Search
  • Follow NativePlanet
Share
» »ಮಕ್ಕಳ ಜ್ಞಾನಕ್ಕೆ ಐದು ಮಂದಿರ

ಮಕ್ಕಳ ಜ್ಞಾನಕ್ಕೆ ಐದು ಮಂದಿರ

ಮಕ್ಕಳಿಗೆ ಶಾಲೆಯ ವಿದ್ಯಾಭ್ಯಾಸ ಎಷ್ಟು ಮುಖ್ಯವೋ ಅಷ್ಟೇ ಮುಖ್ಯವಾದದ್ದು ಸಾಮಾನ್ಯ ಜ್ಞಾನ. ಶಾಲೆಗೆ ಹೋಗುವ ಮಕ್ಕಳಿಗೆ ಮನೆ ಮತ್ತು ಶಾಲೆಯ ಪರಿಸರ ಬಿಟ್ಟರೆ ಮೂರನೇ ವಿಚಾರ ಅಷ್ಟಾಗಿ ತಿಳಿದಿರುವುದಿಲ್ಲ.

By divya

ಮಕ್ಕಳಿಗೆ ಶಾಲೆಯ ವಿದ್ಯಾಭ್ಯಾಸ ಎಷ್ಟು ಮುಖ್ಯವೋ ಅಷ್ಟೇ ಮುಖ್ಯವಾದದ್ದು ಸಾಮಾನ್ಯ ಜ್ಞಾನ. ಶಾಲೆಗೆ ಹೋಗುವ ಮಕ್ಕಳಿಗೆ ಮನೆ ಮತ್ತು ಶಾಲೆಯ ಪರಿಸರ ಬಿಟ್ಟರೆ ಮೂರನೇ ವಿಚಾರ ಅಷ್ಟಾಗಿ ತಿಳಿದಿರುವುದಿಲ್ಲ. ಏಕೆಂದರೆ ಶಾಲೆಯ ವಿದ್ಯಾಭ್ಯಾಸದ ಮಧ್ಯದಲ್ಲಿ ಉಳಿದ ಚಟುವಟಿಕೆಗಳು ಹಾಗೆಯೇ ಉಳಿದು ಹೋಗುತ್ತವೆ. ಜೊತೆಗೆ ಪಾಲಕರು ತಮ್ಮ ದುಡಿಮೆ ಜವಾಬ್ದಾರಿಯನ್ನು ನಿರ್ವಹಿಸುವ ಗುಂಗಿನಲ್ಲಿ ಮಕ್ಕಳ ಜ್ಞಾನ ಹೆಚ್ಚಿಸುವ ವಿಚಾರದಲ್ಲಿ ಎಡವಿ ಬಿಡುತ್ತಾರೆ. ನಿಜ, ಮಕ್ಕಳ ಜ್ಞಾನ ಬೆಳೆಯಬೇಕೆಂದರೆ ವಿದ್ಯಾಭ್ಯಾಸದ ಜೊತೆಗೆ ಇರತ ಚಟುವಟಿಕೆಯ ಮಾಹಿತಿಗಳ ಬಗ್ಗೆ ಅಗಾಧ ಜ್ಞಾನ ಇರಬೇಕಾಗುತ್ತದೆ. ಅಂತಹ ಮಾಹಿತಿ, ಜ್ಞಾನವನ್ನು ಕೊಡುವಂತಹ ಸಂಗ್ರಹಾಲಯಗಳ ಬಗ್ಗೆ ಅರಿಯೋಣ.

