Search
  • Follow NativePlanet
Share
» »ಭಾರತದಲ್ಲಿಯ ಅತ್ಯಂತ ಅಪರೂಪ ಹಾಗೂ ಅದ್ಬುತವಾದ 5 'ಫಾರ್ಮ್ ಸ್ಟೇ' ಗಳು

ಭಾರತದಲ್ಲಿಯ ಅತ್ಯಂತ ಅಪರೂಪ ಹಾಗೂ ಅದ್ಬುತವಾದ 5 'ಫಾರ್ಮ್ ಸ್ಟೇ' ಗಳು

ಜೀವಮಾನದ ಅದ್ಬುತ ಅನುಭವಕ್ಕಾಗಿ ಭಾರತದ ಈ "ಫಾರ್ಮ್ ಸ್ಟೇ" ಗಳಿಗೆ ಭೇಟಿ ನೀಡಿ!

ಪ್ರತಿಯೊಬ್ಬರ ಜೀವನದಲ್ಲಿಯೂ ಕೆಲವು ಅನುಭವಗಳು ನಮಗೆ ತುಂಬಾ ಅಗತ್ಯವೆನಿಸುವಂತಾಗಿರುತ್ತದೆ ಅಲ್ಲದೆ ಕೆಲವು ಅನುಭವಗಳನ್ನು ನಾವು ಕೆಲವೊಮ್ಮೆ ಕೆಲವು ಸ್ಥಳಗಳಿಗೆ ಭೇಟಿ ಕೊಟ್ಟು ಅಲ್ಲಿಯ ಅವಿಸ್ಮರಣೀಯ ನೆನಪುಗಳನ್ನು ನಮ್ಮಲ್ಲಿ ಕೊಂಡೊಯ್ಯುವಂತಹುದು ಆಗಿರುತ್ತದೆ. ಅದರಲ್ಲೂ ಹಳ್ಳಿಗಾಡಿನ ಜೀವನದ ಅನುಭವವಂತೂ ಭವ್ಯವಾದ ಪ್ರಕೃತಿ ಮತ್ತು ಅದರ ಅಪರೂಪದ ಆದರೆ ಪರಿಚಿತ ಸೌಂದರ್ಯಕ್ಕೆ ಹತ್ತಿರ ತರಬಹುದು, ಆದ್ದರಿಂದ, ನಿಮಗೆ ಅವಿಸ್ಮರಣೀಯವಾದ ನೆನಪುಗಳನ್ನು ನೀಡುತ್ತದೆ.

ನೀವೆಂದಾದರೂ ಐಷಾರಾಮಿ ಅಥವಾ ಅದ್ದೂರಿ ಹೋಟೇಲುಗಳನ್ನು ಬಿಟ್ಟು ಯಾವುದಾದರೂ ಹಳ್ಳಿಗಾಡಿನ ಅದ್ಬುತ ಸೌಂದರ್ಯವನ್ನು ಒಳಗೊಂಡ ಹಾಗೂ ಪ್ರಕೃತಿಯ ಸುತ್ತಲೂ ಹರಡಿರುವ ಅಗಾಧವಾದ ಮೋಡಿ ಮಾಡುವ ಮತ್ತು ಸೌಂದರ್ಯದಿಂದ ಸುತ್ತುವರೆದಿರುವಂತಹ ಫ಼ಾರ್ಮ್ ಸ್ಟೇ ಗಳಲ್ಲಿ ಕೆಲವು ದಿನಗಳನ್ನು ಕಳೆಯಲು ಯೋಚಿಸಿರುವಿರಾ?

ಹೌದು ಎಂದಾದಲ್ಲಿ ನೀವು ಸರಿಯಾದ ಲೇಖನವನ್ನು ಓದುತ್ತಿರುವಿರಿ ಈ ಕೆಳಗೆ ಭಾರತದ ಅತ್ಯಂತ ಭವ್ಯವಾದ 5 ಫಾರ್ಮ ಸ್ಟೇ ಗಳು ಇದ್ದು, ಇಲ್ಲಿ ನೀವು ಪ್ರಕೃತಿಯ ಸೌಂದರ್ಯತೆಯನ್ನು ಹತ್ತಿರದಿಂದ ಕಾಣಬಹುದಾಗಿದೆ. ಅಲ್ಲದೆ ನೀವು ಪ್ರಕೃತಿಯ ಸೊಬಗು ಮತ್ತು ಹಳ್ಳಿಗಾಡಿನ ಜೀವನ ಶೈಲಿ ಮತ್ತು ಆತಿಥ್ಯವನ್ನು ಹತ್ತಿರದಿಂದ ಅನುಭವಿಸಬಹುದಾಗಿದೆ.

