Search
  • Follow NativePlanet
Share
» »ಭಾರತದ 5 ಶ್ರೀಮಂತ ನಗರಗಳು ಇವೆ....

ಭಾರತದ 5 ಶ್ರೀಮಂತ ನಗರಗಳು ಇವೆ....

ವಿಶ್ವದ ಶ್ರೀಮಂತ ರಾಷ್ಟ್ರಗಳಲ್ಲಿ ಭಾರತವೂ ಕೂಡ ಒಂದು. ಭಾರತದಲ್ಲಿ ಸಾಕಷ್ಟು ಅನಕ್ಷರತೆ, ಬಡತನ, ನಿರುದ್ಯೋಗ, ಮೂಢ ನಂಬಿಕೆಗಳಿದ್ದರು ಕೂಡ ಕೆಲವು ನಗರಗಳು ಅದರ ಆರ್ಥಿಕತೆಯಲ್ಲಿ ಪ್ರಮುಖವಾದ ಪಾತ್ರವನ್ನು ವಹಿಸುತ್ತವೆ. ಇದರಿಂದಾಗಿ ದೇಶವನ್ನು ಮತ್

ವಿಶ್ವದ ಶ್ರೀಮಂತ ರಾಷ್ಟ್ರಗಳಲ್ಲಿ ಭಾರತವೂ ಕೂಡ ಒಂದು. ಭಾರತದಲ್ಲಿ ಸಾಕಷ್ಟು ಅನಕ್ಷರತೆ, ಬಡತನ, ನಿರುದ್ಯೋಗ, ಮೂಢ ನಂಬಿಕೆಗಳಿದ್ದರು ಕೂಡ ಕೆಲವು ನಗರಗಳು ಅದರ ಆರ್ಥಿಕತೆಯಲ್ಲಿ ಪ್ರಮುಖವಾದ ಪಾತ್ರವನ್ನು ವಹಿಸುತ್ತವೆ. ಇದರಿಂದಾಗಿ ದೇಶವನ್ನು ಮತ್ತಷ್ಟು ಶ್ರೀಮಂತ ನಗರವನ್ನಾಗಿ ಮಾಡಲು ಸಹಕರಿಸುತ್ತದೆ. ಸಾಮಾನ್ಯವಾಗಿ ನಮ್ಮ ದೇಶದಲ್ಲಿ ಶ್ರೀಮಂತರು ಮತ್ತು ಬಡವರ ನಡುವೆ ಅಂತರ ಹೆಚ್ಚಾಗುತ್ತಿದೆ.

ಭಾರತ ಜನಸಂಖ್ಯೆಯಲ್ಲಿ 2 ನೇ ಸ್ಥಾನವನ್ನು ಪಡೆದುಕೊಂಡಿದೆ. ನಗರ ಯಾವಾಗ ಅಭಿವೃದ್ಧಿಯಾಗಿದೆ ಎಂದರೆ ವ್ಯಾಪಾರ ವೃದ್ಧಿ, ಸಾರಿಗೆ ವ್ಯವಸ್ಥೆಗಳು, ಆಧುನಿಕ ವ್ಯವಸ್ಥೆ, ಉದ್ಯೋಗ, ಕಡಿಮೆ ಬಡತನ ಉಂಟಾದಾಗ ಮಾತ್ರ ದೇಶ ಅಭಿವೃದ್ಧಿಯಾಗಲು ಸಾಧ್ಯ. ಹಾಗಾದರೆ ನಮ್ಮ ಭಾರತ ದೇಶದಲ್ಲಿ ಹೆಚ್ಚು ಅಭಿವೃದ್ದಿ ಹೊಂದಿರುವ ನಗರಗಳು ಯಾವುವು? ಆ ನಗರಗಳಲ್ಲಿ ನಮ್ಮ ಕರ್ನಾಟಕದ ರಾಜಧಾನಿಯಾದ ಬೆಂಗಳೂರು ಕೂಡ ಇದೆಯೇ ಎಂಬ ಹಲವಾರು ಪ್ರಶ್ನೆಗೆ ಉತ್ತರ ಲೇಖನದ ಮೂಲಕ ತಿಳಿಯಿರಿ.

