• Follow NativePlanet
Share
Menu
» »ಈ ದೇವಾಲಯದಲ್ಲಿರುವುದೆಲ್ಲಾ ನಂಬಲು ಅಸಾಧ್ಯವಾದ ವಿಶೇಷಗಳೇ

ಈ ದೇವಾಲಯದಲ್ಲಿರುವುದೆಲ್ಲಾ ನಂಬಲು ಅಸಾಧ್ಯವಾದ ವಿಶೇಷಗಳೇ

Written By:

ದೇವಾಲಯಗಳಲ್ಲಿಯೂ ಸಾಮಾನ್ಯವಾಗಿ ಒಂದು ಅಥವಾ ಎರಡು ವಿಶೇಷಗಳಿದ್ದರೆ, ಈ ಲೇಪಾಕ್ಷಿ ದೇವಾಲಯದಲ್ಲಿ ಇರವುದೆಲ್ಲಾ ವಿಶೇಷಗಳೇ. ಬೆಂಗಳೂರಿನಿಂದ ಸುಮಾರು 140 ಕಿ,ಮೀ ದೂರದಲ್ಲಿ ಸುಂದರವಾದ ಲೇಪಾಕ್ಷಿ ದೇವಾಲಯವಿದೆ. ದೇವಾಲಯದಿಂದ ಸ್ವಲ್ಪ ದೂರದಲ್ಲಿಯೇ ಬೃಹದಾಕಾರದ ನಂದಿ ಇದೆ. ವಿಶೇವೆನೆಂದರೆ ಈ ನಂದಿ ಭಾರತದಲ್ಲಿಯೇ ಅತಿ ಎತ್ತರವಾದ ನಂದಿ ವಿಗ್ರಹವಾಗಿದೆ. ಈ ದೇವಾಲಯಕ್ಕೆ ರಾಮಾಯಾಣದ ಕಥೆಯನ್ನು ಕೂಡ ಅವಲಂಬಿಸಿದೆ.

ಇಲ್ಲಿನ ಪ್ರವಾಸಿ ಆಕರ್ಷಣೆಯೆಂದರೆ ಬೃಹತ್ ಗಾತ್ರದ ನಂದಿ, ವೀರಭಧ್ರ ದೇವಾಲಯ, ನಾಟ್ಯ ಮಂಟಪ, ತೇಲಾಡುವ ಸ್ತಂಭ, ಪಂಚ ಲಿಂಗ, ಅಪೂರ್ಣ ಕಲ್ಯಾಣ ಮಂಟಪ, ರಕ್ತದ ಕಲೆ, ಸೀತಾ ಮಾತಾ ಕಾಲಿನ ಗುರುತು ಇನ್ನೂ ಹಲವಾರು. ಈ ಸುಂದರವಾದ ದೇವಾಲಯವನ್ನು ಜೀವನದಲ್ಲಿ ಒಮ್ಮೆಯಾದರೂ ನೋಡಲೇಬೇಕು ಎಂದು ದೇಶದ ಮೂಲೆ ಮೂಲೆಗಳಿಂದಲೇ ಅಲ್ಲದೇ ವಿದೇಶಗಳಿಂದಲೂ ಕೂಡ ಈ ಅದ್ಭುತಗಳಿರುವ ದೇವಾಲಯಕ್ಕೆ ಭೇಟಿ ನೀಡುತ್ತಾರೆ.

ಪ್ರಸ್ತುತ ಲೇಖನದಲ್ಲಿ ಲೇಪಾಕ್ಷಿ ದೇವಾಲಯದಲ್ಲಿರುವ ವಿಶೇಷದ ಬಗ್ಗೆ ತಿಳಿಯೋಣ.

