ಆಗಸದಲ್ಲಿ ಹಾರಾಡುವ ಹಕ್ಕಿಗಳ ಕಲರವದ ಇಂಪಾದ ಸಂಗೀತದ ಮುಂದೆ ಸಿಂಹ ಘರ್ಜನೆಯ ಹೊತ್ತ ಉಕ್ಕಿನ ಹಕ್ಕಿಗಳು ನೋಡುಗರ ರೋಮ ರೋಮಗಳನ್ನು ಸೆಟೆಸಿ ನಿಲ್ಲಿಸುವ ಅದ್ಭುತ ಸಾಮರ್ಥ್ಯವನ್ನು ಹೊಂದಿರುತ್ತವೆ. ಹಕ್ಕಿಗಳ ಚಿಲಿಪಿಲಿ ಮನಸ್ಸನ್ನು ಶಾಂತಚಿತ್ತ ಹಾಗೂ ಪ್ರಸನ್ನಗೊಳಿಸಿದರೆ, ಉಕ್ಕಿನ ಹಕ್ಕಿಗಳ ಸಿಡಿಮಿಡಿ ಉತ್ಸಾಹ, ಹುಮ್ಮಸ್ಸನ್ನು ಇಮ್ಮಡಿಗೊಳಿಸುತ್ತದೆ.
8000 ರೂ. ಗಳವರೆಗೆ ಕಡಿತ : ಎಲ್ಲ ಉಚಿತ ಕೂಪನ್ನುಗಳನ್ನು ಪಡೆಯಿರಿ
ನವರಸಗಳನ್ನು ತುಂಬಿಕೊಂಡು ಹೊತ್ತು ನಿಂತ ಮನುಷ್ಯನಿಗೆ ಮಾತ್ರ ಎಲ್ಲ ರಸಗಳ ಆನಂದ ಬೇಕೇ ಬೇಕು. ನೀವು ಹಕ್ಕಿಗಳ ಇಂಪಾದ ಕೂಗುಗಳನ್ನು ಅದೇಷ್ಟೊ ಬಾರಿ ಆಸ್ವಾದಿಸಿ ತುಸು ಬೇಸರ ಹೊಂದಿದ್ದರೆ, ಕೊಂಚ ಸಮಯ ಮಾಡಿಕೊಂಡು ಉಕ್ಕಿನ ಹಕ್ಕಿಗಳ ಭೋರ್ಗೆರೆವ ನಾದಕ್ಕೆ ಮನಸೋಲಲು ಸಜ್ಜಾಗಿ, ಅದೂ ಪ್ರತಿ ಎರಡು ವರ್ಷಕ್ಕೊಮ್ಮೆ.
ವಿಶೇಷ ಲೇಖನ : ಹಸಿರು ಪಥದ ಪ್ರವಾಸ
ಹೌದು, ಭಾರತೀಯ ವೈಮಾನಿಕ ಪ್ರದರ್ಶನ ಪ್ರತಿ ಎರಡು ವರ್ಷಕ್ಕೊಮ್ಮೆ ಬೆಂಗಳೂರಿನಲ್ಲಿ ಆಯೋಜಿಸಲ್ಪಡುತ್ತದೆ. ದೇಶ, ವಿದೇಶಗಳ ನೂರಾರು ವಿಮಾನಗಳು ತಮ್ಮ ಕರಾಮತ್ತನ್ನು, ಶಕ್ತಿಯನ್ನು ನೆರೆ ನಿಂತ ಸಾವಿರಾರು ಪ್ರೇಕ್ಷಕರ ಮುಂದೆ ಅನಾವರಣಗೊಳಿಸಲೆಂದು ಬಂದು ನಿಂತಿರುತ್ತವೆ. 1996 ರಲ್ಲಿ ಮೊದಲ ಬಾರಿಗೆ ಆಯೋಜನೆಗೊಂಡ ಈ ವಿಮಾನ ಹಾರಾಟಗಳ ಪ್ರದರ್ಶನವು ಸತತವಾಗಿ ಮುಂದುವರೆಯುತ್ತ ಇಂದು ಏಷಿಯಾ ಖಂಡದಲ್ಲೆ ಅತಿ ದೊಡ್ಡದಾಗಿ ನಡೆಯುವ ವೈಮಾನಿಕ ಪ್ರದರ್ಶನ ಎಂಬ ಕೀರ್ತಿಗೆ ಪಾತ್ರವಾಗಿದೆ.
ವಿಶೇಷ ಲೇಖನ : ಭಾರತದಲ್ಲಿರುವ ಪ್ರಮುಖ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳು
ಪ್ರಸ್ತುತ 2015 ರ 10 ನೆಯ ಆವೃತ್ತಿಯ ವೈಮಾನಿಕ ಪ್ರದರ್ಶನವು ಇದೆ ಫೆಬ್ರುವರಿ 18 ರಿಂದ 22 ರ ವರೆಗೆ ಬೆಂಗಳೂರಿನ ಯಲಹಂಕ ವಾಯುನೆಲೆಯಲ್ಲಿ ಆಯೋಜನೆಗೊಂಡಿದೆ. ಬನ್ನಿ ಈ ಲೇಖನದ ಮೂಲಕ ಈ ವೈಮಾನಿಕ ಪ್ರದರ್ಶನದ ಕುರಿತು ಸಂಕ್ಷೀಪ್ತ ಮಾಹಿತಿ ಹಾಗೂ ಹಿಂದಿನ ಪ್ರದರ್ಶನಗಳಲ್ಲಿ ಕಂಡುಬಂದ ವಿವಿಧ ವಿಮಾನಗಳು ಬಾನಲ್ಲಿ ಮೂಡಿಸಿದ ಚಿತ್ತಾರಗಳ ಕುರಿತು ತಿಳಿಯೋಣ ಹಾಗೂ ನೋಡೋಣ. ಪ್ರವಾಸದ ಒಂದು ಭಾಗವೂ ಆಗಿರುವ ಈ ರೀತಿಯ ಪ್ರದರ್ಶನಗಳು ಮನುಷ್ಯನಿಗೆ ಒಂದು ವಿನೂತನ ಹಾಗೂ ವಿಶಿಷ್ಟ ಅನುಭವವನ್ನು ಕರುಣಿಸುತ್ತದೆ ಅಲ್ಲದೆ ನಮ್ಮ ದೇಶದ ಮೇಲೆ ನಮಗಿರುವ ಹೆಮ್ಮೆಯನ್ನು ದ್ವಿಗುಣಗೊಳಿಸುತ್ತದೆ.
ವಿ.ಸೂ : ಇಲ್ಲಿ ಪ್ರಸ್ತುತಪಡಿಸಲಾಗಿರುವ ಚಿತ್ರಗಳು ಹಿಂದಿನ ಏರೋ ಇಂಡಿಯಾ ಪ್ರದರ್ಶನಗಳದ್ದು.

