ಉತ್ತರಾಖಂಡದ ಹರಿದ್ವಾರ, ಹಿಮಾಲಯದಿಂದ ಗಂಗಾನದಿ ಹರಿದು ಬಯಲು ಪ್ರದೇಶಗಳಿಗೆ ಪ್ರವೇಶಿಸುವ ಪ್ರಮುಖ ಸ್ಥಳಗಳಲ್ಲಿ ಒಂದಾಗಿದೆ. ಈ ಸ್ಥಳವು ಹಚ್ಚ ಹಸಿರಿನ ಕಾಡುಗಳಿಂದ ತುಂಬಿದೆ. ಗಂಗಾ ನದಿಯ ಸ್ಪಷ್ಟ ನೀರು ಮತ್ತು ಪರ್ವತಗಳು ಈ ಪವಿತ್ರ ನಗರದ ಆಕರ್ಷಕ ಸೌಂದರ್ಯಕ್ಕೆ ಹಿನ್ನೆಲೆಯಾಗಿವೆ.
ಇಲ್ಲಿರುವ ಘಾಟ್‌ಗಳಲ್ಲಿ ಸಂಜೆಯ ಸಮಯದಲ್ಲಿ ನದಿಯಲ್ಲಿ ತೇಲುತ್ತಿರುವ ಹಲವಾರು ದೀಪಗಳು ಮತ್ತು ಹೂವುಗಳೊಂದಿಗೆ ನೋಡಲು ಸುಂದರವಾಗಿರುತ್ತದೆ
ಹರಿ ಮತ್ತು ದ್ವಾರ ಎಂಬ ಎರಡು ಪದಗಳ ಜೋಡನೆಯಿಂದ ಹರಿದ್ವಾರ ಎಂದು ಕರೆಯಲಾಗುತ್ತದೆ. ಹರಿ ಎಂದರೆ ದೇವರೆಂದೂ ದ್ವಾರ ಎಂದರೆ ಬಾಗಿಲು ಎಂದೂ ಎರಡು ಒಟ್ಟಿಗೆ ಸೇರಿದರೆ ದೇವರ ಬಾಗಿಲು ಎಂದು ಅರ್ಥಬರುತ್ತದೆ. ಇಲ್ಲಿ ಗಂಗೋತ್ರಿ, ಯಮುನೋತ್ರಿ, ಕೇದಾರ್ ನಾಥ್ ಮತ್ತು ಬದರೀನಾಥ ಎಂಬ ನಾಲ್ಕು ಮುಖ್ಯ ದೇವಾಲಯಗಳಿವೆ. ಕೇದಾರನಾಥ ಮತ್ತು ಬದರೀನಾಥ ದೇವಾಲಯಗಳು ಚಾರ್ ಧಾಮಗಳಲ್ಲಿ ಬರುತ್ತವೆ. ಹರಿದ್ವಾರವು ಈ ಚಾರ್ ಧಾಮಗಳಿಗೆ ಪ್ರಯಾಣಿಸಲು ಮುಖ್ಯ ಸ್ಥಳವಾಗಿದೆ.
ಗರ್ವಾಲ್ ಹಿಮಾಲಯದ ಶಿವಾಲಿಕ್ ಶ್ರೇಣಿಯ ತಪ್ಪಲಿನಲ್ಲಿರುವ ಹರಿದ್ವಾರವು ಅತ್ಯಂತ ಹಳೆಯ ಯಾತ್ರಾ ಸ್ಥಳಗಳಲ್ಲಿ ಒಂದಾಗಿದೆ