ಕರ್ನಾಟಕ ಸರ್ಕಾರಿ ವಸ್ತು ಸಂಗ್ರಹಾಲಯ

ಕರ್ನಾಟಕ ಸರ್ಕಾರಿ ವಸ್ತು ಸಂಗ್ರಹಾಲಯ

ಬೆಂಗಳೂರಿನ ಕಸ್ತೂರ ಬಾ ರಸ್ತೆಯಲ್ಲಿರುವ ಈ ಸಂಗ್ರಹಾಲಯ ಆಗಷ್ಟ 18 1865ರಲ್ಲಿ ಸ್ಥಾಪನೆ ಆಯಿತು. ಪುರಾತನ ಕಾಲದ ವಸ್ತುಗಳನ್ನು ಒಳಗೊಂಡಿರುವ ಈ ಸಂಗ್ರಹಾಲಯ ಭಾರತದಲ್ಲಿರುವ ಅತಿ ಹಳೆಯ ವಸ್ತು ಸಂಗ್ರಹಾಲಯದಲ್ಲಿ ಒಂದಾಗಿ, ದಕ್ಷಿಣ ಭಾರತದಲ್ಲಿ ಎರಡನೇ ದೊಡ್ಡ ವಸ್ತು ಸಂಗ್ರಹಾಲಯ ಎಂದು ಗುರುತಿಸಲಾಗಿದೆ. ಇದರಲ್ಲಿ ಪುರಾತತ್ವ ಶಾಸ್ತ್ರಕ್ಕೆ ಸಂಬಂಧಿಸಿದ ವಸ್ತುಗಳು, ಹಳೆಯ ಆಭರಣಗಳು, ಶಿಲ್ಪಗಳು, ನಾಣ್ಯಗಳು, ಶಾಸನಗಳನ್ನು ನೋಡಬಹುದು. ಪ್ರತಿವರ್ಷ ಇಲ್ಲಿ 90 ಸಾವಿರಕ್ಕೂ ಹೆಚ್ಚು ಜನರು ಈ ಸಂಗ್ರಹಾಲಯಕ್ಕೆ ಭೇಟಿ ನೀಡುತ್ತಾರೆ.

PC: en.wikipedia.org

ವಿಶ್ವೇಶ್ವರಯ್ಯ ಕೈಗಾರಿಕಾ ಮತ್ತು ತಾಂತ್ರಿಕ ವಸ್ತು ಸಂಗ್ರಹಾಲಯ

ವಿಶ್ವೇಶ್ವರಯ್ಯ ಕೈಗಾರಿಕಾ ಮತ್ತು ತಾಂತ್ರಿಕ ವಸ್ತು ಸಂಗ್ರಹಾಲಯ

ಭಾರತದ ಅತ್ಯುನ್ನತ ವಸ್ತು ಸಂಗ್ರಹಾಲಯದಲ್ಲಿ ಒಂದಾದ ಇದು ಬೆಂಗಳೂರಿನ ಕಸ್ತೂರ ಬಾ ರಸ್ತೆಯಲ್ಲಿ ಬರುತ್ತದೆ. ಇದು ಭಾರತ ಸರ್ಕಾರದ ರಾಷ್ಟ್ರೀಯ ವೈಜ್ಞಾನಿಕ ಸಂಗ್ರಹಾಲಯಗಳ ಸಭಾಗೆ ಸೇರಿಕೊಂಡಿದೆ. ವಿಶ್ವೇಶ್ವರಯ್ಯ ಅವರ ಜನ್ಮ ಶತಾಬ್ದಿಯ ಅಂಗವಾಗಿ ಸ್ಥಾಪಿಸಲಾದ ಈ ಸಂಗ್ರಹಾಲಯ ಮಕ್ಕಳಿಗೆ ಶೈಕ್ಷಣಿಕ ಪ್ರವಾಸದ ಸ್ಥಳವಾಗಿದೆ. ಇಲ್ಲಿ ಕೈಗಾರಿಕೆ ಹಾಗೂ ತಂತ್ರಜ್ಞಾನಗಳಿಗೆ ಸಂಬಂಧಿಸಿದ ವಸ್ತುಗಳನ್ನು ನೋಡಬಹುದು.