ನಿರ್ಮಿಸಿದವರು

ನಿರ್ಮಿಸಿದವರು

ಈ ಮಹೋನ್ನತ ದೇವಾಲಯವನ್ನು ನಿರ್ಮಿಸಿದ ರಾಜ ಮನೆತನವೆಂದರೆ ವಿಜಯನಗರ ಸಾಮ್ರಾಜ್ಯದ ಅರಸರು. ಕೃಷ್ಣ ದೇವಾರಾಯನ ಕಾಲದಲ್ಲಿ ಅಚ್ಚುತರಾಯನ ಕಾಲದಲ್ಲಿ ಪೆನಗುಂಡ ಪ್ರದೇಶಕ್ಕೆ ಕೋಶಾಧಿಕಾರಿಯಾಗಿದ್ದ ವಿರೂಪಣ್ಣನು ಈ ದೇವಾಲಯವನ್ನು ನಿರ್ಮಿಸಿದ ಎಂದು ಇತಿಹಾಸ ಹೇಳುತ್ತದೆ.


PC:Premnath Thirumalaisamy

ಪುರಾಣ

ಪುರಾಣ

ಈ ದೇವಾಲಯದ ಬಗ್ಗೆ ಪುರಾಣಗಳಲ್ಲೂ ಉಲ್ಲೇಖವಿರುವುದನ್ನು ಕಾಣಬಹುದಾಗಿದೆ. ರಾಮಾಯಣದ ಕಾಲದಲ್ಲಿ ರಾವಣ ಸೀತೆಯನ್ನು ಅಪಹರಿಸಿಕೊಂಡು ಹೋಗುವಾಗ ಜಟಾಯು ಎಂಬ ಪಕ್ಷಿಯು ರಾವಣನನ್ನು ತಡೆಯಲು ಪ್ರಯತ್ನ ಮಾಡಿತಂತೆ. ಆಗ ಕೋಪಗೊಂಡ ರಾವಣನು ಪಕ್ಷಿಯ ರೆಕ್ಕೆಗಳನ್ನು ಕತ್ತರಿಸಿದನಂತೆ. ಕೆಳಗೆ ಬಿದ್ದ ಪಕ್ಷಿಯು ರಾಮನಿಗೆ ಈ ಸಂಗತಿಯನ್ನು ಜಟಾಯು ತಿಳಿಸಿತಂತೆ. ಆಗ ರಾಮನು ಜಟಾಯುವಿಗೆ ಲೇ ಪಕ್ಷೀ ಎಂದು ಕರೆದನಾದ್ದರಿಂದ ಆ ಪ್ರದೇಶಕ್ಕೆ ಲೇಪಾಕ್ಷಿ ಎಂದು ಹೆಸರು ಬಂದಿತ್ತು.


PC:: Indi Samarajiva

ನಂದಿ

ನಂದಿ

ನಂದಿಯನ್ನು ಅತ್ಯಂತ ಸುಂದರವಾಗಿ ಹಾಗೂ ಸೂಕ್ಷ್ಮವಾಗಿ ಕೆತ್ತನೆಯನ್ನು ಮಾಡಲಾಗಿದೆ. ನಂದಿಗೆ ಕುತ್ತಿಗೆಗೆ ಇರಬೇಕಾದ ಘಂಟೆಗಳು, ಚೂಪಾದ ಕಿವಿಗಳು, ಏಕಾಗ್ರತೆಯಿಂದ ನೋಟ ಬೀರುತ್ತಿರುವ ನಂದಿ ಶೃಗಾಂರಯುತವಾಗಿ ಕೆತ್ತನೆ ಮಾಡಲಾಗಿದೆ. ಸುಮಾರು 15 ಅಡಿ ಎತ್ತರ ಹಾಗೂ 27 ಅಡಿ ಅಗಲವಿರುವ ಈ ನಂದಿಯು ಅತ್ಯಂತ ಬೃಹತ್ ಗಾತ್ರದಲ್ಲಿದ್ದು ಭಾರತದಲ್ಲಿಯೇ ಅತಿ ಎತ್ತರವಾದ ನಂದಿ ವಿಗ್ರಹವಾಗಿ ಪ್ರಸಿದ್ಧಿಯನ್ನು ಪಡೆದಿದೆ. ಈ ನಂದಿಯು ಪ್ರವಾಸಿಗರನ್ನು ಸ್ವಾಗತಿಸುತ್ತದೆ.