ಭಾರತದ 5 ಶ್ರೀಮಂತ ನಗರಗಳು ಇವೆ....

ಭಾರತದ 5 ಶ್ರೀಮಂತ ನಗರಗಳು ಇವೆ....

ಶ್ರೀಮಂತ ನಗರಗಳ ಪಟ್ಟಿಯಲ್ಲಿ 5 ನೇ ಸ್ಥಾನದಲ್ಲಿ ಹೈದ್ರಾಬಾದ್ ಇದೆ. ಹಿಂದೆ ಆಂಧ್ರ ಪ್ರದೇಶ ಮತ್ತು ತೆಲಂಗಾಣದ ನಗರ ರಾಜಧಾನಿಯು ಸೇರಿ ಆರ್ಥಿಕತೆಯಲ್ಲಿ ಹೆಚ್ಚು ಪಾತ್ರವನ್ನು ವಹಿಸಿತ್ತು. ಮುತ್ತುಗಳ ನಗರವೆಂದು ಖ್ಯಾತಿ ಪಡೆದ ಹೈದ್ರಾಬಾದ್ ಭಾರತದ 5 ನೇ ಶ್ರೀಮಂತ ನಗರವಾಗಿದೆ. ನವಾಬರ ಕಾಲದಿಂದಲೂ, ಹೈದ್ರಾಬಾದ್ ಶ್ರೀಮಂತ ಸ್ಥಳವಾಗಿದೆ. ಭಾರತೀಯ ಆರ್ಧಿಕತೆಯಲ್ಲಿ ಸುಮಾರು 74 ಬಿಲಿಯನ್ ಡಾಲರ್ಸ್‍ಗಳಷ್ಟು ಕೊಡುಗೆಯನ್ನು ಹೊಂದಿದೆ.

ಪ್ರಸ್ತುತ ಹೈದರಾಬಾದ್ ತೆಲಂಗಾಣದ ರಾಜಧಾನಿಯಾಗಿದ್ದು, ಭಾರತದ 5 ನೇ ದೊಡ್ಡ ನಗರವೆಂದು ಗುರುತಿಸಿಕೊಂಡಿದೆ. ಈ ನಗರವು ಅನೇಕ ಪ್ರಮುಖ ಕೈಗಾರಿಕೆಗಳಿಗೆ ನೆಲೆಯಾಗಿದೆ. ಅಷ್ಟೇ ಅಲ್ಲದೇ ಮಾಹಿತಿ ತಂತ್ರಜ್ಞಾನವು ನಗರದ ಪ್ರಮುಖ ವ್ಯವಹಾರಗಳಲ್ಲಿ ಒಂದಾಗಿದೆ. ಇಲ್ಲಿನ ಪ್ರವಾಸಿ ತಾಣಗಳು ಜೀವನದಲ್ಲಿ ಎಂದೂ ಮರೆಯಲಾಗದಂತಹ ಅನುಭೂತಿಯನ್ನು ಉಂಟು ಮಾಡುತ್ತದೆ.

Yedla70

ಭಾರತದ 5 ಶ್ರೀಮಂತ ನಗರಗಳು ಇವೆ....

ಭಾರತದ 5 ಶ್ರೀಮಂತ ನಗರಗಳು ಇವೆ....

ಶ್ರೀಮಂತ ನಗರಗಳ ಪಟ್ಟಿಯಲ್ಲಿ 4 ನೇ ಸ್ಥಾನವನ್ನು ನಮ್ಮ ಕರ್ನಾಟಕ ರಾಜ್ಯದ ಬೆಂಗಳೂರು ನಗರ ಪಡೆದುಕೊಂಡಿದೆ. ಭಾರತದ ಐಟಿ ರಾಜಧಾನಿಯಾಗಿರುವ ಬೆಂಗಳೂರಿಗೆ, ಭಾರತದ " ಸಿಲಿಕಾನ್ ವ್ಯಾಲಿ" ಮತ್ತು ಭಾರತದಲ್ಲಿ 4 ನೇ ಶ್ರೀಮಂತ ನಗರವಾಗಿದೆ. ದೇಶದ ಆರ್ಥಿಕತೆಯಲ್ಲಿ ಇದು 83 ಶತಕೋಟಿ $ನಷ್ಟು ಮೊತ್ತದ ಕೊಡುಗೆ ನೀಡುತ್ತದೆ.