ಉಕ್ಕಿನ ಹಕ್ಕಿಗಳ ಆರ್ಭಟ:
ಪ್ರತಿ ಎರಡು ವರ್ಷಗಳಿಗೊಮ್ಮೆಈ ವೈಮಾನಿಕ ಪ್ರದರ್ಶನವು, ಮುಖ್ಯವಾಗಿ ಕೇಂದ್ರ ರಕ್ಷಣಾ ಸಚಿವಾಲಯದಿಂದ ಆಯೋಜಿಸಲ್ಪಡುತ್ತದೆ. ಪ್ರತಿ ಬಾರಿಯೂ ಇದು ಯಲಹಂಕ ವಾಯು ನೆಲೆಯಲ್ಲಿ ಪ್ರದರ್ಶನಗೊಳ್ಳುವುದು ವಿಶೇಷ. ಈ ಪ್ರದರ್ಶನದಲ್ಲಿ ವಿವಿಧ ದೇಶಗಳ ವಾಯುಪಡೆ ಅಧಿಕಾರಿಗಳು, ಖಾಸಗಿ ವೈಮಾನಿಕ ಉದ್ಯಮದ ಅಧಿಕಾರಿಗಳು, ಉದ್ಯಮಿಗಳು ಹಾಗೂ ರಾಜಕೀಯ ಮುಖಂಡರಲ್ಲದೆ ಸಾರ್ವಜನಿಕರೂ ಸಹ ಪಾಲ್ಗೊಳ್ಳುತ್ತಾರೆ. ಭಾರತೀಯ ವಾಯುಪಡೆಯ ಸೂರ್ಯಕಿರಣ್ ವಿಮಾನಗಳು.
ಚಿತ್ರಕೃಪೆ: Phaneesh N

