ಸ್ವಾತಂತ್ರ್ಯ ಹೋರಾಟಗಾರ ತಿರುಪುರ್ ಕುಮಾರನ್ ಅವರ ನೆನಪಿನಾರ್ಥವಾಗಿ ಅವರ ಪ್ರತಿಮೆಯನ್ನು ನಿಲ್ಲಿಸಲಾಗಿದೆ. ಸ್ವಾತಂತ್ರ್ಯ ಚಳುವಳಿಯ ಸಂದರ್ಭದಲ್ಲಿ ಒಂದೊಮ್ಮೆ ಶಾಂತಿಯುತ ಪ್ರತಿಭಟನೆ ನಡೆಯುವಾಗ ಬ್ರಿಟೀಷರು ನಡೆಸಿದ ಲಾಠಿ ಚಾರ್ಜ್ ನಲ್ಲಿ ಇವರು ಪೆಟ್ಟು ತಿಂದು ಅಮರರಾದರು. ತಿರುಪುರ್ ನಲ್ಲಿ ಕಂಡುಬರುವ ನಗರದ ಅತಿ ಉದ್ದ ಮುಖ್ಯ ರಸ್ತೆಗು ಕೂಡ ಇವರ ಹೆಸರನ್ನೆ ಇಡಲಾಗಿದೆ.
ಇವರ ಪ್ರತಿಮೆಯ ಸ್ಥಳವು ತಿರುಪುರ್ ರೈಲು ನಿಲ್ದಾಣದ ಬಳಿ ನೆಲೆಸಿದೆ. ಇದು ತಿರುಪುರಿನಲ್ಲೆ ಒಂದು ಪ್ರಖ್ಯಾತವಾದ ಲ್ಯಾಂಡ್ ಮಾರ್ಕ್. ರೈಲಿನಿಂದ ತಿರುಪುರ್ ಗೆ ಬಂದಿಳಿದ ಮೇಲೆ ನಿಮ್ಮನ್ನೆ ಸ್ವಾಗತ್ತಿಸುತ್ತಿರುವಂತೆ ಆಭಾಸ ಉಂಟುಮಾಡುವ ಈ ಸ್ಮಾರಕ ಪ್ರಶಾಂತವಾಗಿ ಎದ್ದುಕಾಣುತ್ತದೆ.


Click it and Unblock the Notifications