Search
  • Follow NativePlanet
Share
» »ಮಂಡ್ಯದ ಭೀಮೇಶ್ವರಿ ಬಳಿಯಿವೆ 5 ಕ್ಕೂ ಹೆಚ್ಚು ಪ್ರವಾಸಿ ತಾಣಗಳು…ಭೇಟಿ ನೀಡಲು ಸೂಕ್ತ ಸಮಯವಿದು

ಮಂಡ್ಯದ ಭೀಮೇಶ್ವರಿ ಬಳಿಯಿವೆ 5 ಕ್ಕೂ ಹೆಚ್ಚು ಪ್ರವಾಸಿ ತಾಣಗಳು…ಭೇಟಿ ನೀಡಲು ಸೂಕ್ತ ಸಮಯವಿದು

ಭೀಮೇಶ್ವರಿ ಬೆಂಗಳೂರಿನಿಂದ 100 ಕಿ.ಮೀ ದೂರದಲ್ಲಿದೆ. ನೀವು ಸಾಹಸಿ ಪ್ರಿಯರಾಗಿದ್ದರೆ, ನಿಮ್ಮ ದೈನಂದಿನ ಜೀವನದ ಒತ್ತಡದಿಂದ ಹೊರಬರಲು, ರಿಫ್ರೆಶ್‌ ಆಗಲು, ಕುಟುಂಬದವರೊಂದಿಗೆ ಅತ್ಯುತ್ತಮ ಸಮಯ ಕಳೆಯಲು ಭೀಮೇಶ್ವರಿ ಬೆಸ್ಟ್‌ ಪ್ಲೇಸ್‌. ಇಲ್ಲಿರುವ ಕಾವೇರಿ ನದಿಯಲ್ಲಿ ಮಹಶೀರ್‌ ಮೀನುಗಳು ಇರುವುದರಿಂದ ಈ ಸ್ಥಳವನ್ನು ಪರಿಸರ ಪ್ರವಾಸೋದ್ಯಮ ತಾಣವೆಂದು ಪರಿಗಣಿಸಲಾಗಿದೆ. ಮಹಶೀರ್‌ ಅಳಿವಿನ ಅಂಚಿನಲ್ಲಿರುವ ಅಪರೂಪದ ಮೀನು.

ಅಷ್ಟೇ ಅಲ್ಲ, ಭೀಮೇಶ್ವರಿ ಮೀನುಗಾರಿಕೆ ಶಿಬಿರಗಳಿಗೂ ಜನಪ್ರಿಯವಾಗಿದೆ. ಶಿಬಿರದ ಹೊರತಾಗಿ, ನೀವು ಭೀಮೇಶ್ವರಿಯಲ್ಲಿ ವೈಟ್ ವಾಟರ್ ರಾಫ್ಟಿಂಗ್, ಟ್ರೆಕ್ಕಿಂಗ್, ಕಯಾಕಿಂಗ್ ಮುಂತಾದ ಅನೇಕ ರೀತಿಯ ಸಾಹಸ ಚಟುವಟಿಕೆಯಲ್ಲಿ ಭಾಗವಹಿಸಬಹುದು. ನೀವು ಅಕ್ಟೋಬರ್ ನಿಂದ ಫೆಬ್ರವರಿ ನಡುವೆ ಭೀಮೇಶ್ವರಿಗೆ ಬರಬೇಕು. ಈ ಲೇಖನದಲ್ಲಿ ಭೀಮೇಶ್ವರಿಗೆ ತೆರಳುವ ಮಾರ್ಗ ಹಾಗೂ ಭೀಮೇಶ್ವರಿ ಆಸುಪಾಸಿನ 10 ಪ್ರಮುಖ ಪ್ರವಾಸಿ ಆಕರ್ಷಣೆಗಳ ಬಗ್ಗೆ ಮಾಹಿತಿ ಕೊಡಲಾಗಿದೆ.