PC: en.wikipedia.org

ನೆಹರು ತಾರಾಲಯ

ನೆಹರು ತಾರಾಲಯ

ಬೆಂಗಳೂರಿನ ಚೌಡಯ್ಯ ರಸ್ತೆಯಲ್ಲಿ ಬರುವ ಈ ತಾರಾಲಯ ಮಕ್ಕಳಿಗೊಂದು ಹೊಸ ಲೋಕದ ಪರಿಚಯವನ್ನು ಕಣ್ಮುಂದೆ ತಂದಿಡುತ್ತದೆ. ಭಾರತದೆಲ್ಲೆಡೆ ಒಟ್ಟು ಐದು ತಾರಾಲಯವಿದೆ. ಅದರಲ್ಲಿ ಇದು ಒಂದು. ಬಾಹ್ಯಾಕಾಶದ ಬಗ್ಗೆ ಮಾಹಿತಿ ನೀಡುವ ಈ ತಾರಾಲಯದಲ್ಲಿ ನಡೆಯುವ ವಿಶಿಷ್ಠ ಮಾಹಿತಿಯನ್ನು ಕಲೆಹಾಕಬಹುದು.

PC: en.wikipedia.org

ಜನಪದ ಲೋಕ

ಜನಪದ ಲೋಕ

ಬೆಂಗಳೂರಿನಿಂದ 53 ಕಿ.ಮೀ. ದೂರದಲ್ಲಿರುವ ಈ ಲೋಕ ಹಳ್ಳಿಯ ಜೀವನಶೈಲಿ ಹಾಗೂ ಅವರು ಬಳಸುತ್ತಿದ್ದ ವಸ್ತುಗಳು, ಹಾಡು ಹೀಗೆ ಹಲವಾರು ವಿಷಯಗಳಿಗೆ ಸಂಬಂಧಿಸಿದ ಮಾಹಿತಿಯನ್ನು ಇಲ್ಲಿ ಪಡೆಯಬಹುದು. ಅಪರೂಪದ ಜನಪದ ಹಾಡುಗಳ ಸಿಡಿಯೂ ಇಲ್ಲಿ ದೊರೆಯುತ್ತದೆ. ಎಚ್.ಎಲ್. ನಾಗೇಗೌಡರಿಂದ ಸ್ಥಾಪನೆಗೊಂಡ ಈ ಲೋಕದಲ್ಲಿ ಮಹಾದ್ವಾರ, ಲೋಕಮಾತಾ ಮಂದಿರ, ಚಿತ್ರ ಕುಟೀರ, ಶಿಲ್ಪ ಮಾಲ, ಲೋಕ ಮಹಲ್ ಎಂಬ ವಿಭಾಗಗಳಿದ್ದು ಅವೆಲ್ಲವೂ ಒಂದೊಂದು ಪ್ರಮುಖ ವಿಷಯದ ಬಗ್ಗೆ ಸಂಬಂಧಿಸಿದ ವಸ್ತುಗಳನ್ನು ಆಯಾ ವಿಭಾಗದಲ್ಲಿ ಇಡಲಾಗಿದೆ.

PC: en.wikipedia.org

ಶೇಶಾದ್ರಿ ಅಯ್ಯರ್ ಸ್ಮರಣ ಮಂದಿರ

ಶೇಶಾದ್ರಿ ಅಯ್ಯರ್ ಸ್ಮರಣ ಮಂದಿರ

ಕಬ್ಬನ್ ಪಾರ್ಕ್‍ನಲ್ಲಿರುವ ಈ ಮಂದಿರ ಬ್ರಿಟಿಷ್ ಕಾಲೋನಿಯ ಶೈಲಿಯಲ್ಲಿ ನಿರ್ಮಿಸಲಾಗಿದೆ. ಗ್ರಂಥಾಲಯವಾದ ಈ ಮಂದಿರದಲ್ಲಿ ಮಕ್ಕಳಿಗೆ ಬೇಕಾದಂತಹ ವಿವಿಧ ಬಗೆಯ ಪುಸ್ತಕಗಳನ್ನು ಇಡಲಾಗಿದೆ. ಸೋಮವಾರವನ್ನು ಬಿಟ್ಟು ಉಳಿದ ಎಲ್ಲಾವಾರಗಳಲ್ಲೂ ಈ ಮಂದಿರ ತೆರೆದಿರುತ್ತದೆ.

PC: en.wikipedia.org

Read more about: bangalore
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X