ಮಾನಸ ದೇವಿ ದೇವಾಲಯ
ಈ ದೇವಾಲಯವು ಶಕ್ತಿಯ ಸ್ವರೂಪವೆಂದು ಕರೆಯಲಾಗುವ ಮಾನಸ ದೇವಿಗೆ ಅರ್ಪಿತವಾಗಿದೆ. ಈ ದೇವಾಲಯವು ಹಿಮಾಲಯದ ದಕ್ಷಿಣ ಭಾಗವಾಗಿರುವ ಶಿವಾಲಿಕ್ ಶ್ರೇಣಿಗಳ ಮೇಲೆ ಬಿಲ್ವ ಪರ್ವತದ ಮೇಲೆ ನೆಲೆಗೊಂಡಿದೆ. ಮಾಯಾ ದೇವಿ ಮತ್ತು ಚಂಡಿ ದೇವಿಯ ದೇವಾಲಯಗಳ ಹೊರತಾಗಿ ಹರಿದ್ವಾರದಲ್ಲಿರುವ ತ್ರಿವಿಧ ಸಿದ್ದಪೀಠಗಳಲ್ಲಿ ಮಾನಸಾ ದೇವಿಯೂ ಒಂದಾಗಿದೆ.

ಭಾರತ್ ಮಾತಾ ಮಂದಿರ
ಭಾರತ ಮಾತಾ ಮಂದಿರವು ಭಾರತ ಮಾತೆಗೆ ಸಮರ್ಪಿತವಾದ ಬಹು ಅಂತಸ್ತಿನ ದೇವಾಲಯವಾಗಿದೆ. ದೇಶದ ಸ್ವಾತಂತ್ರ್ಯಕ್ಕಾಗಿ ಪ್ರಾಣ ತೆತ್ತ ದೇಶಪ್ರೇಮಿಗಳು ಮತ್ತು ಸ್ವಾತಂತ್ರ್ಯ ಹೋರಾಟಗಾರರಿಗಾಗಿ ಈ ದೇವಾಲಯವನ್ನು ನಿರ್ಮಿಸಲಾಗಿದೆ.
ಈ ದೇವಾಲಯವನ್ನು 1983 ರಲ್ಲಿ ಮಾಜಿ ಭಾರತೀಯ ಪ್ರಧಾನಿ ದಿವಂಗತ ಇಂದಿರಾ ಗಾಂಧಿಯವರು ಉದ್ಘಾಟಿಸಿದರು. ಈ ರಚನೆಯು ಎಂಟು ಮಹಡಿಗಳನ್ನು ಹೊಂದಿದೆ ಮತ್ತು ಪ್ರತಿ ಮಹಡಿಯು ವಿಭಿನ್ನ ವಿಷಗಳನ್ನೊಳಗೊಂಡ ಮತ್ತು ವಿಭಿನ್ನ ದೇವತೆಗಳನ್ನು ಹೊಂದಿದೆ.

ಗಂಗಾ ಆರತಿ
ಹರಿದ್ವಾರವು ಗಂಗಾ ಆರತಿಗೆ ಹೆಸರುವಾಸಿಯಾಗಿದೆ; ಗಂಗಾ ಆರತಿಯು ಪ್ರತಿದಿನ ಸಂಜೆ 6:00 ರಿಂದ 7:00 ರವರೆಗೆ ನಡೆಯುತ್ತದೆ ಇದಕ್ಕಾಗಿ ಅನೇಕ ಭಕ್ತರು ಸಾಕ್ಷಿಯಾಗುತ್ತಾರೆ. ಪುರೋಹಿತರು ತಮ್ಮ ಕೈಯಲ್ಲಿ ದೊಡ್ಡ ದೀಪಗಳನ್ನು ಹಿಡಿದುಕೊಂಡು, ದೀಪಗಳನ್ನು ಪ್ರದಕ್ಷಿಣಾಕಾರವಾಗಿ ಚಲಿಸುತ್ತಾರೆ, ಅದರೊಂದಿಗೆ ಗಂಟೆಯ ಬಾರಿಸುವಿಕೆ ಮತ್ತು ಗಂಗಾ ದೇವಿಗೆ ಪ್ರಾರ್ಥನೆಯ ಪಠಣ ಇರುತ್ತದೆ. ಹರಿದ್ವಾರದಲ್ಲಿರುವಾಗ ತಪ್ಪದೇ ನೋಡಬೇಕಾದ ದೃಶ್ಯವಿದು.


Click it and Unblock the Notifications
