ಚನ್ನಪಟ್ಟ

ಆಟಿಕೆಗಳಲ್ಲದೆ, ಚನ್ನಪಟ್ಟಣವು ತೆಂಗಿನ ಉತ್ಪನ್ನಗಳು ಮತ್ತು ಕಚ್ಚಾ ರೇಷ್ಮೆಗೂ ಹೆಸರುವಾಸಿಯಾಗಿದೆ. ಇವೆಲ್ಲವೂ ಇಲ್ಲಿ ಕೈಗೆಟಕುವ ದರದಲ್ಲಿ ದೊರೆಯುತ್ತದೆ. ಚನ್ನಪಟ್ಟಣವು ಒಂದು ಸಣ್ಣ ಧಾರ್ಮಿಕ ಸ್ಥಳವಾಗಿದೆ. ಇಲ್ಲಿ ನೀವು ಅನೇಕ ದೇವಾಲಯಗಳಿಗೆ ಭೇಟಿ ನೀಡಬಹುದು. ಮಲ್ಲೂರಿನ ಅಪ್ರಮೇಯ ಸ್ವಾಮಿ ದೇವಸ್ಥಾನ ಚನ್ನಪಟ್ಟಣದಿಂದ 3 ಕಿ.ಮೀ ದೂರದಲ್ಲಿದೆ. ಅಂಬೆಗಾಲು ಕೃಷ್ಣನ ವಿಗ್ರಹವನ್ನು ಈ ದೇವಾಲಯದಲ್ಲಿ ಸ್ಥಾಪಿಸಲಾಗಿದೆ. ಇದು ಶ್ರೀ ಕೃಷ್ಣನ ಅಪರೂಪದ ವಿಗ್ರಹಗಳಲ್ಲಿ ಒಂದಾಗಿದೆ ಎಂದು ಪರಿಗಣಿಸಲಾಗಿದೆ.

ಮದ್ದೂರು

ಮದ್ದೂರು ಮಂಡ್ಯ ಜಿಲ್ಲೆಯ ಒಂದು ಸಣ್ಣ ಪಟ್ಟಣವಾಗಿದ್ದು, ಇದು ಬೆಂಗಳೂರು ನಗರದಿಂದ 82 ಕಿ.ಮೀ ದೂರದಲ್ಲಿದೆ. ಮದ್ದೂರು ಸುಮಾರು 662 ಮೀಟರ್ ಎತ್ತರದಲ್ಲಿದೆ. ಇದು ಶಿಂಷಾ ನದಿಯ ದಡದಲ್ಲಿದೆ. ಮದ್ದೂರನ್ನೂ ಭಾರತದ ತೆಂಗಿನಕಾಯಿ ರಾಜಧಾನಿ ಎಂದೂ ಕರೆಯುತ್ತಾರೆ. ಇಲ್ಲಿಂದ 300 ಟ್ರಕ್ ಗಳಲ್ಲಿ ತೆಂಗಿನಕಾಯಿ ತುಂಬಿಕೊಂಡು ಗೋವಾ, ಹೈದರಾಬಾದ್ , ಅಹಮದಾಬಾದ್ , ಪಂಜಾಬ್ , ಮಹಾರಾಷ್ಟ್ರಕ್ಕೆ ಸಾಗಿಸಲಾಗುತ್ತದೆ. ಮದ್ದೂರು ಲಾಂಗ್ ಡ್ರೈವ್ ಮತ್ತು ಬೈಕಿಂಗ್‌ಗೆ ಬಹಳ ಜನಪ್ರಿಯವಾಗಿದೆ. ನೀವು ಯಾವಾಗ ಬೇಕಾದರೂ ನಿಮ್ಮ ಸ್ನೇಹಿತರು ಮತ್ತು ಕುಟುಂಬದೊಂದಿಗೆ ಇಲ್ಲಿಗೆ ಬರಬಹುದು.

kokkrebellur village

ಕೊಕ್ಕರೆ ಬೆಳ್ಳೂರು ಗ್ರಾಮ

ಕೊಕ್ಕರೆ ಬೆಳ್ಳೂರು ಗ್ರಾಮವು ಮದ್ದೂರಿನಿಂದ 13 ಕಿಮೀ ದೂರದಲ್ಲಿದೆ. ಇದು ಪೆಲಿಕಾನ್‌ಗೆ ಹೆಸರುವಾಸಿಯಾಗಿದೆ. ಈ ಪಕ್ಷಿಧಾಮದಲ್ಲಿ ಬಿಲ್ಡ್ ಪೆಲಿಕಾನ್ ನಂತಹ ಹಲವು ಅಪರೂಪದ ಜಾತಿಯ ಪಕ್ಷಿಗಳನ್ನು ಕಾಣಬಹುದು. ಕೊಕ್ಕರೆಗಳಿಂದ ಗ್ರಾಮವು ಈ ಹೆಸರನ್ನು ಪಡೆದುಕೊಂಡಿದೆ. ಈ ಗ್ರಾಮದಲ್ಲಿ ಹೇರಳವಾಗಿ ಕಬ್ಬು ಸಹ ಉತ್ಪಾದನೆಯಾಗುತ್ತದೆ. ನೀವು ಪಕ್ಷಿಗಳನ್ನು ವೀಕ್ಷಿಸಲು ಇಷ್ಟಪಡುವವರಾಗಿದ್ದರೆ ನೀವು ಕೊಕ್ಕರೆ ಬೆಳ್ಳೂರು ಪಕ್ಷಿಧಾಮಕ್ಕೆ ಭೇಟಿ ನೀಡಬೇಕು. ಡಿಸೆಂಬರ್ ಮತ್ತು ಮಾರ್ಚ್ ನಡುವೆ ಇಲ್ಲಿಗೆ ಭೇಟಿ ನೀಡಬಹುದು. ಈ ಸಮಯದಲ್ಲಿ, ಪಕ್ಷಿಗಳು ಇಲ್ಲಿ ಗೂಡುಗಳನ್ನು ಮಾಡುತ್ತವೆ. 500 ಕ್ಕೂ ಹೆಚ್ಚು ಜಾತಿಯ ವಲಸೆ ಮತ್ತು ಸ್ಥಳೀಯ ಪಕ್ಷಿಗಳನ್ನು ಇಲ್ಲಿ ಕಾಣಬಹುದು.