ಬನ್ನಿ ಖೇರಾ ಫಾರ್ಮ್ (ರೋಹ್ಟಕ್, ಹರ್ಯಾಣ), ಪ್ರವಾಸೋದ್ಯಮ

ಬನ್ನಿ ಖೇರಾ ಫಾರ್ಮ್ (ರೋಹ್ಟಕ್, ಹರ್ಯಾಣ), ಪ್ರವಾಸೋದ್ಯಮ

ಇದು ಒಂದು ಪರಿಸರ ಸ್ನೇಹಿ ಫ಼ಾರ್ಮ್ ಸ್ಟೇ ಆಗಿದ್ದು, ಇದು ಹರಿಯಾಣ ಪ್ರವಾಸೋದ್ಯಮದ ಸಹಯೋಗದೊಂದಿಗೆ ಕಾರ್ಯನಿರ್ವಹಿಸುತ್ತದೆ. ಹಳ್ಳೀಯ ಪರಿಸರ ಮತ್ತು ನಗರ ಜೀವನದ ಸ್ಪರ್ಶದೊಂದಿದೆ ಈ ಫಾರ್ಮ್ ಸ್ಟೇ ಯು ಇಲ್ಲಿಗೆ ಬರುವ ಅತಿಥಿಗಳಿಗಾಗಿ ಹಲವಾರು ಚಟುವಟಿಕೆಗಳನ್ನು ಒದಗಿಸಿಕೊಡುತ್ತದೆ.

ನೀವು ಇಲ್ಲಿ ಎತ್ತಿನಗಾಡಿಯಲ್ಲಿ ಸವಾರಿ ಮಾಡಬಹುದು, ಗದ್ದೆಗಳಲ್ಲಿ ಆಟವಾಡಬಹುದು, ಮೀನುಹಿಡಿಯುವ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಬಹುದು ಅಷ್ಟೇ ಅಲ್ಲದೆ ಇಲ್ಲಿಯ ಶಾಂತಿಯುತವಾದ ಮತ್ತು ಮಾಲಿನ್ಯರಹಿತ ಪರಿಸರದಲ್ಲಿ ನಿಮ್ಮ ಸಮಯವನ್ನು ಆನಂದದಾಯಕವಾಗಿ ಕಳೆಯಬಹುದಾಗಿದೆ. ಇವೆಲ್ಲವುದರ ಜೊತೆಗೆ ಬಾಯಿ ನೀರೂರಿಸುವಂತಹ ಆಹಾರ ಮತ್ತು ವಿಭಿನ್ನ ಶೈಲಿಯ ಹಾಗೂ ನಿಮಗೆ ಮೆಚ್ಚುಗೆಯಾಗುವಂತಹ ಕೊಠಡಿಗಳು ಸಮಯವನ್ನು ಕಳೆಯಲು ಈ ಫ಼ಾರ್ಮ್ ಸ್ಟೇ ಒಂದು ಪರಿಪೂರ್ಣವಾದ ವಾಸ್ತವ್ಯವನ್ನು ಮಾಡುತ್ತವೆ.

 ದಿ ಕಂಟ್ರೀ ರೀಟ್ರೀಟ್ (ಬಂಕ್ಲಿ, ರಾಜಸ್ಥಾನ್)

ದಿ ಕಂಟ್ರೀ ರೀಟ್ರೀಟ್ (ಬಂಕ್ಲಿ, ರಾಜಸ್ಥಾನ್)

ನಗರದ ಸದ್ದುಗದ್ದಲಗಳು ಮತ್ತು ಟ್ರಾಫಿಕ್ ಮತ್ತು ನಗರ ಜೀವನದಿಂದ ದೂರವಿದ್ದು, ಗದ್ದೆಗಳು ಮತ್ತು ಪರ್ವತಗಳ ನಡುವೆ ಸುಮಾರು 130 ಎಕರೆಗಳಷ್ಟು ಪ್ರದೇಶಗಳಲ್ಲಿ ವಿಸ್ತಾರವಾಗಿ ಹರಡಿಕೊಂಡಿರುವ ಈ ಸುಂದರ ಭೂಮಿಯೇ ದಿ ಕಂಟ್ರೀ ರಿಟ್ರೀಟ್. ಸೈಕ್ಲಿಂಗ್, ಪಕ್ಷಿವೀಕ್ಷಣೆ, ಹಳ್ಳಿ ಕಡೆಗೆ ಸಫಾರಿ, ಮತ್ತು ಗದ್ದೆಗಳು ಮತ್ತು ಪರ್ವತಗಳ ರಮಣೀಯ ನೋಟ ಇವೆಲ್ಲವನ್ನೂ ಇಲ್ಲಿ ನೋಡಬಹುದು ಅಥವಾ ಮಾಡಬಹುದಾಗಿದೆ.

