Search
  • Follow NativePlanet
Share
» »ಕರ್ನಾಟಕದಲ್ಲಿರುವ ಸಾಹಸಿ ಚಟುವಟಿಕೆಗಳಿಗೆ ಸೂಕ್ತವಾದ 11 ಸ್ಥಳಗಳು

ಕರ್ನಾಟಕದಲ್ಲಿರುವ ಸಾಹಸಿ ಚಟುವಟಿಕೆಗಳಿಗೆ ಸೂಕ್ತವಾದ 11 ಸ್ಥಳಗಳು

ಭಾರತದ ಜನರಿಗೆ ಸಾಹಸಿ ಕ್ರೀಡೆಗಳು ಒಂದು ಕ್ರೇಜ್ ಆಗಿದೆ. ಸಾಹಸಗಳನ್ನು ಇಷ್ಟ ಪಡುವ ಜನರು ಎಲ್ಲಿ ಹೋದರು ಮೊದಲು ರೋಚಕ ಚಟುವಟಿಕೆಗಳಿರುವಂತಹ ಸ್ಥಳಕ್ಕೆ ಭೇಟಿ ಕೊಡುವುದಕ್ಕೆ ಮೊದಲು ಆದ್ಯತೆ ಕೊಡುತ್ತಾರೆ. ಈ ಕೆಳಗೆ ಕರ್ನಾಟಕದಲ್ಲಿ ಸಾಹಸಿ ಕ್ರೀಡೆಗಳನ್ನು ನಡೆಸಲಾಗುವ ಕೆಲವು ಸ್ಥಳಗಳ ಪಟ್ಟಿ ಇದೆ.

ಕರ್ನಾಟಕವು ವೈವಿಧ್ಯತೆಗಳಿಂದ ಕೂಡಿದ ಭೂದೃಶ್ಯ ಮತ್ತು ಪರಿಸರವನ್ನು ಹೊಂದಿದೆ. ಇಲ್ಲಿ ಯ ಕೆಲವು ಸ್ಥಳಗಳು ಕೇವಲ ಪ್ರವಾಸಿ ಸ್ಥಳಗಳು ಮಾತ್ರವಾಗಿರದೆ ಸಾಹಸಿ ಚಟುವಟಿಕೆಗಳನ್ನೂ ನಡೆಸುವ ತಾಣಗಳೂ ಆಗಿವೆ.

ಇಲ್ಲಿಯ ಕೆಲವು ಸ್ಥಳಗಳಲ್ಲಿ ಪ್ರವಾಸಿಗರು ಹಲವಾರು ಬಗೆಯ ಚಟುವಟಿಕೆಗಳನ್ನು ನಡೆಸಬಹುದಾಗಿದ್ದು ಅವುಗಳಲ್ಲಿ ದಾಂಡೇಲಿಯ ರಿವರ್ ರಾಫ್ಟಿಂಗ್, ಕೂರ್ಗ್ ನಲ್ಲಿಯ ಕ್ಯಾಂಪಿಂಗ್, ಮಂಗಳೂರಿನ ವಾಟರ್ ಸ್ಪೋರ್ಟ್ಸ್ ಇತ್ಯಾದಿಗಳು ಪ್ರಮುಖವಾದವುಗಳಾಗಿದ್ದು, ಇತ್ತೀಚಿನ ದಿನಗಳಲ್ಲಿ ಇವು ಹೆಚ್ಚು ಸಾಹಸಿಗರಲ್ಲಿ ಹೆಚ್ಚಿನ ಪ್ರಾಮುಖ್ಯತೆ ಪಡೆದಿದೆ.

ದಾಂಡೇಲಿ - ವೈಟ್ ವಾಟರ್ ರಾಫ್ಟಿಂಗ್

ದಾಂಡೇಲಿ - ವೈಟ್ ವಾಟರ್ ರಾಫ್ಟಿಂಗ್

ಉತ್ತಮ ಸಮಯ: ಕಾಳಿ ನದಿಯ ದಡದಲ್ಲಿರುವ ಮಾರ್ಚ್‌ಟೋ ಮೇ ದಾಂಡೇಲಿಯು ಕರ್ನಾಟಕದ ರಿವರ್ ರಾಫ್ಟಿಂಗ್‌ಗೆ ಉತ್ತಮ ಸ್ಥಳಗಳಲ್ಲಿ ಒಂದಾಗಿದೆ. ದಾಂಡೇಲಿಯಲ್ಲಿ ರಿವರ್ ರಾಫ್ಟಿಂಗನ್ನು ಹವ್ಯಾಸಿ ಹಾಗೂ ವೃತ್ತಿಪರ ಸಾಹಸ ಪ್ರೀಕ್‌ಗಳು ಪ್ರಯತ್ನಿಸಬಹುದು.