krsdam

ಕೆಆರ್‌ಎಸ್‌

ಮಂಡ್ಯ ಕೃಷ್ಣ ರಾಜ ಸಾಗರ (ಕೆಆರ್‌ಎಸ್‌) ಅಣೆಕಟ್ಟಿನಿಂದ ಜನಪ್ರಿಯವಾಗಿದೆ. ಈ ಅಣೆಕಟ್ಟಿನ ಕೆಳಭಾಗದಲ್ಲಿ ಬೃಂದಾವನ ಉದ್ಯಾನವನ ಕೂಡ ಇದೆ. ಇದಲ್ಲದೇ ಗೋವಿಂದನಹಳ್ಳಿ, ಆದಿಚುಂಚನಗಿರಿ ಪರ್ವತ, ಮೇಲುಕೋಟೆ ಕೂಡ ಇಲ್ಲಿ ನೋಡಲೇಬೇಕಾದ ಸ್ಥಳಗಳಾಗಿವೆ. ಆದರೆ ಈ ಸ್ಥಳಗಳಿಗೆ ಭೇಟಿ ನೀಡಲು ನಿಮಗೆ ಸಂಪೂರ್ಣ ಒಂದು ದಿನ ಬೇಕಾಗುತ್ತದೆ. ಆದ್ದರಿಂದ ಮಂಡ್ಯದಲ್ಲಿ ಒಂದು ದಿನ ತಂಗಲು ಸಿದ್ಧರಾಗಿ ಬನ್ನಿ.

shivanasamudra waterfalls

ಶಿವನಸಮುದ್ರ ಜಲಪಾತ

ಗಗನಚುಕ್ಕಿ ಮತ್ತು ಭರಚುಕ್ಕಿ ಎಂಬ ಎರಡು ಜಲಪಾತಗಳು ಇಲ್ಲಿ ಹರಿಯುತ್ತವೆ. ಇಲ್ಲಿ ಕಾವೇರಿ ನದಿಯು ಎರಡು ಭಾಗಗಳಾಗಿ ವಿಭಜನೆಯಾಗುತ್ತದೆ ಮತ್ತು ಈ ಎರಡು ಸ್ಥಳಗಳನ್ನು ಗಗನಚಕ್ಕಿ ಮತ್ತು ಭರಚಕ್ಕಿ ಎಂದು ಕರೆಯಲಾಗುತ್ತದೆ. ಈ ಎರಡೂ ಭವ್ಯವಾದ ಜಲಪಾತಗಳು ಶಿವನಸಮುದ್ರಕ್ಕೆ ಹರಿಯುತ್ತವೆ. ಮಾನ್ಸೂನ್ ಸಮಯದಲ್ಲಿ ಇಲ್ಲಿನ ನೋಟವು ತುಂಬಾ ಸುಂದರವಾಗಿರುತ್ತದೆ.