ಉಕ್ಕಿನ ಹಕ್ಕಿಗಳ ಆರ್ಭಟ:
ಪ್ರಮುಖವಾಗಿ ಸಾರ್ವಜನಿಕರಿಗೆ ಇದರಲ್ಲಿ ಪ್ರದರ್ಶನಗೊಳ್ಳುವ ವಿವಿಧ ದೇಶಗಳ ಅತ್ಯಾಧುನಿಕ ವಿಮಾನುಗಳನ್ನು ಹಾಗೂ ಅವುಗಳ ಹಾರಾಡುವ ಸಾಮರ್ಥ್ಯವನ್ನು ಪ್ರತ್ಯಕ್ಷವಾಗಿ ನೋಡಿ ಆನಂದಿಸುವ ದೃಷ್ಟಿಯಿಂದ ಭಾಗವಹಿಸಲು ಅವಕಾಶ ಕಲ್ಪಿಸಲಾಗಿದೆ. ಅಮೇರಿಕದ C-17 ಎಂಬ ವಿಶಾಲಕಾಯದ ವಿಮಾನ.
ಚಿತ್ರಕೃಪೆ: US Consulate Chennai

ಉಕ್ಕಿನ ಹಕ್ಕಿಗಳ ಆರ್ಭಟ:
ಕೇವಲ ರಕ್ಷಣಾ ಸಚಿವಾಲಯವಲ್ಲದೆ, ಭಾರತೀಯ ವಾಯುಪಡೆ, ಬಾಹ್ಯಾಕಾಶ ಇಲಾಖೆ, ಡಿಆರ್‌ಡಿಒ ಹಾಗೂ ಕೇಂದ್ರ ನಾಗರಿಕ ವಿಮಾನಯಾನ ಇಲಾಖೆಗಳೂ ಸಹ ಈ ಪ್ರದರ್ಶನದ ಆಯೋಜನೆಲ್ಲಿ ತಮ್ಮ ಕೈಜೋಡಿಸುತ್ತವೆ. ಪ್ರಸ್ತುತ ಇದು ಏಷಿಯಾ ಖಂಡದಲ್ಲೆ ದೊಡ್ಡದಾದ ವೈಮಾನಿಕ ಪ್ರದರ್ಶನವಾಗಿದೆ.
ಚಿತ್ರಕೃಪೆ: US Consulate Chennai

ಉಕ್ಕಿನ ಹಕ್ಕಿಗಳ ಆರ್ಭಟ:
ಇನ್ನೂ ಈ ಪ್ರದರ್ಶನದಲ್ಲಿ ದೇಶ ವಿದೇಶಗಳ ಖಾಸಗಿ ವೈಮಾನಿಕ ಕಂಪನಿಗಳು ಹಾಗೂ ಇತರೆ ದೇಶಗಳೂ ಸಹ ತಮ್ಮಲ್ಲಿರುವ ಯುದ್ಧ ಮತ್ತು ವಾಣಿಜ್ಯ ವಿಮಾನಗಳು ಹಾಗೂ ಅದರ ಉತ್ಪನಗಳನ್ನು ಮಾರಾಟ ಮಾಡುವ ನಿಟ್ಟಿನಲ್ಲಿ ಇದರಲ್ಲಿ ಭಾಗವಹಿಸುತ್ತವೆ. ಅಂದರೆ ಜಾಗತೀಕವಾಗಿ ವೈಮಾನಿಕ ಉದ್ಯಮಕ್ಕೆ ಇದೊಂದು ಮುಕ್ತ ಮಾರುಕಟ್ಟೆಯನ್ನು ನಿರ್ಮಿಸುತ್ತದೆ ಎಂದರೆ ತಪ್ಪಾಗಲಾರದು.
ಚಿತ್ರಕೃಪೆ: SuperJet International

