ಸುಂದರ್ಬನ್ಸ್ ಅಭಯಾರಣ್ಯದ ಪ್ರವಾಸದ ಜೊತೆಗೆ ಪಶ್ಚಿಮ ಬಂಗಾಳದಲ್ಲಿ ನಡೆಯುವ ಹತ್ತು ದಿವಸಗಳ ಕಾಲ ನಡೆಯುವ ದುರ್ಗಾ ಪೂಜೆಯಲ್ಲಿಯೂ ಭಾಗವಹಿಸಿ.
ಪಶ್ಚಿಮ ಬಂಗಾಳದಲ್ಲಿ ದುರ್ಗಾ ಪೂಜೆಯು ಅತ್ಯಂತ ಪ್ರಮುಖ ಹಬ್ಬವಾಗಿದ್ದು, ಪಶ್ಚಿಮ ಬಂಗಾಳ ಸರಕಾರವು ಈ ಹಬ್ಬದ ಮೂಲಕ ಅಲ್ಲಿಯ ಸಂಸ್ಕೃತಿ ಮತ್ತು ಸಂಪ್ರದಾಯವನ್ನು ಎಲ್ಲರೂ ಅನುಭವಿಸಬೇಕೆಂದು ಬಯಸುತ್ತದೆ. ಇದನ್ನೇ ಪ್ರಮುಖವಾಗಿಟ್ಟುಕೊಂಡು ಪಶ್ಚಿಮ ಬಂಗಾಳ ಸರಕಾರವು ಹತ್ತು ದಿನಗಳ ದುರ್ಗಾ ಪೂಜೆ ಪ್ರವಾಸವನ್ನು ಸುಂದರ್ಬನ್ಸ್ ಗೆ ಪ್ರವಾಸದ ಪ್ಯಾಕೇಜ್ ಜೊತೆಗೆ ಪ್ರಾರಂಭಿಕ ಪ್ರವಾಸವನ್ನು ಆಯೋಜಿಸುತ್ತದೆ.

ಅಲ್ಲಿಯ ಪ್ರವಾಸೋದ್ಯಮದ ಸಚಿವರಾದ ಬಾಬುಲ್ ಸುಪ್ರಿಯೋ ಅವರು ಸರಕಾರಕ್ಕೆ ಪ್ರವಾಸೋದ್ಯಮವನ್ನು ಉತ್ತೇಜಿಸಲು ಹಾಗೂ ಕಾರ್ಯತಂತ್ರ ರೂಪಿಸಲು ಮತ್ತು ಮಾರ್ಗಗಳನ್ನು ಕಂಡುಕೊಳ್ಳಲು ಆತಿಥ್ಯ ವಿಭಾಗದ ವೃತ್ತಿಪರರನ್ನು ಒಳಗೊಂಡಿರುವ ಏಳು ಮಾರ್ಗಸೂಚಿಗಳನ್ನು ಸರ್ಕಾರ ಯೋಜಿಸಿದೆ ಎಂದು ತಿಳಿಸಿದರು. ಈ ಯೋಜನೆಯ ಅಡಿಯಲ್ಲಿ ಬೆಟ್ಟಗಳು ಮತ್ತು ಸಮುದ್ರ ಪ್ರದೇಶದ ಪ್ರವಾಸಿ ತಾಣಗಳೂ ಸಹ ಒಳಗೊಂಡಿದೆ.
ಪಶ್ಚಿಮ ಬಂಗಾಳದ ಬೆಟ್ಟಗಳು, ಕಾಡುಗಳು, ಸಮುದ್ರಗಳು ಇತ್ಯಾದಿಗಳು ಇವು ಎಲ್ಲದರ ಅನುಭವವೂ ಲಭ್ಯವಾಗುವಂತೆ ಹಾಗೂ ಪ್ರವಾಸಿಗರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಪ್ರಸಿದ್ದ ಪ್ರವಾಸಿ ತಾಣವನ್ನಾಗಿಸಲು ಸಹಾಯ ಮಾಡುವ ಖಾಸಗಿ ಮತ್ತು ಸಾರ್ವಜನಿಕ ವಲಯಗಳಿಗೆ ಪ್ರಯೋಜನಕಾರಿ ಯೋಜನೆಗಳನ್ನು ಪ್ರಾರಂಭಿಸುವುದು ಸಚಿವ ಸುಪ್ರಿಯೊ ಅವರ ಉದ್ದೇಶವಾಗಿದೆ. ರಾಜ್ಯದ ಪ್ರವಾಸೋದ್ಯಮವನ್ನು ಇನ್ನಷ್ಟು ಉತ್ತೇಜಿಸುವ ಸಲುವಾಗಿ ನದಿಯುದ್ದಕ್ಕೂ ಪ್ರವಾಸೋದ್ಯಮ ಸರ್ಕ್ಯೂಟ್‌ಗಳನ್ನು ಪರಿಚಯಿಸುವ ಯೋಜನೆ ಇದೆ ಎಂದು ಹೇಳಿಕೆ ನೀಡಿದ್ದಾರೆ.