PC:: Nagesh Kamath

ವೀರಭಧ್ರ ದೇವಾಲಯ

ವೀರಭಧ್ರ ದೇವಾಲಯ

ಲೇಪಾಕ್ಷಿಯಲ್ಲಿ ಆತ್ಯಂತ ಆಕರ್ಷಣೆ ಎಂದರೆ ವೀರಭಧ್ರ ಸ್ವಾಮಿ ದೇವಾಲಯ. ಈ ದೇವಾಲಯವು ಮಹಾ ಶಿವನಿಗೆ ಸಂಬಂಧಿಸಿ ದೇವಾಲಯವಾಗಿದೆ. ಪುರಾಣಗಳ ಪ್ರಕಾರ ಈ ದೇವಾಲಯವು ಶಿವನ ಪ್ರಸಿದ್ಧವಾದ ತೀರ್ಥಕ್ಷೇತ್ರಗಳಲ್ಲಿ ಇದೂ ಕೂಡ ಒಂದು ಎಂದು ಉಲ್ಲೇಖಿಸಲಾಗಿದೆ. ಲೇಪಾಕ್ಷಿ ದೇವಾಲಯದ ಗರ್ಭಗುಡಿಯಲ್ಲಿ ವೀರಭದ್ರಸ್ವಾಮಿ ನೆಲೆಸಿದ್ದಾನೆ.


PC:Indi Samarajiva

ಪಂಚ ಲಿಂಗಗಳು

ಪಂಚ ಲಿಂಗಗಳು

ಪಂಚಲಿಂಗಗಳಲ್ಲಿ 3 ಲಿಂಗಗಳು ದೇವಾಲಯದ ಒಳಭಾಗದಲ್ಲಿದ್ದರೆ ಇನ್ನೂ ಉಳಿದ 2 ಶಿವಲಿಂಗವು ದೇವಾಲಯದ ಹೊರಭಾಗದಲ್ಲಿದೆ. ಒಳಭಾಗದಲ್ಲಿರುವ 3 ಶಿವಲಿಂಗಗಳು ಯಾವುವೆಂದರೆ ಪಾಪವೇನಾಶ್ವರ, ರಾಮಲಿಂಗೇಶ್ವರ ಮತ್ತು ಹನುಮಾನ ಲಿಂಗ. ಇನ್ನೂ ಉಳಿದ 2 ಶಿವಲಿಂಗ ದೇವಾಲಯದ ಪ್ರಾಂಗಣದಲ್ಲಿದೆ. ದೇವಾಲಯದ ಒಳಭಾಗದಲ್ಲಿ ಪಾರ್ವತಿ ದೇವಿ, ಭಧ್ರಕಾಳಿ, ದುರ್ಗ, ವಿಷ್ಣು ಹಾಗೂ ಗಣಪತಿ ಮೂರ್ತಿಗಳನ್ನು ಇಲ್ಲಿ ಕಾಣಬಹುದಾಗಿದೆ.


PC:Premnath Thirumalaisamy

ಚಿತ್ರಗಳು

ಚಿತ್ರಗಳು

ದೇವಾಲಯದ ಒಳಭಾಗದಲ್ಲಿ ಅರ್ಧನಾರೀಶ್ವರ, ವಿಷ್ಣು ಮೂರ್ತಿಯ ಚಿತ್ರಗಳನ್ನು ಇಲ್ಲಿ ಕಾಣಬಹುದಾಗಿದೆ. ಇಲ್ಲಿ ಹಲವಾರು ರೀತಿಯ ಭಂಗಿಗಳ ರಮಣೀಯ ಶಿಲ್ಪಕಲೆಗಳಿವೆ. ಅವುಗಳಲ್ಲಿ ಅತಿ ಮುಖ್ಯವಾದುವು ಎಂದರೆ ವಾಸ್ತು ಪುರುಷ ಹಾಗೂ ಪದ್ಮಿನಿ. ಇಲ್ಲಿ ವಿಜಯ ನಗರದ ಆಳ್ವಿಕೆಯನ್ನು ಗುರುತಿಸುವ ಹಲವಾರು ಚಿತ್ರಗಳನ್ನು ಕಾಣಬಹುದಾಗಿದೆ.