ಉಕ್ಕಿನ ಹಕ್ಕಿಗಳ ಆರ್ಭಟ:
ಇದರಲ್ಲಿ ಭಾಗವಹಿಸಲು, ಉಕ್ಕಿನ ಹಕ್ಕಿಗಳು ಬಾನಲ್ಲಿ ಮಾಡುವ ತಮ್ಮ ಆರ್ಭಟವನ್ನು ಕಣ್ಣಾರೆ ಆಸ್ವಾದಿಸಲು ಸಾರ್ವಜನಿಕರು ಮುಂಚಿತವಾಗಿಯೆ ಟಿಕೆಟುಗಳನ್ನು ಕಾಯ್ದಿರಿಸಿಕೊಳ್ಳಬೇಕು. ಭದ್ರತಾ ದೃಷ್ಟಿಯಿಂದ ಇಲ್ಲಿಗೆ ತೆರಳುವಾಗ ಸಾರ್ವಜನಿಕರು ಕೆಲ ನಿರ್ದಿಷ್ಟ ನಿಯಮಗಳನ್ನು ಪಾಲಿಸಬೇಕಾಗುತ್ತದೆ. ಮುಂದಿನ ಸ್ಲೈಡುಗಳಲ್ಲಿ ದೇಶ ವಿದೇಶಗಳ ಅತ್ಯದ್ಭುತ ವಿಮಾನುಗಳ ಕುರಿತು ತಿಳಿಯಿರಿ. ಅಮೇರಿಕ ವಾಯುಪಡೆಯ ಸಾರಿಗೆ ವಿಮಾನಗಳು.
ಚಿತ್ರಕೃಪೆ: sindhur reddy

ಉಕ್ಕಿನ ಹಕ್ಕಿಗಳ ಆರ್ಭಟ:
ಜೆಕ್ ರಿಪಬ್ಲಿಕ್ ದೇಶದ್ ರೆಡ್ ಬುಲ್ ತಂಡದಿಂದ ಆಗಸದಲ್ಲಿ ಉಕ್ಕಿನ ಹಕ್ಕಿಗಳ ಜೊತೆ ಸರಸ.
ಚಿತ್ರಕೃಪೆ: Subharnab Majumdar

ಉಕ್ಕಿನ ಹಕ್ಕಿಗಳ ಆರ್ಭಟ:
ಸಾಬ್ (SAAB) ಎಂಬ ಕಂಪನಿಯಿಂದ ನಿರ್ಮಿತವಾದ ಪ್ರಯಾಣಿಕ ವಿಮಾನ.
ಚಿತ್ರಕೃಪೆ: Subharnab Majumdar

ಉಕ್ಕಿನ ಹಕ್ಕಿಗಳ ಆರ್ಭಟ:
ಜೆಕ್ ರಿಪಬ್ಲಿಕ್ ದೇಶದ ರೆಡ್ ಬುಲ್ ತಂಡ ಹಾರಿಸುತ್ತಿರುವ ಉಕ್ಕಿನ ಹಕ್ಕಿಗಳು
ಚಿತ್ರಕೃಪೆ: Subharnab Majumdar

ಉಕ್ಕಿನ ಹಕ್ಕಿಗಳ ಆರ್ಭಟ:
ರಷ್ಯಾ ನಿರ್ಮಿತ ಸುಖೋಯ್ ಯುದ್ಧ ವಿಮಾನದ ಆರ್ಭಟ.
ಚಿತ್ರಕೃಪೆ: Sanath Kumar

ಉಕ್ಕಿನ ಹಕ್ಕಿಗಳ ಆರ್ಭಟ:
ಬೋಯಿಂಗ್ 707-368C ಒಮೆಗಾ ಟ್ಯಾಂಕರ್ ಎಂಬ ವಿಶಾಲಕಾಯದ ವಿಮಾನ. ಆಗಸದಲ್ಲೆ ಇತರೆ ವಿಮಾನಗಳಿಗೆ ಬೇಕಾಗುವ ಇಂಧನ ಪೂರೈಸುತ್ತದೆ ಈ ವಿಶೇಷ ವಿಮಾನ.
ಚಿತ್ರಕೃಪೆ: Renjith Sasidharan

