Search
  • Follow NativePlanet
Share
» »ದಿನಕ್ಕೆ ಮೂರು ಬಾರಿ ಬಣ್ಣ ಬದಲಿಸುವ ಶಿವಲಿಂಗ; ಇದು ಯಾರಿಗೂ ತಿಳಿಯದ ರಹಸ್ಯ!

ದಿನಕ್ಕೆ ಮೂರು ಬಾರಿ ಬಣ್ಣ ಬದಲಿಸುವ ಶಿವಲಿಂಗ; ಇದು ಯಾರಿಗೂ ತಿಳಿಯದ ರಹಸ್ಯ!

ಹಿಂದೂ ಧರ್ಮದಲ್ಲಿ ಶಿವನ ಆರಾಧನೆಗೆ ವಿಶೇಷ ಮಹತ್ವವಿದೆ. ನಿತ್ಯವೂ ಶಿವನನ್ನು ಪೂಜಿಸುವುದರಿಂದ ಭಕ್ತರ ಸಂಕಷ್ಟಗಳು ಪರಿಹಾರವಾಗುತ್ತವೆ ಎಂಬ ನಂಬಿಕೆ ಇದೆ. ಭಾರತದಲ್ಲಿಯೂ ಅನೇಕ ಶಿವ ದೇವಾಲಯಗಳಿದ್ದು, ಇಲ್ಲಿ ಶಿವನ ಮಹಿಮೆಯನ್ನು ಕಾಣಬಹುದು. ಅಂದಹಾಗೆ ಭಾರತದಲ್ಲಿ ದಿನಕ್ಕೆ ಮೂರು ಬಾರಿ ಬಣ್ಣ ಬದಲಾಯಿಸುವ ಶಿವಲಿಂಗವಿದೆ ಎಂದು ನಿಮಗೆ ತಿಳಿದಿದೆಯೇ?. ಈ ದೇವಾಲಯದ ಮಹಿಮೆಯನ್ನು ನೋಡಲು ಭಕ್ತರ ದಂಡೇ ಹರಿದುಬರುತ್ತದೆ. ಇಲ್ಲಿ ಪೂಜಿಸುವುದರಿಂದ ಅಥವಾ ಭೇಟಿ ನೀಡುವುದರಿಂದ ಎಲ್ಲಾ ಇಷ್ಟಾರ್ಥಗಳು ಈಡೇರುತ್ತವೆ ಎಂದು ನಂಬಲಾಗಿದೆ.

ಮೌಂಟ್ ಅಬು ರಾಜಸ್ಥಾನದಲ್ಲಿರುವ ಏಕೈಕ ಗಿರಿಧಾಮವಾಗಿದೆ. ಇಲ್ಲಿರುವ ಅಚಲೇಶ್ವರ ಮಹಾದೇವ ದೇವಾಲಯವು ಅತ್ಯಂತ ಪ್ರಸಿದ್ಧ ಮತ್ತು ಪುರಾತನ ದೇವಾಲಯವಾಗಿದೆ. ಮೌಂಟ್ ಅಬುದಲ್ಲಿ ಶಿವನ ಅನೇಕ ದೇವಾಲಯಗಳಿವೆ, ಅವುಗಳಲ್ಲಿ ಅಚಲೇಶ್ವರ ಮಹಾದೇವ ದೇವಾಲಯವು ಹೆಚ್ಚು ಖ್ಯಾತಿ ಗಳಿಸಿದೆ. ಅಚಲೇಶ್ವರ ಮಹಾದೇವ ದೇವಸ್ಥಾನದಲ್ಲಿರುವ ಶಿವಲಿಂಗವು ದಿನಕ್ಕೆ ಮೂರು ಬಾರಿ ಬಣ್ಣವನ್ನು ಬದಲಾಯಿಸುತ್ತದೆ. ಈ ದೇವಾಲಯವನ್ನು ಕ್ರಿ.ಶ.813 ರಲ್ಲಿ ಸ್ಥಾಪಿಸಲಾಯಿತು ಎಂದು ಇತಿಹಾಸ ಹೇಳುತ್ತದೆ. ಅಚಲೇಶ್ವರ ದೇವಸ್ಥಾನದಲ್ಲಿ ಈಗಲೂ ಶಿವನ ಪಾದದ ಗುರುತುಗಳಿವೆ ಎಂದು ನಂಬಲಾಗಿದೆ.

