativeplanet website. However, you can change your cookie settings at any time. Learn more