ಉಕ್ಕಿನ ಹಕ್ಕಿಗಳ ಆರ್ಭಟ:
ಮೈಜುಮ್ಮೆನ್ನುವಂತೆ ಮೋಡಗಳನ್ನು ಕೊರೆಯುತ್ತ ಮುನ್ನುಗ್ಗುತ್ತಿರುವ, ಪ್ರದರ್ಶನಗೊಂಡ ಒಂದು ಯುದ್ಧ ವಿಮಾನ.
ಚಿತ್ರಕೃಪೆ: Subharnab Majumdar

ಉಕ್ಕಿನ ಹಕ್ಕಿಗಳ ಆರ್ಭಟ:
ಅಮೇರಿಕ ನಿರ್ಮಿತ ಎಫ್ - 16 ಎಂಬ ಆಧುನಿಕ ಯುದ್ಧ ವಿಮಾನ.
ಚಿತ್ರಕೃಪೆ: ruben alexander

ಉಕ್ಕಿನ ಹಕ್ಕಿಗಳ ಆರ್ಭಟ:
ಆಗಸದಲ್ಲಿ ತ್ರಿವರ್ಣ ಧ್ವಜದ ರಂಗೋಲಿ ಬಿಡಿಸಿರುವ ಭಾರತೀಯ ಪಡೆಯ ಸೂರ್ಯಕಿರಣ್ ಯುದ್ಧ ವಿಮಾನಗಳು.
ಚಿತ್ರಕೃಪೆ: Subharnab Majumdar

ಉಕ್ಕಿನ ಹಕ್ಕಿಗಳ ಆರ್ಭಟ:
ಅಮೇರಿಕದ ಎಫ್ - 16 ನಂತರದ ಆವೃತ್ತಿಯ ಎಫ್ - 18 ಸೂಪರ್ ಹಾರ್ನೆಟ್ ಎಂಬ ಅತ್ಯಾಧುನಿಕ ಯುದ್ಧ ವಿಮಾನ.
ಚಿತ್ರಕೃಪೆ: ruben alexander

ಉಕ್ಕಿನ ಹಕ್ಕಿಗಳ ಆರ್ಭಟ:
ಯುರೋ ಫೈಟರ್ ಟೈಫೂನ್
ಚಿತ್ರಕೃಪೆ: Phaneesh N

ಉಕ್ಕಿನ ಹಕ್ಕಿಗಳ ಆರ್ಭಟ:
ಎಫ್ - 16 ಯುದ್ಧ ವಿಮಾನ ಸುರುಳಿಯಾಕಾರದಲ್ಲಿ ಹೊರಳುತ್ತಿರುವ ಬಗೆ.
ಚಿತ್ರಕೃಪೆ: Phaneesh N

ಉಕ್ಕಿನ ಹಕ್ಕಿಗಳ ಆರ್ಭಟ:
ರಷ್ಯಾದ ಸುಖೋಯ್ ಕೆಳಗಿಳಿದಾಗ....ವೇಗ ನಿಯಂತ್ರಕ ಪ್ಯಾರಾಚೂಟ್ ಸಹಾಯ ಬೇಕೇ ಬೇಕು.
ಚಿತ್ರಕೃಪೆ: Phaneesh N

ಉಕ್ಕಿನ ಹಕ್ಕಿಗಳ ಆರ್ಭಟ:
ಸಾಬ್ ಕಂಪನಿ ನಿರ್ಮಿತ ಗ್ರೈಪನ್ ಎಂಬ ಯುದ್ಧ ವಿಮಾನ ಆಗಸದಲ್ಲಿ ಸುರುಳಿಯಾಕಾರದಲ್ಲಿ ಹೊರಳುತ್ತಿರುವ ಭಂಗಿ.
ಚಿತ್ರಕೃಪೆ: Phaneesh N

ಉಕ್ಕಿನ ಹಕ್ಕಿಗಳ ಆರ್ಭಟ:
ಸ್ವದೇಶಿ ಹೆಚ್ ಎ ಎಲ್ ನಿರ್ಮಿತ ಐಜೆಟಿ ವಿಮಾನ. ಇಲ್ಲಿ ಐಜೆಟಿ ಎಂದರೆ ಇಂಟರ್ ಮಿಡಿಯೇಟ್ ಜೆಟ್ ಟ್ರೈನರ್ ಎಂದರ್ಥ.
ಚಿತ್ರಕೃಪೆ: Phaneesh N