ನೀವು ಯಾವುದಾದರೂ ಅದ್ಬುತವಾದ ಫಾರ್ಮ್ ಸ್ಟೇ ಯಲ್ಲಿ ವಾಸ್ತವ್ಯವನ್ನು ಮಾಡಬೇಕೆಂದು ಯೋಚಿಸುತ್ತಿದ್ದಲ್ಲಿ ಕಂಟ್ರಿ ರಿಟ್ರೀಟ್ ನಿಮಗಾಗಿ ಹಾಗೂ ನಿಮ್ಮ ಅಮೂಲ್ಯ ಸಮಯವನ್ನು ಕಳೆಯಲು ಹೇಳಿ ಮಾಡಿಸಿದಂತಿದೆ. ಇದರ ತಾಜಾ ಮತ್ತು ಆರೋಗ್ಯಕರ ಊಟದಿಂದ ಹಿಡಿದು ಬೆಚ್ಚಗಿನ ಕೋಠಡಿಗಳವರೆಗೆ ಎಲ್ಲವೂ ನಿಮಗೆ ಮನೆಯ ವಾತಾವರಣದ ಅನುಭವವನ್ನು ನೀಡುತ್ತದೆ.

ಫಿಲಿಪ್ ಕುಟ್ಟೀ'ಸ್ ಫ಼ಾರ್ಮ್ (ಕುಮಾರಕೊಮ್, ಕೊಟ್ಟಾಯಂ)

ಫಿಲಿಪ್ ಕುಟ್ಟೀ'ಸ್ ಫ಼ಾರ್ಮ್ (ಕುಮಾರಕೊಮ್, ಕೊಟ್ಟಾಯಂ)

ಈ ಫ಼ಾರ್ಮ್ ಸ್ಟೇ ಯು ದೇವರ ಸ್ವಂತ ನಾಡು ಕೇರಳದಲ್ಲಿದ್ದು, ಹಸಿರು ದ್ವೀಪದ ಮೇಲೆ ನೆಲೆಸಿರುವ ಇದು ಪ್ರಕೃತಿ ಪ್ರೇಮಿಗಳಿಗೆ ವರ್ಷದಾದ್ಯಂತ ಭೇಟಿ ನೀಡುವ ಒಂದು ಅತ್ಯಂತ ಪರಿಪೂರ್ಣ ಮತ್ತು ಆದರ್ಶಕರವಾದ ಸ್ಥಳವಾಗಿದೆ. ಕೇರಳದ ಹಿನ್ನೀರಿನ ಜೊತೆಗೆ ಪುರಾತನ ವಸ್ತುಗಳಿಂದ ಅಲಂಕೃತವಾದ ಐಷಾರಾಮಿ ವಿಲ್ಲಾಗಳನ್ನು ಹೊಂದಿರುವ ಈ ಸ್ಥಳವು ಇದನ್ನು ಭೇಟಿ ನೀಡುವ ಅತಿಥಿಗಳಿಗೆ ರಮಣೀಯ ದೃಶ್ಯಗಳು, ಸಾವಯವವಾಗಿ ತಯಾರಿಸಿದ ಆಹಾರ ಮತ್ತು ಆಧುನಿಕ ಸೌಕರ್ಯಗಳು ಇತ್ಯಾದಿಗಳನ್ನು ಒದಗಿಸುತ್ತಾ ಅತ್ಯಂತ ಉತ್ತಮವಾದ ಅನುಭವವನ್ನು ನೀಡುತ್ತದೆ.