ರಾಫ್ಟಿಂಗ್ ಸಮಯದಲ್ಲಿ ಗೈಡ್ ನಿಮಗೆ ಇದಕ್ಕಾಗಿ ಸಹಾಯ ಮಾಡುತ್ತಾರೆ. ಆದುದರಿಂದ ಈ ಸಾಹಸಮಯ ಸವಾರಿಯನ್ನು ಪ್ರಯತ್ನಿಸಲು ಈಜುಗಾರರಲ್ಲದವರಿಗೂ ಸುರಕ್ಷಿತವಾಗಿದೆ.

 ಬೆಂಗಳೂರು - ಜೋರ್ಬಿಂಗ್

ಬೆಂಗಳೂರು - ಜೋರ್ಬಿಂಗ್

ಜೋರ್ಬಿಂಗ್ ನಂತಹ ಮೋಜಿನ ಕ್ರೀಡೆಯು ಬೆಂಗಳೂರಿನಲ್ಲಿ ಹೆಚ್ಚು ಪ್ರಾಮುಖ್ಯತೆಯನ್ನು ಪಡೆದಿದೆ. ಜೋರ್ಬಿಂಗ್ ಅನ್ನು ದೊಡ್ಡ ಪಾರದರ್ಶಕ ಗಾಳಿ ಚೆಂಡಿನಲ್ಲಿ ಮಾಡಲಾಗುತ್ತದೆ. ಸಮತಟ್ಟಾದ ಮೇಲ್ಮೈಯಲ್ಲಿ ಪಾತ್ರವಹಿಸುವ ಈ ಗೋಳದೊಳಗೆ ಒಬ್ಬ ವ್ಯಕ್ತಿಯು ಇರುತ್ತಾನೆ. ಇತ್ತೀಚಿನ ವರ್ಷಗಳಲ್ಲಿ ವಾಟರ್ ಜೋರ್ಬಿಂಗ್ ಕೂಡ ಜನಪ್ರಿಯತೆಯನ್ನು ಗಳಿಸುತ್ತಿದೆ. ನಂದಿ ಹಿಲ್ಸ್ ಬಳಿಯ ಡಿಸ್ಕವರಿ ವಿಲೇಜ್, ಕನಕಪುರ ರಸ್ತೆಯಲ್ಲಿರುವ ಡರ್ಟ್ ಮೇನಿಯಾ ಮತ್ತು ಇತರ ಅನೇಕ ರೆಸಾರ್ಟ್‌ಗಳು ಈ ಕ್ರೀಡೆಯನ್ನು ನೀಡುತ್ತವೆ.

 ಮುರುಡೇಶ್ವರ - ಪ್ಯಾರಾ ಸೈಲಿಂಗ್

ಮುರುಡೇಶ್ವರ - ಪ್ಯಾರಾ ಸೈಲಿಂಗ್

ಉತ್ತಮ ಸಮಯ - ಡಿಸೆಂಬರ್ - ಫ಼ೆಬ್ರವರಿಮುರುಡೇಶ್ವರವು ಕೇವಲ ಶಿವ ದೇವಾಲಯಕ್ಕೆ ಮಾತ್ರ ಹೆಸರುವಾಸಿಯಾಗಿರುವುದಲ್ಲದೆ, ಪ್ಯಾರಾಸೈಲಿಂಗ್, ಜೆಟ್ ಸ್ಕೈಯಿಂಗ್, ಕಯಾಕಿಂಗ್, ಸ್ಕೂಬಾ ಡೈವಿಂಗ್ ಮತ್ತು ಸ್ನೋರ್ಕ್ಲಿಂಗ್ ನಂತಹ ಕೆಲವು ಪ್ರಮುಖ ಚಟುವಟಿಕೆಗಳಲ್ಲಿ ನೀವು ಪಾಲ್ಗೊಳ್ಳಬಹುದಾಗಿದೆ. ನೇತ್ರಾಣಿ ದ್ವೀಪವು ಸ್ಕೂಬಾ ಡೈವಿಂಗ್ ಮಾಡಲು ಅತ್ಯಂತ ಉತ್ತಮವಾದ ಸ್ಥಳವಾಗಿದೆ.