ಉಕ್ಕಿನ ಹಕ್ಕಿಗಳ ಆರ್ಭಟ:
ರಷ್ಯಾ ನಿರ್ಮಿತ ಸುಖೋಯ್ ಯುದ್ಧ ವಿಮಾನದ ಅದ್ಭುತ ನೋಟ.
ಚಿತ್ರಕೃಪೆ: Phaneesh N

ಉಕ್ಕಿನ ಹಕ್ಕಿಗಳ ಆರ್ಭಟ:
ಅಮೇರಿಕ ನಿರ್ಮಿತ C-130J ಸೂಪರ್ ಹರ್ಕ್ಯೂಲಸ್ ಎಂಬ ಅತ್ಯಾಧುನಿಕ ಯುದ್ಧ ಸಂಬಂಧಿ ಬಳಸಬಹುದಾದ ವಿಮಾನ.
ಚಿತ್ರಕೃಪೆ: Phaneesh N

ಉಕ್ಕಿನ ಹಕ್ಕಿಗಳ ಆರ್ಭಟ:
ಅಮೇರಿಕದ ಕಾರ್ಗೊ ಹೊತ್ತೊಯ್ಯುವ ವಿಮಾನ.
ಚಿತ್ರಕೃಪೆ: Vikram Vetrivel

ಉಕ್ಕಿನ ಹಕ್ಕಿಗಳ ಆರ್ಭಟ:
ಬಿರೀವ್ ಬಿ ಇ 200 - CHS ಎಂಬ ಯುದ್ಧ ವಿಮಾನ. ನೀರಿನ ಬಾಂಬ್ ಸಿಡಿಸುವಂತಹ ವಿಶೇಷ ಕೌಶಲ್ಯವನ್ನು ಈ ವಿಮಾನ ಹೊಂದಿದೆ. ಅದನ್ನು ಸಾದರ ಪಡಿಸುತ್ತಿರುವ ಹಿಂದಿನ ಏರೋ ಇಂಡಿಯಾ ಪ್ರದರ್ಶನದಲ್ಲಿನ ಒಂದು ನೋಟ.
ಚಿತ್ರಕೃಪೆ: Alec Wilson

ಉಕ್ಕಿನ ಹಕ್ಕಿಗಳ ಆರ್ಭಟ:
ಸ್ವದೇಶಿ ನಿರ್ಮಿತ ಭಾರತೀಯ ಧ್ರುವ್ ಹೆಲಿಕಾಪ್ಟರ್.
ಚಿತ್ರಕೃಪೆ: Alec Wilson

ಉಕ್ಕಿನ ಹಕ್ಕಿಗಳ ಆರ್ಭಟ:
ಹಿಂದಿನ ಏರೋ ಇಂಡಿಯಾ ಪ್ರದರ್ಶನಗೊಂಡ ಎನ್ಸ್ಟ್ರೋಮ್ 480B ಎಂಬ ಆಧುನಿಕ ಹೆಲಿಕಾಪ್ಟರ್.
ಚಿತ್ರಕೃಪೆ: Alec Wilson

ಉಕ್ಕಿನ ಹಕ್ಕಿಗಳ ಆರ್ಭಟ:
ರೆಥಿಯಾನ್ 390 ಪ್ರಿಮೀಯರ್ ಎಂಬ ಹೆಸರಿನ ಒಂದು ಸೊಗಸಾದ ವಿಮಾನ.
ಚಿತ್ರಕೃಪೆ: Alec Wilson

ಉಕ್ಕಿನ ಹಕ್ಕಿಗಳ ಆರ್ಭಟ:
ಭಾರತೀಯ ವಾಯುಪಡೆಯ ಸಾರಂಗ ತಂಡದಲ್ಲಿ ಬಳಸಲ್ಪಡುವ ಭಾರತೀಯ ಧ್ರುವ್ ಹೆಲಿಕಾಪ್ಟರ್. ಸಾರಂಗ ತಂಡವು ಈ ಹೆಲಿಕಾಪ್ಟರ್ ಗಳ ಮೂಲಕ ಆಗಸದಲ್ಲಿ ಅದ್ಭುತವಾದ ಪ್ರದರ್ಶನ ನೀಡುತ್ತದೆ.
ಚಿತ್ರಕೃಪೆ: Alec Wilson

