ಕೊಯಮತ್ತೂರಿನಲ್ಲಿರುವ ಪೆರೂರು ಪಟ್ಟೀಶ್ವರರ್ ದೇವಸ್ಥಾನದ ಬಗ್ಗೆ ಕೇಳಿದ್ದೀರಾ? ಈ ದೇವಾಲಯಕ್ಕೆ ಸಾಕಷ್ಟು ವಿಶೇಷಗಳಿವೆ. ಇದನ್ನು ಮೋಕ್ಷದ ಸ್ಥಳ ಎಂದೂ ಕರೆಯಲಾಗುತ್ತದೆ. ಇಲ್ಲಿ ಹುಣಸೆ ಬೀಜ ಮೊಳಕೆ ಒಡೆಯುವುದಿಲ್ಲ. ಸಗಣಿಯಲ್ಲಿ ಕ್ರಿಮಿಗಳಾಗುವುದಿಲ್ಲ. ಇದರ ಹಿಂದಿದೆ ಒಂದು ರೋಚಕ ಕಥೆ.

ಎಲ್ಲಿದೆ ಈ ದೇವಾಲಯ
PC:Balajijagadesh
ಈ ಪಟ್ಟೀಶ್ವರರ್ ದೇವಾಲಯವು ತಮಿಳುನಾಡಿನ ಕೊಯಮತ್ತೂರು ನಗರ ಪಶ್ಚಿಮಕ್ಕಿರುವ ಪೆರೂರು ಎಂಬ ಪ್ರದೇಶದಲ್ಲಿದೆ. ಇದು ಕೊಯಮತ್ತೂರು ನಗರ ಕೇಂದ್ರದಿಂದ ಕೇವಲ ಏಳು ಕಿ.ಮೀ ಗಳಷ್ಟು ದೂರದಲ್ಲಿದೆ.

ಇತಿಹಾಸ
ಹಸುವೊಂದು ನಿತ್ಯವು ಶಿವನನ್ನು ಧ್ಯಾನಿಸುತ್ತಿತ್ತು. ಹಾಗಾಗಿ ಹುತ್ತಾವೊಂದರ ಮೇಲೆ ನಿಂತು ನಿತ್ಯವೂ ಹಾಲೆರೆಯುತ್ತಿತ್ತು. ಆದರೆ ಅದರೊಳಗೆ ಶಿವಲಿಂಗ ಇತ್ತು ಎನ್ನುವುದು ಯಾರಿಗೂ ತಿಳಿದಿರಲಿಲ್ಲ. ಅದರೊಳಗಿದ್ದ ಶಿವಲಿಂಗಕ್ಕೆ ಹಸುವು ಪ್ರತಿದಿನ ಹಾಲಿನ ಅಭಿಷೇಕ ಮಾಡುತ್ತಿತ್ತು.

ಪಟ್ಟಿ ಎನ್ನುವ ಕರು
ಆ ಕಾಮಧೇನುವಿಗೆ ಕರುವೊಂದಿತ್ತು ಹಾಗೂ ಅದರ ಹೆಸರು ಪಟ್ಟಿ. ಆ ಕರು ತನ್ನ ತಾಯಿಯೊಡನೆ ನಿತ್ಯವೂ ಅದು ಹೋಗುವ ಹುತ್ತದತ್ತ ಬರುತ್ತಿತ್ತು. ಇತ್ತ ಕಾಮಧೇನು ಸೇವೆಯಲ್ಲಿ ನಿರತವಾದಾಗ ಕರು ಅತಿಂದಿತ್ತ ಜಿಗಿದಾಡುತ್ತ ಆಟವಾಡುತ್ತಿತ್ತು.

ಹುತ್ತಕ್ಕೆ ಹಾನಿ
ಕರು ಹೀಗೆ ಆಟವಾಡುತ್ತಿರುವಾಗ ಆಕಸ್ಮಿಕವಾಗಿ ಆ ಹುತ್ತಕ್ಕೆ ಹಾನಿಯಾಗುತ್ತದೆ. ಸಂಪೂರ್ಣ ಹುತ್ತವು ಕುಸಿದೆ ಬಿಡುತ್ತದೆ. ಆಗ ಕಾಮಧೇನು ಅಕಸ್ಮಾತಾಗಿ ಆ ಶಿವಲಿಂಗದ ಮೇಲೆ ಬಿದ್ದು ಬಿಟ್ಟಿತು. ಆಗ ಅದರ ಕಾಲಿನ ಗುರುತೊಂದು ಆ ಶಿವಲಿಂಗದ ಮೇಲೆ ಮೂಡಿತು. ಇಂದಿಗೂ ಆ ಹೆಜ್ಜೆಗುರುತನ್ನು ಕಾಣಬಹುದು.

ಪ್ರಸನ್ನನಾದ ಶಿವ
PC:Ssriram mt
ತಕ್ಷಣ ಕಾಮಧೇನು ಕ್ಷಮೆ ಕೇಳಲು ಶಿವನು ಪ್ರಸನ್ನನಾಗಿ ಪ್ರತ್ಯಕ್ಷನಾದನು. ಹೀಗೆ ಪ್ರತ್ಯಕ್ಷನಾದ ಶಿವನು ಕಾಮಧೇನುವನ್ನು ಹರಸುತ್ತ ಒಂದು ನಿರ್ದಿಷ್ಟ ಸ್ಥಳದಲ್ಲಿ ತಪಸ್ಸು ಮಾಡುವಂತೆಯೂ, ಈ ಸ್ಥಳವು ಮೋಕ್ಷ ಬಯಸುವವರಿಗೆ ಹರಸುವ ಶಿವನ ಕ್ಷೇತ್ರವಾಗಿಯೂ ಪ್ರಸಿದ್ಧವಾಗುತ್ತದೆಂದು ಹೇಳಿದನು.