PC:Vishal Prabhu

ನಾಟ್ಯ ಮಂಟಪ

ನಾಟ್ಯ ಮಂಟಪ

ನಾಟ್ಯ ಮಂಟಪದಲ್ಲಿ ಹಲವಾರು ಸುಂದರವಾದ ಸ್ತಂಭಗಳಿದ್ದು. ಮೇಲ್ಚಾವಣಿಯು ಕಮಲಾಕಾರದ ಕೆತ್ತನೆಯಿಂದ ಕಂಗೊಳಿಸುತ್ತಿದೆ. ಇದನ್ನು ಶತಪತ್ರ ಕಮಲ ಎಂದೂ ಸಹ ಕರೆಯುತ್ತಾರೆ. ಇಲ್ಲಿ ನಾಟ್ಯ ಮಯೂರಿ ರಂಭಳ ಶಿಲ್ಪವನ್ನೂ ಕೂಡ ಕಾಣಬಹುದಾಗಿದೆ. ಇಲ್ಲಿನ ಮತ್ತೊಂದು ಅತ್ಯದ್ಭುತವಾದ ಶಿಲ್ಪವೆಂದರೆ ಬೃಗೇಶ್ವರ. ಈ ಬೃಗೇಶ್ವರನು 3 ಕಾಲನ್ನು ಹೊಂದಿದ್ದು ರಂಬೆಯ ಜೊತೆ ನಾಟ್ಯ ಮಾಡುತ್ತಿರುವ ಭಂಗಿಯಲ್ಲಿ ಶಿಲ್ಪವನ್ನು ಕೆತ್ತನೆ ಮಾಡಲಾಗಿದೆ.


PC:Vishal Prabhu

ಶಿಲ್ಪಗಳು

ಶಿಲ್ಪಗಳು

ಇಲ್ಲಿ ಹಲವಾರು ಕಣ್‍ಮನ ಸೆಳೆಯುವ ಶಿಲ್ಪಗಳಿದ್ದೂ ಅವುಗಳಲ್ಲಿ ಮಹಾ ಶಿವನು ಬೀಕ್ಷಾಟನೆ ಮಾಡುತ್ತಿರುವ ಶಿಲ್ಪವಂತೂ ಅತ್ಯಂತ ಅಮೋಘವಾಗಿ ಕೆತ್ತನೆ ಮಾಡಲಾಗಿದೆ. ಶಿವ, ಪಾರ್ವತಿ, ವಿಷ್ಣು, ಸೂರ್ಯದೇವ, ವರಹ ಸ್ವಾಮಿ, ರಂಭೆ ಹೀಗೆ ಇನ್ನೂ ಹಲವಾರು ರೀತಿಯ ಸೊಗಸಾದ ಶಿಲ್ಪಗಳನ್ನು ಕಾಣಬಹುದಾಗಿದೆ.