ಮುತ್ತತ್ತಿ

ಮುತ್ತತ್ತಿ ಇದು ಮಳವಳ್ಳಿ ಗ್ರಾಮದ ಕಾವೇರಿ ನದಿಯ ದಡದಲ್ಲಿದೆ. ಈ ನದಿಯ ಸುತ್ತಲೂ ಅನೇಕ ಮರಗಳು, ಜಲಾಶಯಗಳು ಮತ್ತು ಹಸಿರು ಇದೆ. ಇಲ್ಲಿ ನೀರಿನ ಹರಿವು ತುಂಬಾ ವೇಗವಾಗಿರುತ್ತದೆ. ಆದ್ದರಿಂದ ಇಲ್ಲಿ ಈಜಬೇಡಿ. ಮುತ್ತತ್ತಿಯಿಂದ ಕೇವಲ ಒಂದು ಗಂಟೆಯ ದೂರದಲ್ಲಿ ಕಾವೇರಿ ವನ್ಯಜೀವಿ ಅಭಯಾರಣ್ಯವಿದೆ. ಇದನ್ನು ಕೆಲವೊಮ್ಮೆ ಭೀಮೇಶ್ವರಿ ವನ್ಯಜೀವಿ ಅಭಯಾರಣ್ಯ ಎಂದು ಕರೆಯಲಾಗುತ್ತದೆ. ಈ ಕಾಡಿನಲ್ಲಿ ಕಾವೇರಿ ನದಿ ಹರಿಯುತ್ತದೆ. ಮಲಬಾರ್ ಜೈಂಟ್ ಅಳಿಲು ಮತ್ತು ಗ್ರಿಜ್ಲ್ಡ್ ಜೈಂಟ್ ಅಳಿಲು, ಅನೇಕ ಜಾತಿಯ ಮರಗಳು ಮತ್ತು ಪ್ರಾಣಿಗಳು ಇಲ್ಲಿ ಕಂಡುಬರುತ್ತವೆ. ಇದಲ್ಲದೆ, ಅಪರೂಪದ ಜಾತಿಗಳೆಂದು ಪರಿಗಣಿಸಲ್ಪಟ್ಟ 280 ಜಾತಿಯ ಪಕ್ಷಿಗಳು ಸಹ ಕಂಡುಬರುತ್ತವೆ. ಇದೇ ಕಾಡಿನಲ್ಲಿ ಬಸವನ ಬೆಟ್ಟವೂ ಇದೆ.

ಭೀಮೇಶ್ವರಿಗೆ ತೆರಳುವುದು ಹೇಗೆ?

ಮಾರ್ಗ 1: ರಾಜಾ ರಾಮ್ ಮೋಹನ್ ರಾಯ್ ರಸ್ತೆ / ಮೈಸೂರು ರಸ್ತೆ - ನೈಸ್ ಮೈಸೂರು - ಬೆಂಗಳೂರು ಎಕ್ಸ್‌ಪ್ರೆಸ್‌ವೇ - NH 209 - ಬಸವನ ಬೆಟ್ಟ ಅರಣ್ಯ - ಭೀಮೇಶ್ವರಿ (ದೂರ: 105 ಕಿಮೀ, ಸಮಯ: 3 ಗಂಟೆ)

ಮಾರ್ಗ 2: ಕಸ್ತೂರಬಾ ರಸ್ತೆ - ಸ್ಯಾಂಕಿ ರಸ್ತೆ - CNR ಅಂಡರ್‌ಪಾಸ್ / CV ರಾಮನ್ ರಸ್ತೆ - NH 75 - NH 48 - NH 275 - ಬಿಲ್ಲಕೆಂಪನಹಳ್ಳಿ - NH 209 - ಬಸವನ ಬೆಟ್ಟ ಅರಣ್ಯ - ಭೀಮೇಶ್ವರಿ (ದೂರ-126 km , ಸಮಯ-3 ಗಂಟೆ 30 ನಿಮಿಷ)

ಮಾರ್ಗ 3: ರಾಜಾ ರಾಮ್ ಮೋಹನ್ ರಾಯ್ ರಸ್ತೆ/ಮೈಸೂರು ರಸ್ತೆ - ನೈಸ್ ಮೈಸೂರು - ಬೆಂಗಳೂರು ಎಕ್ಸ್‌ಪ್ರೆಸ್‌ವೇ - NH 275 - ಚನ್ನಪಟ್ಟಣ - ಮಂಡ್ಯ - NH 209 ಮಳವಳ್ಳಿ - ಬಸವನ ಬೆಟ್ಟ ಅರಣ್ಯ - ಭೀಮೇಶ್ವರಿ (ದೂರ-171 km , ಸಮಯ-4 ಗಂಟೆ)

ಕನಕಪುರಕ್ಕೆ ಹೋಗುವ ಮಾರ್ಗ 1 ನಿಮಗೆ ಒಳ್ಳೆಯದು. ಏಕೆಂದರೆ ಈ ಸಣ್ಣ ಪಟ್ಟಣದಲ್ಲಿ ಅನೇಕ ಜಲಪಾತಗಳು ಮತ್ತು ನೈಸರ್ಗಿಕ ತಾಣಗಳಿವೆ.

More News

Read more about: ಕಾವೇರಿ mandya kaveri
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+