ನಾಗರಹೊಳಿ - ವನ್ಯಜೀವಿ ಸಫಾರಿ

ನಾಗರಹೊಳಿ - ವನ್ಯಜೀವಿ ಸಫಾರಿ

ಭೇಟಿಗೆ ಉತ್ತಮ ಸಮಯ : ಅಕ್ಟೋಬರ್ ನಿಂದ ಫ಼ೆಬ್ರವರಿನಾಗರಹೊಳೆ ರಾಷ್ಟ್ರೀಯ ಉದ್ಯಾನವನವು ಕರ್ನಾಟದಕದಲ್ಲಿಯ ವನ್ಯಜೀವಿ ಸಫಾರಿಗೆ ಅತ್ಯುತ್ತಮವಾದ ಸ್ಥಳಗಳಲ್ಲಿ ಒಂದಾಗಿದೆ. ನಾಗರಹೊಳೆ ವನ್ಯಜೀವಿ ಸಫಾರಿಯು ಅತ್ಯಂತ ಕುತೂಹಲಕಾರಿಯಾದುದಾಗಿದ್ದು, ಇದನ್ನು ಕರ್ನಾಟಕ ಅರಣ್ಯ ಇಲಾಖೆಯಿಂದ ಆಯೋಜಿಸಲ್ಪಡುತ್ತದೆ.

ಬಂಡೀಪುರ ರಾಷ್ಟ್ರೀಯ ಉದ್ಯಾನವನ, ದಾಂಡೇಲಿ ವನ್ಯಜೀವಿ ಅಭಯಾರಣ್ಯ, ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನ ಮತ್ತು ಅಂಶಿ ರಾಷ್ಟ್ರೀಯ ಉದ್ಯಾನವನಗಳು ರಾಜ್ಯದ ವನ್ಯಜೀವಿ ಪ್ರವಾಸೋದ್ಯಮಕ್ಕೆ ಹೆಸರುವಾಸಿಯಾದ ಕೆಲವು ಪ್ರಮುಖ ಸ್ಥಳಗಳಾಗಿವೆ.

ರಾಮನಗರ - ರಾಕ್ ಕ್ಲೈಂಬಿಂಗ್

ರಾಮನಗರ - ರಾಕ್ ಕ್ಲೈಂಬಿಂಗ್

ಬೆಂಗಳೂರಿನಿಂದ ಸುಮಾರು 50ಕಿಮೀ ಅಂತರದಲ್ಲಿರುವ ರಾಮನಗರವು ಹಲವಾರು ಬಂಡೆಗಳ ಪರ್ವತಗಳನ್ನು ಹೊಂದಿದೆ. ಇಲ್ಲಿಯ ಕೆಲವು ಸ್ಥಳಗಳು ಕರ್ನಾಟಕದಲ್ಲಿಯ ಅತ್ಯಂತ ಉತ್ತಮವಾದ ರಾಕ್ ಕ್ಲೈಂಬಿಂಗ್ ತಾಣವಾಗಿ ಪರಿಗಣಿಸಲ್ಪಟ್ಟಿದೆ. ರಾಮನಗರ ಒಂದು ಕಾಲದಲ್ಲಿ ಜನಪ್ರಿಯ ಚಲನಚಿತ್ರ ಶೂಟಿಂಗ್ ಸ್ಥಳವಾಗಿತ್ತು. ಬಾಲಿವುಡ್‌ನ ಜನಪ್ರಿಯ ಚಲನಚಿತ್ರ 'ಶೋಲೆ' ಕೂಡ ಈ ಬೆಟ್ಟಗಳಲ್ಲಿ ಒಂದರಲ್ಲಿ ಚಿತ್ರೀಕರಣಗೊಂಡಿದೆ.

More News

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+