ಇಲ್ಲಿ ಕೈಗೊಳ್ಳಲಾಗುವ ಚಟುವಟಿಕೆಗಳಲ್ಲಿ ಪಕ್ಷಿವೀಕ್ಷಣೆ, ಮೀನುಗಾರಿಕೆ, ಕಾಲುವೆ ವಿಹಾರ, ಜಮೀನಿನ ಸುತ್ತಲಿನ ಪ್ರವಾಸಗಳು ಇತ್ಯಾದಿಗಳೂ ಸೇರಿದ್ದು, ನೀವು ಅತ್ಯುತ್ತಮವಾದ ಗ್ರಾಮೀಣ ಮತ್ತು ಆಧುನಿಕ ಜೀವನವನ್ನು ಒಟ್ಟಿಗೆ ಅನುಭವಿಸಲು ಎದುರುನೋಡುತ್ತಿದ್ದರೆ, ಫಿಲಿಪ್‌ಕುಟ್ಟಿ'ಸ್ ಫಾರ್ಮ್ ನೀವು ಖಂಡಿತವಾಗಿಯೂ ನೀವು ಭೇಟಿ ಕೊಡಲೇ ಬೇಕಾಂದಂತಹ ಫಾರ್ಮ್ ಸ್ಟೇ ಆಗಿದೆ.

ಹಿಮಾಲಯನ್ ಆರ್ಚರ್ಡ್ (ರುಕ್ಲಾ, ಹಿಮಾಚಲಪ್ರದೇಶ)

ಹಿಮಾಲಯನ್ ಆರ್ಚರ್ಡ್ (ರುಕ್ಲಾ, ಹಿಮಾಚಲಪ್ರದೇಶ)

ಅಪ್ಪಟ ಹಿಮಾಚಲ ಪ್ರದೇಶದ ಅನುಭವವನ್ನು ಪಡೆಯಬಯಸುವವರಿಗೆ ಇದು ಒಂದು ಅತ್ಯಂತ ಆದರ್ಶಕರವಾದ ತಾಣವಾಗಿದೆ. ಇಲ್ಲಿಯ ಆದರದ ಆತಿಥ್ಯವು ಬೆಚ್ಚಗಿನ ಮನೆಯ ನೆನಪು ಮಾಡುವುದರಲ್ಲಿ ಸಂದೇಹವೇ ಇಲ್ಲ. ಹಚ್ಚ ಹಸುರಿನ ಕಣಿವೆಗಳ ನಡುವೆ ಮತ್ತು ಸುತ್ತಲೂ ಆಕರ್ಷಣೆಯ ಸಂಪೂರ್ಣ ಉಪಸ್ಥಿತಿಯಿಂದ ಕಂಗೊಳಿಸುತ್ತಿರುವ ಹಿಮಾಲಯನ್ ಆರ್ಚರ್ಡ್ ತನ್ನ ಅತಿಥಿಗಳಿಗೆ ಆರೋಗ್ಯಕರ ಮತ್ತು ಪೌಷ್ಟಿಕ ಆಹಾರದಿಂದ ಆರಾಮದಾಯಕ ಕೊಠಡಿಗಳು ಮತ್ತು ಭವ್ಯವಾದ ಸುತ್ತಮುತ್ತಲಿನವರೆಗೆ ಎಲ್ಲಾ ವಿವಿಧ ಸೌಲಭ್ಯಗಳನ್ನು ಒದಗಿಸುತ್ತದೆ.

ಮೀನುಗಾರಿಕೆ, ಹೈಕಿಂಗ್, ಪಕ್ಷಿವೀಕ್ಷಣೆ, ಛಾಯಾಗ್ರಹಣ, ಪ್ರಕೃತಿ ನಡಿಗೆಗಳು ಇತ್ಯಾದಿ ಚಟುವಟಿಕೆಗಳನ್ನು ಇಲ್ಲಿ ಮಾಡಬಹುದಾಗಿದೆ. ನೀವು ಮನೆಯಿಂದ ದೂರವಿದ್ದು ಅದರ ಜೊತೆಗೆಮತ್ತು ಅದರೊಂದಿಗೆ ಅಪರೂಪದ ಅದ್ಭುತಗಳನ್ನು ಅನುಭವಿಸಲು ಬಯಸಿದರೆ, ಹಿಮಾಲಯನ್ ಆರ್ಚರ್ಡ್ ನಿಮಗೆ ಸೂಕ್ತವಾದ ಸ್ಥಳವಾಗಿದೆ.