PC:Premnath Thirumalaisamy

ಆಶ್ಚರ್ಯಕರವಾದ ಸ್ತಂಭ

ಆಶ್ಚರ್ಯಕರವಾದ ಸ್ತಂಭ

ಲೇಪಾಕ್ಷೀ ದೇವಾಲಯದಲ್ಲಿನ ಸ್ತಂಭಗಳಲ್ಲಿ ಒಂದು ಸ್ತಂಭ ಸುಮಾರು 8 ಅಡಿ ಎತ್ತರವಿದ್ದು ಭೂಮಿಯ ಮೇಲೆ ನಿಲ್ಲದೆ ಇರುವುದು ವಿಶ್ವ ವಿಖ್ಯಾತ ಆಶ್ಚರ್ಯಕ್ಕೆ ಗುರಿ ಮಾಡಿದೆ. ಈ ಸುಂದರ ಹಾಗೂ ಕೂತುಹಲಕರವಾದ ಸ್ತಂಭವು ನಾಟ್ಯ ಮಂಟಪದ ಉತ್ತರ ದಿಕ್ಕಿಗೆ ಇದೆ. ಈ ಸ್ತಂಭವನ್ನು ಮೂಲ ಸ್ತಂಭ ಮತ್ತು ಅಂತರಿಕ್ಷ ಸ್ತಂಭ ಎಂದು ಸಹ ಕರೆಯುತ್ತಾರೆ. ಈ ಸ್ತಂಭವು ಭೂಮಿಯಿಂದ ಅರ್ಥ ಇಂಚು ಎತ್ತರದಲ್ಲಿರುವುದನ್ನು ಕಾಣಬಹುದಾಗಿದೆ. ಇಲ್ಲಿಗೆ ಬರುವ ಹಲವಾರು ಪ್ರವಾಸಿಗರು ಈ ಸ್ತಂಭವನ್ನು ಪರೀಕ್ಷಿಸಲು ಇಷ್ಟ ಪಡುತ್ತಾರೆ.

PC:Nagesh Kamath

ನಾಗಲಿಂಗ

ನಾಗಲಿಂಗ

ದೇವಾಲಯದ ಪ್ರಾಂಗಣದಲ್ಲಿ ಒಂದು ಸುಂದರವಾದ ನಾಗಲಿಂಗವಿದೆ. ಶಿವಲಿಂಗದ ಮೇಲೆ 7 ಹೆಡೆಯನ್ನು ಎತ್ತಿರುವ ನಾಗಗಳನ್ನು ಕಾಣಬಹುದಾಗಿದೆ. ಈ ನಾಗಲಿಂಗಕ್ಕೆ ಅದ್ಭುತವಾದ ಇತಿಹಾಸವಿದೆ. ಪ್ರಧಾನ ಶಿಲ್ಪಿ ಊಟ ಮಾಡಲು ಬಂದಾಗ ಅವರ ತಾಯಿ ಇನ್ನೂ ಅಡುಗೆ ತಯಾರು ಮಾಡುತ್ತಿದ್ದ ಕಾರಣ ಈ ನಾಗಲಿಂಗವನ್ನು ಕೆತ್ತಿದರಂತೆ. ತಾಯಿ ಅಡುಗೆ ಮುಗಿಸಿ ಮಗನನ್ನು ಕರೆಯಲು ಬಂದಾಗ ಎದುರಿಗಿದ್ದ ಶಿವಲಿಂಗವನ್ನು ಕಂಡು ಆಶ್ಚರ್ಯ ಪಟ್ಟಾಗ ಅವಳ ಕಣ್ಣು ತಾಗಿ ನಾಗಲಿಂಗವು ಬಿರುಕು ಬಿಟ್ಟಿತಂತೆ.