ಪಟ್ಟೀಶ್ವರ
ಅಲ್ಲದೆ ಇಲ್ಲಿ ಶಿವನು ಪಟ್ಟಿ ಕರುವಿನ ಕಾರಣದಿಂದಾಗಿ ಮುಂದೆ ಇಲ್ಲಿ ಪಟ್ಟೀಶ್ವರನಾಗಿ ನೆಲೆಸುವುದಾಗಿ ಹೇಳಿದನು. ಅದರಂತೆ ಈ ಕ್ಷೇತ್ರವು ಶಿವನ ಶಕ್ತಿಶಾಲಿ ಕ್ಷೇತ್ರಗಳ ಪೈಕಿ ಒಂದಾಗಿ ಹೆಸರುವಾಸಿಯಾಗಿದೆ.

ನೃತ್ಯದ ಭಂಗಿ
ಇಂದು ಈ ದೇವಾಲಯದಲ್ಲಿ ಶಿವನು ನರ್ತಿಸುತ್ತಿರುವ ಭಂಗಿಯಲ್ಲೂ ಹಾಗೂ ಪಾರ್ವತಿಯು ಪಚೈನಾಯಕಿಯಾಗಿಯೂ ನೆಲೆಸಿದ್ದಾರೆ. ಸಾಮಾನ್ಯವಾಗಿ ನರ್ತಿಸುತ್ತಿರುವ ಶಿವನ ಭಂಗಿಯು ದೇವಾಲಯಗಳಲ್ಲಿ ಒಂದೆ ತೆರನಾಗಿ ಇದ್ದರೆ, ಈ ದೇವಾಲಯದಲ್ಲಿ ತುಸು ವಿಭಿನ್ನವಾಗಿದೆ.

ಮೋಕ್ಷ ಸ್ಥಳ
PC:Ssriram mt
ಇದು ಸಾಂಕೇತಿಕವಾಗಿ ಇಲ್ಲಿ ಬಂದು ಶಿವನ ಕೃಪೆಗೆ ಪಾತ್ರರಾಗುವವರು ಜೀವನ್ಮರಣಗಳ ಚಕ್ರದಿಂದ ತಮ್ಮನ್ನು ತಾವು ಮುಕ್ತಗೊಳಿಸಿಕೊಂಡರು ಎಂದು ನಂಬಲಾಗುತ್ತದೆ. ಹಾಗಾಗಿ ಇದು ಮೋಕ್ಷ ಸ್ಥಳವಾಗಿ ಗಮನಸೆಳೆಯುತ್ತದೆ.

ಸಗಣಿಯಲ್ಲಿ ಕೀಟಗಳೇ ಆಗೋದಿಲ್ಲ
ಈ ಸ್ಥಳದಲ್ಲಿ ಕಾಣಸಿಗುವ ಸಗಣಿಯಲ್ಲಿ ಎಂದಿಗೂ ಕ್ರಿಮಿ-ಕೀಟಗಳು ಕಂಡುಬರುವುದಿಲ್ಲವಂತೆ. ಸಗಣೆಗೆ ಎಷ್ಟೇ ದಿನಗಳಾಗಿದ್ದರೂ ಅದಕ್ಕೆ ಕ್ರಿಮಿಗಳಾಗಲಿ, ಹುಳು-ಹುಪ್ಪಡಿಗಳಾಗಲೀ ಆಗೋದೆ ಇಲ್ಲ.

ಹುಣಸೆ ಬೀಜ ಮೊಳಕೆ ಒಡೆಯುವುದಿಲ್ಲ
ಇಲ್ಲಿನ ಇನ್ನೊಂದು ವಿಶೇಷವೆಂದರೆ ಈ ದೇವಾಲಯದಲ್ಲರಿವ ಹುಣಸೆ ಮರ. ಈ ಹುಣಸೆ ಮರದ ಬೀಜಗಳನ್ನು ಎಲ್ಲಿಯೆ ಆಗಲಿ ಬಿತ್ತಿದರೆ ಅದು ಮೊಳಕೆಯೊಡೆಯುವುದೆ ಇಲ್ಲವಂತೆ. ಇದೂ ಸಹ ಮತ್ತೆ ಜನನ ಹಾಗೂ ಮರಣಗಳ ಸರಪಣಿಯ ಅಂತ್ಯವನ್ನು
ಸೂಚಿಸುತ್ತದೆನ್ನಲಾಗಿದೆ.

ನೃತ್ಯದ ಉತ್ಸವ
ಇಲ್ಲಿ ಶಿವನು ನರ್ತಿಸುತ್ತಿರುವ ಕಾರಣದಿಂದಾಗಿ ಚಿದಂಬರಂ ನಂತರ ಈ ದೇವಾಲಯಕ್ಕೆ ಹೆಚ್ಚಿನ ಜನಪ್ರೀಯತೆ ಲಭಿಸಿದೆ. ವಾರ್ಷಿಕವಾಗಿ ಒಂದು ವಾರಗಳ ಕಾಲ ಶಾಸ್ತ್ರೀಯ ನೃತ್ಯ ಅಥವಾ ಭರತನಾಟ್ಯಂ ನೃತ್ಯದ ಉತ್ಸವವನ್ನು ಇಲ್ಲಿ ಅದ್ದೂರಿಯಾಗಿ ಆಚರಿಸಲಾಗುತ್ತದೆ.


Click it and Unblock the Notifications

