ಬಾನ್ ಫ಼ಾರ್ಮ್ ಹೌಸ್ (ಕೆವ್ಜಿಂಗ್, ಸಿಕ್ಕಿಂ)

ಬಾನ್ ಫ಼ಾರ್ಮ್ ಹೌಸ್ (ಕೆವ್ಜಿಂಗ್, ಸಿಕ್ಕಿಂ)

ಏಲಕ್ಕಿ ಹೊಲಗಳು ಮತ್ತು ಚಹಾ ತೋಟಗಳಿಂದ ಸುತ್ತುವರಿದಿರುವ ಈಶಾನ್ಯ ಭಾರತದಲ್ಲಿನ ಅತ್ಯಂತ ಜನಪ್ರಿಯ ಫಾರ್ಮ್ ಸ್ಟೇಗಳಲ್ಲಿ ಒಂದಾದ ಬಾನ್ ಫಾರ್ಮ್‌ಹೌಸ್ ನಿಮ್ಮನ್ನು ಪುನಶ್ಚೇತನಗೊಳಿಸಿಕೊಳ್ಳಲು ಮತ್ತು ನಿಮ್ಮನ್ನು ನೀವು ಸಂಪೂರ್ಣವಾಗಿ ಆರೋಗ್ಯಕರ ಪ್ರಕೃತಿಯಲ್ಲಿ ತೊಡಗಿಸಿಕೊಳ್ಳಲು ಒಂದು ಸಂಪೂರ್ಣ ನಿಲುಗಡೆಯಾಗಿದೆ ಹಾಗೂ ಇದು ನಿಮ್ಮನ್ನು ಅಂತಿಮವಾಗಿ ಆಹ್ಲಾದಕರ ಪರಿಸರದ ಸಂಪೂರ್ಣ ಅನುಭವವನ್ನು ನೀಡುತ್ತದೆ. ಎಲ್ಲಾ ಆಧುನಿಕ ಸೌಲಭ್ಯಗಳೊಂದಿಗೆ, ಈ ಫಾರ್ಮ್ ಹೌಸ್ ತನ್ನ ಅತಿಥಿಗಳಿಗೆ ಐಷಾರಾಮಿ ಮತ್ತು ವಿಶಾಲವಾದ ಕೋಣೆಗಳು, ಆರೋಗ್ಯಕರ ಮತ್ತು ಸಾವಯವ ಆಹಾರ ಮತ್ತು ಇತರ ಅನೇಕ ಸೌಕರ್ಯಗಳನ್ನು ನೀಡುತ್ತದೆ.

ಇಲ್ಲಿ ಕೈಗೊಳ್ಳಬಹುದಾದ ಚಟುವಟಿಕೆಗಳಲ್ಲಿ ದೃಶ್ಯವೀಕ್ಷಣೆ, ಪಕ್ಷಿವೀಕ್ಷಣೆ, ಪ್ರಕೃತಿ ನಡಿಗೆ, ಛಾಯಾಗ್ರಹಣ, ಬಿಸಿ ಕಲ್ಲಿನ ಗಿಡಮೂಲಿಕೆ ಸ್ನಾನಗಳೂ ಇತ್ಯಾದಿಗಳನ್ನು ಒಳಗೊಂಡಿವೆ.

ಹೀಗೆ ಇವುಗಳು ಭಾರತದಲ್ಲಿ ಅಪರೂಪದ ಸೌಂದರ್ಯವನ್ನು ಆನಂದಿಸಲು ಇರುವ ಪ್ರಮುಖವಾದ 5 ಭವ್ಯವಾದ ಫಾರ್ಮ್ ಸ್ಟೇಗಳಾಗಿವೆ. ಇವೆಲ್ಲವೂ ವರ್ಷಪೂರ್ತಿ ಭೇಟಿ ನೀಡಬಹುದಾದಂಟಹ ಗಮ್ಯಸ್ಥಾನಗಳಾಗಿದ್ದು ಯಾವಾಗ ಬೇಕಾದರೂ ಭೇಟಿ ನೀಡಬಹುದು. ಗ್ರಾಮೀಣ ಮತ್ತು ಆಧುನಿಕ ಜೀವನದ ಅತ್ಯುತ್ತಮತೆಯನ್ನು ಒಟ್ಟಿಗೆ ಅನುಭವಿಸಲು ನೀವು ಪರಿಪೂರ್ಣ ವಾಸ್ತವ್ಯಕ್ಕಾಗಿ ಹಾತೊರೆಯುತ್ತಿದ್ದರೆ, ಸಿದ್ಧರಾಗಿ ಈ ಅದ್ಭುತ ಫಾರ್ಮ್ ಸ್ಟೇ ವಾಸ್ತವ್ಯಗಳಿಗೆ ಭೇಟಿ ನೀಡುವ ಸಮಯ ಇದು!

ಜೀವನದ ಅತ್ಯಂತ ಸುಂದರವಾದ ಅನುಭವವನ್ನು ಪಡೆದುಕೊಳ್ಳಲು ಬೇಗನೆ ತಯಾರಾಗಿ!!

More News

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+