PC:Premnath Thirumalaisamy

ಅಪೂರ್ಣ ಕಲ್ಯಾಣ ಮಂಟಪ

ಅಪೂರ್ಣ ಕಲ್ಯಾಣ ಮಂಟಪ

ನಾಗಲಿಂಗದ ಹಿಂಭಾಗದಲ್ಲಿ ಈ ಅಪೂರ್ಣವಾದ ಕಲ್ಯಾಣ ಮಂಟಪವನ್ನು ಕಾಣಬಹುದಾಗಿದೆ. ಈ ಅಪೂರ್ಣ ಕಲ್ಯಾಣ ಮಂಟಪದ ಹಿಂದೆ ಒಂದು ದುರಂತ ಇತಿಹಾಸವಿದೆ. ಅದೇನೆಂದರೆ ವೀರೂಪಣ್ಣ ನಾಯಕ್ ತನ್ನ ತಪ್ಪು ಏನೂ ಇಲ್ಲದಿದ್ದರೂ ಅರೋಪ ಮಾಡಿದ್ದನ್ನು ತಡೆದುಕೊಳ್ಳಲಾರದ. ಹಾಗಾಗಿ ಪ್ರಾಮಾಣಿಕ ವೀರೂಪಣ್ಣ ನಾಯಕ್ ತನ್ನ 2 ಕಣ್ಣುಗಳನ್ನು ಕ್ಕಿತ್ತು ನೀಡಿದ. ಈಗಲೂ ಆತನ ರಕ್ತದ ಕಲೆಗಳು ಅಲ್ಲಿಯೇ ಇರುವುದನ್ನು ನಾವು ಕಾಣಬಹುದಾಗಿದೆ.


PC:Vishal Prabhu

ಸೀತ ಮಾತಾ ಬಲ ಕಾಲು

ಸೀತ ಮಾತಾ ಬಲ ಕಾಲು

ರಾಮಾಯಣದ ಕಾಲದಲ್ಲಿ ರಾವಣ ಸೀತೆಯನ್ನು ಅಪಹರಿಸಿಕೊಂಡು ಹೋಗುವಾಗ ಜಟಾಯು ಎಂಬ ಪಕ್ಷಿಯು ರಾವಣನನ್ನು ತಡೆಯಲು ಪ್ರಯತ್ನ ಮಾಡಿತಂತೆ. ಇಲ್ಲಿ ಸೀತ ಮಾತಾಳ ಬಲ ಕಾಲಿನ ಗುರುತನ್ನು ಕಾಣಬಹುದಾಗಿದೆ. ಇಲ್ಲಿ ಸದಾ ನೀರು ಚಿಮ್ಮತ್ತಿರುತ್ತದೆ. ಇದು ಎಲ್ಲಿಂದ ಬರುತ್ತಿದೆ ಎಂಬುದು ಇನ್ನೂ ನಿಗೂಢವಾಗಿಯೇ ಇದೆ.

PC:Premnath Thirumalaisamy

5 ನೇ ಶಿವಲಿಂಗ

5 ನೇ ಶಿವಲಿಂಗ

ದೇವಾಲಯದ ಪ್ರಾಂಗಣದಲ್ಲಿರುವ ಕೊನೆಯ ಶಿವಲಿಂಗವೆಂದರೆ ತಾಂಡವೇಶ್ವರ ಶಿವಲಿಂಗ. ಇದೊಂದು ಅದ್ಭುತವಾದ ಶಿವಲಿಂಗವಾಗಿದ್ದು, ಈ ದೇವಾಲಯದಲ್ಲಿ ಮಹಾ ಶಿವರಾತ್ರಿಯಂದು ವಿಜೃಂಭಣೆಯಿಂದ ಉತ್ಸವಗಳನ್ನು ಆಚರಿಸಲಾಗುತ್ತದೆ.


PC:Nishanth Jois

ಪ್ರಯಾಣ

ಪ್ರಯಾಣ

ಸುಂದರವಾದ ಲೇಪಾಕ್ಷಿ ದೇವಾಲಯಕ್ಕೆ ಹಿಂದೂಪೂರದಿಂದ ಸುಮಾರು 15 ಕಿ,ಮೀ ದೂರ ಹಾಗೂ ಬೆಂಗಳೂರಿನಿಂದ ಸುಮಾರು 140 ಕಿ,ಮೀ ದೂರದಲ್ಲಿದೆ.

PC:Premnath Thirumalaisamy



ಪ್ರವಾಸದ ಬಗ್ಗೆ ಇನ್ನಷ್ಟು ಮಾಹಿತಿ, ಪ್ರವಾಸದ ಸಲಹೆಗಳು ಹಾಗೂ ಪ್ರವಾಸ ಲೇಖನಗಳನ್ನು ಪಡೆಯಿರಿ