ತಿರುನೆಲ್ವೇಲಿಯ ನೆಲ್ಲೈಯಪ್ಪರ್ ದೇವಾಲಯವು ತಮಿಳುನಾಡು ರಾಜ್ಯದಲ್ಲಿರುವ ಅತ್ಯಂತ ದೊಡ್ಡ ಶಿವನ ದೇವಾಲಯವೆಂಬ ಖ್ಯಾತಿಗೆ ಪಾತ್ರವಾಗಿದೆ. ಶಿವ ಮತ್ತು ಪಾರ್ವತಿಯಯರ ಗರ್ಭ ಗುಡಿಗಳನ್ನು ಹೊಂದಿರುವ ಇದನ್ನು ಪಾಂಡ್ಯರು ಸುಮಾರು 7ನೇ ಶತಮಾನದಲ್ಲಿ ನಿರ್ಮಿಸಿದರಂತೆ. 17ನೇ ಶತಮಾನದಲ್ಲಿ ನಿರ್ಮಾಣಗೊಂಡಿರುವ ಸಂಗಿಲಿ ಮಂಟಪವು ಇವುಗಳನ್ನು ಸಂಪರ್ಕಿಸುತ್ತದೆ.
ಈ ದೇವಾಲಯದ ಗೋಪುರಗಳನ್ನು ಸಹ 17 ನೇ ಶತಮಾನದಲ್ಲಿ ನಿರ್ಮಿಸಲಾಯಿತು. ನಂಬಿಕೆಗಳ ಪ್ರಕಾರ ಈ ಸ್ಥಳದಲ್ಲಿ ಶಿವನು ತಾಂಡವ ನೃತ್ಯ ಮಾಡಿದನಂತೆ. ಹಾಗಾಗಿ ಇಲ್ಲಿ ಶಾಸ್ತ್ರೀಯ ನೃತ್ಯವು ಪ್ರಸಿದ್ಧಿಯನ್ನು ಪಡೆದಿರುವುದಲ್ಲದೆ,ತಿರುನೆಲ್ವೇಲಿ ನೃತ್ಯ ಕೇಂದ್ರವಾಗುವಂತೆ ಮಾಡಿದೆ. ದೇವಾಲಯದ ಒಳಗೆ ತಾಮಿರೈ ಅಂಬಲಂ ಅಥವಾ " ತಾಮ್ರದ ವೇದಿಕೆ" ಇದೆ. ಇದು ಈ ನಂಬಿಕೆಯನ್ನು ಪೋಷಿಸಿಕೊಂಡು ಬರುತ್ತಿದೆ. ನಲ್ಲೈಯಪ್ಪರ್ ದೇವಾಲಯಕ್ಕೆ ತಿರುಕಲ್ಯಾಣಂ, ನವರಾತ್ರಿ ಮತ್ತು ಅರುರ್ದ್ರ ದರ್ಶನಂ ಹಬ್ಬದ ದಿನಗಳಂದು ಭೇಟಿಕೊಟ್ಟರೆ ಒಳ್ಳೆಯದು.
ಇವುಗಳು ತಮಿಳು ಮಾಸ ಐಪ್ಪಸಿ ಅಂದರೆ ಅಕ್ಟೋಬರ್ 15 ರಿಂದ ನವೆಂಬರ್ 15ರ ಒಳಗೆ ಬರುತ್ತವೆ. ತೈಪ್ಪೊಸಂ ಎಂಬ ಹಬ್ಬವನ್ನು ಸಹ ಇಲ್ಲಿ ಅದ್ಧೂರಿಯಿಂದ ಆಚರಿಸಲಾಗುತ್ತದೆ. ಪ್ರವಾಸಿಗರಿಗೆ ಈ ದೇವಾಲಯವನ್ನು ತಲುಪುವುದು ಕಷ್ಟವಾಗುವುದಿಲ್ಲ. ಏಕೆಂದರೆ ಇದು ನಗರದ ಹೃದಯಭಾಗದಲ್ಲಿ ಇದೆ.


Click it and Unblock the Notifications