ಉಕ್ಕಿನ ಹಕ್ಕಿಗಳ ಆರ್ಭಟ:
ಭಾರತೀಯ ನೌಕಾ ಪಡೆಯಲ್ಲಿರುವ ತಟ ರಕ್ಷಕ ಎಂಬ ಯುದ್ಧ ಹೆಲಿಕಾಪ್ಟರ್. ಇದು ನೌಕಾ ಪಡೆಗೆ ಸಂಬಂಧಿಸಿದಂತೆ ಭಾರತದ ಸಮುದ್ರ ಪ್ರದೇಶದಲ್ಲಿ ಗಸ್ತು ತಿರುಗುತ್ತದೆ.
ಚಿತ್ರಕೃಪೆ: Alec Wilson

ಉಕ್ಕಿನ ಹಕ್ಕಿಗಳ ಆರ್ಭಟ:
ಭಾರತೀಯ ನೌಕಾ ಪಡೆಗೆ ಸಂಬಂಧಿಸಿದ ಇನ್ನೊಂದು ಯುದ್ಧ ವಿಮಾನವಾದ ಟುಪೋಲೇವ್ Tu-142 ಎಂಬ ಆಧುನಿಕ ವಿಮಾನ.
ಚಿತ್ರಕೃಪೆ: Alec Wilson

ಉಕ್ಕಿನ ಹಕ್ಕಿಗಳ ಆರ್ಭಟ:
ಇಲ್ಯೂಶಿನ್ IL-78 ಇಂಧನ ವಿಮಾನ. ಇದು ಹಾರಾಡುವ ಸಂದರ್ಭದಲ್ಲೆ ಇತರೆ ವಿಮಾನಗಳಿಗೆ ಇಂಧನ ಪೂರೈಸುತ್ತದೆ. ಇಂತಹ ಒಂದು ವಿಧಾನವನ್ನು ಸಾದರಪಡಿಸುತ್ತಿದೆ ಈ ವಿಮಾನ. ಇಂಧನ ಪಡೆಯುತ್ತಿರುವ ವಿಮಾನಗಳು ರಷ್ಯಾ ನಿರ್ಮಿತ ಮಿರಾಜ್ ಯುದ್ಧ ವಿಮಾನಗಳು.
ಚಿತ್ರಕೃಪೆ: Alec Wilson

ಉಕ್ಕಿನ ಹಕ್ಕಿಗಳ ಆರ್ಭಟ:
ಭಾರತೀಯ ವಾಯು ಪಡೆಯ ಎಂಐಎಲ್ Mi-8 ಹೆಲಿಕಾಪ್ಟರ್.
ಚಿತ್ರಕೃಪೆ: Phaneesh N

ಉಕ್ಕಿನ ಹಕ್ಕಿಗಳ ಆರ್ಭಟ:
ಅತಿ ವೇಗದ ತೇಜಸ್ ಎಂಬ ಅತ್ಯಾಧುನಿಕ ಯುದ್ಧ ವಿಮಾನ. ಇದು ಸ್ವದೇಶಿ ನಿರ್ಮಿತ ವಿಮಾನವಾಗಿದ್ದು ಇದರ ರುವಾರಿ ಹೆಚ್ ಎ ಎಲ್.
ಚಿತ್ರಕೃಪೆ: Phaneesh N

ಉಕ್ಕಿನ ಹಕ್ಕಿಗಳ ಆರ್ಭಟ:
2009 ರ ಏರೋ ಇಂಡಿಯಾ ಪ್ರದರ್ಶನದಲ್ಲಿ ಪಾಲ್ಗೊಂಡಿದ್ದ ಆಧುನಿಕ Mi 17 V5 ಎಂಬ ಯುದ್ಧದ ಹೆಲಿಕಾಪ್ಟರ್.
ಚಿತ್ರಕೃಪೆ: Goutamkhandelwal

ಉಕ್ಕಿನ ಹಕ್ಕಿಗಳ ಆರ್ಭಟ:
2009 ರ ಏರೋ ಇಂಡಿಯಾ ಪ್ರದರ್ಶನದಲ್ಲಿ ಪಾಲ್ಗೊಂಡಿದ್ದ ಚಾಲಕರಹಿತ ಯುದ್ಧ ವಿಮಾನ.
ಚಿತ್ರಕೃಪೆ: Goutamkhandelwal