ಬೆಂಗಳೂರು ಕರ್ನಾಟಕದ 3 ನೇ ಜನಸಂಖ್ಯೆಯುಳ್ಳ ರಾಜಧಾನಿಯಾಗಿದೆ. ದಕ್ಷಿಣ ಭಾರತದಲ್ಲಿಯೇ ಸಮುದ್ರ ಮಟ್ಟದಿಂದ ಸುಮಾರು 900 ಮೀಟರ್ ಎತ್ತರದಲ್ಲಿದೆ. ಇದು ಭಾರತದ ಅತಿ ವೇಗವಾಗಿ ಬೆಳೆಯುತ್ತಿರುವ ಮಹಾನಗರವಾಗಿದೆ. ಹಾಗೆಯೇ 4 ನೇ ಅತಿ ವೇಗವಾಗಿ ಚಲಿಸುವ ಗ್ರಾಹಕ ಸರಕುಗಳ ಮಾರುಕಟ್ಟೆಯಾಗಿದೆ. ಬೆಂಗಳೂರಿನಲ್ಲಿ ನೋಡಲೇಬೇಕಾದ ಪ್ರವಾಸಿ ತಾಣಗಳಿವೆ.

Prathyush Thomas

ಭಾರತದ 5 ಶ್ರೀಮಂತ ನಗರಗಳು ಇವೆ....

ಭಾರತದ 5 ಶ್ರೀಮಂತ ನಗರಗಳು ಇವೆ....

ಕೋಲ್ಕತ್ತಾ ನಗರವು 3 ನೇ ಶ್ರೀಮಂತ ನಗರವಾಗಿದೆ. ಇದು ಭಾರತ ಮುಖ್ಯ ವಾಣಿಜ್ಯ ಕೇಂದ್ರವಾಗಿದೆ. ಕೋಲ್ಕತಾ ಭಾರತದಲ್ಲಿ ಅತಿ ಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ಮೆಟ್ರೋಪಾಲಿಟನ್ ನಗರವಾಗಿದೆ. ಇದು ಎಂದಿಗೂ ಶ್ರೀಮಂತವಾದ ಸ್ಥಳ ಎಂದು ಗುರುತಿಸಿಕೊಂಡಿದೆ.

ಒಟ್ಟು ಜನಸಂಖ್ಯೆಯ ಶೇಕಡಾ 40 ರಷ್ಟು ಜನಸಂಖ್ಯೆ ಹೊಂದಿರುವ ಈ ನಗರವು ಸ್ಟೀಲ್ ಸೇರಿದಂತೆ ಅನೇಕ ಕೈಗಾರಿಕಾ ಘಟಕಗಳಿಗೆ ನೆಲೆಯಾಗಿದೆ. ಹೆವಿ ಎಂಜಿನಿಯರಿಂಗ್, ಗಣಿಗಾರಿಕೆ, ಖನಿಜಗಳು, ಸಿಮೆಂಟ್, ಔಷಧಿ, ಆಹಾರ ಸಂಸ್ಕರಣೆ, ಕೃಷಿ, ಎಲೆಕ್ಟಾನಿಕ್ಸ್ ಮತ್ತು ಜವಳಿಯಲ್ಲಿ ತನ್ನದೇ ಆದ ಕೊಡುಗೆಯನ್ನು ನೀಡುತ್ತಾ ಅಭಿವೃದ್ಧಿ ಸಾಧಿಸುತ್ತಿದೆ.

ಭಾರತದ 5 ಶ್ರೀಮಂತ ನಗರಗಳು ಇವೆ....

ಭಾರತದ 5 ಶ್ರೀಮಂತ ನಗರಗಳು ಇವೆ....