108 ಕ್ಕೂ ಹೆಚ್ಚು ಶಿವನ ದೇವಾಲಯಗಳಿರುವ ಸ್ಥಳ

ಇಲ್ಲಿ ಶಿವನ ಅನೇಕ ದೇವಾಲಯಗಳಿರುವುದರಿಂದ ಮೌಂಟ್ ಅಬುವನ್ನು ಅರ್ಧಕಾಶಿ ಎಂದೂ ಕರೆಯುತ್ತಾರೆ. ಈ ಗಿರಿಧಾಮದಲ್ಲಿ 108 ಕ್ಕೂ ಹೆಚ್ಚು ಶಿವನ ದೇವಾಲಯಗಳಿವೆ. ಸ್ಕಂದ ಪುರಾಣದ ಪ್ರಕಾರ, ವಾರಣಾಸಿಯು ಶಿವನ ನಗರವಾಗಿದ್ದು, ಮೌಂಟ್ ಅಬು ಉಪನಗರವಾಗಿದೆ. ಅಚಲೇಶ್ವರ ಮಹದೇವ ದೇವಾಲಯವು ಅಚಲಗಢದ ಬೆಟ್ಟಗಳ ಮೇಲೆ, ಅಬು ಪರ್ವತದಿಂದ ಸುಮಾರು 11 ಕಿಲೋಮೀಟರ್ ದೂರದಲ್ಲಿದೆ. ಶಿವನ ಹೆಬ್ಬೆರಳು ಸಂಪೂರ್ಣ ಮೌಂಟ್ ಅಬು ಪರ್ವತವನ್ನು ಹಿಡಿದಿದೆ ಎಂದು ನಂಬಲಾಗಿದೆ. ಹೆಬ್ಬೆರಳಿನ ಗುರುತು ಮಾಯವಾದ ದಿನ ಮೌಂಟ್ ಅಬು ನಾಶವಾಗುತ್ತದೆಯಂತೆ. ಅಚಲಗಢ ಕೋಟೆಯು ದೇವಾಲಯದ ಸಮೀಪದಲ್ಲಿದೆ. ಈ ಕೋಟೆ ಈಗ ಪಾಳು ಬಿದ್ದಿದೆ. ಈ ಕೋಟೆಯನ್ನು ಪರ್ಮಾರ್ ರಾಜವಂಶದವರು ನಿರ್ಮಿಸಿದರು.

achaleshwarmahadevtemple1

ಈ ರಹಸ್ಯ ಯಾರಿಗೂ ತಿಳಿದಿಲ್ಲ

ಆದರೆ ಶಿವನ ಈ ವಿಶಿಷ್ಟ ದೇವಾಲಯದ ರಹಸ್ಯವು ಇಲ್ಲಿಯವರೆಗೆ ಬಹಿರಂಗಗೊಂಡಿಲ್ಲ. ಶಿವಲಿಂಗದ ಬಣ್ಣ ಬದಲಾವಣೆಯ ಹಿಂದಿನ ಕಾರಣ ಯಾರಿಗೂ ತಿಳಿದಿಲ್ಲ. ಆದರೆ ಜನರ ನಂಬಿಕೆಗಳ ಪ್ರಕಾರ, ಇದು ಶಿವನ ಮಹಿಮೆಯಿಂದಾಗಿ ಸಂಭವಿಸುತ್ತದೆ. ಧೋಲ್ಪುರದಿಂದ ಐದು ಕಿಲೋಮೀಟರ್ ದೂರದಲ್ಲಿರುವ ಅಚಲೇಶ್ವರ ದೇವಾಲಯವನ್ನು ಯಾವಾಗ ಸ್ಥಾಪಿಸಲಾಯಿತು ಎಂಬುದರ ಕುರಿತು ಸಾಕಷ್ಟು ಮಾಹಿತಿ ಲಭ್ಯವಿಲ್ಲ. ಆದರೆ ಭಕ್ತರ ಪ್ರಕಾರ, ಈ ದೇವಾಲಯವು ಸಾವಿರಾರು ವರ್ಷಗಳಷ್ಟು ಹಳೆಯದು. ಈ ದೇವಾಲಯವು ದಿನಕ್ಕೆ ಮೂರು ಬಾರಿ ಬಣ್ಣವನ್ನು ಬದಲಾಯಿಸುತ್ತದೆ. ಇದರ ಬಣ್ಣವು ಬೆಳಗ್ಗೆ ಕೆಂಪು, ಮಧ್ಯಾಹ್ನ ಕೇಸರಿ ಮತ್ತು ರಾತ್ರಿ ಗಾಢವಾಗಿ ಕಾಣುತ್ತದೆ. ಶ್ರಾವಣ ಹಾಗೂ ಶಿವರಾತ್ರಿ ಮಾಸದಲ್ಲಿ ಈ ದೇವಾಲಯದಲ್ಲಿ ಅಪಾರ ಸಂಖ್ಯೆಯಲ್ಲಿ ಭಕ್ತರ ದಂಡೇ ಇರುತ್ತದೆ.