ಹತ್ತು ದಿನಗಳ ಪ್ಯಾಕೇಜ್ ಪ್ರವಾಸದಲ್ಲಿ ದುರ್ಗಾಪೂಜೆಯೂ ಸೇರಿದ್ದು ಅದರ ಹಲವಾರು ಅನುಭವಗಳನ್ನು ಪಡೆಯಬಹುದಾಗಿದೆ. ಪ್ರವಾಸಿಗರು 15 ದಿವಸಗಳ ಗಂಗಾಸಾಗರ್ ಪ್ಯಾಕೇಜ್ ನೊಂದಿಗೆ ತಮ್ಮ ಪ್ರವಾಸವನ್ನು ಪ್ರಾರಂಭಿಸುತ್ತಿದ್ದಲ್ಲಿ, ಇದು ಕ್ರೂಸ್ ನಲ್ಲಿ ಪ್ರವಾಸದ ಆಯ್ಕೆಯನ್ನು ಹೊಂದಿರುತ್ತದೆ ಅಲ್ಲಿ ಪ್ರವಾಸಿಗರು ಬಾಬುಘಾಟ್‌ನಿಂದ ಕ್ರೂಸ್ ಅನ್ನು ಹತ್ತಬಹುದು ಮತ್ತು ಅಂತಿಮವಾಗಿ ಸಾಗರ್ ದ್ವೀಪಗಳನ್ನು ತಲುಪಲು ವಿವಿಧ ಘಾಟ್‌ಗಳಿಗೆ ಭೇಟಿ ನೀಡಬಹುದು. ಈ ಪ್ಯಾಕೇಜ್ ಸುಂದರಬನ್ಸ್ ಪ್ರವಾಸವನ್ನೂ ಒಳಗೊಂಡಿರುತ್ತದೆ.

ವರದಿಗಳ ಪ್ರಕಾರ ಬಂಗಾಳವು ದೇಶೀಯ ಪ್ರವಾಸಿಗರನ್ನು ಆಕರ್ಷಿಸುವಲ್ಲಿ 5ನೇ ಸ್ಥಾನ ಹಾಗೂ ಅಂತರಾಷ್ಟ್ರೀಯ ಪ್ರವಾಸಿಗರನ್ನು ಆಕರ್ಷಿಸುವಲ್ಲಿ ಏಳನೇ ಸ್ಥಾನದಲ್ಲಿದೆ ಎಂದು ಸಚಿವರು ಹೇಳಿಕೆ ನೀಡಿದ್ದಾರೆ. ಅಲ್ಲದೆ ಪ್ರವಾಸೋದ್ಯಮದ ಶ್ರೇಯಾಂಕವನ್ನು ಇನ್ನಷ್ಟು ಸುಧಾರಿಸಲು ಮತ್ತು ಉತ್ನತ ಸ್ಥಾನಗಳನ್ನು ತಲುಪಲು ಇನ್ನಷ್ಟು ಶ್ರಮವಹಿಸುವುದಾಗಿ ಭರವಸೆ ನೀಡಿದ್ದಾರೆ.


Click it and Unblock the Notifications
















