ಶಿವರಾಂಪುರಂ ಅಗ್ರಹಾರಂ, ತಿರುಮನಂಚೇರಿಯ ದೇವಾಲಯದ ಸಮೀಪದಲ್ಲಿ ಇರುವ ಒಂದು ಹಳ್ಳಿಯಾಗಿದೆ. ಸಾಮಾನ್ಯವಾಗಿ ಅಗ್ರಹಾರಂಗಳು, ಪಕ್ಕಾ ಬ್ರಾಹ್ಮಣ ಶೈಲಿಯ ಗ್ರಾಮಗಳಾಗಿರುತ್ತವೆ. ಇವುಗಳ ಮೂಲ ನಿರ್ಮಾಣವೆ ಭಿನ್ನವಾಗಿರುತ್ತವೆ. ಅಗ್ರಹಾರಂಗಳಲ್ಲಿ ಕಂಡುಬರುವ ಪ್ರತಿಯೊಂದು ಮನೆಗಳನ್ನು ಒಂದರ ಪಕ್ಕದಲ್ಲಿ ಒಂದರಂತೆ ನಿರ್ಮಿಸಲಾಗಿರುತ್ತದೆ. ಅಂದರೆ ಒಂದು ಮನೆಯನ್ನು ಇನ್ನೊಂದು ಮನೆಯಿಂದ ಬೇರ್ಪಡಿಸುವ ಯಾವುದೇ ಆವರಣಗಳು ಇರುವುದಿಲ್ಲ. ಒಂದು ಮನೆಯ ಗೋಡೆಯೇ ಇನ್ನೊಂದು ಮನೆಯ ನಡುವೆ ಇರುವ ಅಡೆಯಾಗಿರುತ್ತದೆ.
ಶಿವರಾಂಪುರಂ ಅಗ್ರಹಾರಂ ಕೂಡ ಇದಕ್ಕಿಂತ ಭಿನ್ನವಾಗಿಲ್ಲ. ಇದು ತಮಿಳು ವಾಸ್ತುಶಿಲ್ಪದ ಒಂದು ಉದಾಹರಣೆಯಾಗಿದೆ. ಮನೆಗಳು ಉತ್ತರ ಹಾಗು ದಕ್ಷಿಣ ದಿಕ್ಕುಗಳಲ್ಲಿ ಮುಖಮಾಡಿರುತ್ತವೆ. ಒಂದು ಕಡೆಯಲ್ಲಿ ಶಿವನ ದೇವಾಲಯವಿದ್ದರೆ ಇನ್ನೊಂದು ಬದಿಯಲ್ಲಿ ವಿಷ್ಣುವಿನ ದೇವಾಲಯವಿರುತ್ತದೆ. ಅಗ್ರಹಾರಂ ಎಂಬ ಪದವೇ ದೇವರಿಗೆ ಗೌರವ ಪೂರ್ವಕವಾಗಿ ನೀಡಿದ ಮಾಲೆಯಿಂದಾಗಿದೆ. ಹಾಗಾಗಿ ಈ ಮನೆಗಳು ಹಾರದ ರೀತಿಯಲ್ಲಿರುತ್ತವೆ. ಇದು ಹಳ್ಳಿಯ ಮನೆಗಳು ಹೇಗೆ ಒಂದಕ್ಕೊಂದು ಹೊಂದಿಕೊಂಡು ಇರುತ್ತವೆ ಹಾಗೂ ಅಗ್ರಹಾರದ ತರಹದ ಮನೆಗಳ ರಚನೆಯನ್ನು ಅರ್ಥಮಾಡಿಕೊಳ್ಳಲು, ಇಲ್ಲಿಗೆ ಭೇಟಿ ನೀಡಲೇ ಬೇಕು.


Click it and Unblock the Notifications