ಭಾರತದ ರಾಜಧಾನಿಯಾದ ದೆಹಲಿಯು ಭಾರತದ 2 ನೇ ಅತಿ ಶ್ರೀಮಂತ ನಗರವಾಗಿದೆ. ಹಾಗೆಯೇ ಇದು ಭಾರತದ ಅತ್ಯಂತ ದೊಡ್ಡ ವಾಣಿಜ್ಯ ಕೇಂದ್ರ ಕೂಡ ಆಗಿದೆ. ದೇಶದ ಆರ್ಥಿಕತೆಯಲ್ಲಿ ದೆಹಲಿಯ ಕೊಡುಗೆ ಅಪಾರವಾದುದು. ದೆಹಲಿಯು ದೊಡ್ಡ ಕಾರ್ಮಿಕ ಶಕ್ತಿಯನ್ನು ಒಳಗೊಂಡಿದ್ದು, ಒಟ್ಟು ಜನಸಂಖ್ಯೆಯ 32.8% ರಷ್ಟಿದೆ.

ದೆಹಲಿಯು ವೇಗವಾಗಿ ಬೆಳೆಯುತ್ತಿರುವ ಚಿಲ್ಲರೆ ಉದ್ಯಮಗಳಲ್ಲಿ ಒಂದಾಗಿದೆ. ಇಲ್ಲಿ ಭವ್ಯವಾದ ಕೋಟೆಗಳು, ತನ್ನ ಸಾಂಸ್ಕøತಿಕ ಶ್ರೀಮಂತಿಕೆಯಿಂದ ಭಾರತವನ್ನು ಮತ್ತಷ್ಟು ಹಿಮ್ಮಡಿಗೊಳಿಸುತ್ತಿದೆ. ಇಲ್ಲಿನ ಪ್ರವಾಸ ಅನುಭವವು ಜೀವನದಲ್ಲಿ ಎಂದೂ ಮರೆಯಲಾಗದಂತಹ ಅನುಭೂತಿಯನ್ನು ಉಂಟು ಮಾಡುತ್ತದೆ.

wiki

ಭಾರತದ 5 ಶ್ರೀಮಂತ ನಗರಗಳು ಇವೆ....

ಭಾರತದ 5 ಶ್ರೀಮಂತ ನಗರಗಳು ಇವೆ....

ಕನಸಿನ ನಗರಿ ಎಂದೇ ಹೆಸರುವಾಸಿಯಾಗಿರುವ ಮುಂಬೈ ಭಾರತದ ಶ್ರೀಮಂತ ನಗರಗಳಲ್ಲಿ ಮೊದಲನೇ ಸ್ಥಾನವನ್ನು ಪಡೆದುಕೊಂಡಿದೆ. ಇದು ಭಾರತದ ಅತಿದೊಡ್ಡ ನಗರ ಮತ್ತು ವ್ಯಾಪಾರದ ಪ್ರಮುಖವಾದ ಕೇಂದ್ರವಾಗಿದೆ. ಇದು ಮುಖ್ಯವಾಗಿ ಭಾರತದ ಶ್ರೀಮಂತ ನಗರಗಳಿಗೆ ಸಮುದ್ರ ಸಾಗಣೆ ಮಾಡುವ ಮೂಲಕ ರಫ್ತು ಮತ್ತು ಆಮದುಗಳಿಗೆ ಕೇಂದ್ರ ಬಿಂದುವಾಗಿದೆ. ಈ ಸುಂದರವಾದ ನಗರವು ಕೂಡ ಭಾರತದ ಅಭಿವೃದ್ಧಿಗೆ ತನ್ನದೇ ಆದ ಕೊಡುಗೆಯನ್ನು ನೀಡುತ್ತಾ ಬಂದಿದೆ. ಇಲ್ಲಿಯೂ ಕೂಡ ಹಲವಾರು ಪ್ರವಾಸಿ ತಾಣಗಳಿದ್ದು, ತನ್ನ ಪ್ರವಾಸ ತಾಣದಿಂದಲೂ ಮನಸೆಳೆಯುತ್ತಿದೆ.

wiki

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X