ಉಕ್ಕಿನ ಹಕ್ಕಿಗಳ ಆರ್ಭಟ:
ಹೆಚ್ ಎ ಎಲ್ ನಿರ್ಮಿತ ಎಲ್ ಸಿ ಹೆಚ್ ಹೆಲಿಕಾಪ್ಟರ್. ಇಲ್ಲಿ ಎಲ್ ಸಿ ಹೆಚ್ ಎಂದರೆ ಲೈಟ್ ಕೊಂಬ್ಯಾಟ್ ಹೆಲಿಕಾಪ್ಟರ್ ಎಂದರ್ಥ.
ಚಿತ್ರಕೃಪೆ: Pritishp333

ಉಕ್ಕಿನ ಹಕ್ಕಿಗಳ ಆರ್ಭಟ:
ಹೆಚ್ ಎ ಎಲ್ ನಿರ್ಮಿತ ರುದ್ರ ಹೆಲಿಕಾಪ್ಟರ್.
ಚಿತ್ರಕೃಪೆ: Pritishp333

ಉಕ್ಕಿನ ಹಕ್ಕಿಗಳ ಆರ್ಭಟ:
ರಷ್ಯನ್ ನೈಟ್ಸ್ ಎಂಬ ರಷ್ಯಾ ನಿರ್ಮಿತ ಆಧುನಿಕ ಉಕ್ಕಿನ ಹಕ್ಕಿಗಳ ಅದ್ಭುತ ಹಾರಾಟ.
ಚಿತ್ರಕೃಪೆ: Magentic Manifestations

ಉಕ್ಕಿನ ಹಕ್ಕಿಗಳ ಆರ್ಭಟ:
ರುತಾನ್ ಲಾಂಗ್ - ಇಜಿ ಎಂಬ ಕುಟುಹಲಕರ ವಿಮಾನ.
ಚಿತ್ರಕೃಪೆ: Sonutn

ಉಕ್ಕಿನ ಹಕ್ಕಿಗಳ ಆರ್ಭಟ:
ಹೆಚ್ ಎ ಎಲ್ ನಿರ್ಮಿತ ಸೂರ್ಯಕಿರಣ್ ವಿಮಾನ. ಆಗಸದಲ್ಲಿ ಚಿಮ್ಮಲು ಸಿದ್ಧವಾಗುತ್ತಿರುವ ಕ್ಷಣ.
ಚಿತ್ರಕೃಪೆ: Premshree Pillai

ಉಕ್ಕಿನ ಹಕ್ಕಿಗಳ ಆರ್ಭಟ:
ಪ್ರತಿ ಬಾರಿಯು ಈ ವಿಮಾನ ಹಾರಾಟಗಳ ಪ್ರದರ್ಶನವನ್ನು ನೋಡಿ ಕಣ್ತುಂಬಿಕೊಳ್ಳಲು ಸಾಕಷ್ಟು ಜನ ಬೆಂಗಳೂರಿಗರು ಬರುತ್ತಾರೆ. ಅಷ್ಟೆ ಏಕೆ ಸುತ್ತಮುತ್ತಲಿನ ಪ್ರಮುಖ ನಗರಗಳಿಂದಲೂ ಸಹ ಜನ ಹಾಗೂ ಪ್ರವಾಸಿಗರು ಈ ಪ್ರದರ್ಶನ ವೀಕ್ಷಸಲು ಬರುತ್ತಿರುತ್ತಾರೆ. 2011 ರ ಏರೋ ಇಂಡಿಯಾ ಪ್ರದರ್ಶನದಲ್ಲಿ ಕಂಡು ಬಂದ ಅಪಾರ ಜನಸ್ತೋಮ. ಇನ್ನೇಕೆ ತಡ, ನೀವೂ ಹೊರಡಿ...ಈ ಸಲ ಅಲ್ಲದಿದ್ದರೂ ಮುಂದಿನ ಬಾರಿಯಾದರೂ ಖಂಡಿತವಾಗಿ.
ಚಿತ್ರಕೃಪೆ: Hemant Kumar


Click it and Unblock the Notifications



