achaleshwarmahadevtemple Darshana

ಎಲ್ಲಾ ಸಮಸ್ಯೆಗಳಿಗೂ ಸಿಗಲಿದೆ ಪರಿಹಾರ

ಈ ಅಚಲೇಶ್ವರ ದೇವಸ್ಥಾನಕ್ಕೆ ಭೇಟಿ ನೀಡುವುದರಿಂದ ಜನರ ಇಷ್ಟಾರ್ಥಗಳು ಈಡೇರುತ್ತವೆ ಎಂದು ನಂಬಲಾಗಿದೆ. ಇದಲ್ಲದೇ ಜೀವನದಲ್ಲಿ ಬರುವ ಎಲ್ಲಾ ಸಮಸ್ಯೆಗಳಿಂದಲೂ ಪರಿಹಾರ ಪಡೆಯಬಹುದು. ಮಹಾದೇವನ ದೇವಸ್ಥಾನದಲ್ಲಿ ಮದುವೆಯಾಗದ ಹೆಣ್ಣುಮಕ್ಕಳ ಇಷ್ಟಾರ್ಥಗಳು ಕೂಡ ಈಡೇರುತ್ತವೆ. ಮದುವೆಯಾಗಲು ಸಾಧ್ಯವಾಗದ ಜನರು ಇಲ್ಲಿಗೆ ಬಂದು ತಾವು ಬಯಸಿದಂತೆ ಜೀವನ ಸಂಗಾತಿ ಸಿಗಲು ಪ್ರಾರ್ಥಿಸುತ್ತಾರೆ. ಇಲ್ಲಿ ಸೋಮವಾರ ಭಕ್ತರು ಭಗವಂತನಿಗೆ ನೀರು ಸಮರ್ಪಿಸುವುದು ಕಂಡು ಬರುತ್ತದೆ. ನಂಬಿಕೆಗಳ ಪ್ರಕಾರ, 16 ಸೋಮವಾರಗಳಂದು ಈ ದೇವಾಲಯದಲ್ಲಿ ನೀರನ್ನು ಅರ್ಪಿಸುವ ಮೂಲಕ, ಶಿವನು ನೀವು ಬಯಸಿದ ಜೀವನ ಸಂಗಾತಿ ಸಿಗಲು ಆಶೀರ್ವದಿಸುತ್ತಾನೆ.

achaleshwarmahadevtemple mount abu

ಎಲ್ಲಿದೆ ಈ ನಿಗೂಢ ಶಿವಲಿಂಗ ದೇವಾಲಯ?

ಧಾರ್ಮಿಕ ನಂಬಿಕೆಗಳ ಪ್ರಕಾರ, ಉತ್ತರ ಪ್ರದೇಶದ ಧೋಲ್ಪುರ್ ನಗರದಿಂದ ಸುಮಾರು 5 ಕಿಲೋಮೀಟರ್ ದೂರದಲ್ಲಿರುವ ಚಂಬಲ್ ನದಿಯ ದಡದಲ್ಲಿರುವ ಕಂದರದಲ್ಲಿರುವ ದೇವಾಲಯವು ಹಲವು ವರ್ಷಗಳಷ್ಟು ಹಳೆಯದು. ದೇವಾಲಯದಲ್ಲಿರುವ ಈ ಶಿವಲಿಂಗವನ್ನು ಪ್ರಾಚೀನ ಕಾಲದಲ್ಲಿ ರಾಜ ಮಹಾರಾಜರ ಕಾಲದಲ್ಲಿ ಉತ್ಖನನ ಮಾಡಲಾಯಿತು ಎಂದು ಹೇಳಲಾಗುತ್ತದೆ. ಮಾಹಿತಿಯ ಪ್ರಕಾರ, ಈ ದೇವಾಲಯದಲ್ಲಿರುವ ಶಿವಲಿಂಗವು ದಿನಕ್ಕೆ ಮೂರು ಬಾರಿ ತನ್ನ ಬಣ್ಣವನ್ನು ಬದಲಾಯಿಸುತ್ತದೆ. ಹಿಂದಿನ ಕಾಲದಲ್ಲಿ ಈ ದೇವಸ್ಥಾನಕ್ಕೆ ಹೆಚ್ಚು ಜನ ಬರುತ್ತಿರಲಿಲ್ಲ. ಆದರೆ ಪರಿಸ್ಥಿತಿ ಬದಲಾದ ನಂತರ ಜನರು ಶಿವನ ದರ್ಶನ ಪಡೆಯಲು ಇಲ್ಲಿಗೆ ಬರಲಾರಂಭಿಸಿದರು. ಆದಾಗ್ಯೂ, ಇದಕ್ಕೆ ಯಾವುದೇ ವೈಜ್ಞಾನಿಕ ಪುರಾವೆಗಳಿಲ್ಲ.

More News

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+